stat Counter



Wednesday, June 29, 2011

ಮುರಳಿಧರ ಉಪಾಧ್ಯ ಹಿರಿಯಡಕ- -ರೇಖಾ ಲೀಲೆಗಳ ಚಿರಂಜೀವಿ ಕೆ. ಕೆ. ಹೆಬ್ಬಾರ್ - K K Hebbar [Profile ] by Muraleedhara Upadhya ್


ರೇಖಾಲೀಲೆಗಳ ಚಿರಂಜೀವಿ ಕೆ.ಕೆ. ಹೆಬ್ಬಾರ್


- ಮುರಳೀಧರ ಉಪಾಧ್ಯ, ಹಿರಿಯಡಕ

ಕಟ್ಟಂಗೇರಿ ಕೃಷ್ಣ ಹೆಬ್ಬಾರ್ - ಉಡುಪಿ ಬಳಿಯ ಕಟ್ಟಿಂಗೇರಿಯ ನಾರಾಯಣ ಹೆಬ್ಬಾರ್-ಸೀತಮ್ಮ ದಂಪತಿಗಳ ಮಗನಾಗಿ
1911ರ ಜೂನ್ ಹದಿನೈದರಂದು ಜನನ.  'ಹಾಸಲುಂಟು ಹೊದೆಯಲಿಲ್ಲ' ಎನ್ನುವಂತಹ ಬಡತನ.  ಕಟ್ಟಿಂಗೇರಿ ಸಮೀಪದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ.  ಉಡುಪಿಯ ಕೃಷ್ಣಮಠದ ಗೋಡೆಯಲ್ಲಿದ್ದ ರವಿವರ್ಮನ ಚಿತ್ರಗಳ ತತ್ಪ್ರತಿಗಳಿಂದ
ಸ್ಫೂರ್ತಿ. ಐದನೇ ಕ್ಲಾಸು ಮುಗಿದ ಮೇಲೆ ಮದ್ರಾಸಿನಲ್ಲಿ ಕೆಲವು ತಿಂಗಳು ಹೊಟೇಲ್ ಮಾಣಿ.  ಮತ್ತೆ ಊರಲ್ಲಿ ನಾಲ್ಕು ರೂಪಾಯಿ ಸಂಬಳದ ಮೇಸ್ಟ್ರು. ಈ ಹದಿಹರೆಯದ ಯುವಕ 'ಶಕುಂತಲೆ'ಯ ಪಾಠಮಾಡಲು ಬಿಡಿಸಿದ ಚಿತ್ರಗಳನ್ನು ಕಂಡು ಪರೀಕ್ಷಾ ಕಾರ್ಯಕ್ಕಾಗಿ ಬಂದ ಮಿಶನ್ ದೊರೆಗೆ ಆಶ್ಚರ್ಯ, ಸಂತೋಷ.  ಉಡುಪಿಯ ಮಿಶನ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ, ಪುಂಡಲೀಕ ಶೆಣೈ ಅವರಿಂದ ಚಿತ್ರ ಕಲಾಭ್ಯಾಸಕಕೆ ಉತ್ತೇಜನ.  ಈ ನಡುವೆ ತಂದೆಯ ಸಾವು.  ತಾಯಿ ಸೀತಮ್ಮನೊಡನೆ ಉಡುಪಿ ಗುಂಡಿಬೈಲಿನ ಬಾಡಿಗೆ ಮನೆಯಲ್ಲಿ ವಾಸ.  ಮುಂದೆ ಮೈಸೂರಿನಲ್ಲಿ ಚಾಮರಾಜ ತಾಂತ್ರಿಕ ಸಂಸ್ಥೆಯ ಚಿತ್ರಕಲಾ ವಿಭಾಗದಲ್ಲಿ ವಿದ್ಯಾರ್ಥಿ.  ಸೃಜನಶೀಲ ಕಲಾವಿದ ಕೃಷ್ಣನಿಗೆ, ಆ ಶಾಲೆಯ ಪ್ರಕೃತಿಯ ಅನುಕರಣೆಯೆ ಕಲೆ ಎಂಬ ಧೋರಣೆಯ ಬಗ್ಗೆ ಬೇಸರ.  ವಾಪಾಸು ಉಡುಪಿಗೆ.  ಅಲ್ಲಿನ ಹಿರಿಯ ಫೋಟೋಗ್ರಾಫರ್ ಶ್ರೀನಿವಾಸರಾಯರಲ್ಲಿ ಫೋಟೋಗಳನ್ನು ರೀ-ಟಚ್ ಮಾಡುವ ಉದ್ಯೋಗ, ನಿನ್ನ ಶ್ರೇಯಸ್ಸಿಗೆ ಇರವುದು ಒಂದೇ ಸ್ಥಳ - ಅದು ಮುಂಬಯಿ.  ಶ್ರೀನಿವಾಸರಾಯರ ಕ್ಯಾಮರಾ ಕಣ್ಣಿನ ದೂರದೃಷ್ಟಿ, ಮಾರ್ಗದರ್ಶನ.

1933ರಿಂದ ಮುಂಬಯಿಯಲ್ಲಿ ಕೆ.ಕೆ. ಹೆಬ್ಬಾರರ ಹೋರಾಟದ ಬದುಕು.  ಸ್ಟುಡೀಯೋದಲ್ಲಿ ಕೆಲಸ.  ದಂಡಾವತಿ ಮಠರ ಮಾರ್ಗದರ್ಶನದಲ್ಲಿ ಚಿತ್ರಕಲಾಭ್ಯಾಸ.  ಕಟ್ಟಿಂಗೇರಿಯ ಕೃಷ್ಣನ ಕೈಯಲ್ಲಿ ಕುಂಚ.  1935ರಲ್ಲಿ ತಿರುಪತಿಯಲ್ಲಿ ಹೆಬ್ಬಾರರ ಮದುವೆ.  'ಅಂತಃಪಟದಾಚೆ ವಿಧಿತಂದ ವಧು' ಸುಶೀಲೆ ಅನ್ವರ್ಥನಾಮ.  1937ರಿಂದ ಮುಂಬಯಿಯ ಜೆ.ಜೆ. ಸ್ಕೂಲ್
ಆರ್ಟ್ಸ್‌ನಲ್ಲಿ ವಿದ್ಯಾರ್ಥಿ, ಅದರ ನಿರ್ದೇಶಕ ಚಾರ್ಲ್ಸ್‌ ಜೆರಾರ್ಡ್‍ರಿಂದ ಹೆಬ್ಬಾರ್ಗೆ ಕಿವಿಮಾತು.  ನಮ್ಮ ಸುತ್ತಮುತ್ತಣ ಜೀವನವನ್ನು ಪಡಿಮೂಡಿಸುವ ಕೆಲಸ ಕೆಮರಾ ಮಾಡಲಿ.  ನಾವು ಪ್ರಪಂಚದ ಕಡೆ ನೋಡುವುದಕ್ಕಿಂತಲೂ ಹೆಚ್ಚಾಗಿ ಪ್ರಪಂಚದ ಆಂತರ್ಯವೇನಿದೆ ಎಂಬುದನ್ನು ನೋಡಲು ಕಲಿಯಬೇಕು.  ಜೆ.ಜೆ. ಕಲಾಶಾಲೆಯಲ್ಲಿ ಶಿಕ್ಷಣ - 1939ರಿಂದ.  1941ರಿಂದ ಸ್ವರ್ಣಪದಕ, ಪ್ರಶಸ್ತಿಗಳ ಸರಮಾಲೆ ಆರಂಭ.  ದಕ್ಷಿಣ ಕನ್ನಡದ ಯಕ್ಷಗಾನ, ಕೇರಳದ ನಿಸರ್ಗ ಹಬ್ಬಗಳು, ಕಾರ್ಲದ ಬೌದ್ಧಗುಹೆಗಳು, ಹಂಪೆಯ ಭಗ್ನ ಅವಶೇಷಗಳು, ವಿಜ್ಞಾನಿಗಳ ವ್ಯೋಮ ಸಾಹಸಗಳು, ಸಂಗೀತದ ಕಂಪನಗಳು, ತುಲಸೀದಾಸರ ರಾಮಾಯಣ, ಭಾರತದ ಜಾನಪದ - ಹೆಬ್ಬಾರ ಕಲಾಸೃಷ್ಟಿಗೆ ಮುಖ್ಯ ಪ್ರೇರಣೆಗಳು. ಭಾರತೀಯ ಚಿತ್ರಕಲೆಯ ಜೀವಾಳವಿರುವುದು ನೆನಪನ್ನು ಚಿತ್ರಿಸುವುದರಲ್ಲಿ ಅಥವಾ ಕಳೆದ ಅನುಭವಕ್ಕೆ ರೂಪ ಕೊಡುವುದರಲ್ಲಿ ಆನಂದಕುಮಾರ ಸ್ವಾಮಿಯವರ ಈ ಮಾತಿನಲ್ಲಿ ಹೆಬ್ಬಾರರಿಗೆ ನಂಬಿಕೆಯಿತ್ತು.  1948ರಲ್ಲಿ ಭಾರತ ಸರಕಾರದಿಂದ ಹೆಬ್ಬಾರರಿಗೆ ವಿಶೇಷ ಪ್ರಶಸ್ತಿ.  ಯುರೋಪ್ಗೆ ಕಲಾಭವದ ಯಾತ್ರೆ, ಪ್ಯಾರಿಸ್ ಅಕಾಡೆಮಿ ಜ್ಯೂಲಿಯನ್ನಲ್ಲಿ ಕಲಾ ವ್ಯಾಸಂಗ, ನವ್ಯಮಾರ್ಗದಲ್ಲಿ ಸ್ವಾಜರ್ಿತ ಶೈಲಿಯಲ್ಲಿ 'ಹಾಡುವ ರೇಖೆ'ಗಳ ಹೆಬ್ಬಾರ್.

ರೇಖಾ, ರಜನಿ, ರನ್ನ - ಹೆಬ್ಬಾರರ ಮಕ್ಕಳು, ಹೆಬ್ಬಾರರ ಆರೋಹಣದ ಹಂತಗಳು - ಶಿವರಾಮ ಕಾರಂತರಿಂದ ಹೆಬ್ಬಾರರ ಕುರಿತು ಪುಸ್ತಕ (1952).  ಪ್ಯಾರಿಸ್, ನ್ಯೂಯಾಕರ್್, ಜರ್ಮನಿ, ಆಸ್ಟ್ರೇಲಿಯಾಗಳಲ್ಲಿ ಕೃತಿ ಪ್ರದರ್ಶನ, ಪದ್ಮಶ್ರೀ, ಮೈಸೂರು ವಿ.ವಿ.ಯ ಗೌರವ ಡಾಕ್ಟರೇಟ್, ಕೇಂದ್ರ ಲಲಿತಾಕಲಾ ಅಕಾಡೆಮಿಯ ಅಧ್ಯಕ್ಷ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಗಾತ್ರದಲ್ಲೂ ಸಿದ್ಧಿಯಲ್ಲೂ ಎತ್ರರದ ವ್ಯಕ್ತಿ.  ಇವು ಕಟ್ಟಂಗೇರಿ ಕೃಷ್ಣ ಹೆಬ್ಬಾರರ ಬದುಕಿನ ಕೆಲವು ಮುಖ್ಯ ರೇಖೆಗಳು.  (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ - ಕಲೆ ಬದುಕಿ'ನ ವರ್ಣರಂಜಿತ ಚಿತ್ರವನ್ನು ಕು.ಶಿ. ಹರಿದಾಸ ಭಟ್ಟರು ತನ್ನ ಗ್ರಂಥದಲ್ಲಿ ನೀಡಿದ್ದಾರೆ.

ಭಾರತದ ಜಾನಪದ ಹೆಬ್ಬಾರರ ಬದುಕಿನ ಸೃಜನಶೀಲತೆಯ ಮುಖ್ಯ ಪ್ರೇರಣೆಗಳಲ್ಲಿ ಒಂದು.  ನಮ್ಮ ಉತ್ಸವಗಳು,
ಧಾರ್ಮಿಕ ಆರಾಧನಾ ಕಲೆಗಳು, ಕ್ರೀಡೆಗಳು, ಶ್ರಮಜೀವಿಗಳು, ಸಂಗೀತ - ಅವರಿಗೆ
ಸ್ಫೂರ್ತಿ ನೀಡಿವೆ.  'ಜಾನುವಾರು ಸಂತೆ', 'ಗದ್ದೆ ನಟ್ಟಿಯ ಹಾಡು', 'ಮೀನು ಮಾರುವ ಹೆಂಗಸರು' 'ಜಾಡಮಾಲಿ', 'ನಾಗಮಂಡಲ ಪಾತ್ರಿ ಮತ್ತು ವೈದ್ಯರ ನೃತ್ಯ', 'ಯಕ್ಷಗಾನ' - ಇವು ಹೆಬ್ಬಾರರ ಕೆಲವು ಪ್ರಸಿದ್ಧ ಚಿತ್ರಗಳು.  ಹೆಬ್ಬಾರರನ್ನು ಮುಲ್ಕ್ ರಾಜ್ ಆನಂದ್ 'ಜನತಾ ಜನಾರ್ದನನ ಕಲಾವಿದ' ಎಂದಿರುವುದು ಅರ್ಥಪೂರ್ಣ.  ಗುಡ್ಡಗಾಡಿನ ಜನರಿಗೆ ಕಲೆ ಜೀವನದ ಅವಿಭಾಜ್ಯ ಅಂಗ ಎಂಬುದನ್ನು ಹೆಬ್ಬಾರರು ಗುರುತಿಸಿದ್ದರು.  ಕನರ್ಾಟಕದ ತೊಗಲು ಗೊಂಬೆಗಳು, ಆದಿವಾಸಿಗಳ
ಮೂರ್ತಿಗಳು, ಮುಖವಾಡಗಳು ಹಾಗೂ ರಂಗವಲ್ಲಿಗಳ ಕಲಾತ್ಮಕ ಮೌಲ್ಯ, ಸೃಜನಶೀಲತೆಗಳನ್ನು ಅವರು ಕೊಂಡಾಡುತ್ತಿದ್ದರು. ದಕ್ಷಿಣ ಕನ್ನಡದಲ್ಲಿ ಇಂದಿಗೂ ಉಳಿದುಬಂದಿರುವ ಯಕ್ಷಗಾನ ಬಯಲಾಟದ ವೇಷಭೂಷಣಗಳನ್ನು ಸೃಷ್ಟಿಸಿದವರು ಮಹಾನ್ ಕಲಾವಿದರೆಂದು ನನ್ನ ಅಭಿಪ್ರಾಯ ಎಂದಿದ್ದರವರು.  ಕಲಾವಂತಿಕೆ ಎಂದರೆ ನೋಡಿದ್ದನ್ನು ಪುನಃ ಸೃಷ್ಟಿಮಾಡುವ ಕೈಚಳಕವೆಂದು ಇಂದು ಯಾರೂ ಅರ್ಥವಿಸುವುದಿಲ್ಲ.  ಚಿತ್ರಕಲೆಯ ಪ್ರಾಚೀನ ಪರಂಪರೆ ಕಳೆದ ಐವತ್ತು ವರ್ಷಗಳಲ್ಲಿ ಭಗ್ನವಾಗಿ ಹೋಗಿದೆ.  ಇಂದಿನ ಕಲಾಕೃತಿಗಳಲ್ಲಿ ಮಿಳಿತವಾಗಬೇಕಾದದ್ದು ಕಲಾವಿದನ ಅಂತಃದೃಷ್ಟಿ, ಭಾವಸ್ಪಂದನ ಹಾಗೂ ಬುದ್ಧಿಕ್ರಿಯೆ.... ಆಲಂಕಾರಿಕ (ಫಿಗರೇಟಿವ್), ಅನಾಲಂಕಾರಿಕ (ನಾನ್-ಫಿಗರೇಟಿವ್) ಗಳೆಂಬ
ಚರ್ಚೆ ನನ್ನನ್ನು ಮುಟ್ಟುವುದಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ ಭಿನ್ನ ಅನುಭವಗಳು ಭಿನ್ನ ರೀತಿಯಲ್ಲಿ ಪ್ರಕಟವಾಗುತ್ತವೆ. - ಇದು ಹೆಬ್ಬಾರರ ಕಲಾಚಿಂತನೆ.  ಕಾರಂತರ ಯಕ್ಷಗಾನ ಪ್ರಯೋಗಗಳು ಸಂಪ್ರದಾಯ ವಿರೋಧಿ ಎಂದು ಟೀಕಿಸುವ ಸಂಶೋಧಕಿ ಮಾರ್ತಾ ಆಸ್ಟೆನ್‍ಗೆ ಹೆಬ್ಬಾರರು ಬರೆದ ಕಿವಿಮಾತಿಗೆ ತುಂಬ ಮಹತ್ವವಿದೆ - ಒಬ್ಬ ವಿದೇಶಿಯರು ಬೇರೆ ದೇಶಕ್ಕೆ ಬಂದು ಸಂಸ್ಕೃತಿ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸಾಧುವಲ್ಲ.

1996ರ ಮಾರ್ಚ್26ರಂದು ನಿಧನಹೊಂದಿದ ಕೃಷ್ಣ ಹೆಬ್ಬಾರರು ತನ್ನ ರೇಖಾಲೀಲೆಗಳಲ್ಲಿ ಚಿರಂಜೀವಿ.

#####

ಹೆಬ್ಬಾರ್ ರಾಮಾಯಣ

ಅವರು ಬರೆದ ತುಲಸೀದಾಸರ ರಾಮಾಯಣದ ಸಂಪುಟ ಕಂಡವರಿಗೆ - ರಾಮಾಯಣ ಹೇಳಿದ ತುಳಸೀದಾಸ ದೊಡ್ಡವನೇ, ಆ ಕಥಾನಕ ಸತ್ವ ಸೊಗಸುಗಳನ್ನು ಅತಿ ಮಡಿಮೆ ರೇಖೆಗಳಲ್ಲಿ ಮೂಡಿಸಿದ ಹೆಬ್ಬಾರರು ದೊಡ್ಡವರೇ - ಎಂಬ ಸಂದೇಹ ಬಾಧಿಸೀತು.

- ಡಾ| ಶಿವರಾಮ ಕಾರಂತ
Kalavida Hebbarara Rekhalavanya
[collection of articles in kannada by Vyasaraya Ballal on k. k. hebbar's sketches and  paintings
first edition- 1999 ]

published by-
 navakarnataka publications,
BANGALORE
Kattingeri Krishna Hebbar
[k. k. hebbar- art and life- biography]
by- K. S Haridas Bhat
published by
r r c- govind pai research centre
m. g. m. college, udupi-576102
first edition- 1988

: Kanavi's prose volume released

[The Hindu] Kanavi's prose volume released- chennaveera kanavi- kannada poet

M S Subbulakshmi - jagadodharana

Google Translates to Kannada now

Google Translates In Kannada | Indian Languages

Girish Karnad's Plays-Bhagabhat Nayak

[The Hindu] : Book Review : Girish Karnad revisited-Girish Karnad's Plays- Bhagabhat Nayak[ book review by M. S. Nararajan

River of Smoke- Amitav Ghosh

The Hindu : Book Review : A triumph of story telling-River of Smoke- Amitav Ghosh-[ book review by- Anjana Rajan]

JANA RATHA [ VIDEO KAVANA]

Tuesday, June 28, 2011

ಅನುಪಮ ಪ್ರತಿಭೆಯ ನಿರುಪಮ ಚರಿತೆ!

ಅನುಪಮ ಪ್ರತಿಭೆಯ ನಿರುಪಮ ಚರಿತೆ! Nirupama Rao- Indian Ambassador to U. S.A.[ BY ARAKERE JAYARAM]

ಝೆನ

[ varthabharathi | kannada] zen- R. D. Hegade Almane

NHAI Likely to Raze Part of Shivaram Karanth’s Ancestral House

I request Gov. of karnataka to move and rebuild Shivarama Karanth's ancestral house near karanth ranga mandira at kota or at karanth kalagrama , udupi- MURALEEDHRA UPADHYA HIRIADKA

Bettada Jeeva [movie review]

Bettada Jeeva movie review: [ Times of India]

"Ithaka" by C P Cavafy (poetry reading)

ಕವಾಫಿಯ ಕವಿತೆಗಳು - ಕೆ.ವಿ. ತಿರುಮಲೇಶ್ -

Nusrat - Usey Bhool Ja - [ Ghazal]

Monday, June 27, 2011

Historical Importance of Dodderi

[Prajavani- kannada] dodderi[challakere taluk- karnataka]-Jadekunte Manjunath

‘The fruits of independence’: Satyajit Ray,

Book Review - ಚೌಟೆರೆನ ಕಾದಂಬರಿ 'ಮಿತ್ತಬೈಲ್ ಯಮುನಕ್ಕೆ' by ಮುರಳೀಧರ ಉಪಾಧ್ಯ ಹಿರಿಯಡಕ

ಚೌಟೆರೆನ ಕಾದಂಬರಿ 'ಮಿತ್ತಬೈಲ್ ಯಮುನಕ್ಕೆ'
                                          -    ಮುರಳೀಧರ ಉಪಾಧ್ಯ ಹಿರಿಯಡಕ
                                   
     'ಪಿಲಿಪತ್ತಿಗಡಸ್', 'ಧರ್ಮತ್ತಿಮಾಯೆ' (ನಾಟಕಗಳು) 'ಕರಿಯವಜ್ಜೆರೆನ ಕತೆಕುಲು' ಕೃತಿಗಳ ಲೇಖಕ ಆನಂದಕೃಷ್ಣರು ತುಳುವಿನಲ್ಲಿ ಈಗ ಬರೆಯುತ್ತಿರುವ ಪ್ರಮುಖಲೇಖಕರಲ್ಲೊಬ್ಬರು. 'ಮಿತ್ತಬೈಲ್ ಯಮುನಕ್ಕೆ' ಆನಂದಕೃಷ್ಣರ ಮೊದಲ ಕಾದಂಬರಿ. ಹತ್ತೊಂಬತ್ತನೆಯ ಶತಮಾನ ಹಾಗೂ ಇಪ್ಪತ್ತನೆಯ ಶತಮಾನದ ಪೂವರ್ಾರ್ಧದಲ್ಲಿ ನಡೆಯುವ ಘಟನೆಗಳು ಈ ಕಾದಂಬರಿಯಲ್ಲಿವೆ. ಕಾಸರಗೋಡು ಸಹಿತವಾದ ತುಳುನಾಡು ಈ ಕಾದಂಬರಿಯ ಕ್ರಿಯಾಕೇಂದ್ರವಾಗಿದೆ. ಆದರೆ ಈ ಕಾದಂಬರಿಯ ಒಂದು ಪಾತ್ರ ಸುಬ್ಬಯಣ್ಣ ಗಾಂಧೀಜಿಯ ಆಶ್ರಮಗಳಿಗೆ, ದಿಲ್ಲಿ ಕೋಲ್ಕತಗಳಿಗೆ ಹೋಗಿ ಬರುತ್ತಾನೆ.

     ಈ ಕಾದಂಬರಿಯ ಮೂರು ಮುಖ್ಯ ಪಾತ್ರಗಳಾದ ಮಂಜಣ್ಣೆ, ಸುಬ್ಬಯಣ್ಣೆ, ಯಮುನಕ್ಕೆ ಮಿತ್ತಬೈಲ್ ಗುತ್ತಿನ ವ್ಯಕ್ತಿಗಳು. ಸಂಕಮಕ್ಕನ ಮಕ್ಕಳಾದ ಮಂಜಣ್ಣಿ-ಕಿನ್ಯೆನೆ ಮಿತ್ತಬೈಲಿನಲ್ಲಿ ದುಡಿದು ಕೃಷಿಮಾಡಿ ಯಶಸ್ಸುಗಳಿಸುತ್ತಾರೆ. ಮಂಜಣ್ಣ ಮಾಯಿಪ್ಪಾಡಿ (ಕುಂಬಳೆ) ಅರಮನೆಯ ಸೇನೆ ಸೇರಿ ದಣ್ಣಾಯಕನಾಗುತ್ತಾನೆ. ಕಲ್ಯಾಣಪ್ಪನ ಕಾಟಕಾಯಿ (1837)ಯ ಸಂದರ್ಭದಲ್ಲಿ ಮಾಯಿಪ್ಪಾಡಿಯ ಅರಸ ಬ್ರಿಟಿಷರ ಪರವಾಗಿರುತ್ತಾನೆ. ಮಂಜಣ್ಣ-ದುಗರ್ಾರ ದಾಂಪತ್ಯೇತರ ಸಂಬಂಧವನ್ನು ಲೇಖಕರು ಚಿತ್ರಿಸಿದ್ದಾರೆ. ಆದರೆ ಮಂಜಣ್ಣನ ಪತ್ನಿಯ ಪಾತ್ರ ಅಕಲ್ಷ್ಯಕ್ಕೀಡಾಗಿದೆ.

     ಮಾಂಕರಾಲನ ಕಾಲದಲ್ಲಿ ಮಿತ್ತಬೈಲ್ ಗುತ್ತು ಅಧಃಪತನದ ಹಾದಿ ಹಿಡಿಯುತ್ತದೆ. ನಿಗೂಢ ಎಳೆಯಂತಿರುವ ಮಾಂಕರಾಲ್-ಅಚಕ್ಕರ ದಾಂಪತ್ಯೇತರ ಸಂಬಂಧ ಕಾದಂಬರಿಯ ಕೊನೆಯಲ್ಲಿ ಅನಾವರಣಗೊಳ್ಳುತ್ತದೆ. ಮಿತ್ತಬೈಲಿನ ಸುಬ್ಬಯಣ್ಣ ಗಾಂಧೀಜಿಯ ನಿಕಟವತರ್ಿಯಾಗುತ್ತಾನೆ. ರಂಗೂನಿನಲ್ಲಿದ್ದಾಗ 'ಅಜಾದ್ ಹಿಂದ್' ಸೇನೆಯವರಿಗೆ ಸಹಾಯ ಮಾಡುತ್ತಾನೆ. ದೇಶವಿಭಜನೆಯ ಕಾಲದಲ್ಲಿ ಗಾಂಧೀಜಿಯ ಜತೆಯಲ್ಲಿದ್ದು ಗಾಂಧೀಜಿಯ ಕೊಲೆಯಾದಮೇಲೆ ಮಿತ್ತಬೈಲಿಗೆ ಬರುತ್ತಾನೆ. ನಿಗೂಢವಾಗಿ ಮಾಂಕರಾಲ್ನ ಕೊಲೆಯಾಗಿ ಯಮುನಕ್ಕೆ ಗುತ್ತಿನ ಅಧಿಕಾರಸೂತ್ರ ಹಿಡಿಯುತ್ತಾಳೆ. ಗುರಿಯಷ್ಟೇ ದಾರಿ ಶುದ್ಧವಾಗಿರುವುದು ಮುಖ್ಯ ಎಂಬ ಗಾಂಧೀವಾದಿ ಸುಬ್ಬಯಣ್ಣನ ಸಲಹೆ ಯಮುನಕ್ಕೆಗೆ ಹಿಡಿಸುವುದಿಲ್ಲ. ಬಾರೆಬೈಲು ಆಸ್ತಿಯನ್ನು ಯಮುನಕ್ಕೆ ಖರೀದಿಸಿದ್ದರಿಂದ ಆಚಕ್ಕನ ಮಗ ತ್ಯಾಂಪಣ್ಣ ಮಿತ್ತಬೈಲಿನ ಗೇಣಿದಾರನಾಗಬೇಕಾಗುತ್ತದೆ. ತ್ಯಾಂಪಣ್ಣ ವಕೀಲರಿಂದ ನೋಟೀಸು ನೀಡಿಸಿದಾಗ ಯಮುನಕ್ಕೆ ತನ್ನವರೊಂದಿಗೆ ಬಾರೆಬೈಲಿಗೆ ದಾಳಿಮಾಡಿ ಮನೆ ಸುಡಿಸುತ್ತಾಳೆ. ತ್ಯಾಂಪಣ್ಣನ ಕೊಲೆಯಾಗುತ್ತದೆ. ಬಂಧನಕ್ಕೊಳಗಾಗಿ, ಶಿಕ್ಷೆ ಇಲ್ಲದೆ ಬಿಡುಗಡೆಗೊಂಡು ಬಂದ ಯಮುನಕ್ಕೆ ಪಶ್ಚಾತ್ತಾಪದಿಂದ ಕೊರಗಿ ಸಾಯುತ್ತಾಳೆ.

     ಹಿಂಸೆಯಿಂದ ಅಹಿಂಸೆಯತ್ತ ಚಲಿಸುವ, ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವ ಪಾತ್ರಗಳು ಈ ಕಾದಂಬರಿಯಲ್ಲಿವೆ. ಇಚ್ಲಂಪಾಡಿ ಮನೆಯಲ್ಲಿ ರುಕ್ಮಿಣಿಯಮ್ಮನ ಕಿವಿಮಾತು ಕೇಳಿದ ಕಲ್ಯಾಣಸ್ವಾಮಿ ತನ್ನ ತಪ್ಪು ತಿದ್ದಿಕೊಳ್ಳುತ್ತಾನೆ. ಕೊಲೆ, ಗೂಂಡಾಗಿರಿಗಳನ್ನು ಸಮಥರ್ಿಸುತ್ತಿದ್ದ ಯಮುನಕ್ಕೆ ಕೊನೆಯಲ್ಲಿ ಪಶ್ಚಾತ್ತಾಪ ಪಡುತ್ತಾಳೆ. ಹಿಂಸೆಯ ಸಂಕೇತವಾಗಿದ್ದ ಬೀರಣ್ಣನ ಬೆತ್ತ ಸುಬ್ಬಯಣ್ಣನ ಮೂಲಕ ಗಾಂಧೀಜಿಯ ಕೈಸೇರುವುದು ಸಾಂಕೇತಿಕವಾಗಿದೆ. ಅಸ್ಪೃಶ್ಯತೆಯ ವಿರುದ್ಧದ ತನ್ನ ಹೋರಾಟದಲ್ಲಿ ಗಂಧೀವಾದಿ ಸುಬ್ಬಯಣ್ಣ ಸ್ವಲ್ಪ ಯಶಸ್ಸುಗಳಿಸುತ್ತಾನೆ.

     'ಉರಿ ಉಷ್ಣದ ಮಾಯೆ' ಅಧ್ಯಾಯದಲ್ಲಿ ಯಮುನಕ್ಕೆ ತನ್ನನ್ನು ಅಲಕ್ಷಿಸಿದ ಬಸ್ ಡ್ರೈವರ್ಗೆ ಹೊಡೆಸುವ ಘಟನೆ ಇದೆ. (ಈ ಅಧ್ಯಾಯದ ಕನ್ನಡ ಅನುವಾದ 'ದೇಶ ಕಾಲ' ತ್ರೈಮಾಸಿಕ ಅಕ್ಟೋಬರ್ 2005ರ ಸಂಚಿಕೆಯಲ್ಲಿದೆ.) ಈ ಘಟನೆಯಲ್ಲಿ ಹಾಗೂ ತ್ಯಾಂಪಣ್ಣನ ಮನೆ ಸುಡುವ ಪ್ರಸಂಗದಲ್ಲಿನ ಗುತ್ತಿನ ವ್ಯವಸ್ಥೆಯ ಕ್ರೌರ್ಯದ ಸಾರ್ಥಕ ಚಿತ್ರಣವಿದೆ. ಗುತ್ತಿನ ಯಮುನಕ್ಕೆಯ ವಿರುದ್ಧ ಸಾಕ್ಷಿಗಳೇ ಇಲ್ಲದ್ದರಿಂದ ಅವಳ ಬಿಡುಗಡೆಯಾಗುತ್ತದೆ.

     ಮಿತ್ತಬೈಲ್ ಗುತ್ತಿನ ಮಾಂಕರಾಲ್ನ ದಾಂಪತ್ಯೇತರ ಸಂಬಂಧಗಳಿಂದಾಗಿ ಗುತ್ತಿನವರ ಮನುಷ್ಯ ಸಂಬಂಧಗಳು ಸಂಕೀರ್ಣವಾಗಿವೆ. ತ್ಯಾಂಪಣ್ಣನನ್ನು ಕುರಿತ ಯಮುನಕ್ಕೆಯ ದ್ವೇಷಕ್ಕೆ ಅವನು ಮಾಂಕರಾಲ್ನ ದಾಂಪತ್ಯೇತರ ಸಂಬಂಧದ ಮಗ ಎಂಬುದೂ ಕಾರಣವಾಗಿದೆ.

     ಈ ಕಾದಂಬರಿ ಐತಿಹಾಸಿಕ ಸತ್ಯವನ್ನು ಹುಡುಕಹೊರಟರೆ ಅಥವಾ ಐತಿಹಾಸಿಕ ವ್ಯಕ್ತಿಗಳನ್ನು ಗುರುತಿಸಹೊರಟರೆ ಅವು ನಿರಾಸೆಯ ನೀರಸ ಕತೆಗಳಾದಾವು. ಅದರ ಬದಲು ಇತಿಹಾಸವನ್ನು ಒಂದು ಬರೀ ಮರದ ತುಂಡು ಎಂದು ಗುರುತಿಸಿ ಅದರಲ್ಲಿ ಕೆತ್ತಿರುವ ಚಿತ್ರಗಳನ್ನು ನೋಡಿ ಸಂತೋಷಪಡಬೇಕೆಂದು ನನ್ನ ಅರಿಕೆ ಎನ್ನುತ್ತಾರೆ ಆನಂದಕೃಷ್ಣ. 'ಕಾಟಕಾಯಿ' ಖ್ಯಾತಿಯ ಸ್ವಾತಂತ್ರ್ಯೋಧ ಕಲ್ಯಾಣಸ್ವಾಮಿ, ಗುಲ್ಲು ಸುಬ್ರಾಯ, ಪಾತರ್ಿಸುಬ್ಬನ ಶಿಷ್ಯ ಕೆಂಗಣ್ಣನಾಯ್ಕ, ಗೋವಿಂದ ಪೈ ಇಂಥ ಕೆಲವು ಐತಿಹಾಸಿಕ ವ್ಯಕ್ತಿಗಳು ಈ ಕಾದಂಬರಿಯಲ್ಲಿದ್ದಾರೆ. ಗೋವಿಂದ ಪೈಗಳನ್ನು ಗಾಂಧೀಜಿ 'ಕನ್ನಡದ ಸೂರದಾಸ' ಎಂದು ಗೌರವಿಸುತ್ತಾರೆ. ಮಂಜಣ್ಣ, ಉರ್ಗಮ್ಮ, ಯಮುನಕ್ಕೆ, ಸುಬ್ಬಯಣ್ಣೆ, ಮಾಂಕರಾಲ್ ಪಾತ್ರಗಳಂತೆ ಕಂಗೊಳಿಸುವುದು ಕಾದಂಬರಿಯ ಯಶಸ್ಸಿಗೆ ಸಾಕ್ಷಿಯಾಗಿದೆ. ಕಂಪೆನಿಯವರು ಕಲ್ಯಾಣಸ್ವಾಮಿಯನ್ನು ಗಲ್ಲಿಗೆ ಹಾಕಿದ ಘಟನೆ ಎರಡು ವಾಕ್ಯಗಳ ವರದಿಯಲ್ಲಿ ಮುಗಿದುಹೋಗಿದೆ.

     ಮಿತ್ತಬೈಲಿನ ಮಂಜಣ್ಣ ಬ್ರಿಟಿಷರಿಂದ ಪ್ರಶಸ್ತಿ ಪಡೆದವನು. ಆದರೆ ಕಾದಂಬರಿಕಾರರು ವಸಾಹತುಶಾಹಿ ಆಳ್ವಿಕೆಯನ್ನು ಆರಾಧಿಸಿಲ್ಲ.

     'ಮಿತ್ತಬೈಲ್ ಯಮುನಕ್ಕೆ' ಒಂದು ಗುತ್ತಿನ ಕತೆ. ಗುತ್ತಿನ ಪಾತ್ರಗಳೇ ಇಲ್ಲಿ ಮುಖ್ಯವಾಗುತ್ತವೆ. ಆಂತರಿಕ ವಿಮರ್ಶಕರಾಗಿ ಗುತ್ತಿನ ಸಂಸ್ಕೃತಿ-ಅಪಸಂಸ್ಕೃತಿ, ಆಚಾರ-ಅನಾಚಾರ, ಮೌಲ್ಯ-ಅಪಮೌಲ್ಯ, ಆರೋಹಣ-ಅವರೋಹಣಗಳನ್ನು ಚಿತ್ರಿಸುವುದು ಆನಂದಕೃಷ್ಣರಿಗೆ ಸಾಧ್ಯವಾಗಿದೆ.

     ಚೋಮಕ್ಕನ ದುಡ್ಡಿಗೆ ಪ್ರಾಮಾಣಿಕವಾಗಿ ಬಡ್ಡಿಕೊಡುವ ಉಳ್ಳಾಲದ ಸಾಬು, ಇಚ್ಲಂಪಾಡಿ ಮನೆಯಲ್ಲಿ ಕಲ್ಯಾಣಸ್ವಾಮಿಗೆ ಬುದ್ಧಿ ಹೇಳುವ ರುಕ್ಮಿಣಿಯಮ್ಮ, ವಿಷಮ ದಾಂಪತ್ಯದ ಜೋಡಿ ಆಚಕ್ಕ-ಉದಾರ್ಗತ್ತುವ ಗಡಿಪತ್ತಿನಾರ್, ಮಂಜಣ್ಣನನ್ನು ಪ್ರೀತಿಸುವ ದುಗರ್ಾ-ಇಂತ ಚಿಕ್ಕ ಪಾತ್ರಗಳು ಕೂಡ ನೆನಪಿನಲ್ಲಿ ಉಳಿಯುತ್ತವೆ.
ಆನಂದಕೃಷ್ಣರ 'ಮಿತ್ತಬೈಲ್ ಯಮುನಕ್ಕೆ' ತುಳು ಸಾಹಿತ್ಯದ ಬೆರಳೆಣಿಕೆಯ ಪ್ರಥಮ ದಜರ್ೆಯ ಕಾದಂಬರಿಗಳ ಸಾಲಿಗೆ ಸೇರುತ್ತದೆ. ಆನಂದಕೃಷ್ಣರ ಚೊಚ್ಚಲ ಕಾದಂಬರಿ 'ಮೂಜಿ ಅಚ್ಚರದ ಮಾಣಿ ಮಾಯಾದ್, ಆಜಿ ಅಚ್ಚರದ ಮಾಣಿ ಆಯೆರ್.

ಅನಿಕೇತನ
(ಕನರ್ಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ)
   (ಜುಲಾ-ಸೆಪ್ಟೆಂಬರ್-2009)
ಕನರ್ಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ. ಸಿ. ರಸ್ತೆ,
ಬೆಂಗಳೂರು-560002.
 

Udupi Taluk Kannada Sahitya Sammelana- July 3, 2011



”ಲೋಕಾಯತ’ದ ಬಿ. ವಿ ವೀರಭದ್ರಪ್ಪ

[ಪ್ರಜಾವಾಣಿ ] B.V.veerabhadrappa by rahamat tareekere

ಅ. ರಾ. ಮಿತ್ರ

[Prajavani]ಅ. ರಾ. ಮಿತ್ರ- ಎನ್. ಎಸ್. ಲಕ್ಸ್ಮೀನರಾಯಣ ಭಟ್ಟ

ಯು. ಆರ್. ಅನಂತಮೂರ್ತಿ-ಸೃಜನಶೀಲತೆಯ ಅಗ್ನಿದಿವ್ಯ

[Prajavani] Dr. U. R. Anantamurthy- srujanasheelateya agnidivya-[ordeal by fire of creativity]

ಹೆರ್ತ ಮುಲ್ಲರ್ :ನೊಬೆಲ್ ಪ್ರಶಸ್ತಿಯ ಜರ್ಮನ್ ಲೇಖಕಿಯ ಒಂದು ಕತೆ -’ಬೀದಿ ಗುಡಿಸುವ ಜಾಡಮಾಲಿಗಳು ‘ « ಬಿ ಎ ವಿವೇಕ ರೈ

ಹೆರ್ತ ಮುಲ್ಲರ್ :ನೊಬೆಲ್ ಪ್ರಶಸ್ತಿಯ ಜರ್ಮನ್ ಲೇಖಕಿಯ ಒಂದು ಕತೆ -’ಬೀದಿ ಗುಡಿಸುವ ಜಾಡಮಾಲಿಗಳು ‘ « ಬಿ ಎ ವಿವೇಕ ರೈ

Friday, June 24, 2011

ತೋಳ್ಪಾಡಿ ಸೌಂದರ್ಯ ಲಹರಿ:ನಮ್ಮ ಪಾಡೇ ನಮ್ಮ ಹಾಡಾಗುವ ಬಗೆ

Kabin Phukan [1946-2011

M. S. Prabhakara[kamaroopi]

Ramana Maharshi [rare video]

J.Krishnamurthy

J.Krishamurthy : Fact about fear

[The Hindu ] Fact about fear- Sudhamahi Ragunathan

Karkala Taluk Kannada Sahitya Sammelana[2011]-President-Dr. K. M. Raghava Nambiyar

karkal taluk 11th kannada sahitya sammelana at ennNehole on june 25, 2011. Presiden t- Dr. Raghava Nambiyar[ Topic for discussion- karkala in kannada language and culture-]

Thursday, June 23, 2011

ಪಶ್ಚಿಮ ಘಟ್ಟದ 10 ಪ್ರದೇಶ ಯುನೆಸ್ಕೋ ಪಟ್ಟಿಗೆ

ಪಶ್ಚಿಮ ಘಟ್ಟದ 10 ಪ್ರದೇಶ ಯುನೆಸ್ಕೋ ಪಟ್ಟಿಗೆ[ western ghats- 10 zones to world heritage list]

Tukaram abhang - Bhimsen Joshi

ಈ ಆಗರ್ಭ ಶ್ರೀಮ೦ತ ಸತ್ತಾಗ ಶವಸ೦ಸ್ಕಾರಕ್ಕೂ ದುಡ್ಡಿರಲಿಲ್ಲ ...

ಜೀವನ್ಮುಖಿ: ಈ ಆಗರ್ಭ ಶ್ರೀಮ೦ತ ಸತ್ತಾಗ ಶವಸ೦ಸ್ಕಾರಕ್ಕೂ ದುಡ್ಡಿರಲಿಲ್ಲ ...: " ಕಾರ್ನಾಡ್ ಸದಾಶಿವ ರಾವ್ 1881-1937 ದಕ್ಷಿಣ ಭಾರತದ ಗಾ೦ಧಿ ಎ೦ದೇ ಇವರು ಪ್ರಸಿದ್ಧರಾಗಿದ್ದರು . ಗಾ೦ಧೀಜಿಯವರ ಸಮಕಾಲೀನರಾದ ಇವರ ದೇಶಪ್ರೇಮ ಅಪ್ರತಿಮ. ಹುಟ್ಟಿ..."[ Karnad SADASHIVA RAO]

Deepak Chopra- Buddha

Deepak Chopra Buddha #1 -- free

Kayyara Kinhanna Rai-Muraleedhra Upadhya Hiriadka [2011]



Wednesday, June 22, 2011

Kabir - Kaya Naheen teri - Bhimsen Joshi Pa...

Dr. T. R. Chandrashekar

Prajavani[KANNADA]' rajakeeya aprabuddhate'[ Political Immaturity]

ಬೆಟ್ಟದ ಜೀವ

ಸವಿ ಮಾತು......!!!: ಬೆಟ್ಟದ ಜೀವ: "ತುಂಬಾ ದಿನಗಳ ಹಿಂದೆ ಶಿವರಾಮ ಕಾರಂತರ, 'ಬೆಟ್ಟದ ಜೀವ' ಅನ್ನುವ ಚಿಕ್ಕ ಕಾದಂಬರಿಯೊಂದನ್ನ ಓದಲು ಶುರುಮಾಡಿದ್ದೆ. ಅದು ಕಾರಂತಜ್ಜರ ಮೇರುಕೃತಿಗಳಲ್ಲಿ ಒಂದೆಂಬುದನ್ನ ಕೇಳಿದ್..."

Gulon Main Rang Bhare, Ustad Mehdi Hassan, Faiz Ahmad Faiz

Faiz Ahmad Faiz: The Last Mushiarah (Poetry Slam)

muktak-- rachna gaur bharati.

'Desia Kandha' Tribal Community in India [ Kuvi Language]

Monday, June 20, 2011

ಚಂದ್ರಕಾಂತ ಕುಸನೂರ

[Prajavani]Chandrakanta kusanoora-President, 12th Gulbarga District Kannada Sahitya Sammelana, june 22.

ದೇವರ ಆಲಯ

[Prajavani] Dr. Gururaj Karjagi

Western Ghats to World Heritage-Panduranga Hegade

[Prajavani] kannada

: How important was Macaulay?

[The Hindu] : : The Tragedy of Power-Robert E. Sullivan[ BOOK REVIEW BY- KRISHNA KUMAR]

Celluloid Deities-Preminda Jacob

[The Hindu] : Celluloid Deities- THE VISUAL CULTURE OF CINEMA AND POLITICS IN SOUTH INDIA-Preminda Jocob[ Book Review by- C. S. Venkiteswaran

On Kamba Ramayanam

The Hindu : Book Review / Language Books : On Kamba Ramayanam- N. S. Krishnaswami

visit to mandagadde birds sanctuary[karnataka]

MEENA KANDASAMY - Indian English Poetess

ಕವಿಯ ಇನ್ವಿಜಿಲೇಷನ್ ಡ್ಯೂಟಿ! - ೭

[ನಂದೊಂದ್ಮಾತು:] ಕವಿಯ ಇನ್ವಿಜಿಲೇಷನ್ ಡ್ಯೂಟಿ! - ೭[ kuvempu]

ಮಲದಲ್ಲೇ ಅನ್ನ ಕಾಣುತ್ತಿರುವವರ ದಾರುಣ ಬದುಕು....

[ಸಂಪಾದಕೀಯ]: ಮಲದಲ್ಲೇ ಅನ್ನ ಕಾಣುತ್ತಿರುವವರ ದಾರುಣ ಬದುಕು....

Sunday, June 19, 2011

ಕಾಡಕೊರಗರ ಕೊರಗು

ದುರ್ಗಾಪುರದ ಕೇವಲ ಮನುಷ್ಯರು


ದುರ್ಗಾಪುರದ ಕೇವಲ ಮನುಷ್ಯರು
            ದುರ್ಗಾಪುರ ಎಂ. ವ್ಯಾಸರ ಕತೆ, ಕಾದಂಬರಿಗಳ ಕಾಲ್ಪನಿಕ ಖಾಯಂ ಕ್ರಿಯಾಕೇಂದ್ರ.  ಅಲ್ಲಿನ ಶಂಕರೀನದಿ, ಶಂಕರಗುಡ್ಡ, ಮುರಿದ ಸೇತುವೆ, ಮಠ, ಇವೆಲ್ಲ ವ್ಯಾಸರ ಓದುಗರಿಗೆ ಚಿರಪರಿಚಿತ.  ದುರ್ಗಾಪುರದ ಗಂಡು-ಹೆಣ್ಣುಗಳಕ್ರಿಯೆಗಳ ಹಿಂದಿನ ಮಾನಸಿಕ ಒತ್ತಡವನ್ನು ಕತೆಗಾರ ವ್ಯಾಸ ಅನಾವರಣಗೊಳಿಸುತ್ತಾರೆ.
            "ರಥ" ಕಾದಂಬರಿಯ ಸುಶೀಲೆಗೆ ರವಿಯೊಂದಿಗಿನ ತನ್ನ ವಿವಾಹಪೂರ್ವದ ಗುಪ್ತ ಪ್ರಣಯದ ನೆನಪುಗಳಿಂದ ಬಿಡುಗಡೆ ಇಲ್ಲ.  "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಎಂಬಂಥ ಗಂಡು-ಹೆಣ್ಣಿನ ಸೆಳೆತವನ್ನು ವ್ಯಾಸರು ತನ್ನ ಮೋಡಿ ಮಾಡುವ ಗದ್ಯಶೈಲಿಯಲ್ಲಿ ಚಿತ್ರಿಸುತ್ತಾರೆ.  ರವಿಯ ಪ್ರತಿಬಿಂಬವಾಗಿ ಕಂಡ ತನ್ನ ಸಹೋದ್ಯೋಗಿ, ಕಲಾವಿದ ಕೃಷ್ಣಕಾಂತನನ್ನು ಸುಶೀಲಾ ಮದುವೆಯಾಗುತ್ತಾಳೆ.  ಮರದಿಂದ ಬಿದ್ದ ರವಿ ಪರಾವಲಂಬಿಯಾಗುತ್ತಾನೆ.
            "ಕ್ಷೇತ್ರ"ದ ಅನಂತಶರ್ಮ, ನೀತಿ-ಅನೀತಿಗಳ ಚೌಕಟ್ಟನ್ನು ಮೀರಿ ಬದುಕನ್ನು ಸಹಜವಾಗಿ ಸ್ವೀಕರಿಸಬೇಕೆಂಬ ವ್ಯಾಸರ ಪ್ರಾತಿನಿಧಿಕ ಪಾತ್ರ.  ಅನಂತಶರ್ಮನ ಮಗ ಮನೋರೋಗಿಯಾಗಲು ತಾಯಿಯನ್ನು ಕುರಿತ ಅವನ ಹಂಬಲ, ಅಘೋಷಿತ ಮಲತಾಯಿ ವಿಲಾಸಿನಿಯ ಮಗ ಭೂಷಣನ ಮೇಲಿನ ಅವನ ಹೊಟ್ಟೆಕಿಚ್ಚು ಕಾರಣವಾಗಿವೆ.  ಹೆಂಡತಿ ಮೀನಾಗೆ ಹಿಂಸೆ ನೀಡುತ್ತಿದ್ದ, ಕಾದಂಬರಿಕಾರನಾಗಲು ಬಯಸಿ ಸೋತ ರವಿ ಅಪಘಾತದಲ್ಲಿ ಸಾಯುತ್ತಾನೆ.  ಅನಂತಶರ್ಮರು ತನ್ನ ಅನೌರಸ ಪುತ್ರ ಭೂಷಣನನ್ನು ಮನೆಗೆ ಕರೆತಂದಾಗ ರವಿಯ ತಿದ್ದಿದ ರೂಪದಂತೆ ಕಾಣುತ್ತಿದ್ದ ಭೂಷಣನನ್ನು ಮೀನಾ ಬಾಳಸಂಗಾತಿಯಾಗಿ ಸ್ವೀಕರಿಸುತ್ತಾಳೆ.  ಮಾಧವ ಕೆದ್ಲಾಯನಂಥ ಒಂದು ಚಿಕ್ಕ ಪಾತ್ರವನ್ನು ಓದುಗರ ಮನದಾಳದಲ್ಲಿ ಅವಿಸ್ಮರಣೀಯವಾಗಿ ಉಳಿಸಬಲ್ಲ ಕಥನಕೌಶಲ ಎಂ. ವ್ಯಾಸರಲ್ಲಿದೆ.
            "ಸ್ನಾನ" ಕಾದಂಬರಿಯ, ಸಾಂಧು ಮಠದ ಸತ್ಯಾನಂದ ಸ್ವಾಮಿಗೆ ತನ್ನ ಗುರು ನಿತ್ಯಾನಂದರ ರಹಸ್ಯ ದಿನಚರಿ ಪುಸ್ತಕ ಸಿಗುತ್ತದೆ.  ತಾನು ನಿತ್ಯಾನಂದ ಸ್ವಾಮಿ-ಸರಸ್ವತಿಯರ ದಾಂಪತ್ಯೇತರ ಸಂಬಂಧದ ಮಗ ಎಂದು ಸತ್ಯಾನಂದನಿಗೆ ತಿಳಿಯುತ್ತದೆ.  ಈ ಸ್ವಾಮಿ, ತನ್ನ ಗುರುಗಳ ದಿನಚರಿಯನ್ನು ಮಾತ್ರವಲ್ಲ, "ಸಂಸ್ಕಾರ" ಕಾದಂಬರಿಯನ್ನು, ರಜನೀಶರ ಪುಸ್ತಕಗಳನ್ನು ಓದಿಕೊಂಡಿದ್ದಾನೆ.  ವಿಧವೆ ತರುಣಿ ದೇವಕಿಯ ಸೆಳೆತಕ್ಕೊಳಗಾಗುವ ಮನೋರೋಗಿ ಸತ್ಯಾನಂದನಿಗೆ ಅವಳೊಂದಿಗೆ ಸಹಜ ಸಂಬಂಧ ಸಾಧ್ಯವಾಗುವುದಿಲ್ಲ.
            ಎಂ. ವ್ಯಾಸರ ತ್ರಿವಳಿ ಕಾದಂಬರಿಗಳಲ್ಲಿ ಸುಶೀಲಾ, ಮೀನಾ, ದೇವಕಿ ಈ ತರುಣಿಯರು ಉತ್ಸವಮೂರ್ತಿ ಬದಲಾದುದನ್ನು ಒಪ್ಪಿಕೊಳ್ಳುವ ರಥಗಳಂತೆ ಬದುಕನ್ನು ಸಹವಾಗಿ ಸ್ವೀಕರಿಸುತ್ತಾರೆ; ವ್ಯಕ್ತ ಮಧ್ಯದ ಪ್ರವಾಹದಲ್ಲಿ ಈಜುತ್ತಾರೆ.  ದಾಂಪತ್ಯದ್ರೋಹ ಮಾಡಿದ ಪಾಪಪ್ರಜ್ಞೆಯಿಂದ ಸರಸ್ವತಿ ಹುಚ್ಚಿಯಾಗುತ್ತಾಳೆ.  "ಕ್ಷೇತ್ರ"ದ ರವಿ, "ಸ್ನಾನ"ದ ಸತ್ಯ ತಮ್ಮ ಹಿರಿಯರ ಲೈಂಗಿಕ ಜೀವನ ಅನೈತಿಕವಾಗಿತ್ತು ಎಂಬ ನಂಬಿಕೆಯಿಂದ ಅಸ್ವಸ್ಥರಾಗುತ್ತಾರೆ. ವ್ಯಾಸರ ಪಾತ್ರಗಳು ಬದುಕು ಸಹ್ಯವೋ ಅಸಹ್ಯವೋ ಎಂಬ ಪ್ರಶ್ನೆಯನ್ನು ಕೇಳುತ್ತ ಪುರುಷಾರ್ಥಗಳಲ್ಲಿ ಒಂದಾದ ಕಾಮದ ಹುಡುಕಾಟದಲ್ಲಿ ಚಿರಂಜೀವಿಗಳಾಗುತ್ತವೆ.
            "ಮನುಷ್ಯರ ಸಂಬಂಧಗಳಿಗೆ ನೈತಿಕ, ಅನೈತಿಕದ ಕಟ್ಟುಪಾಡುಗಳೆಂದೂ ಅಡ್ಡಿಯಾಗಲಾರವು.  ಮಹಾಭಾರತ ಕಾಲದಿಂದಲೂ ಹೀಗೆಯೇ" ಎನ್ನುವ ಎಂ. ವ್ಯಾಸರು ಇಂಗ್ಲಿಷ್ ಕಾದಂಬರಿಕಾರ ಡಿ.ಎಚ್. ಲಾರೆನ್ಸ್‌ನನ್ನು ನೆನಪಿಸುತ್ತಾರೆ.  ನವ ನವೋನ್ಮೇಷ ಪ್ರತಿಭೆಯ ಕಾದಂಬರಿಕಾರ, ಸಾಹಿತ್ಯಪ್ರಪಂಚದಲ್ಲಿ ಅವಗಣಿಸಲ್ಪಟ್ಟಿರುವ ಒಂಟಿ ಪ್ರಯಾಣಿಗ ಎಂಬ ಕೊರಗು ವ್ಯಾಸರಲ್ಲಿದೆ.  ಗಣನೆ ಅವಗಣನೆಗಳು ಸಾಹಿತ್ಯಪ್ರಪಂಚದಲ್ಲಿ ಜಂಗಮ ಸ್ವರೂಪಿಯಾದ ಸ್ಥಾನಪಲ್ಲಟಗೊಳ್ಳುವ ಕ್ರಿಯೆಗಳು.  ಕೇಂದ್ರವನ್ನು ವ್ಯತ್ಯಸ್ತಗೊಳಿಸುವ ವಿಮರ್ಶೆ ಬಂದಾಗ ಅಂಚಿನಲ್ಲಿರುವ ಭವಭೂತಿಯಂಥವರು ಮುಂಚೂಣಿಗೆ ಬರುತ್ತಾರೆ.
- ಮುರಳೀಧರ ಉಪಾಧ್ಯ ಹಿರಿಯಡಕ
"ಪುಸ್ತಕ ಸಮೀಕ್ಷೆ", ಉದಯವಾಣಿ

ಸ್ನಾನ
(ಮೂರು ಕಿರು ಕಾದಂಬರಿಗಳು)
ಲೇ: ಏಂ. ವ್ಯಾಸ
ಪ್ರ: ಅಂಕಿತ ಪುಸ್ತಕ
53, ಶ್ಯಾಂಸಿಂಗ್ ಕಾಂಪ್ಲೆಕ್ಸ್
ಗಾಂಧಿ ಬಜಾರ್ ಮುಖ್ಯರಸ್ತೆ
ಬೆಂಗಳೂರು 560 004
ಮೊದಲ ಮುದ್ರಣ: ೨೦೦೨
ಬೆಲೆ: ರೂ: 80
SNANA[ three kannada novels]
M. VYASA
published by-
ANKITA PUSTAKA
53, shamsingh complex,
gandhi bazar,
BANGALORE--560004
first edition-2009
price- rs- 80
snana[m. vyasa] book review by muraleedhara upadhya hiriadka

ರಾಜಭವನದಲ್ಲಿ ಸಂಗೀತ ಸುಧೆ

ರಾಜಭವನದಲ್ಲಿ ಸಂಗೀತ ಸುಧೆ[ nritya niketana kodavoor, udupi- bharatanatyam at rajbhavan, bangalore- 19-6-2011]

ಕುದುರೆಮುಖ- ಹುಲಿಮುಖ

Prajavani[ kannada]

Western Ghats to World Heritage-T. R. Anantaramu

Prajavani[kannada]

: ಹಳ್ಳಿಯ ಹಬ್ಬದ ಸೊಗಡು....!

ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.: ಹಳ್ಳಿಯ ಹಬ್ಬದ ಸೊಗಡು....!: "ಮೋಡ ಮುಚ್ಚಿದ ಆಗಸ ಉತ್ಸವದ ಸಮಯಕ್ಕೆ ಎಲ್ಲಿ ಮಳೆ ಬರುವುದೋ ಎ೦ದು ಭಯ ಹುಟ್ಟಿಸಿತ್ತು ಊರು ತು೦ಬಾ ಹಬ್ಬದ ಗದ್ದಲವಿದ್ದರೂ ತನಗೇನೂ ಸ೦ಬ೦ಧವಿಲ್ಲವೆ೦ಬ೦ತೆ ತನ್ನಷ್ಟ..."

Read Kannada books free on Kanaja

Read Kannada books free on Kanaja

: ಧರ್ಮಸಂಸ್ಕೃತಿ-ಕಾವ್ಯಸಂಸ್ಕೃತಿ

[Devasahitya]: ಧರ್ಮಸಂಸ್ಕೃತಿ-ಕಾವ್ಯಸಂಸ್ಕೃತಿ

Saturday, June 18, 2011

ಮದುವೆ ಕರೆಯೋಲೆಯ ಅಂದ ಚಂದ

Beautiful  Painting by Mrs/ Sulochana Venugopal in  her daughter's marriage invitation[2011

M .V. Kamath- Art Criticism

Prabhakara Acharya- Chandoprajneyinda Chandada Kavana

[vijaykarnataka e-Paper- pls click page 5 in lavlavike]

ಬಿ. ಎನ್. ಸುಮಿತ್ರಾಬಾಯಿ

Dr. B. N Sumithra Bai-' purusha aramkarada asvastha antaranga'- response to naipaul's remarks on women writers[ pls click page 4 in vijaya karnataka lavlavike- 19-6-2011]

K. B. Siddaiyya- Dalita Kaviya Matu

K. B Siddaiyya's response to kannada poet Siddalingaih's remarks on Brahminism-[pls click page 4 in vijaya karnataka, lavlavike ]

Arundhati Nag: To the theatre born

[The Hindu]: To the theatre born- Arundhati Nag-K. C. Deepika

The Intolerant Indian-Gautam Adhikari

Hard nut to crack- The Intolerant Indian- Gautam Adhikari [book review by-Monideepa Sahu]

An ode to arts-Kerala Kalamandalam

An ode to arts-Maya Jayapal [ Deccan Herald]

Kerala Kalamandalam,, Thrissur

ಬೆಟ್ಟದ ಜೀವ...ಕಾಡ ನೋಡ ಹೋಗಿ ಕವಿತೆಯೊಡನೆ ಬಂದೆ

[Prajavani]-ರಘುನಾಥ. ಚ. ಹ- Bettada Jeeva [ film review]- Raghunath. Cha. Ha

Western Ghats to World Heritage-Jairam Ramesh

[Prajavani]- kannada

ವಿಶ್ವಪರಂಪರೆ ತಾಣಕ್ಕೆ ವಿರೋಧ ಅನಗತ್ಯ- ಪ್ರವೀಣ್ ಭಾರ್ಗವ್

[Prajavani]Western Ghats to World Heritage- Praveen Bhargav

Resisting Hegemony - Ashis Nandy

On Orientalism-Edward Said

Interview with Rekha Rao

. ಕಾಸ್ಮಿಕ್ ಕ್ಯಾಲೆಂಡರ್

ಹಾಗೆ ಬಿಡುವಿನಲ್ಲಿ ಗೀಚಿದ್ದು...: ಕಾಸ್ಮಿಕ್ ಕ್ಯಾಲೆಂಡರ್

ಕವಿತೆಯ ಕಷ್ಟ

ಕವಿತೆಯ ಕಷ್ಟ [ ಕಣಜ ] Dr. G. S. Shivarudrappa-' kaviteya kashta'

ಕುವೆಂಪು: ಕಾವ್ಯ- 1

ಕುವೆಂಪು: ಕಾವ್ಯ |[ ಕಣಜ] Dr. D. S Shivarudrappa- Kuvempu's Poetry

ಕುವೆಂಪು: ಕಾವ್ಯ[2]

ಕುವೆಂಪು: ಕಾವ್ಯ[2] [| ಕಣಜ ] Dr. G. S. Shivarudrappa- Kuvempu's Poetry

ಒಂದು ಬಾಗಿಲು--ಲಂಕೇಶ

Vatsyayana

Kamasutra -[Wikepedia]

Development of Feminist Postcolonial Theory- Rachel BailyJones

SpringerLink -[ Abstract]

Friday, June 17, 2011

D. R. Bendre- ChaLiyaake

ಸಲ್ಲಾಪ[KANNADA]

ಮೀನು ಶಿಕಾರಿ- ನೀರಿಗಿಳಿದ ನೀರೆಯರು

Prajavani[kannada]

Western Ghats-Unesco-Karnataka Government

Prajavani[kannada]

MALAYALAM KAVITHA (POEMS) PENKUNJU-90 SUGATHAKUMARI SAJI PATTAMBI

Heritage : Targets of destruction in Tamilnadu

[The Hindu ] Heritage : Targets of destruction-T.S. Subramanian[Art in more than 50 temples and 3 palaces in Tamilnadu, is being mutilated]

Endendhu (Kannada): Shreya Goshal

Lingadevaru Halemane-Prasanna

ನಾನು ಕುಪ್ಪಳ್ಳಿ ಮತ್ತು ಶೂನ್ಯ: - ನಾಗಶ್ರೀ ಶ್ರೀರಕ್ಷ - ಕೆಂಡಸಂಪಿಗೆ 

ನಾನು ಕುಪ್ಪಳ್ಳಿ ಮತ್ತು ಶೂನ್ಯ- ನಾಗಶ್ರೀ ಶ್ರೀರಕ್ಷ -[ ಕೆಂಡಸಂಪಿಗೆ ]

Experimenting Culture in Kiran Desais'-'The Enheritance of Loss'

Unique & Special Postage Stamps

Kannada-Konkani Ratnakosh -M.Madhava Pai

Kannada-Konkani Ratnakosh Released

ಸಂಕೇತಿ-ಒಂದು ಅಧ್ಯಯನ

[The Hindu] / Books : Trailing a tiny bunch- Sanketi- Ondu Adhyayana[kannada]- by- Pranatarthiharan-[ Book review by- Dr. C.N. Ramachandran]

Western Ghats to World Heritage?

Prajavani[kannada]

ಮಳೆಗಾಡಿನ ಬಿರುಗಾಳಿ

ಇಜ್ಞಾನ ಡಾಟ್ ಕಾಮ್: ಮಳೆಗಾಡಿನ ಬಿರುಗಾಳಿ- western ghats to world heritage ?

Thursday, June 16, 2011

Keremane Shambhu Hegade Award-2011-Dr.K. M.Raghava Nambiyar


Keremane Shambhu Hegade book award to Dr. K. M Raghava Nambiyar[author of the book-' Yaksha Chetana']function at sarara,[ shimoga dist]on 26-6-201NIDHI PAKASHANA SAGARA-phone-9480012488

Communalism and the Poetic Imagination: A Study of Indian English Women's Poetry

Intersections: Communalism and the Poetic Imagination: A Study of Indian English Women's Poetry-Anup Beniwal, Amrita Mehta

Western Ghats-World Heritage-Karnataka Government

varthabharathi |[ kannada]-Dr. N. A. Madhyastha

karnataka dalit sahitya parishat- book- awards

Prajavani[kannada]

Guttumane-Nalkedabettu

Prajavani[kannada]renovation of 600 year old' nalkedabettu guttumane' at nitte, udupi district[ guttu[tulu]= a manor house of the feudatory lords of tulunadu]

Lunar Eclipse 15th / 16th June 2011 (as seen from Mauritius)

ಮೂಟೆಯಲ್ಲಿ ಪುಸ್ತಕ ಹೊತ್ತು ಊರೂರು ಅಲೆದ ಕಾದಂಬರಿ ಪಿತಾಮಹ

ಜೀವನ್ಮುಖಿ: ಮೂಟೆಯಲ್ಲಿ ಪುಸ್ತಕ ಹೊತ್ತು ಊರೂರು ಅಲೆದ ಕಾದಂಬರಿ ಪಿತಾಮಹ-GaLaganatha[kannada novelist]

Wednesday, June 15, 2011

Shaanubogara Magalu -K. S. Narasimhaswami

Namita Gokhale talks about her new novel Priya ..

Glimpses of Ray-Partha Chatterjee

Glimpses of Ray[two book reviews]

ಎಚ್. ಎಸ್. ವೆಂಕಟೇಶಮೂರ್ತಿ- ವಡ್ಡಾರಾಧನೆ-೧೦

ಎಚ್. ಎಸ್. ವೆಂಕಟೇಶಮೂರ್ತಿ- ವಡ್ಡಾರಾಧನೆ-೯

ಎಚ್. ಎಸ್. ವೆಂಕಟೇಶಮೂರ್ತಿ- ವಡ್ಡಾರಾಧನೆ-೮

ಎಚ್. ಎಸ್. ವೆಂಕಟೇಶಮೂರ್ತಿ- ವಡ್ಡಾರಾಧನೆ- ೭

ಎಚ್. ಎಸ್. ವೆಂಕಟೇಶಮೂರ್ತಿ- ವಡ್ಡಾರಾಧನೆ-೬

ಎಚ್. ಎಸ್. ವೆಂಕಟೇಶಮೂರ್ತಿ- ವಡ್ಡಾರಾಧನೆ-೫

ಎಚ್. ಎಸ್. ವೆಂಕಟೇಶಮೂರ್ತಿ- ವಡ್ಡಾರಾಧನೆ-೪

ಎಚ್. ಎಸ್. ವೆಂಕಟೇಶಮೂರ್ತಿ- ವಡ್ಡಾರಾಧನೆ-೩

ಎಚ್.ಎಸ್. ವೆಂಕಟೀಶಮೂರ್ತಿ- ವಡ್ಡಾರಾಧನೆ-೨

ಎಚ್.ಎಸ್. ವೆಂಕಟೀಶಮೂರ್ತಿ- ವಡ್ಡಾರಾಧನೆ-೧

Sankaranum Mohananum Song - Jayasurya , Meera Nandan , Rima Kallingal

The 100 greatest non-fiction books | Books | guardian.co.uk

The 100 greatest non-fiction books | Books | guardian.co.uk

Tuesday, June 14, 2011

ಗುಲ್ಬರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನ ಜೂನ್ 19

The Hindu : Karnataka / Gulbarga News : Literary meet from June 19

ಇಂದು ಸುದೀರ್ಘ‌ ಅವಧಿಯ ಸಂಪೂರ್ಣ ಚಂದ್ರಗ್ರಹಣ

ಇಂದು ಸುದೀರ್ಘ‌ ಅವಧಿಯ ಸಂಪೂರ್ಣ ಚಂದ್ರಗ್ರಹಣ-15-6-2011

: ಯರ್ಮುಂಜ ರಾಮಚಂದ್ರ:

Devasahitya: ಯರ್ಮುಂಜ ರಾಮಚಂದ್ರ: ಫೊಟೋ: "ಇದು ಸಾರ್ವಜನಿಕರಿಗೆ ಲಭ್ಯವಿರುವ ರಾಮಚಂದ್ರರ ಏಕಮಾತ್ರ ಫೊಟೊ. 1950ರ ಹೊತ್ತಿಗೆ--ಆ ಮೇಲೂ ಕೂಡಾ--ಅಪರೂಪಕ್ಕೆ ಫೊಟೋ ತೆಗೆಸುತ್ತಿದ್ದುದರಿಂದ ಇದು ಸಹಜವೇ. ವೇಷಭೂಷಣ ಸಾಂಪ್..."

ಮಂಗಳೂರು ವಿ. ವಿ.- ಕನ್ನಡಪಠ್ಯ ಪುಸ್ತಕಗಳು-೨೦೧೧-೨೦೧೨

ವಿಕಾಸ[ list of mangalore university kannada text books 2011-2012]

ಸಿ.ಎನ್.ಆರ್. ರಾವ್- ರಸಾಯನಶಾಸ್ತ್ರ ಇಂದು

   

C.N.R.RAO- RASAYANASHASTRA  INDU
                      [ CHEMISTRY TODAY]
             translated to kannada by-
                     INDUMATI RAO
PUBLISHED BY-
                JAWARLAL NEHRU CENTRE FOR ADVANCED SCIENTIFIC RESEARCH
                                                   [ jncasr]
                jakkur,
                BANGALORE- 560064
                 FIRST EDITION- 2011
                 pages- 60

Music and Dance Tribute to Bharata Ratna Bhimsen Joshi- at rajbhavan, bangalore, 19-6-2011


: ಭಾರತ ಸ೦ವಿಧಾನದ ಕರಡು ರಚಿಸಿದವರು ಕನ್ನಡಿಗ !!!!

ಜೀವನ್ಮುಖಿ: ಭಾರತ ಸ೦ವಿಧಾನದ ಕರಡು ರಚಿಸಿದವರು ಕನ್ನಡಿಗ !!!!: "ಬೆನೆಗಲ್ ನರಸಿ೦ಗ ರಾವ್ 1887 -1953 ಬೆನೆಗಲ್ ನರಸಿ೦ಗ ರಾವ್. ಈ ಹೆಸರನ್ನು ನೀವು ಎ೦ದಾದರು ಕೇಳಿದ್ದೀರಾ? ಇತಿಹಾಸದ ಗರ್ಭದಲ್ಲಿ ಈ ಹೆಸರು ಹೂತು ಹೋಗಿ ಅದೆಷ್ಟೋ ವರ..."

Monday, June 13, 2011

ಪಿಲಿಕುಳದಲ್ಲಿ ವಿದೇಶಿ ಪಕ್ಷಿಗಳ ಕಲರವ

ಪಿಲಿಕುಳದಲ್ಲಿ ವಿದೇಶಿ ಪಕ್ಷಿಗಳ ಕಲರವ[ಉದಯವಾಣಿ]

Vidyarnyapura[Sringeri]-G. S. Ramachandra


A Glance Through The History of
         Vidyaranyapura
             Sringeri
By - Pro. G. S. Ramachandra
first edition-2011
published by-
Sri Chandrashekhara Bharathi Brahmavidya Trust[r]
5, brindavan street, mylapore,
chennai- 600004
phone- 044-24985946
[for free distribution]
contact- Pro G. S. Ramachandra
             amritavarshini,
              172-[a1, 7th cross,
             near baliga hospital,
                doddanagudde
                   UDUPI-576102
            phone- 0820- 2524740
[for free copy contact publisher, or author]

sringeri travelouge

7 Wonders of India: Vidyashankara Temple

Saturday, June 11, 2011

ಕಾವ್ಯದ ಮಾತಿಗೆ ಕಿವಿಗೊಡುವುದು- ಪ್ರಭಾಕರ ಆಚಾರ್ಯ

vijaykarnataka e-Paper-prabkakara acharya- kavyada matige kivigoduvudu[kannada] click- page 5 in vijaya karnataka lavlavike[ 12-6-2011]

Naipaul _ Women Writers

Prajavani[kannada] masti award function at bengaluru 11-6-2011

Dr.Shankar Bhat kannada linguistics -Part 1

Dr.Shankar Bhat -kannada linguistics -Part 2

Kosambis'Vision of Science-M. G. Narasimhan

Kosambi's Vision of science- a critical appreciation-M . G . Narasimhan

Guddada Bootha

Dr.Shankar Bhat- kannada-linguistics -Part 3

Dr Shankar Bhat-kannada linguistics- discussion-part - 3

- Dr. Shankar Bhat- kannada linguistics- discussion- part- 4

ಬಿ. ಎನ್. ಸುಮಿತ್ರಾಬಾಯಿ- ಕನ್ನಡ ಸಾಹಿತ್ಯ ವಿಮರ್ಶೆ-ಮಹಿಳಾ ಅನುಸಂಧಾನ ಘಟ್ಟ[1940-1990]

Dr. B. N. Sumithra Bai-kannada sahitya vimarshe: mahila sahitya anusandhana[ 1940-1990]
read this article in 'namma manasa' [ kannada monthly] june, 2011.
namma manasa
114/5
9th cross,
2nd main,
chamrajapet,
 bengaluru- 560018

Manjunathlatha = Siddalingaih

"BrahmaNa Preethiyo ?' BrahmaNya' Preethiyo ?"- read manjunath latha's aricle in  gouri lankesh[ kannada weekly]  june, 22, 2011.

: ಏನೂ ಮಿಸ್ಟೇಕ್ ಆಗ್ಲಿಲ್ಲ

[ಬೆಟ್ಟದ ಮೇಲೆ:] ಏನೂ ಮಿಸ್ಟೇಕ್ ಆಗ್ಲಿಲ್- hareesh khera-' mistake[di- sripad bhat] review

Friday, June 10, 2011

ಪುಸ್ತಕ ಪರಿಚಯ – “ಮಹಾಸಂಪರ್ಕ “

ಪುಸ್ತಕ ಪರಿಚಯ – 7 “ಮಹಾಸಂಪರ್ಕ “ | Oppanna : ಒಪ್ಪಣ್ಣನ ಬೈಲಿನ ಒಪ್ಪಂಗೊ

Eravikulam national park in Munnar Part 1

Eravikulam national park in Munnar Part 2

Germany- good bye to nuclear plants

Prajavani[ kannada]

: Award for K.V. Narayan

[The Hindu] : Award for K.V. Narayan-' karnataka bhasha bhushana'

Samagara Bheemavva- H. S. Shivaprakash


h. s shivaprakashara  samagara bheemavva[ kannada- criticism]
edited by- na. ravikumar
published by-
ABHINAVA,
17/18-2
first main road,
marenahaLLi
vijayanagar,
BENGALURU-40
[abhivava- may- sep- 2009]
email-abhinavaravi@gmail.com

Thursday, June 9, 2011

ಎಚ್. ಎಸ್. ಶಿವಪ್ರಕಾಶ್--

ºÉÃUÉ UÉzÁÝgÀÄ £ÀªÀÄä ªÀÄÄUÀÞ zÉêÀvÉUÀ¼ÀÄ?
JZï. J¸ï. ²ªÀ¥ÀæPÁ±ï ºÉƸÀ ±ÀvÀªÀiÁ£ÀzÀ PÀ£ÀßqÀ PÁªÀåPÉÌ ºÉƸÀ zÁj vÉÆÃgÀ§®è ¸ÁªÀÄxÀåð«gÀĪÀ PÀ«UÀ¼À¯ÉÆè§âgÀÄ.  «Ä®gÉÃ¥À, ªÀÄ¼É ©zÀÝ £É®zÀ°è, CtÄ PÀët ZÀjvÉæ, ¸ÀÆ0iÀÄð d® £À«gÀÄ £ÁUÀgÀUÀ¼À C£ÀAvÀgÀ ¥ÀæPÀlªÁVgÀĪÀ ²ªÀ¥ÀæPÁ±ÀgÀ DgÀ£É0iÀÄ PÀªÀ£À ¸ÀAPÀ®£À ªÀļÉ0iÉÄà ªÀÄAl¥À.
MAzÀÄ ¸À®ÄUÉ0iÀÄ ©£ÀߥÀzÀ°è ²ªÀ¥ÀæPÁ±ï, PÁªÀåªÀ£ÀÄß PÀÄjvÀ vÀ£Àß EwÛÃaV£À aAvÀ£É0iÀÄ£ÀÄß «ªÀj¹zÁÝgÉ. ¨sÁµÉ ªÀÄvÀÄÛ C£ÀĨsÀªÀUÀ¼À ¸ÁAzÀævÉ ªÀÄvÀÄÛ dn®vÉ0iÀÄ£ÀÄß vÀåf¸ÀzÉ PÀ«vÉ DzÀµÀÄÖ ¸ÀgÀ¼À jÃw0iÀÄ°è ¸ÀºÀÈzÀ0iÀÄgÀ£ÀÄß ªÀÄÄlÖ¨ÉÃPÀÄ JA§ÄzÀÄ £À£Àß £ÀA§ÄUÉ...... PÀ«vÉ PÉêÀ® MAzÀÄ PÀ¯ÁPÀÈw JA§ £ÀA§ÄUÉ FUÀ £À£ÀV®è.  ªÀÄÆ®¨sÀÆvÀªÁV CzÉÆAzÀÄ C£ÉéõÀuÁ PÀæªÀÄ.  ¸Àé0iÀÄzÀ ºÁUÀÆ E¢j£À ¥ÉÃZÁl ¥ÀgÀzÁlUÀ¼À£ÀÄß zÁlĪÀ ¥Àæ0iÉÆÃUÀ, ¥ÀæQæ0iÉÄ J£ÀÄßvÁÛgÉ ²ªÀ¥ÀæPÁ±ï.  PÀ«vÉ ¸Á0iÀÄÄwÛzÉ JA§ PÀÆUÀ£ÀÄß UÉðªÀiÁqÀÄvÀÛ CªÀgÀÄ §ÄzÀÞ eÁvÀPÀ PÀvÉ0iÉÆAzÀ£ÀÄß £É£À¦¸ÀÄvÁÛgÉ.  D®zÀ ªÀÄgÀzÀ PɼÀVzÀÝ MAzÀÄ ªÉƯ ªÀÄgÀ¢AzÀ MAzÀÄ ºÀtÄÚ ©zÀÝ ¸ÀzÀÝ£ÀÄß PÉý¹PÉÆAqÀÄ, E°ègÀĪÀ ¯ÉÆÃPÉÆà «£À¸Àåw (¯ÉÆÃPÀ £À²¸ÀÄwÛzÉ) JAzÀÄ ºÁºÁPÁgÀ ºÀgÀr¹vÀAvÉ.
ªÀļÉ0iÉÄà ªÀÄAl¥ÀzÀ°è ªÀÄƪÀvÉÛüÀÄ PÀªÀ£ÀUÀ¼ÀÄ, ºÀ¢£ÁgÀÄ vÀvÀÛ÷é ¥ÀzÀUÀ¼ÀÄ ºÁUÀÆ ªÀÄƪÀvÀÄÛ ªÀZÀ£ÀUÀ½ªÉ.  GjªÀ UÀÄUÀμÀ ºÁUÀÆ CPÀÌ-vÀªÀÄä E°ègÀĪÀ ¸ÀÄ¢ÃWÀð PÀªÀ£ÀUÀ¼ÀÄ.  §¸ÀÄj ªÀÄƼÉ0iÀÄ ªÉÄÃ¯É £ÀZÁÑ£É £ÀqÀÄ ªÀÄzsÁåºÀß GjªÀ, PÀÄtªÀ UÀÄUÀμÀzÀ avÀæ ¨sÀ0iÀiÁ£ÀPÀªÁVzÉ.  CPÀÌ-vÀªÀÄä PÀ«vÉ MAzÀÄ gÁd¸Áܤ d£À¥ÀzÀ PÀvɬÄAzÀ ¥ÉæÃgÀuÉ ¥ÀqÉ¢zÉ.  E°è£À CPÀÌ-vÀªÀÄä §gÀUÁ®zÀ°è vÀªÀÄä£ÀÄß ©lÄÖºÉÆÃzÀ vÀAzÉ-vÁ¬Ä0iÀÄ ¤jÃPÉë0iÀÄ°èzÁÝgÉ.  £ÉÆëzÀÝ ªÀÄ£ÀzÀ°è ¸Á«gÀ 0iÉÆÃZÀ£É, ¨Á«zÀÝ JzÉ0iÀÄ°è ¸Á«gÀ PÀ®à£É J£ÀÄßvÁÛ¼É CPÀÌ. PÀ©ÃgÀzÁ¸ÀgÀ ¨sÉÆÃd¥ÀÅj PÀ«vÉ C®èªÀÄ£À ¨ÉqÀV£À ªÀZÀ£ÀUÀ¼À£ÀÄß £É£À¦¸ÀĪÀAwzÉ.  E°è ¤Ãj£ÉƼÀUÉ QZÀÄÑ ºÉÆvÀÄÛvÀÛzÉ, ¤ÃgÀÄ §Æ¢0iÀiÁUÀÄvÀÛzÉ, «ÄãÀÄ §zÀÄQ G½0iÀÄÄvÀÛzÉ, EgÀÄªÉ GZÉÑ ºÉÆ0iÀiÁÝUÀ £À¢£Á¯É vÀÄA© ºÀj0iÀÄÄvÀÛªÉ. ¦æÃw0iÀÄ ¸ÉßûvÀ eÉÆà JA§ PÀ«vÉ0iÀÄ°è eÁUÀwÃPÀgÀt JA§ gÁdQÃ0iÀÄ PÀÄvÀAvÀæªÀ£ÀÄß PÀÄjvÀ PÀ«0iÀÄ ¥ÀæwQæ0iÉÄ »ÃVzÉ  - ‘ºÉÃUÉ UÉzÁÝgÀÄ £ÀªÀÄä ªÀÄÄUÀÞ zÉêÀvÉUÀ¼ÀÄ ªÁå¥ÁgÀUÁgÀgÀ ZÁ®ÆQ PÀĺÀPÀUÀ¼À£ÀÄß?
F ¸ÀAPÀ®£ÀzÀ°ègÀĪÀ ªÀZÀ£ÀUÀ¼ÀÄ ºÁUÀÆ vÀvÀÛ÷é ¥ÀzÀUÀ¼À PÀÄjvÀÄ ²ªÀ¥ÀæPÁ±ï »ÃUÉ£ÀÄßvÁÛgÉ MAzÀÄ ªÀåQÛUÀvÀ ±ÉÊ°0iÀÄ£ÀÄß PÀnÖPÉƼÀÄîªÀ ªÀiÁqÀ¤ð¸ïÖ ºÀoÀ EAzÀÄ ¸À®ÄèªÀÅ¢®è.  F CxÀðzÀ¯Éèà ªÉÇ¯É µÉƬÄAPÀ ºÉýzÀÄÝ - ±ÉÆövÀ dUÀwÛ£À §gÀºÀUÁgÀ¤UÉ CUÀvÀåªÁzÀzÀÄÝ ¸ÁªÀiÁfPÀ ¹zÁÞAvÀªÉà ºÉÆgÀvÀÄ PÀ¯ÁvÀäPÀ ¹zÁÞAvÀªÀ®è.  F vÉgÀ£À D¯ÉÆÃZÀ£ÉUÀ¼ÀÄ ªÀÄÄPÀÛbÀAzÀzÀ ªÉÄÊPÀlÄÖUÀ½AzÀ ©ü£ÀߪÁVgÀĪÀ vÀvÀÛ÷é ¥ÀzÀ ªÀÄvÀÄÛ ªÀZÀ£ÀgÀÆ¥ÀUÀ¼À®Æè PÁªÀågÀZÀ£É ªÀiÁqÀĪÀAvÉ £À£ÀߣÀÄß ¥ÉæÃgÉæ¹zÀĪÀÅ.  EA¢£À C¸Àé¸ÀÜ ¨sÁµÉ ºÁUÀÆ ¸ÀªÀÄÄzÁ0iÀÄUÀ¼À PÁªÀå, £ÀgÀQUÀ¼À DvÀä ¸ÀAªÁzÀzÀAvÉ PÉüÀvÉÆqÀVzÉ.  ºÉƸÀ ªÀåQÛ ªÀÄvÀÄÛ ªÀ¸ÀÄÛUÀ¼ÉÆA¢UÉ ¸ÀA¨sÁ¶¸ÀĪÀÅzÀ£ÀÄß ªÀÄgÉwzÉ.  F ¸ÀA¨sÁµÀuÉUÀ¼À £É¯ÉUÀ¼À£ÀÄß G½¹PÉƼÀÄîªÀÅzÀgÀ°è F ¥ÀæPÁgÀUÀ¼ÀÄ £À£ÀUÉ ¸ÁzsÀ£ÀUÀ¼ÁzÀĪÀÅ..
«ÄAqÀgÉʪÀgÀÄ JA§ vÀvÀÛ÷é ¥ÀzÀzÀ°è ¸ÀgÀPÀÄ ¸ÀA¸ÀÌöÈw0iÀÄ SÁgÀªÁzÀ «qÀA§£É EzÉ.  E°è£À QªÀÅqÀ mÁæ¤ì¸ÀÖgÀ£ÀÄß, PÀÄgÀÄqÀ n.«.0iÀÄ£ÀÄß, ºÉ¼ÀªÀ PÁgÀ£ÀÄß, PÀÄAl §ÆlÄ eÉÆvÉ0iÀÄ£ÀÄß, ªÀÄÆPÀ ªÉÄÊPÀ£ÀÄß C¥ÉÃQë¸ÀÄvÁÛgÉ. 
¨ÉlÖzÀ ªÉÄïÉÆAzÀÄ ªÀÄ£É0iÀÄ ªÀiÁqÀÄvÉÛãÉ.  ªÀÄÈUÀ RUÀUÀ½UÉ CAdzÀ ºÁUÉ JAzÀÄ DgÀA¨sÀªÁUÀĪÀ ªÀZÀ£À «±ÉõÀªÁV UÀªÀÄ£À ¸É¼É0iÀÄÄvÀÛzÉ.  ¸ÀªÀÄÄzÀæzÀ vÀr0iÀÄ°è ªÀÄ£É ªÀiÁqÀÄvÉÛãÉ, £ÉÆgÉ vÉgÉ, ºÉ«ÄäãÀÄ, ªÉƸÀ¼É w«ÄAV®UÀ½UÉ CAdzÀ ºÁUÉ, ¸ÀAvÉ0iÉƼÀUÉÆAzÀÄ ªÀÄ£É ªÀiÁqÀÄvÉÛãÉ, ¸ÀzÀÄÝUÀzÀÝ® UÀªÀÄ®Ä zsÀƼÀÄUÀ½UÀAdzÀAvÉ, J£ÀÄߪÀ ¤gÀÆ¥ÀPÀ ªÀZÀ£ÀzÀ PÉÆ£É0iÀÄ°è »ÃUÉ£ÀÄßvÁÛ£É
F J®èªÀÇ ZÉ£ÀÄß
¤Ã£ÀÄ dvÉVzÀÝgÉ
E®èzÉ ºÉÆÃzÀgÉ
¨ÉlÖ ¥ÀÇwð ¨ÉÆüÁUÀÄvÀÛzÉ
PÀqÀ® vÀr PÀqÀ®°è ªÀÄļÀÄVºÉÆÃUÀÄvÀÛzÉ
¸ÀAvÉ CAvÀÆ EAvÀÆ £ÉgÉzÀÄ ªÀÄÄVzÀĺÉÆÃUÀÄvÀÛzÉ.

²ªÀ¥ÀæPÁ±ÀgÀ F ªÀZÀ£À «gÀ»0iÀÄ ±ÀÈAUÁgÀ¢AzÀ DgÀA¨sÀªÁV, ¸ÀTÃVÃvÀzÀvÀÛ vÀÄr0iÀÄÄvÀÛzÉ.
       E°è£À MAzÀÄ ªÀZÀ£ÀzÀ°è CZÀÑUÀ£ÀßqÀzÀ ©¹®Ä £ÀªÀÄä£ÀÄß DªÀj¹zÀ ºÁUÉ JA§ ªÀiÁwzÉ.  ªÀļÉ0iÉÄà ªÀÄAl¥À CZÀUÀ£ÀßqÀzÀ ©¹®Ä-ªÀļÉ0iÀÄ RIJ ¤ÃqÀÄvÀÛzÉ.
-     ªÀÄÄgÀ½ÃzsÀgÀ G¥ÁzsÀå »j0iÀÄqÀPÀ
(¥ÀŸÀÛPÀ ¸À«ÄÃPÉë, GzÀ0iÀĪÁtÂ, 10-5-2003)

ªÀļÉ0iÉÄà ªÀÄAl¥À
(PÀªÀ£À ¸ÀAPÀ®£À)
¯ÉÃ: JZï. J¸ï. ²ªÀ¥ÀæPÁ±À
¥Àæ.: ¯ÉÆû0iÀiÁ ¥ÀæPÁ±À£À
Qëwd
PÀ¥ÀàUÀ®Äè gÀ¸ÉÛ
UÁA¢ü £ÀUÀgÀ, §¼Áîj 583 101
ªÉÆzÀ® ªÀÄÄzÀæt: 2002
¨É¯É gÀÆ   

k. v tirumalesh- Radhakrishans' views on Dharma

[vijaykarnataka e-Paper]click page 8 pls

: ಕೇರಳ ರಾಜಧಾನಿಯಲ್ಲಿ ಹಲಸಿನ ಪರಿಮಳ

[Hasirumatu:] ಕೇರಳ ರಾಜಧಾನಿಯಲ್ಲಿ ಹಲಸಿನ ಪರಿಮಳ- national jackfruit festival- 2011- kerala

: ಹಾಡು ಪಠ್ಯದಲ್ಲಿ ಓದು ಪಠ್ಯದ ನೆನಪು

[ಕನ್ನಡ ಜಾನಪದ:] ಹಾಡು ಪಠ್ಯದಲ್ಲಿ ಓದು ಪಠ್ಯದ ನೆನಪು

Sondos Shabayek's Twitter report on Egypt

[Business Line ]: Young woman's report on Egypt-Teresa Rehman

Q&A with Director Werner Herzog

ರಘುನಾಥ. ಚ- ಹ- ಗೆರೆಗಳ ಮಾಂತ್ರಿಕ ಹುಸೇನ್

[Prajavani] geregala mantrika - hussain- raghunath. cha. ha

guraja karjagi- antarangada guru

[Prajavani]dr gururaja karjagi

ಜೇನುನೊಣದ ಕೆಮ್ಮು---ಶಾಂತಾರಾಮ ಸೋಮಯಾಜಿ

ಜೇನುನೊಣದ ಕೆಮ್ಮು-- - ಶಾಂತಾರಾಮ  ಸೋಮಯಾಜಿ
JENUNONADA KEMMU[KANNADA]
-SHANTARAMA SOMAYAJI
[general science and knowledge through  fun and stories for young readers]
published by-
 vasanta prakashana,
no-360, 10th b main, 3rd block,
jayanagar,
BANGALORE-560011
first edition- 2011,
pagrs- 91,
price- rs- 50
cover page- srihari deshapande,
email- vasantha_prakashana@rediffmai.com
Readers Response by-
ANUSHA 1b.sc
poornaprajna college, udupi-576101


yakshagana kendra, udupi-yakshagana by children[2011]

NALINI CHETTUR-The Bookseller of Chennai

The Bookseller of Chennai - The Brooklyn Rail

Gandhari- m. f. hussain

Paintings - Paintings of M F Hussain

M. F. HUSSAIN[1915-2011]

Paintings-sri. m. f. hussain, controversial indian artist died today

Wednesday, June 8, 2011

ಜಾನಪದಲೋಕದಲ್ಲಿ ಮಾವಿನ ಪರಿಷೆ

[Prajavani] 9-6-2011

Teaching and the Neo- Liberal State- Krishna Kumar

teaching and the neo- liberal state- krishna kumar[e&p weekly]

ಕನ್ನಡ ಕಾವ್ಯ ಕಣಜ....

[ಕನ್ನಡ ಕಾವ್ಯ ಕಣಜ]..[..kuvempu- kannada poems]

ustad faiyaz khan-kannada ranga geethe

vidushi sangeetha katti kulkarni-kannada rangageethe

:`ನೆರಳು ಕೊಟ್ಟು ಹೋದ ಮನುಷ್ಯ' ಲಿಂಗದೇವರು ಹಳೆಮನೆ

[ಸಂಪಾದಕೀಯ:] `ನೆರಳು ಕೊಟ್ಟು ಹೋದ ಮನುಷ್ಯ' ಲಿಂಗದೇವರು ಹಳೆಮನೆ: "ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆ ಇನ್ನಿಲ್ಲ. ಸಂಡೆ ಇಂಡಿಯನ್ ಪತ್ರಿಕೆಗಾಗಿ ಅವರನ್ನು ಹಿಂದೆ ಸಂದರ್ಶಿಸಿದ್ದ ಪತ್ರಕರ್ತ ಹರ್ಷಕುಮಾರ್ ಕುಗ್ವೆ ತಮ್ಮ ನೆನಪುಗಳ ಜತೆ..."

ರಂಗಬಿಟ್ಟು ತೆರಳಿದ ಹಳೆಮನೆ

ರಂಗಬಿಟ್ಟು ತೆರಳಿದ ಹಳೆಮನೆ: "ರಹಮತ್ ತರೀಕೆರೆ ಇವತ್ತು ಬೆಳಗಿನ ಜಾವ ೫ ಗಂಟೆಗೆ ಮೊಬೈಲು ಗಂಟೆ ಬಡಿದುಕೊಂಡಿತು. ಹೊತ್ತಲ್ಲದ ಹೊತ್ತಲ್ಲಿ ಫೋನಿನ ಗಂಟೆ ಬಾರಿಸಿದರೆ ಅದು ಸಾವಿನ ಸುದ್ದಿಯೇ ಇರಬಹುದು ..."

Tuesday, June 7, 2011

M. S Prabhakara-THE NATION STATE AND ITS TERRITORY

[The Hindu ] : The nation state and its territory- M S PRABHAKARA

ಲಿಂಗದೇವರು ಹಳೆಮನೆ ಇನ್ನಿಲ್ಲ….

ಲಿಂಗದೇವರು ಹಳೆಮನೆ ಇನ್ನಿಲ್ಲ…. [« Avadhi]

Javed Akhtar - NAZM - Bhookh

ಬತ್ತಳಿಕೆ-ಜಾವೇದ್ ಅಖ್ತರ್/-ಕನಕ.ಹಾ. ಮ

ಕಹಿ ಹೇಗಿಲ್ಲದಿದ್ದೀತು ನಮ್ಮ ಕವಿತೆಗಳಲ್ಲಿ?

 'ಹೊಳೆಬಾಗಿಲು', 'ಪಾಪನಾಶಿನಿ' ಕವನಸಂಕಲನಗಳ ಕವಿಯತ್ರಿ ಕನಕ ಹಾ.ಮ., ಜಾವೇದ್ ಆಖ್ತರ್ ಅವರ ಪ್ರಥಮ ಕವನ ಸಂಕಲನ 'ತರ್ಕಶ್'ನ್ನು (ಬತ್ತಳಿಕೆ) ಉರ್ದುವಿನಿಂದ ಕನ್ನಡಕ್ಕೆ ತಂದಿದ್ದಾರೆ.  ಜಾವೇದ್ ಅಖ್ತರ್, 'ಶೋಲೆ', 'ದೀವಾರ್'ಗಳ ಚಲನಚಿತ್ರ ಲೇಖಕರಾಗಿ, 'ಲಗಾನ್', 'ದಿಲ್ ಚಾಹ್ತಾ ಹೈ'ಗಳ ಚಿತ್ರಗೀತಕಾರರಾಗಿ ಜನಪ್ರಿಯರಾಗಿರುವ ಕವಿ.  ಈ ಸಂಕಲನದಲ್ಲಿರುವ 'ನನ್ನ ಬಗ್ಗೆ' ಎಂಬ ಚಿಕಣಿ ಆತ್ಮಕತೆಯಲ್ಲಿ ಜಾವೇದ್ ಅಖ್ತರ್, ತನ್ನ ಗ್ವಾಲಿಯರ್, ಲಖನೌ, ಅಲೀಗಢ, ಭೋಪಾಲ್, ಮುಂಬೈ ನೆನಪುಗಳ ಬಗ್ಗೆ ಹಾಗೂ ಬಾಲ್ಯ, ಯೌವನ, ದಾಂಪತ್ಯ ವಿಚ್ಛೇದನ, ಮರುಮದುವೆಗಳ ಕುರಿತು ಬರೆದಿದ್ದಾರೆ.

 'ಬತ್ತಳಿಕೆ'ಯಲ್ಲಿ ಮೂಲ ಉರ್ದು ಕವನ ಹಾಗೂ ಕನ್ನಡ ಅನುವಾದವನ್ನು ಎದುರು-ಬದುರಾಗಿ ಮುದ್ರಿಸಲಾಗಿದೆ.  ಕವಿ ಜಾವೇದ್ ಅಖ್ತರ್ ಅವರಿಗೆ ಬಾಲ್ಯದ ನೆನಪುಗಳಿಂದ ಬಿಡುಗಡೆ ಇಲ್ಲ.  ಬಾಲ್ಯ ಕಾಲ ಸ್ಮೃತಿ ಅವರ ಅನೇಕ ಕವನಗಳ ವಸ್ತುವಾಗಿದೆ.  'ಹಸಿವು', 'ಆ ಕೋಣೆ ನೆನಪಾಗುತ್ತದೆ', 'ಅಲೆಮಾರಿ' - ಈ ಕವನಗಳು ಸಮೃದ್ಧ ನೆನಪುಗಳಿಂದ ತುಂಬಿವೆ; ಆದರೆ ವಾಚಾಳಿತನದಿಂದ ಸೊರಗಿವೆ.

 ಕೋಮು ಗಲಭೆಗಳಿಂದ ತತ್ತರಿಸಿದ ಮಹಾನಗರವೊದರ ಮನಮಿಡಿಯುವ ಚಿತ್ರಣ 'ದಂಗೆಯ ಮೊದಲು' 'ದಂಗೆಯ ನಂತರ' ಕವನಗಳಲ್ಲಿವೆ.  ಹೆದರಿದ ಮಗುವಿನಂತೆ ತನ್ನ ನೆರಳಿಗೆ ತಾನೇ ಬೆಚ್ಚುತ್ತಿರುವ ನಗರವನ್ನು ಕುರಿತು ಕವಿ 'ಪಂಚಾಂಗ ನೋಡು, ಇಂದೇನೊ ಹಬ್ಬವಿರಬೇಕು' ಎನ್ನುತ್ತಾರೆ.  ಹಬ್ಬ ಬಂತೆಂದು ಹೆದರುವ ಅವಸ್ಥೆ ಭಯಾನಕವಾಗಿದೆ.  'ದಂಗೆಯ ಬಳಿಕ' ಮಹಾನಗರದಲ್ಲಿ ಗಾಢ ಮೌನ ತುಂಬಿದೆ.  ಆದರೆ, ಮೊದಲು ಇವರಿಗಾಗಿ ಅಳೋಣ, ಲೂಟಿ ಮಾಡಲು ಬಂದು ತಾವೇ ಲೂಟಿಯಾದರಲ್ಲ, ಏನು ಲೂಟಿಯಾಯಿತು ಎಂಬ ಅರಿವೂ ಇಲ್ಲ.  ಅವರಿಗೆ ಮಂದದೃಷ್ಟಿ, ಶತಶತಮಾನಗಳ ಸಂಸ್ಕೃತಿ ಆ ಬಡಪಾಯಿಗಳಿಗೆ ಕಾಣಲೇ ಇಲ್ಲ ಎನ್ನುತ್ತಾರೆ ಕವಿ.

 'ಈ ಜಗತ್ತು ಒಳಗೆ ಯಾಕಿಷ್ಟು ಕರಾಳ?' ಎಂಬ ಪ್ರಶ್ನೆ ಅವರನ್ನು ಕಾಡುತ್ತದೆ.

 'ಗಜಲ್' ಪರ್ಷಿಯನ್ ಸಾಹಿತ್ಯದಿಂದ ಉರ್ದು ಕಾವ್ಯಕ್ಕೆ ಬಂದಿರುವ ಕಾವ್ಯಪ್ರಕಾರ.  ಗಜಲ್‍ಗೆ 'ನಲ್ಲೆಯೊಂದಿಗೆ ಸಂವಾದ', 'ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ' ಎಂಬ ಅರ್ಥಗಳಿವೆ.  ಐದರಿಂದ ಹನ್ನೊಂದು ದ್ವಿಪದಿ (ಶೇರ್)ಗಳಿರುವ ರಚನೆ - ಗಜಲ್.  ಗಜಲ್ ಕವಿ ರೂಪಕ ಸಂಕೇತಗಳ ಮೂಲಕ ವ್ಯಕ್ತಿನಿಷ್ಠ ಅನುಭವಗಳನ್ನು 'ಹಿಡಿದರೆ ಹಿಡಿತುಂಬ, ಬಿಟ್ಟರೆ ಜಗವೆಲ್ಲ' ಎಂಬಂತೆ ನಿರೂಪಿಸುತ್ತಾನೆ.  ಗಜಲ್ ಪ್ರಣಯ, ಅಧ್ಯಾತ್ಮ, ರಾಜಕೀಯ ವಿಡಂಬನೆ ಎಲ್ಲವನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಂಡಿದೆ.  ಉರ್ದು ಕಾವ್ಯದ ಜನಕ ವಲಿ, ಇಕ್ಬಾಲ್, ಫಿರಾಕ್ ಗೋರಖ್ಪುರಿ, ಹಸನ್ ನಯೀಮ್ ಮತ್ತಿತರ ನೂರಾರು ಕವಿಗಳು ಗಜಲ್ನ್ನು ಸೃಜನಶೀಲವಾಗಿ ಬೆಳೆಸಿದ್ದಾರೆ.  ಹಸನ್ ನಯೀಮ್ 'ಗಜಲ್ ಅಕಾಡೆಮಿ'ಯನ್ನು ಸ್ಥಾಪಿಸಿದ್ದಾರೆ. ಗಜಲ್‍ಗಳಲ್ಲಿ
 ಜಾವೇದ್ ಅಖ್ತರ್ ಅವರ ಪ್ರತಿಭೆಯ ಮಿಂಚುಗಳಿವೆ.  "A poem begins in delight and ends in wisdom" (ರಾಬರ್ಟ್ ಫ್ರಾಸ್ಟ್) ಎನ್ನುವಂಥ ರಚನೆಗಳಿವು.

ಮಿಂಚುವ ದೇಹ, ದಟ್ಟ ಮುಡಿ, ಮಾಂತ್ರಿಕ ಕಣ್ಣು, ತುಟಿ ಗುಲಾಬೀ
ಅಮೃತಶಿಲೆ, ನೇರಳೆ ಮೋಡ, ಕೆಂಪು ದಿಗಂತ, ಹೆದರಿದ ಹರಿಣೀ'

 ಎಂದು ಆರಂಭವಾಗುವ ಗಜಲ್ ಮನಮೋಹಕವಾಗಿದೆ.  ಕಹಿ ಹೇಗಿಲ್ಲದಿದ್ದೀತು ನಮ್ಮ ಬದುಕಲ್ಲಿ, ಗತಿಸಿದ್ದು ಬದುಕಲ್ಲಿ ನಮಗೆ ನೆನಪಿದೆ ಎಲ್ಲ ಎನ್ನುತ್ತಾರೆ ಅಖ್ತರ್.

'ಉಸ್ ಚಿರಾಗೋ ಮೆ
ತೇಲ್ ಹಿ ಕಮ್ ಥಾ
ಕ್ಯೊಂ ಗಿಲಾ ಫಿರ್ ಹಮೇ
ಹವಾ ಸೇ ರಹೇ'

'ಹಣತೆಯಲ್ಲೇ ಎಣ್ಣೆ ಕಮ್ಮಿಯಿದೆ
ಸುಮ್ಮನೆ ದೂರುವುದೇಕೆ ಗಾಳಿಯನ್ನು'

- ಸಂಸ್ಕೃತಿ ರಕ್ಷಣೆಯ ಸಂವಾದದಲ್ಲಿ 'ಎಣ್ಣೆ ಹೊಯ್ಯಮ್ಮ ದೀಪಕ್ಕೆ'.ಎಂಬ ಸಾಲಿನೊಂದಿಗೆ ಈ ದ್ವಿಪದಿಯ ಆಶಯವನ್ನು ಕುರಿತೂ ಚಿಂತಿಸಬೇಕು.

ಕನಕ ಹಾ.ಮ. ಅವರ ಅನುವಾದದಲ್ಲಿ ಗಜಲ್‍ನ  ನರ್ತನದ ಬದಲು ನಡಿಗೆ ಕಾಣಿಸುತ್ತದೆ.  ಮುನ್ನುಡಿ ಬರೆದಿರುವ ಕವಿ ಜಯಂತ ಕಾಯ್ಕಿಣಿ ಅವರು ಇಲ್ಲಿನ ಗದ್ಯಗಂಧಿ ಶೈಲಿಯನ್ನು ಗುರುತಿಸಿದ್ದಾರೆ.

ಕಾವ್ಯವನ್ನು ಅನುವಾದಿಸುವ ಸಮಸ್ಯೆಗಳ ಅರಿವಿದ್ದರೂ ಅನುವಾದಿಸುವ ಹಂಬಲ, ನಮ್ಮ ಕವಿಗಳಲ್ಲಿ ಚಿರಂತನವಾಗಿದೆ.  'ಮನದ ಮುಂದಣ ಆಸೆಯೇ ಮಾಯೆ' ಎಂಬಂತೆ ಅನುವಾದಿಸುವ ಆಸೆ ಕವಿಗಳನ್ನು ಕಾಡುತ್ತದೆ.  ಸೋತು ಗೆಲ್ಲುವುದು, ಕಾವ್ಯಪುರುಷ ತೆಕ್ಕೆಗೆ ಒಗ್ಗಲಿಲ್ಲವೆಂದು ಅಳುವುದು ಅನುವಾದದ ಜಾಯಮಾನ.  'ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ'ಯಲ್ಲಿ ಅನುವಾದದ ಪವಾಡಗಳು ಸಾಧ್ಯವಾಗುತ್ತವೆ.

ಜಾವೇದ್ ಅಖ್ತರ್ ಅವರ 'ತರ್ಕಶ್' (ಬತ್ತಳಿಕೆ)ನಲ್ಲಿ ಕೋಮುದ್ವೇಷದ ಬಾಣಗಳ ಬದಲು, ವಾತ್ಸಲ್ಯ, ಪ್ರೀತಿಗಳ ಕುಸುಮಬಾಣಗಳಿವೆ.  ಅಖ್ತರ್ 'ಪುಷ್ಪಕವಿ' ಅಲ್ಲ, ಕಬೀರ್ ದಾಸನ ಸಂಸ್ಕಾರದ ಕಾಲದ ಪುಷ್ಪಪವಾಡ ಈಗಲೂ ನಿಜವಾಗಬಾರದೆ, ದಂಗೆಯ ಮೊದಲೇ ಶಾಂತಿಯ ಹೂಗಳು ಅರಳಬಾರದೆ ಎಂದು ತುದಿಗಾಲ ದಿಗಿಲಿನಿಂದ ಹಾರೈಸುವ ಕವಿ.

ಭಾಷಾಂತರ ಮೂಲಕ್ಕೆ ಪ್ರತಿಸ್ಪಸ್ಪರ್ಧಿಅಲ್ಲ, ಪರ್ಯಾಯಯವೂ ಅಲ್ಲ, ಅಪೂರ್ಣ.  ಯಾವ ಭಾಷಾಂತರವನ್ನೂ ಸಮರ್ಪಕವಾಗಿ ಮುಗಿಸುವುದು ಎಂಬುದಿಲ್ಲ ಎಂಬ ಎ.ಕೆ. ರಾಮಾನುಜನ್ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಕನಕಾಂಬರ ಹೂವಿನಂತಿರುವ ಈ 'ಬತ್ತಳಿಕೆ'ಯನ್ನು ಸ್ವಾಗತಿಸೋಣ.

ಮುರಳೀಧರ ಉಪಾಧ್ಯ ಹಿರಿಯಡಕ

(ಪುಸ್ತಕ ಸಮೀಕ್ಷೆ, ಉದಯವಾಣಿ, 22-3-2003)

ಬತ್ತಳಿಕೆ
(ಕವನಗಳು, ಗಜಲ್ಗಳು)
ಉರ್ದು ಮೂಲ: ಜಾವೇದ್ ಅಖ್ತರ್
ಕನ್ನಡಕ್ಕೆ - ಕನಕ ಹಾ.ಮ.
ಪ್ರ.: ಕರ್ನಾಟಕ ಸಂಘ
ಪುತ್ತೂರು-574202
ಮೊದಲ ಮುದ್ರಣ: 2003
ಬೆಲೆ ರೂ.150
BATTALIKE
[poems and gazals]
-Javed Aktar
translated from- urdu
by- kanaka. ha.. ma.
published by-
karnataka sangha,
puttur-574202
karnataka- india
first edition- 2003
rs- 2003

Interpreting Shakespeare Through Sanskrit Dramaturgy

Inerpreting Shakespeare Through  Sanskrit Dramaturgy
-V. C. Srisastava
yking books,
18, jain bhavan,
oppc- nbc, shanti nagar,
 JAIPUR-302006
rs- 895
  

GANDHI IN THE WEST

Gandhi in the West
- The mahatma and the Rise of the Radical  Protest
-Sean Scalmer
Cambridge University Press
4381/4, ansari road,
daryaganj,
New Delhi
RS-795

Punyakoti-govina haadu

: ೨೦೧೧ ರ ವಿಭಾ ಸಾಹಿತ್ಯ ಪ್ರಶಸ್ತಿಗಾಗಿ ಕವನಗಳ ಆಹ್ವಾನ

: ೨೦೧೧ ರ ವಿಭಾ ಸಾಹಿತ್ಯ ಪ್ರಶಸ್ತಿಗಾಗಿ ಕವನಗಳ ಆಹ್ವಾನ

Tulu film "ORIYARDORI ASAL" (One smarter than the other)

Sunday, June 5, 2011

Yoga Guru.....- Dinesh Amin Mattu

[Prajavani]-rajakeeya maidanadalli edavibidda yogaguru

Devaraj Urs-Krishanmurthy Hanur

[Prajavani]

kannada poet Siddalingaiah-i am not anti- brahmin

[varthabharathi] MEET THE AUTHOR- SIDDALINGAIAH

Elites take note: Tagore embraced one and all

[The Hindu] Siddartha Swapan Roy

: In defence of books-Divya Dubey

[The Hindu ]

Malayalam Poet- Changampuza-Tribute :

[The Hindu] : Remembering an icon-C. Sarat Chandran

Apradhini-Women without Men-shivani

[The Hindu ]/translated by- Ira Pande- Book Review : Evoking deep emotions-kanaka basu

raaNi chennamma university-waiting for gov grant

Prajavani[6-6-2011]

DR. Sunder Sarukkai- ಜೀವನ ಕಲೆ ಕಲಿಕೆಗೆ ಯಾಕಿಲ್ಲ ಬೆಲೆ ?

ಜೀವನ ಕಲೆ ಕಲಿಕೆಗೆ ಯಾಕಿಲ್ಲ ಬೆಲೆ ?[udayavani]

ಎರಡು ಕವನಗಳು

ಎರಡು ಕವನಗಳು- Vasanta Bannadi, G. P. Basavaraju

DR. M. PRABHAKARA JOSHI- Buddhism- Hinduism

[varthabharathi ][KANNADA]

ಪಂಪನ ಕಾವ್ಯ: ಸುಜನಾರಿಗೆ ಸಂಬಂಧಿಸಿದಂತೆ

Devasahitya: ಪಂಪನ ಕಾವ್ಯ: ಸುಜನಾರಿಗೆ ಸಂಬಂಧಿಸಿದಂತೆ

ಕನ್ನಡ ಕೇವಲ ಮನರಂಜನೆಗಾ?:ತಿರುಮಲೇಶ್ ಜಿಜ್ಞಾಸೆ - ಕೆ.ವಿ. ತಿರುಮಲೇಶ್ - ಕೆಂಡಸಂಪಿಗೆ 

ಕನ್ನಡ ಕೇವಲ ಮನರಂಜನೆಗಾ?: - ಕೆ.ವಿ. ತಿರುಮಲೇಶ್ -[ ಕೆಂಡಸಂಪಿಗೆ ]

- Dr. K.V. Narayan- kannada linguistics -Part 1

- Dr. K.V. Narayan - kannada linguistics -Part 2

- Dr. K.V. Narayan- kannada linguistics -Part 3

Dr. K .V .Narayan- kannada linguistics- discussion- part-1

Dr. K .V. Narayan-kannada linguistics- discussion- Part 2

Dr. K .V .Narayan- kannada linguistics - discussion-Part 3

Chidambara Rahasya[The Insrutable Mystery]- Purnachandra Tejasvi

THE INSRUTABLE MYSTERY[ english translation of purnachandra tejasvi's kannada novel- chidambara rahasya]
translated by- P. P. Giridhar,
published by-
sahitya academi,
new delhi
pages- 224
price-rs- rs 120

ಮೇಘನಾ ಪೇಠೆ[ ಮರಾಠಿ ಲೇಖಕಿ]ಸಂದರ್ಶನ- ವಿವೇಕ ಶಾನಭಾಗ

meghana pethe[ marati writer] interview in kannada by- vivek shanbhag-read this interview in  prajavani, deshakala sahitya puravani, june 5, 2011.

Friday, June 3, 2011

MANIK- DA [MEMORIES OF SATYAJIT RAY

The Pioneer :[NEMAI GHOSH]

- Sidhalingiah Video 3 ::kanavarike[kavana]

-:: Karnataka Sahithya Academy - Sidhalingiah Video 3 ::

interaction with Kannada Poet Siddalingaiah

ಪಿಎಚ್.ಡಿ-. ಮಾರ್ಗದರ್ಶಕರ ಕೊರತೆ

[Prajavani]ದಾವಣಗೆರೆ ವಿವಿ

ಶಿವರಾಮ ಕಾರಂತರಿಗೆ ಹುಟ್ಟೂರಿನಲ್ಲಿ ಸ್ಮಾರಕಭವನ

[Prajavani]

Lokada Kannige - HS Venkateshmurthy - MD Pallavi Kannada Bhaavageethe

ಕೋಟೆ ಗುಡ್ಡ

ಗೋವಿ೦ದ ಪೈ ಎಂಬ ಅದ್ಭುತ…! «

ಗೋವಿ೦ದ ಪೈ ಎಂಬ ಅದ್ಭುತ…! [« ನಿಲುಮೆ]

ಪುಟ್ಟಕ್ಕನ ಹೈವೇ-ಮುರಳೀಧರ ಖಜಾನೆ

[The Hindu] : / Cinema : Beside the highway- puttakkana highway- Muraleedhra Khajane

nehru memorial museum and library new delhi- digitisation project

[The Hindu] : / Heritage : The past clicks on in Delhi- Shailaja Tripathy

Thursday, June 2, 2011

GANDHI FROM MONU TO MAHATMA- BOLUWAR MAHAMAD KUNHI



ಡಾ/ ಬಿ. ಎನ್. ಸುಮಿತ್ರಾಬಾಯಿ-ಕುವೆಂಪು ಕಾದಂಬರಿಗಳು -- -

ಕುವೆಂಪು ಕಾವ್ಯದ ಧಾತು ಧೋರಣೆಗಳು- ವಿ. ಚಂದ್ರಶೇಖರ ನ್ಂಗಲಿ
read these articles in' SANCHAYA'[bimonthly] march april, 2011[editor d. v. prahlad] no- 100, 2nd main, 6th block,3rd stage, 3rd phase, banashankari, bangalore- 560085. phone- 080-26791925

ಉತ್ತರ ಕನ್ನಡ ಜಿಲ್ಲೆಗೊಂದು ವಿಶ್ವವಿದ್ಯಾಲಯ ಕೊಡಿ

ಉತ್ತರ ಕನ್ನಡದ ಕಾಲೇಜುಗಳನ್ನು ಯಾಕೆ ಕುವೆಂಪು ವಿವಿಗೆ ಸೇರಿಸುತ್ತಿದ್ದಾರೆ ?-ನಹುಶ[ಗೌರಿ ಲಂಕೇಶ್ ಜೂನ್ -8, 2011
I rquest honourable minister of higher education Dr. V.S.Acharya to sanction one separate univesity to uttara kannada district. Uttara Kannada is a neglected district in karnataka. The people of uttara kannada have sacrificed for the 'DEVELOPMENT' of Karnataka. They deserve to get at least one university for thier development-mujraleedhra upadhya hiriadka

Masti Award 2011- Vaidehi- Veena shanteshwara

[The Hindu] : Peeling the layers- by M.S. Ashadevi

TULU- KODAVA

[Prajavani]Editorial

sadat hasan manto

[varthabharathi ] ashok. n. s

praLayaantaka jeeviya hosayuga

[Prajavani]- nagesh hegade

‘ಹಣತೆ’ ದೀಪಾವಳಿ ವಿಶೇಷಾಂಕ: ರಾಜ್ಯ ಮಟ್ಟದ ಕತೆ-ಕವನ ಸ್ಪರ್ಧೆ « ಅವಧಿ / Avadhi

‘ಹಣತೆ’ ದೀಪಾವಳಿ ವಿಶೇಷಾಂಕ: ರಾಜ್ಯ ಮಟ್ಟದ ಕತೆ-ಕವನ ಸ್ಪರ್ಧೆ «[ Avadhi]