ಮಂದಾರ ಕೇಶವ ಭಟ್ಟರು (೧೯೧೮-೧೯೯೭) ಬಹುಭಾಷೆಗಳ ಸಹಬಾಳ್ವೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಕವಿ. ಮರಾಠಿ ಮನೆ ಮಾತಿನ, ವೃತ್ತಿಯಲ್ಲಿ ಅಧ್ಯಾಪಕ ರಾಗಿದ್ದ ಈ ಕ್ವಿ ತುಳುವಿನಲ್ಲಿ ಬ್ರೆದ ’ಮಂದಾರ ರಾಮಾಯಣ ೧೯೮೭ರಲ್ಲಿ ಪ್ರಕಟವಾಯಿತು. ಕೇಂದ್ರ ಸಾಹಿತ್ಯ್ ಅಕಾಡೆಮಿಯ ’ಭಾಷಾ ಸಮ್ಮಾನ ವನ್ನು ಪಡೆದ ಈ ಕವಿ ತನ್ನ ತುಳು ರಾಮಾಯಣವನ್ನು ತಾನ್ನೆ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
’ ಮಂದಾರ ರಾಮಾಯಣ ದಲ್ಲಿ ಕವಿ ಮಾಡಿಕೊಂಡಿರುವ ಮುಖ್ಯ ಬದಲಾವಣಿಗಳು ಹೀಗಿವೆ-ಈ ಕಾವ್ಯದ ವಾಲ್ಮೀಕಿ ಒಬ್ಬ ಮಮೆ ಕುಡಿಯನಾಗಿದ್ದವನು. ಅಧರ್ಮದಿಂದ ಬದುಕುತ್ತಿದ್ದ ಈತ ತನ್ನ ಪಾಪದಲ್ಲಿ ಪಾಲು ಪಡೆಯಲು ಹೆಂಡತಿ-ಮಕ್ಕಳು ಸಿದ್ಧರಿಲ್ಲವೆಂದು ಗೊತ್ತಾದಾಗ ಬದಲಾಗುತ್ತಾನೆ. ಕ್ರೌಂಚವಧೆ ಪ್ರಸಂಗದ ಬದಲು ವಾಲ್ಮೀಕಿ ಕನಸಿನಲ್ಲಿ ಮಾನಸಪುತ್ರಿಯೊಬ್ಬಳನ್ನು ಕಾಣುವ ಪ್ರಸಂಗ ಇದೆ. ರಾಮ ಮತ್ತು ಅವನ್ ತಮ್ಮಂದಿರ ಜನನ, ಬಾಲ್ಯದ ವೃತ್ತಾಂತ್, ವಿಶ್ವಾಮಿತ್ರರ ಪಾಠಗಳು, ತಾಟಕಿ ಸಂಹಾರ, ಅಹಲ್ಯೋದ್ಧಾರ ಪ್ರಸಂಗಗಳಲ್ಲಿ ಹೆಚ್ಚಿನ್ ಬದಲಾವಣಿ ಗಳಿಲ್ಲ. ಸೀತೆಯ ಸ್ವಯಂ ವರಕ್ಕೆ ರಾವಣನ ಮಕ್ಕಳು -ಅತಿಕಾಯ -ಇಂದ್ರಜಿತು ಬರುತ್ತಾರೆ. ಮದುಮಗ್ ರಾಮ, ಪರಶುರಾಮರ ಆಶೀರ್ವಾದ ಪಡೆಯುತ್ತಾನೆ.
ಮಂಥರೆಯ ಪ್ರಣಯ್ ಭಿಕ್ಷೆಯನ್ನು ರಾಮ ತಿರಸ್ಕರಿಸುತ್ತಾನೆ. ಮಂಥರೆಯ ಚಾಡಿ ಮಾತು ಕೇಳಿದ ಕೈಕೇಯಿಯ್ ಹಠ ದಿಂದಾಗಿ ದಶರಥನ ಕನಸುಗಳು ಭಗ್ನಗೊಳ್ಳುತ್ತವೆ. ಬಹುಪತ್ನಿತ್ವದಿಂದ ಸಂಕಟ ಅನುಭವಿಸುತ್ತಿರುವ್ ದಶರಥ ಏಕ ಪತ್ನೀ ವ್ರತಸ್ಥನಾಗು ಎಂದು ರಾಮ್ನಿಗೆ ಕಿವಿ ಮಾತು ಹೇಳುತ್ತಾನೆ. ದಶರಥನ್ ಸಾವು, ತಾಯಿಯ್ ಮೇಲೆ ಭರತನ ಸಿಟ್ಟು, ಭರತ ರಾಮರ್ ಭೇಟಿ, ಪಾದುಕಾ ಪಟ್ಟಾಭಿಷೇಕ ಈ ಪ್ರಸಂಗಗಳಲ್ಲಿ ಮೂಲ ಕಾವ್ಯದ ಅನುಸರಣಿ ಇದೆ. ಕಾಮುಕಿ ಶೂರ್ಪನಖಿ ಲಕ್ಷ್ಮಣನಿಂದ ಅವಮಾನಿತಳಾಗುತ್ತಾಳೆ. ಮಲೆ ಕುಡಿಯ್ ಪ್ಂಡಿತನ್ ವೇಷದಲ್ಲಿ ರಾವಣ,ಜಿಂಕೆಯ ವೇಷದಲ್ಲಿ ಶೂರ್ಪನಖಿ ಸೀತಾಪಹರಣಕ್ಕಾ ಬರುತ್ತಾರೆ. ಮಲೆಕುಡಿಯನ್ ಜಿಂಕೆ ತಪ್ಪಿಸಿಕೊಂಡು ಹೋದಾಗ ಅದನ್ನು ಹಿಡಿಯಲು ರಾಮಲಕ್ಷ್ಮಣರು ಹೋಗುತ್ತಾರೆ. ಆಗ್ ರಾವಣ ಸೀತೆಯನ್ನು ಕದ್ದೊಯ್ಯುತ್ತಾನೆ. ಹಕ್ಕಿ ಹಿಡಿಯುವ್ ಜಟಾಯು ರಾವಣನನ್ನು ಎದುರಿಸಿ ಸೋಲುತ್ತಾನೆ. ’ಕಿಸ್ಕಿಂದಾಯ’ ಎಂಬ್ ಭೂತದ ನಾಡಿನ ವಾಲ್-ಸುಗ್ರೀವರ್ ಕತೆಯನ್ನು ಶಬರಿ ರಾಮ್-ಲಕ್ಷ್ಮಣರಿಗೆ ಹೇಳುತ್ತಾಳೆ. ’ಮಂದಾರ ರಾಮಾಯಣದ ಪ್ರಕಾರ ವಾಲಿ-ರುಮೆಯರ ಸಂಬಂಧದ ಕುರಿತು ಇರುವ್ ಆರೋಪಗಳು ಸುಳ್ಳು.
ಹನುಮಂತ ಈಜಿಕೊಂಡು ಕಡಲನ್ನು ದಾಟುತ್ತಾನೆ. ರಾವಣನ ಅಧಿಕಾರಿಗಳ ... ವರ್ಣನೆ ಅವ್ನು ಜನಪ್ರಿಯ ಅರಸನಲ್ಲ ಎಂಬುದನ್ನು ಸೂಚಿಸುತ್ತದೆ. ಸೀತೆಯನ್ನು ಭೇಟಿಯಾದ ವಿಭೀಷಣ- ಸರಮೆ ದಂಪತಿಗಳನ್ನು ರಾವಣ ಬಂಧನದಲ್ಲಿಡುತ್ತಾನೆ.
ಸುಗ್ರೀವನ ಸೈನಿಕರು ಅಪ್ಪಣ್ಣನ್ ದೋಣಿಗಳಲ್ಲಿ ಕಡಲನ್ನು ದಾಟುತ್ತಾರೆ. ವಿಭೀಷಣನ ಮಗ ಸುಬುದ್ಧಿ ರಾವಣನಿಗೆ ಸಭೆಯಲ್ಲಿ ಹಿತವಚನ ಹೇಳುತ್ತಾನೆ. ರಾವಣನ ಮಕ್ಕಳು ಸುಬುದ್ಧಿ ರಾವಣನಿಗೆ ಸಭೆಯಲ್ಲಿ ಹಿತವಚನ ಹೇಳುತ್ತಾನೆ. ರಾವಣನ ಮಕ್ಕಳು ಸುಬುದ್ಧಿಯ ಮನೆಗೆ ಬಂದು ಅವನಿಗೆ ಹೊಡೆಯುತ್ತಾರೆ. ಹನುಮಂತ, ಅಂಗದ ರಾವಣನ ಸಭೆಗೆ ಹೋಗಿ ಬರುತ್ತಾರೆ. ಕುಂಭಕರ್ಣನ ಮಗ ಸಿಂಗ, ವಿಭೀಷಣನ ಮಗ ಸುಬುದ್ಧಿ ರಾಮನನ್ನು ಭೇಟಿಯಾಗುತ್ತಾರೆ. ರಾವಣ, ಕುಂಭಕರ್ಣನಿಗೆ ಮದ್ದು ಹಾಕಿಸಿ ಅವನನ್ನು ಅತಿನಿದ್ದೆಯ್ ಬೆಪ್ಪನನ್ನಾಗಿ ಮಾಡಿದ್ದಾನೆ. ಕುಂಭಕರ್ಣನ ಬಂಧನವಾದ ಮೇಲೆ ರಾಮ ಅವನಿಗೆ ತೂಚಣ್ಣ ಪಂಡಿತರಿಂದ ಚಿಕಿತ್ಸೆ ಮಾಡಿಸುತ್ತಾನೆ. ಯುದ್ಧದಲ್ಲಿ ಅತಿಕಾಯ-ಇಂದ್ರಜಿತು ಸಾಯುತ್ತಾರೆ. ಯುದ್ಧದಲ್ಲಿ ರಾವಣ ಸತ್ತ ಮೇಲೆ ರಾಮ್ ಕುಂಭಕರ್ಣನನ್ನು ಅರಸನ್ನಾಗಿ ಮಾಡುತ್ತಾನೆ. ವಿಭೀಷನ ಮಗಳು ಸೋಮಕ್ಕ ಅಂಗದನ ಮಡದಿಯಾಗುತ್ತಾಳೆ. ರಾಮ್, ಸೀತೆ, ಲಕ್ಷ್ಮಣರೊಂದಿಗೆ ಶಬರಿ ಹಾಗೂ ಗುಹ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬರುತ್ತಾರೆ. ಮಂಥರೆಯ ತಾಯಿಯಾದ ಶಬರಿ ತನ್ನ ಮಗಳ ಕೃತ್ಯಕ್ಕೆ ಅಸಹ್ಯ ಪಟ್ಟು ಪಂಪಾಕ್ಷೇತ್ರಕ್ಕೆ ಹೋಗಿ ದೇವರ ಸೇವೆ ಮಾಡುತ್ತಿದ್ದಳೆಂದು ಕೊನೆಯಲ್ಲಿ ತಿಳಿಯುತ್ತದೆ.
’ಮಂದಾರ ರಾಮಾಯಣ’ದ ಕವಿ ಕಾವ್ಯದ ಹೊರರಚನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಒಳ ರಚನೆ ಹಾಗೆಯೇ ಇದೆ. ಮೂಲ ಕಾವ್ಯದ ಸಂಶೋಧಕರು ಪ್ರಕ್ಷಿಪ್ತವೆಂದು ಗುರುತಿಸುವ ಭಾಗಗಳನ್ನು ಈ ಕವಿ ಕೈ ಬಿಟ್ಟಿದ್ದಾರೆ-ಉತ್ತರಕಾಂಡ, .... ವೃತ್ತಾಂತ, ಲಂಕೆಯಿಂದ ಹಿಂದಿರುಗುವಾಗ ರಾಮ ಭಾರದ್ವಾಜಾಶ್ರನಕ್ಕೆ ಬಂದಿಳಿಯುವುದು ಹಾಗೂ ಲಂಕಾದಹನ. ಅಗ್ನಿ ಪರೀಕ್ಷೆಯ ಪ್ರಸಂಗವೂ ಈ ಕಾವ್ಯದಲ್ಲಿಲ್ಲ. ಅಪನಂಬಿಕೆಯನ್ನು ಅಮಾನತ್ತಿನಲ್ಲಿಟ್ಟು ಓದಬೇಕಾದ ಪ್ರಸಂಗಗಳನ್ನು ಮಂದಾರ ಕೇಶವ ಭಟ್ಟರು ಬದಲಾಯಿಸಿದ್ದಾರೆ. ಸಮುದ್ರ ಲಂಘನ, ಸೇತುಬಂಧಗಳು ಈ ಕಾವ್ಯದಲ್ಲಿಲ್ಲ. ’ ಮಂದಾರ ರಾಮಾಯಣ’ ದಲ್ಲಿರುವುದು ಅದ್ಭುತದ ಸ್ಫರ್ಶ ಮಾತ್ರ ವಿರುವ ವಾಸ್ತವಲೋಕ.
ಜಾತಿಗಳು ಮಾತ್ರವಲ್ಲ, ಭಾಷೆಗಳೂ ಸಂಸ್ಕೃತಾನುಸರಣ ಮಾಡುತ್ತವೆ. ವಸ್ತುವಿನ ಆಯ್ಕೆಗಾಗಿ ಸಂಸ್ಕೃತಾನುಸರಣ ಮಾಡಿ ಅನಂತರ ನಿರೂಪಣೆಯಲ್ಲಿ ’ ದೇಸಿ ಯೊಳ್ ಪುಗುವುದು’ ಮಂದಾರ ರಾಮಾಯಣದ ವೈಶಿಷ್ಟ್ಯ. ತುಳುವಿನಲ್ಲಿ ವಿಷ್ಣು ತುಂಗನ ’ಭಾಗವತ’ ದಂಥ ಪ್ರಾಚೀನಗಳ ಹಾಗೂ ’ಕೋಟಿ-ಚೆನ್ನಯ, ’ಸಿರಿ’ ಯಂಥ ಜನಪದ ಕಾವ್ಯಗಳ ಸತ್ವವನ್ನು ಹೀರಿಕೊಂಡು, ಸಮಕಾಲೀನ ತುಳುವಿಗೆ ಹತ್ತಿರವಾದ ತನ್ನದೇ ಸ್ವತಂತ್ರ ಶೈಲಿಯೊಂದನ್ನು ರೂಪಿಸಿಕೊಂಡಿದ್ದಾರೆ. ಅವರ ಶೈಲಿಯಲ್ಲಿ ಭಾಷೆಯನ್ನು ಅತ್ಯುನ್ನತಿಯತ್ತ ಒಯ್ಯುವ ಪ್ರತಿಭಾಶಾಲಿಯ ಮುನ್ನೋಟವಿದೆ.
ಭೂತಗಳ ನಾಡಿನ ವಾಲಿ-ಸುಗ್ರೀವರು ವೀಳ್ಯ ಹಾಕಿಕೊಂಡು ಮಾತನಾಡುತ್ತಾರೆ. ಅಂಗದ ಕುಟ್ಟಿ-ದೊಣ್ಣೆ ಆಡುತ್ತಾರೆ. ಬೈಗಳ ಭಾಷೆ, ಸಂಭಾಷಣೆ, ಯುದ್ಧ ವರ್ಣನೆಗಳಲ್ಲಿ ’ ಮಂದಾರ ರಾಮಾಯಣ’ ತುಳುನಾಡಿನ ರಾಮಾಯಣವಾಗಿದೆ. "ಸಾಗರದ ತಡಿಯ ತುಳುನಾಡ ಮಣ್ಣಿನ ಬಣ್ಣ ಬದುಕುಗಳ ಮೂರು ಲೋಕದಿ ಕಾಣುವೆನ್ನೆ ಕಣ್ಣೆಗೆ ಕಾಣುವಂತೀ ಕತೆಯ ಬರೆವೆ."
ಈ ಕನ್ನಡ ಭಾಷಾಂತರವು ಭಾಷಾಂತರವಾಗಿದೆಯೆನ್ನುವುದಕ್ಕಿಂತಲೂ ಪದಾಂತರವಾಗಿ ಬಂದಿರುವುದರಿಂದ ಇದರ ಗುಣವನ್ನೂ ಸಾಹಿತ್ಯದಲ್ಲಿ ಇದರ ಸ್ಥಾನವನ್ನೂ ವಿದ್ವಾಂಸರೇ ಹೇಳಬೇಕು. ಇದರ ತುಳು ಮೂಲವನ್ನು ಇದ್ದಕ್ಕಿದ್ದಂತೆ ಕನ್ನಡಿಸಿದ ರೀತಿಯನ್ನು ನೋಡುವಾಗ ಮೂಲದಂತೆಯೇ ಲಲಿತ ರಗಳೆಯ ಛಂದಸ್ಸಿನ್ ರಗಳೆಯಿಲ್ಲವೆಂಬುದು ಓದುಗರಿಗೆ ತಿಳಿದು ಬಾರದಿರದು." ಎಂದು ಮಂದಾರ ರಾಮಾಯಣದಲ್ಲಿ ವಿಸ್ಮೃತಿಯ್ ಸಮಸ್ಯೆ ಇಲ್ಲ. ಇಲ್ಲಿನ ಪಾತ್ರಗಳು ತುಳುವನ್ನಾಗಲೀ ತುಳುನಾಡನ್ನಾಗಲೀ ಮರೆತಿಲ್ಲ. ’ಅಗೆಲು’, ’ತಪ್ಪಂಗಾಯಿ’, ’ಪಾರೋಳು’, ’ಮಡೆಂಜಿ’, ಮುಟ್ಟಲೆ’, ’ಮೊರಂಟೆ’, ಮೂಲ್ಯ’ ಸಾಂತಾಣಿ’, ’ಸೋಣ, ಸೀಂತ್ರಿ’- ಇಂಥ ಶಬ್ದಗಳು ಕನ್ನಡ ’ ಮಂದಾರ ರಾಮಾಯಣ ದಲ್ಲಿ ತುಳುನಾಡಿನ ಬಣ್ಣವನ್ನು ಉಳಿಸಿವೆ.
ತುಳುನಾಡಿನ ಜನಪದ ಕಾವ್ಯಗಳು ಮಹಾಪರಂಪರೆಯ ’ರಾಮಾಯಣ" ಮಹಾಭಾರತ’ ಗಳಿಂದ ದೂರದಲ್ಲಿವೆ. ತಮ್ಮದೇ ಕಿರುಪರಂಪರೆಯೊಂದನ್ನು ಉಳಿಸಿ ಕೊಂಡಿವೆ. ಆದರೆ ಮಹಾಪರಂಪರೆಯ ಕಾವ್ಯಗಳು ತುಳುನಾಡಿನ ಸಹೃದಯರಿಗೆ ಹೊಸದೇನೂ ಅಲ್ಲ. ಇಲ್ಲಿ ಜನಪ್ರಿಯವಾಗಿರುವ ಯಕ್ಷಗಾನ-ತಾಳಮದ್ದಳೆ ಮಾಧ್ಯಮಗಳು ಮಹಾಕಾವ್ಯಗಳ ಸಾತತ್ಯದಲ್ಲಿ ಸೃಜನಶೀಲ ಕೊಡುಗೆ ನೀಡಿವೆ. ಮಹಾ ಪರಂಪರೆಯ ರಾಮಾಯಣವನ್ನು ಕಿರುಪರಂಪರೆಯ ತುಳು ಭಾಷೆಯಲ್ಲಿ ಪುನರ್ ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿರುವ ಮಂದಾರ ಕೇಶವ ಭಟ್ಟರು ತನ್ನ ಕಾವ್ಯವನ್ನು ಸೊಗಸಾಗಿ, ಕನ್ನಡಕ್ಕೆ ತಂದಿದ್ದಾರೆ. ’ ಬಂದಾರ, ತಂದಾರ, ಮಂದಾರ ಹೂವ’ ಎನ್ನುತ್ತ ಈ ಕಾವ್ಯವನ್ನು ಸ್ವಾಗತಿಸೋಣ. ಭಾಷಾಂತರಕ್ಕೆ ಮಹಾತ್ವಾಕಾಂಕ್ಷೆ ಇಲ್ಲದಿರಬಹುದು. ಆದರೆ ಮಂದಾರ ಕೇಶವ ಭಟ್ಟರು ’ ಬೃಹತ್ಕಥೆಯ ಗುಣಾಢ್ಯನನ್ನು ನೆನಪಿಸುವ ಮಹತ್ವಾಕಾಂಕ್ಷೆಯ ಮಹಾಕವಿ.
ಮಂದಾರ್ ರಾಮಾಯಣ (ಮಹಾ ಕಾವ್ಯ)
ಮೂಲ ತುಳು ಮತ್ತು ಕನ್ನಡಾನುವಾದ: ಮಂದಾರ ಕೇಶವ ಭಟ್ಟ
ಪ್ರ: ಸಾಹಿತ್ಯ ಅಕಾಡೆಮಿ, ರವೀಂದ್ರ ಭವನ, ಹೊಸದಿಲ್ಲಿ-೧೧೦೦೦೧
ಮುರಳೀಧರ ಉಪಾಧ್ಯ ಹಿರಿಯಡಕ

No comments:
Post a Comment