stat Counter



Showing posts with label kannada poetry. Show all posts
Showing posts with label kannada poetry. Show all posts

Thursday, August 13, 2020

ಮುರಳಿಧರ ಉಪಾಧ್ಯ ಹಿರಿಯಡಕ - ಎಚ್. ಎಸ್. ಶಿವಪ್ರಕಾಶ್ ಅವರ " ಮಳೆಯೇ ಮಂಟಪ " -- ಹೇಗೆ ಗೆದ್ದಾರು ನಮ್ಮ ಮುಗ್ಧ ದೇವತೆಗಳು?

ಎಚ್. ಎಸ್.ಶಿವಪ್ರಕಾಶ್,  ಹೊಸ ಶತಮಾನದ ಕನ್ನಡ ಕಾವ್ಯಕ್ಕೆ ಹೊಸ ದಾರಿ ತೋರಬಲ್ಲ ಸಾಮರ್ಥ್ಯ ವಿರುವ ಕವಿಗಳಲ್ಲೊಬ್ಬರು. ’ಮಿಲರೇಪ’, ’ಮಳೆ ಬಿದ್ದ ನೆಲದಲ್ಲಿ’, ಅಣು ಕ್ಷಣ ಚರಿತ್ರೆ’, ’ಸೂರ್ಯ ಜಲ’ ’ನವಿರು ನಾಗರ’ ಗಳ ಅನಂತರ ಪ್ರಕಟವಾಗಿರುವ ಶಿವಪ್ರಕಾಶರ ಅನಂತರ ಪ್ರಕಟವಾಗಿರುವ ಶಿವಪ್ರಕಾಶರ ಆರನೆಯ ಕವನ್ ಸಂಕಲನ ’ ಮಳೆಯೇ ಮಂಟಪ’.
’ಒಂದು ಸಲುಗೆಯ ಬಿನ್ನಪ’ದಲ್ಲಿ ಕವಿ ಶಿವಪ್ರಕಾಶ್, ಕಾವ್ಯವನ್ನು ಕುರಿತ ತನ್ನ ಇತ್ತೀಚೆಗಿನ ಚಿಂತನೆಯನ್ನು ವಿವರಿಸಿದ್ದಾರೆ. -"ಭಾಷೆ ಮತ್ತು ಅನುಭವಗಳ ಸಾಂದ್ರತೆ ಮತ್ತು ಜಟಿಲತೆಯನ್ನು ತ್ಯಜಿಸದೆ ಕವಿತೆ ಆದಷ್ಟು ಸರಳ ರೀತಿಯಲ್ಲಿ  ಸಹೃದಯರನ್ನು ಮುಟ್ಟಬೇಕು ಎಂಬುದು ನನ್ನ ನಂಬುಗೆ.... ಕವಿತೆ ಕೇವಲ್ ಒಂದು ಕಲಾಕೃತಿ ಎಂಬ ನಂಬುಗೆ ಈಗ ನನಗಿಲ್ಲ. ಮೂಲಭೂತವಾ ಗಿ    ಅದೊಂದು ಅನ್ವೇಷಣಾ ಕ್ರಮ. ಸ್ವಯದ ಹಾಗೂ ಇದಿರಿನ ಪೇಚಾಟ ಪರದಾಟಗಳನ್ನು ದಾಟುವ ಪ್ರಯೋಗ, ಪ್ರಕ್ರಿಯೆ" ಎನ್ನುತ್ತಾರೆ ಶಿವಪ್ರಕಾಶ್. ’ಕವಿತೆ ಸಾಯುತ್ತದೆ’ ಎಂಬ್ ಕೂಗನ್ನು ಗೇಲಿ ಮಾಡುತ್ತ ಅವರು ಬುದ್ಧ ಜಾತಕ ಕತೆ ಯೊಂದನ್ನು ನೆನಪಿಸುತ್ತಾರೆ. ಆಲದ ಮರದ ಕೆಳಗಿದ್ದ ಒಂದು ಮೊಲ ಮರದಿಂದ ಒಂದು ಹಣ್ಣು ಬಿದ್ದ ಸದ್ದನ್ನು ಕೇಳಿಸಿ ಕೊಂಡು, ’ಲೋಕೋ ವಿನಸ್ಯತಿ( ಲೋಕ ನಶಿಸುತ್ತಿದೆ) ಎಂದು ಹಾಹಾಕಾರ ಹರಡಿಸಿತಂತೆ!’ಮಳೆಯೇ ಮಂಟಪ’ದಲ್ಲಿ ಮೂವತ್ತೇಳು ಕವನಗಳು, ಹದಿನಾರು ತತ್ತ್ವ ಪದಗಳು ಹಾಗೂ ಮೂವತ್ತು ವಚನಗಳಿವೆ.’ ಉರಿವ ಗುಗ್ಗಳ’ ಹಾಗೂ ’ಅಕ್ಕ-ತಮ್ಮ’ ಇಲ್ಲಿರುವ ಸುದೀರ್ಘ ಕವನಗಳು. ’ಬಸುರಿ ಮೂಳೆಯ ಮೇಲೆ ನಚ್ಚಾನೆ   ನಡು    ಮಧ್ಯಾಹ್ನ’ ಉರಿವ, ಕುಣಿವ ಗುಗ್ಗಳದ ಚಿತ್ರ ಭಯಾನಕವಾಗಿದೆ. ’ಅಕ್ಕ-ತಮ್ಮ’ ಕವಿತೆ ಒಂದು ರಾಜಸ್ಥಾನಿ ಜನಪದ ಕತೆಯಿಂದ ಪ್ರೇರಣಿ ಪಡೆದಿದೆ. ಇಲ್ಲಿನ ಅಕ್ಕ- ತಮ್ಮ ಬರಗಾಲದಲ್ಲಿ ತಮ್ಮನ್ನು ಬಿಟ್ಟು ಹೋದ ತಂದೆ-ತಾಯಿಯ್ ನಿರೀಕ್ಷೆಯಲ್ಲಿ ದ್ದಾರೆ. ’ನೋವಿದ್ದ ಮನದಲ್ಲಿ ಸಾವಿರ ಯೋಚನೆ, ಬಾವಿದ್ದ ಎದೆಯಲ್ಲಿ ಸಾವಿರ  ಕಲ್ಪನೆ’ ಎನ್ನುತ್ತಾಳೆ ಅಕ್ಕ. ’ ಕಬೀರದಾಸರ ಭೋಜಪುರಿ ಕವಿತೆ’ ಅಲ್ಲಮನ ಬೆಡಗಿನ ವಚನಗಳನ್ನು ನೆನೆಪಿಸುವಂತಿದೆ. ನೀರು ಬೂದಿಯಾಗುತ್ತದೆ, ಮೀನು ಬದುಕಿ ಉಳಿಯುತ್ತದೆ. ಇರುವೆ ಉಚ್ಚೆ ಹೊಯ್ದಾಗ ನದಿನಾಲೆ ತುಂಬಿ ಹರಿಯುತ್ತವೆ. ’ ಪ್ರೀತಿಯ ಸ್ನೇಹಿತ ಜೋ’ ಎಂಬ್ ಕವಿತೆಯಲ್ಲಿ ಜಾಗತೀಕರಣ ಎಂಬ್ ರಾಜಕೀಯ ಕುತಂತ್ರವನ್ನು ಕುರಿತ ಕವಿಯ ಪ್ರತಿಕ್ರಿಯೆ ಹೀಗಿದೆ-"ಹೇಗೆ ಗೆದ್ದಾರು ನಮ್ಮ ಮುಗ್ಧ ದೇವತೆಗಳು ವ್ಯಾಪಾರಗಾರರ ಚಾಲೂಕಿ ಕುಹಕಗಳನ್ನು?"

ಈ ಸಂಕಲನದಲ್ಲಿರುವ ವಚನಗಳು ಹಾಗೂ ತತ್ತ್ವ ಪದಗಳ ಕುರಿತು ಶಿವ ಪ್ರಕಾಶ ಹೀಗೆನ್ನುತ್ತಾರೆ-" ಒಂದು ವ್ಯಕ್ತಿಗತ ಶೈಲಿಯನ್ನು ಕಟ್ಟಿಕೊಳ್ಳುವ ಮಾಡರ್ನಿಸ್ಟ್ ಹಠ ಇಂದು ಸಲ್ಲುವುದಿಲ್ಲ.ಈ  ಅರ್ಥದಲ್ಲೇ ವೊಲೆ ಷೊಯಿಂಕ ಹೇಳಿದ್ದು-ಶೋಷಿತ  ಜಗತ್ತಿನ ಬರಹಗಾರನಿಗೆ ಅಗತ್ಯವಾದದ್ದು ಸಾಮಾಜಿಕ ಸಿದ್ಧಾಂತವೇ ಹೊರತು ಕಲಾತ್ಮಕ ಸಿದ್ಧಾಂತವಲ್ಲ. ಈ ತೆರನ ಆಲೋಚನೆಗಳು ಮುಕ್ತಛಂದದ ಮೈಕಟ್ಟುಗಳಿಂದ ಭಿನ್ನವಾಗಿರುವ ’ ತತ್ತ್ವ ಪದ’  ಮತ್ತು ವಚನ್ ರೂಪಗಳಲ್ಲೂ ಕಾವ್ಯ ರಚನೆ ಮಾಡುವಂತೆ ನನ್ನನ್ನು ಪ್ರೇರೇಪಿಸಿದುವು. ಇಂದಿನ ಅಸ್ವಸ್ಥ ಭಾಷೆ ಹಾಗೂ ಸಮುದಾಯಗಳ ಕಾವ್ಯ್ ನರಕಿಗಳ ಆತ್ಮ ಸಂವಾದದಂತೆ ಕೇಳಾತೊಡಗಿದೆ. ಹೊಸ ವ್ಯಕ್ತಿ ಮತ್ತು ವಸ್ತುಗಳೊಂದಿಗೆ ಸಂಭಾಷಣೆಗಳ ನೆಲೆಗಳನ್ನು ಉಳಿಸಿಕೊಳ್ಳವುದರಲ್ಲಿ ಈ ಪ್ರಕಾರಗಳು ನನಗೆ ಸಾಧನಗಳಾದುವು."
’ಮಿಂಡರೈವರು’ ಎಂಬ ತತ್ತ್ವಪದ ದಲ್ಲಿ ಸರಕು ಸಂಸ್ಕೃತಿಯ ಖಾರವಾದ ವಿಡಂಬನೆ ಇದೆ. ಇಲ್ಲಿನ್ ಕಿವುಡ ಟ್ರಾನ್ಸಿ ಸ್ಟರನ್ನು, ಕುರುಡ ಟಿ.ಇಯನ್ನು ಹೆಳವಕಾರನ್ನು, ಕುಂಟ್ ಭೂಟು ಜೊತೆಯನ್ನು, ಮೂಕ ಮೈಕನ್ನು ಅಪೇಕ್ಷಿಸುತಾರೆ.
’ಬೆಟ್ಟದ ಮೇಲೊಂದು ಮನೆಯ ಮಾಡುತ್ತೇನೆ, ಮೃಗ ಖಗಗಳಿಗೆ ಅಂಜದ  ಹಾಗೆ’ ಎಂದು ಆರಂಭವಾಗುವ    ವಚನ  ವಿಶೇಷವಾಘಿ ಗಮನ ಸೆಳೆಯುತ್ತದೆ. ’ಸಮುದ್ರದ ತಡಿಯಲ್ಲಿ ಮನೆ ಮಾಡುತ್ತೇನೆ, ನೊರೆ, ತೆರೆ, ಹೆಮ್ಮೀನು, ಮೊಸಳೆ ತಿಮಿಂಗಿಲಗಳಿಗೆ ಅಂಜದ ಹಾಗೆ’, ’ಸಂತೆಯೊಳಗೊಂದು ಮನೆ ಮಾಡುತ್ತೇನೆ, ಸದ್ದುಗದ್ದಲ ಗಮಲು ಧೂಳುಗಳಿಗಂಜದಂತೆ, ಎನ್ನುವ ನಿರೂಪಕ ವಚನದ ಕೊನೆಯಲ್ಲಿ ಹೀಗೆನ್ನುತ್ತಾನೆ-
"ಈ ಎಲ್ಲವೂ ಚೆನ್ನು
ನೀನೂ ಜತೆಗಿದ್ದರೆ
ಇಲ್ಲದ ಹೋದರೆ 
ಬೆಟ್ಟ ಪೂರ್ತಿ ಬೋಳಾಗುತ್ತದೆ
ಕಡಲ ತಡಿ ಕಡಲಲ್ಲಿ ಮುಳುಗಿ ಹೋಗುತ್ತದೆ.
ಸಂತೆ ಅಂತೂ ಇಂತೂ ನೆರೆದು ಮುಗಿದು ಹೋಗುತ್ತದೆ."

ಶಿವಪ್ರಕಾಶರ ಈ ವಚನ ವಿರಹಿಯ ಶೃಂಗಾರದಿಂದ ಆರಂಭವಾಗಿ, ಸಖೀಗೀತದತ್ತ ತುಡಿಯುತ್ತದೆ.
ಇಲ್ಲಿನ ಒಂದು ವಚನದಲ್ಲಿ ’ಅಚ್ಚಗನ್ನಡದ ಬಿಸಿಲು ನಮ್ಮನ್ನು ಆವರಿಸಿದ ಹಾಗೆ’ ಎಂಬ ಮಾತಿದೆ. ’ಮಳೆಯೇ ಮಂಟಪ’ ಅಚ್ಚಗನ್ನಡದ ಬಿಸಿಲು-ಮಳೆಯ ಖುಶಿ ನೀಡುತ್ತದೆ.

ಮುರಳೀಧರ     ಉಪಾಧ್ಯ  ಹಿರಿಯಡಕ
 ಮಳೆಯೇ ಮಂಟಪ
(ಕವನ ಸಂಕಲನ)
ಲೇ: ಎಚ್. ಎಸ್. ಶಿವಪ್ರಕಾಶ್
ಪ್ರ: ಲೋಹಿಯಾ ಪ್ರಕಾಶನ, ’ಕ್ಷಿತಿಜ’,
ಗಾಂಧಿನಗರ, ಬಳ್ಳಾರಿ-೫೮೩೧೦೩
ಮೊದಲ್ ಮುದ್ರಣ:೨೦೦೨.
ಬೆಲೆ ರೂ.೫೦.


Friday, August 3, 2018

ನಟರಾಜ . ಕೆ. ಪಿ--- ಹುಣಸೆಯ ಮರವ ನೋಡವ್ವ

ಹುಣಸೆಯ ಮರವ ನೋಡವ್ವ ಕಣ್ಣಿಗೆ ಕಟ್ಟಿ ನಿಲ್ಲುವ ಹುಣಸೆ ಮರವ ನೋಡವ್ವ ಶ್ರಾವಣ ಮಾಸದ ಕಡು ಹಸಿರು ಎಲೆ ಎಲೆಗಳಲ್ಲಿ ದಟ್ಟೈಸಿ ನಿಂತಿರುವ ಹುಣುಸೆಯ ಮರವ ನೋಡವ್ವ ನೋಡುವುದಕ್ಕೆರಡು ಕಣ್ಣು ಸಾಲದವ್ವ
ಜಾತರೆ ಯಾತರೆ ಬಿಟ್ಟಿಲ್ಲಿ ಬಾರವ್ವ ನಿಂತ ನಿಲುವಿಗೆ ಲೋಕವ ಕೈಮಾಡಿ ಕರೆದಿರುವ ಹುಣಸೆಯ ಮರವ ನೋಡವ್ವ ಅವ್ವ ನಾನು ಚಿಕ್ಕವನಿರುವಾಗ ನೀನು ಚಿಕ್ಕವಳಿರುವಾಗ ಮುದ್ರೆಯ ಹೊಲದ ತಿಪ್ಪೆಯ ಗುಂಡಿಯ ಹತ್ತಿರವಿದ್ದ ಹುಣಸೆಯ ಮರವ ನೋಡವ್ವ
ಕೊಂಬೆ ರೆಂಬೆ ಟೊಂಗೆ ಟಿಸಿಲುಗಳ ಹೊಕ್ಕು ಒಳ ಹೊಕ್ಕು ಮರದೊಳ ಹೊಕ್ಕು ದಟ್ಟೈಸಿರುವ ಹಸಿರು ಎಲೆಗಳ ನುಸಿದು ಮರದ ಒಳಹೊಕ್ಕು ನಿಗೂಢ ಕತ್ತಲ ಒಳಾಯಕ್ಕೆ ಹೋಗವ್ವ ಹುಣಸೆಯ ಮರಾಂತರಂಗಕ್ಕೆ ಹೋಗವ್ವ
ಬಳ್ಳಿ ಬಿಳಲುಗಳಂತದರ ಇಳಿ ಬೀಳುವ ಟಿಸಿಲುಗಳು ವಾಲಾಡುವ ಪರಿಯ ನೋಡವ್ವ ಅವ ಹಸುರು ಶಿಶುಗಳ ಜೀವವಾಡುವ ಪರಿಯ ನೋಡವ್ವ
ಅವ್ವ ಲೋಕ ಯಾತ್ರೆಯಿದು ಮುಗಿತಾಯ ಕ್ಕೆ ಬರುವ ವೇಳೆಯಾಯಿತು ಬಂದಿಲ್ಲಿ ನಿಲ್ಲವ್ವ
ಹುಣುಸೆಯ ಬೀಜ ಹುಣಸೆಯ ಹಣ್ಣು ಹುಣಸೆಯ ಕಾಯಿ ಹುಣಸೆಯ ಬರಲು ಹುಣಸೆಯ ಹುಳಿ ಹುಣಸೆಯ ಮರದ ಜೊತೆ ಬದುಕಿ ಬಂದಿದ್ದೇವವ್ವ ಹುಣಸೆಯ ಮರ ಮುಪ್ಪು ಹುಣಸೇಯ ಹುಳಿ ಮುಪ್ಪೆ ಗಾದೆಯ ರಸದ ಹೆಸರುವಾಸಿ ಮರವ ನೋಡವ್ವ
ಊರು ಓಡಾಡುವ ಜಾಗದಲ್ಲಿರುವ ಮೂರು ಹಾದಿ ಕೂಡುವ ಜಗದ್ಜಾಗದಲ್ಲಿರುವ ಲೌಕಿಕಕು ಅಲೌಕಿಕಕು ಆಗಿಬರುವ ಹುಣಸೆಯ ಮರಕೆ ಬಾರವ್ವ ಅರಸಿ ಬಾರವ್ವ



Image may contain: Nataraja Kalkere, smiling, closeup

Saturday, July 21, 2018

ಎಮ್. ಆರ್. ಕಮಲಾ ---ನೀವು ನೋಡಿದವಳು



ನೀವು ನೋಡಿದವಳು....
ನಿಮ್ಮ ನೋಟ ನಾನಲ್ಲ
ನನ್ನ ಸೀರೆ, ಕುಂಕುಮ, ಬಿಚ್ಚಿದ ಕೂದಲು
ಅರಳುಗಣ್ಣು, ಭಾವಗಳ ಹೊಮ್ಮಿಸುವ ಚಿತ್ರ 
ಇದ್ಯಾವುದು ನಾನಲ್ಲ.
ಊಹಿಸುತ್ತ ಹೋಗುತ್ತೀರಿ
ನಿಮ್ಮದೇ ಕಲ್ಪನೆಗೆ ರೆಕ್ಕೆಪುಕ್ಕ ಹಚ್ಚಿ
ಸಾವಿರ ಕಣ್ಣ ನವಿಲಾಗಿ ನನ್ನ ಕುಣಿಸುತ್ತೀರಿ
ಇದ್ಯಾವುದು ನಾನಲ್ಲ
ನಿಮ್ಮ ರಾಗ ದ್ವೇಷದಮಲಿನಲಿ
ನನ್ನನ್ನು ನಾದಿ, ಕೆಂಪಗೆ ಕರಿದು
ಕುದಿವ ಸಕ್ಕರೆಯ ಪಾಕದಲ್ಲಿ ಅದ್ದುತ್ತೀರಿ
ಇದ್ಯಾವುದು ನಾನಲ್ಲ
ಓಟದ `ಹಿಮ'ದ ಹುಡುಗಿಯ
ಜಾತಿ, ಖ್ಯಾತಿಯ ಹುಡುಕಿದಂತೆ
ಹಿನ್ನೆಲೆ ಹುಡುಕುತ್ತ ಅಲೆದು ಬಳಲುತ್ತೀರಿ
ಇದ್ಯಾವುದು ನಾನಲ್ಲ
ಹುಲ್ಲು ಕಡ್ಡಿ, ಪುಟ್ಟ ಹೂವು, ಮುಳ್ಳು
ಮರಳು, ಕಡಲು, ಆಕಾಶದಲ್ಲೂ
ಅರ್ಥ ಹುಡುಕಿ,ತಡಕಿ ತೊಳಲುತ್ತೀರಿ
ಅಲ್ಲೂ ದಕ್ಕಿಲ್ಲ, ಇಲ್ಲೂ,,,,




Image may contain: Metikurke Ramaswamy Kamala, closeup


























,,,