stat Counter



Showing posts with label sukanya kalasa. Show all posts
Showing posts with label sukanya kalasa. Show all posts

Tuesday, December 30, 2014

ಸುಕನ್ಯಾ ಕಳಸ - ಹೋಗಿಬಿಡು ರಕ್ತಸಿಕ್ತ ವರ್ಷವೇ

ಹೋಗಿಬಿಡು..ಜರ್ಜರಿತ ರಕ್ತಸಿಕ್ತ ವರ್ಷವೇ"
ಹೋಗಿಬಿಡು..ಜರ್ಜರಿತ ರಕ್ತಸಿಕ್ತ ವರ್ಷವೇ
ಗೊತ್ತು ನನಗೆ ನಿನ್ನೊಡಲ ಬಾಯಿಲ್ಲದ ಶೋಕ
ಧ್ವನಿಯಿಲ್ಲದೆ ದಿಕ್ಕುಗೆಟ್ಟ ಮಡುಗಟ್ಟಿದ ದುಃಖ
ಮುದ್ದುಮಕ್ಕಳ ನೂರು ಹೆಣ್ಗಳ ಕೊನೆಯಿಲ್ಲದ
ಸೀಳುಗಾಯಗಳ,ಸೊಕ್ಕಿದ ಗಿಡುಗಕೊಕ್ಕುಗಳ
ಹೊಲಸು ಕೊಬ್ಬು ಹಂದಿಗಳ ವಿಕಟಅಟ್ಟಹಾಸ
ಉನ್ಮತ್ತ ಕೇಕೆಕೇಳಿಗಳ ರಣಗುಡುವಕೆಂಡವರ್ಷ
ಚೆಲ್ಲಿಬಿಟ್ಟಿದ್ದಾರೆ ನಿನ್ನ ಬಿಳಿಲಂಗದ ಅಂಗಳದ
ಪಾರಿಜಾತ ನಕ್ಷತ್ರ ಫಳಗುಡುವ ಸ್ಥಳದಲೆಲ್ಲಾ
ಹೊಸಕಿತುಳಿದ ರಂಗುರಂಗಿನ ಕಾಮನಬಿಲ್ಲ
ಕನಸುಗಳೆಳೆಯ ಕುಡಿಗಳ ನವಿಲು ನಗೆಗಳ!
ಭವ್ಯಭವಿತವ್ಯಕ್ಕೆ ಬೊಗಸೆಯೊಡ್ಡಿದ ಜೀವಗಳ
ಹೂತುಬಿಟ್ಟಿದ್ದಾರೆ ಕುದಿ ಡಾಮರಿನಗೋರಿಯಲ್ಲಿ
ಬಂದಿದ್ದೆ ವರುಷದ ಹಿಂದೆ ನಗೆಮೊಗದಚೆಲುವೆ
ಜಿಂಕೆಕುಣಿತದ ಲಾಸ್ಯ ಅಂದು-ಗೆಜ್ಜೆಯ ನಡಿಗೆ
ಅಯ್ಯೋ..ಹೇಗೆಲ್ಲ ಕೊಂದರು ನಿನ್ನನ್ನುಪ್ರತಿಕ್ಷಣ!
ಸೀಳುಬಾಂಬುಗಳು----ಛಿದ್ರಛಿದ್ರ ಬದುಕುಗಳು
ಇಲ್ಲ ಇನ್ನೂನೋಡಲಾರೆ ನಿನ್ನ ಬಿಗಿದಕೊರಳು
ಹರಸಿಬಿಡು ಕಾದಿರುವ ಹೊಸವರುಷದಮಗುವ
ಅವಳಾದರೂ ತರಲಿ ನೀ ಕಳಕೊಂಡ ನಗುವ!
ಹೋಗಿಬಿಡು ಹೋಗಿಬಿಡು ಜರ್ಜರಿತ ವರ್ಷವೇ
ಬರಬೇಡ ಇನ್ನೆಂದೂ..ನೋಡಲಾರೆ ನೋವೇ!
Like ·  · 

Wednesday, November 7, 2012

ಲೇಖಕಿ ಸುಕನ್ಯಾ ಕಳಸ - { ಸಂದರ್ಶನ - AUDIO }

Vocaroo Voice Message  {clik Vocaroo voice to listen-ಕನ್ನಡ ಕವಯತ್ರಿ ,ಹಾಸ್ಯ ಲೇಖಕಿ ಸುಕನ್ಯ ಕಳಸ- ಸಂದರ್ಶಿಸಿದರು -ಶ್ರೀಮತಿ ನಮ್ರತಾ. Kannada Writer Sukanya Kalasa -Interview by Mrs Namrata. Telecasted in SPANDANA TV, Udupi  { Nov-2012 }