stat Counter



Wednesday, June 29, 2011

ಮುರಳಿಧರ ಉಪಾಧ್ಯ ಹಿರಿಯಡಕ- -ರೇಖಾ ಲೀಲೆಗಳ ಚಿರಂಜೀವಿ ಕೆ. ಕೆ. ಹೆಬ್ಬಾರ್ - K K Hebbar [Profile ] by Muraleedhara Upadhya ್


ರೇಖಾಲೀಲೆಗಳ ಚಿರಂಜೀವಿ ಕೆ.ಕೆ. ಹೆಬ್ಬಾರ್


- ಮುರಳೀಧರ ಉಪಾಧ್ಯ, ಹಿರಿಯಡಕ

ಕಟ್ಟಂಗೇರಿ ಕೃಷ್ಣ ಹೆಬ್ಬಾರ್ - ಉಡುಪಿ ಬಳಿಯ ಕಟ್ಟಿಂಗೇರಿಯ ನಾರಾಯಣ ಹೆಬ್ಬಾರ್-ಸೀತಮ್ಮ ದಂಪತಿಗಳ ಮಗನಾಗಿ
1911ರ ಜೂನ್ ಹದಿನೈದರಂದು ಜನನ.  'ಹಾಸಲುಂಟು ಹೊದೆಯಲಿಲ್ಲ' ಎನ್ನುವಂತಹ ಬಡತನ.  ಕಟ್ಟಿಂಗೇರಿ ಸಮೀಪದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ.  ಉಡುಪಿಯ ಕೃಷ್ಣಮಠದ ಗೋಡೆಯಲ್ಲಿದ್ದ ರವಿವರ್ಮನ ಚಿತ್ರಗಳ ತತ್ಪ್ರತಿಗಳಿಂದ
ಸ್ಫೂರ್ತಿ. ಐದನೇ ಕ್ಲಾಸು ಮುಗಿದ ಮೇಲೆ ಮದ್ರಾಸಿನಲ್ಲಿ ಕೆಲವು ತಿಂಗಳು ಹೊಟೇಲ್ ಮಾಣಿ.  ಮತ್ತೆ ಊರಲ್ಲಿ ನಾಲ್ಕು ರೂಪಾಯಿ ಸಂಬಳದ ಮೇಸ್ಟ್ರು. ಈ ಹದಿಹರೆಯದ ಯುವಕ 'ಶಕುಂತಲೆ'ಯ ಪಾಠಮಾಡಲು ಬಿಡಿಸಿದ ಚಿತ್ರಗಳನ್ನು ಕಂಡು ಪರೀಕ್ಷಾ ಕಾರ್ಯಕ್ಕಾಗಿ ಬಂದ ಮಿಶನ್ ದೊರೆಗೆ ಆಶ್ಚರ್ಯ, ಸಂತೋಷ.  ಉಡುಪಿಯ ಮಿಶನ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ, ಪುಂಡಲೀಕ ಶೆಣೈ ಅವರಿಂದ ಚಿತ್ರ ಕಲಾಭ್ಯಾಸಕಕೆ ಉತ್ತೇಜನ.  ಈ ನಡುವೆ ತಂದೆಯ ಸಾವು.  ತಾಯಿ ಸೀತಮ್ಮನೊಡನೆ ಉಡುಪಿ ಗುಂಡಿಬೈಲಿನ ಬಾಡಿಗೆ ಮನೆಯಲ್ಲಿ ವಾಸ.  ಮುಂದೆ ಮೈಸೂರಿನಲ್ಲಿ ಚಾಮರಾಜ ತಾಂತ್ರಿಕ ಸಂಸ್ಥೆಯ ಚಿತ್ರಕಲಾ ವಿಭಾಗದಲ್ಲಿ ವಿದ್ಯಾರ್ಥಿ.  ಸೃಜನಶೀಲ ಕಲಾವಿದ ಕೃಷ್ಣನಿಗೆ, ಆ ಶಾಲೆಯ ಪ್ರಕೃತಿಯ ಅನುಕರಣೆಯೆ ಕಲೆ ಎಂಬ ಧೋರಣೆಯ ಬಗ್ಗೆ ಬೇಸರ.  ವಾಪಾಸು ಉಡುಪಿಗೆ.  ಅಲ್ಲಿನ ಹಿರಿಯ ಫೋಟೋಗ್ರಾಫರ್ ಶ್ರೀನಿವಾಸರಾಯರಲ್ಲಿ ಫೋಟೋಗಳನ್ನು ರೀ-ಟಚ್ ಮಾಡುವ ಉದ್ಯೋಗ, ನಿನ್ನ ಶ್ರೇಯಸ್ಸಿಗೆ ಇರವುದು ಒಂದೇ ಸ್ಥಳ - ಅದು ಮುಂಬಯಿ.  ಶ್ರೀನಿವಾಸರಾಯರ ಕ್ಯಾಮರಾ ಕಣ್ಣಿನ ದೂರದೃಷ್ಟಿ, ಮಾರ್ಗದರ್ಶನ.

1933ರಿಂದ ಮುಂಬಯಿಯಲ್ಲಿ ಕೆ.ಕೆ. ಹೆಬ್ಬಾರರ ಹೋರಾಟದ ಬದುಕು.  ಸ್ಟುಡೀಯೋದಲ್ಲಿ ಕೆಲಸ.  ದಂಡಾವತಿ ಮಠರ ಮಾರ್ಗದರ್ಶನದಲ್ಲಿ ಚಿತ್ರಕಲಾಭ್ಯಾಸ.  ಕಟ್ಟಿಂಗೇರಿಯ ಕೃಷ್ಣನ ಕೈಯಲ್ಲಿ ಕುಂಚ.  1935ರಲ್ಲಿ ತಿರುಪತಿಯಲ್ಲಿ ಹೆಬ್ಬಾರರ ಮದುವೆ.  'ಅಂತಃಪಟದಾಚೆ ವಿಧಿತಂದ ವಧು' ಸುಶೀಲೆ ಅನ್ವರ್ಥನಾಮ.  1937ರಿಂದ ಮುಂಬಯಿಯ ಜೆ.ಜೆ. ಸ್ಕೂಲ್
ಆರ್ಟ್ಸ್‌ನಲ್ಲಿ ವಿದ್ಯಾರ್ಥಿ, ಅದರ ನಿರ್ದೇಶಕ ಚಾರ್ಲ್ಸ್‌ ಜೆರಾರ್ಡ್‍ರಿಂದ ಹೆಬ್ಬಾರ್ಗೆ ಕಿವಿಮಾತು.  ನಮ್ಮ ಸುತ್ತಮುತ್ತಣ ಜೀವನವನ್ನು ಪಡಿಮೂಡಿಸುವ ಕೆಲಸ ಕೆಮರಾ ಮಾಡಲಿ.  ನಾವು ಪ್ರಪಂಚದ ಕಡೆ ನೋಡುವುದಕ್ಕಿಂತಲೂ ಹೆಚ್ಚಾಗಿ ಪ್ರಪಂಚದ ಆಂತರ್ಯವೇನಿದೆ ಎಂಬುದನ್ನು ನೋಡಲು ಕಲಿಯಬೇಕು.  ಜೆ.ಜೆ. ಕಲಾಶಾಲೆಯಲ್ಲಿ ಶಿಕ್ಷಣ - 1939ರಿಂದ.  1941ರಿಂದ ಸ್ವರ್ಣಪದಕ, ಪ್ರಶಸ್ತಿಗಳ ಸರಮಾಲೆ ಆರಂಭ.  ದಕ್ಷಿಣ ಕನ್ನಡದ ಯಕ್ಷಗಾನ, ಕೇರಳದ ನಿಸರ್ಗ ಹಬ್ಬಗಳು, ಕಾರ್ಲದ ಬೌದ್ಧಗುಹೆಗಳು, ಹಂಪೆಯ ಭಗ್ನ ಅವಶೇಷಗಳು, ವಿಜ್ಞಾನಿಗಳ ವ್ಯೋಮ ಸಾಹಸಗಳು, ಸಂಗೀತದ ಕಂಪನಗಳು, ತುಲಸೀದಾಸರ ರಾಮಾಯಣ, ಭಾರತದ ಜಾನಪದ - ಹೆಬ್ಬಾರ ಕಲಾಸೃಷ್ಟಿಗೆ ಮುಖ್ಯ ಪ್ರೇರಣೆಗಳು. ಭಾರತೀಯ ಚಿತ್ರಕಲೆಯ ಜೀವಾಳವಿರುವುದು ನೆನಪನ್ನು ಚಿತ್ರಿಸುವುದರಲ್ಲಿ ಅಥವಾ ಕಳೆದ ಅನುಭವಕ್ಕೆ ರೂಪ ಕೊಡುವುದರಲ್ಲಿ ಆನಂದಕುಮಾರ ಸ್ವಾಮಿಯವರ ಈ ಮಾತಿನಲ್ಲಿ ಹೆಬ್ಬಾರರಿಗೆ ನಂಬಿಕೆಯಿತ್ತು.  1948ರಲ್ಲಿ ಭಾರತ ಸರಕಾರದಿಂದ ಹೆಬ್ಬಾರರಿಗೆ ವಿಶೇಷ ಪ್ರಶಸ್ತಿ.  ಯುರೋಪ್ಗೆ ಕಲಾಭವದ ಯಾತ್ರೆ, ಪ್ಯಾರಿಸ್ ಅಕಾಡೆಮಿ ಜ್ಯೂಲಿಯನ್ನಲ್ಲಿ ಕಲಾ ವ್ಯಾಸಂಗ, ನವ್ಯಮಾರ್ಗದಲ್ಲಿ ಸ್ವಾಜರ್ಿತ ಶೈಲಿಯಲ್ಲಿ 'ಹಾಡುವ ರೇಖೆ'ಗಳ ಹೆಬ್ಬಾರ್.

ರೇಖಾ, ರಜನಿ, ರನ್ನ - ಹೆಬ್ಬಾರರ ಮಕ್ಕಳು, ಹೆಬ್ಬಾರರ ಆರೋಹಣದ ಹಂತಗಳು - ಶಿವರಾಮ ಕಾರಂತರಿಂದ ಹೆಬ್ಬಾರರ ಕುರಿತು ಪುಸ್ತಕ (1952).  ಪ್ಯಾರಿಸ್, ನ್ಯೂಯಾಕರ್್, ಜರ್ಮನಿ, ಆಸ್ಟ್ರೇಲಿಯಾಗಳಲ್ಲಿ ಕೃತಿ ಪ್ರದರ್ಶನ, ಪದ್ಮಶ್ರೀ, ಮೈಸೂರು ವಿ.ವಿ.ಯ ಗೌರವ ಡಾಕ್ಟರೇಟ್, ಕೇಂದ್ರ ಲಲಿತಾಕಲಾ ಅಕಾಡೆಮಿಯ ಅಧ್ಯಕ್ಷ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಗಾತ್ರದಲ್ಲೂ ಸಿದ್ಧಿಯಲ್ಲೂ ಎತ್ರರದ ವ್ಯಕ್ತಿ.  ಇವು ಕಟ್ಟಂಗೇರಿ ಕೃಷ್ಣ ಹೆಬ್ಬಾರರ ಬದುಕಿನ ಕೆಲವು ಮುಖ್ಯ ರೇಖೆಗಳು.  (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ - ಕಲೆ ಬದುಕಿ'ನ ವರ್ಣರಂಜಿತ ಚಿತ್ರವನ್ನು ಕು.ಶಿ. ಹರಿದಾಸ ಭಟ್ಟರು ತನ್ನ ಗ್ರಂಥದಲ್ಲಿ ನೀಡಿದ್ದಾರೆ.

ಭಾರತದ ಜಾನಪದ ಹೆಬ್ಬಾರರ ಬದುಕಿನ ಸೃಜನಶೀಲತೆಯ ಮುಖ್ಯ ಪ್ರೇರಣೆಗಳಲ್ಲಿ ಒಂದು.  ನಮ್ಮ ಉತ್ಸವಗಳು,
ಧಾರ್ಮಿಕ ಆರಾಧನಾ ಕಲೆಗಳು, ಕ್ರೀಡೆಗಳು, ಶ್ರಮಜೀವಿಗಳು, ಸಂಗೀತ - ಅವರಿಗೆ
ಸ್ಫೂರ್ತಿ ನೀಡಿವೆ.  'ಜಾನುವಾರು ಸಂತೆ', 'ಗದ್ದೆ ನಟ್ಟಿಯ ಹಾಡು', 'ಮೀನು ಮಾರುವ ಹೆಂಗಸರು' 'ಜಾಡಮಾಲಿ', 'ನಾಗಮಂಡಲ ಪಾತ್ರಿ ಮತ್ತು ವೈದ್ಯರ ನೃತ್ಯ', 'ಯಕ್ಷಗಾನ' - ಇವು ಹೆಬ್ಬಾರರ ಕೆಲವು ಪ್ರಸಿದ್ಧ ಚಿತ್ರಗಳು.  ಹೆಬ್ಬಾರರನ್ನು ಮುಲ್ಕ್ ರಾಜ್ ಆನಂದ್ 'ಜನತಾ ಜನಾರ್ದನನ ಕಲಾವಿದ' ಎಂದಿರುವುದು ಅರ್ಥಪೂರ್ಣ.  ಗುಡ್ಡಗಾಡಿನ ಜನರಿಗೆ ಕಲೆ ಜೀವನದ ಅವಿಭಾಜ್ಯ ಅಂಗ ಎಂಬುದನ್ನು ಹೆಬ್ಬಾರರು ಗುರುತಿಸಿದ್ದರು.  ಕನರ್ಾಟಕದ ತೊಗಲು ಗೊಂಬೆಗಳು, ಆದಿವಾಸಿಗಳ
ಮೂರ್ತಿಗಳು, ಮುಖವಾಡಗಳು ಹಾಗೂ ರಂಗವಲ್ಲಿಗಳ ಕಲಾತ್ಮಕ ಮೌಲ್ಯ, ಸೃಜನಶೀಲತೆಗಳನ್ನು ಅವರು ಕೊಂಡಾಡುತ್ತಿದ್ದರು. ದಕ್ಷಿಣ ಕನ್ನಡದಲ್ಲಿ ಇಂದಿಗೂ ಉಳಿದುಬಂದಿರುವ ಯಕ್ಷಗಾನ ಬಯಲಾಟದ ವೇಷಭೂಷಣಗಳನ್ನು ಸೃಷ್ಟಿಸಿದವರು ಮಹಾನ್ ಕಲಾವಿದರೆಂದು ನನ್ನ ಅಭಿಪ್ರಾಯ ಎಂದಿದ್ದರವರು.  ಕಲಾವಂತಿಕೆ ಎಂದರೆ ನೋಡಿದ್ದನ್ನು ಪುನಃ ಸೃಷ್ಟಿಮಾಡುವ ಕೈಚಳಕವೆಂದು ಇಂದು ಯಾರೂ ಅರ್ಥವಿಸುವುದಿಲ್ಲ.  ಚಿತ್ರಕಲೆಯ ಪ್ರಾಚೀನ ಪರಂಪರೆ ಕಳೆದ ಐವತ್ತು ವರ್ಷಗಳಲ್ಲಿ ಭಗ್ನವಾಗಿ ಹೋಗಿದೆ.  ಇಂದಿನ ಕಲಾಕೃತಿಗಳಲ್ಲಿ ಮಿಳಿತವಾಗಬೇಕಾದದ್ದು ಕಲಾವಿದನ ಅಂತಃದೃಷ್ಟಿ, ಭಾವಸ್ಪಂದನ ಹಾಗೂ ಬುದ್ಧಿಕ್ರಿಯೆ.... ಆಲಂಕಾರಿಕ (ಫಿಗರೇಟಿವ್), ಅನಾಲಂಕಾರಿಕ (ನಾನ್-ಫಿಗರೇಟಿವ್) ಗಳೆಂಬ
ಚರ್ಚೆ ನನ್ನನ್ನು ಮುಟ್ಟುವುದಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ ಭಿನ್ನ ಅನುಭವಗಳು ಭಿನ್ನ ರೀತಿಯಲ್ಲಿ ಪ್ರಕಟವಾಗುತ್ತವೆ. - ಇದು ಹೆಬ್ಬಾರರ ಕಲಾಚಿಂತನೆ.  ಕಾರಂತರ ಯಕ್ಷಗಾನ ಪ್ರಯೋಗಗಳು ಸಂಪ್ರದಾಯ ವಿರೋಧಿ ಎಂದು ಟೀಕಿಸುವ ಸಂಶೋಧಕಿ ಮಾರ್ತಾ ಆಸ್ಟೆನ್‍ಗೆ ಹೆಬ್ಬಾರರು ಬರೆದ ಕಿವಿಮಾತಿಗೆ ತುಂಬ ಮಹತ್ವವಿದೆ - ಒಬ್ಬ ವಿದೇಶಿಯರು ಬೇರೆ ದೇಶಕ್ಕೆ ಬಂದು ಸಂಸ್ಕೃತಿ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸಾಧುವಲ್ಲ.

1996ರ ಮಾರ್ಚ್26ರಂದು ನಿಧನಹೊಂದಿದ ಕೃಷ್ಣ ಹೆಬ್ಬಾರರು ತನ್ನ ರೇಖಾಲೀಲೆಗಳಲ್ಲಿ ಚಿರಂಜೀವಿ.

#####

ಹೆಬ್ಬಾರ್ ರಾಮಾಯಣ

ಅವರು ಬರೆದ ತುಲಸೀದಾಸರ ರಾಮಾಯಣದ ಸಂಪುಟ ಕಂಡವರಿಗೆ - ರಾಮಾಯಣ ಹೇಳಿದ ತುಳಸೀದಾಸ ದೊಡ್ಡವನೇ, ಆ ಕಥಾನಕ ಸತ್ವ ಸೊಗಸುಗಳನ್ನು ಅತಿ ಮಡಿಮೆ ರೇಖೆಗಳಲ್ಲಿ ಮೂಡಿಸಿದ ಹೆಬ್ಬಾರರು ದೊಡ್ಡವರೇ - ಎಂಬ ಸಂದೇಹ ಬಾಧಿಸೀತು.

- ಡಾ| ಶಿವರಾಮ ಕಾರಂತ
Kalavida Hebbarara Rekhalavanya
[collection of articles in kannada by Vyasaraya Ballal on k. k. hebbar's sketches and  paintings
first edition- 1999 ]

published by-
 navakarnataka publications,
BANGALORE
Kattingeri Krishna Hebbar
[k. k. hebbar- art and life- biography]
by- K. S Haridas Bhat
published by
r r c- govind pai research centre
m. g. m. college, udupi-576102
first edition- 1988

No comments:

Post a Comment