stat Counter



Showing posts with label - MURALEEDHARA UPADHYA HIRIADKA. Show all posts
Showing posts with label - MURALEEDHARA UPADHYA HIRIADKA. Show all posts

Friday, July 3, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ " ಹೊಳೆಸಾಲಿನ ಮರ"

ಕ್ರಿಯಾಶೀಲ ಪ್ರತಿಭೆ

’ಹೊಳೆಸಾಲಿನ ಮರ’ ನವ್ಯಕಾವ್ಯದ ಮುಖ್ಯ ಕವಿಗಳಲ್ಲೊಬ್ಬರಾದ ಡಾ.ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಾ ಅವರ ಹೊಸ ಕವನಸಂಕಲನ. ಇಪ್ಪತ್ತೊಂದು ಸ್ವತಂತ್ರ ಕವನಗಳು ಮತ್ತು ಐದು ಭಾಷಾಂತರಗಳು ಈ ಸಂಕಲನದಲ್ಲಿವೆ. ’ಶಿವಮೊಗ್ಗದಲ್ಲಿ ಮಳೆ ೧೯೪೬’ ಈ ಸಂಕಲನದ ಒಳ್ಳೆಯ ಕವನಗಳಲ್ಲೊಂದು .ಬಾಲ್ಯದಲ್ಲಿ ತಾನು ಕಂಡ ಮಳೆಯನ್ನು, ಅದು ತರುವ ದಿಗಿಲು, ಕಂಗಾಲು, ಹಬ್ಬ, ತುಂಗೆಯ ಆವೇಶ, ಖುಷಿಗಳನ್ನು ನೆನಪಿಸಿಕೊಳ್ಳುವ ಕವಿ’ಆಹಾ! ಎಲ್ಲಪ್ಪಾ ಸುರಿದೀತು ಇನ್ನೊಮ್ಮೆ ಅಂಥ ಮಳೆ’ ಎನ್ನುತ್ತಾರೆ. ’ರಥದ ಕಥೆ’, ಎನ್ನುವ ಕವನ ಅಡಿಗರ ’ನನ್ನ ಅವತಾರ’, ಪಾ.ವೆಂ. ಆಚಾರ್ಯರ ’ಅವನು ಬಂದ ಇವನು ಬಂದ’ ಕವಿತೆಗಳೊಡನೆ ಹೋಲಿಸಬಹುದಾದ ಚಿಂತನಪರ ಕವನ.

ಧರ್ಮದ ರಥ ಯಾವ ಮಹಾತ್ಮ ಎಳೆದರೂ ಜಗ್ಗದೆ ನಿಂತಲ್ಲೆ ನಿಂತಿದೆ ಎಂಬ ವ್ಯಂಗ್ಯ ಮಾರ್ಮಿಕವಾಗಿದೆ. ’ಉರುಳಿ ಅರಿವಿನ ಮೋರಿಯಲ್ಲಿ’ ಕವನದಲ್ಲಿ ಕವಿಯು ಚಿತ್ತ ಹೊತ್ತ ಮನುಷ್ಯ ಮನುಷ್ಯನನ್ನೇ ಶೋಷಿಸುವುದನ್ನು ಚಿಂಖ್ತಿಸುತ್ತ ’ಚಿತ್ತವೇ ಶತ್ರುವೇ ನಮಗೆ?" ಎಂದು ಪ್ರಶ್ನಿಸುತ್ತಾರೆ. ಈ ಸಂಕಲನದ ಕವನಗಳ ನಿರೂಪಕ ಮಧ್ಯ ವಯಸ್ಸಿನಲ್ಲಿದ್ದಾನೆ, ಬಾಳಿನ ಸಿಹಿ-ಕಹಿ ಅನುಭವಗಳಿಂದ ಪಕ್ವಗೊಂಡಿದ್ದಾನೆ. ’ಹಳಿಯಬೇಡ ಕಾಮವನ್ನು ಹಾಗೆ ಹೀಗೆಂದು’ ಎನ್ನುತ್ತ ಕಾಮಕ್ಕೆ ಕೃತಜ್ಞತೆ ಸಲ್ಲಿಸುತ್ತಾನೆ. ’ಯಾರು ಬಂದರೆ ತಾನೆ ಏನು?’ ಎಂದು ಮೃತ್ಯುವನ್ನು ಕುರಿತು ನಿರ್ಲಿಪ್ತನಾಗಿ ಚಿಂತಿಸುತ್ತಾನೆ. ಇಲ್ಲಿನ ನಿರೂಪಕನ ಅತೃಪ್ತಿಗೆ ಒಂದು ಕಾರಣ ಬದುಕಿನ ಯಾಂತ್ರಿಕತೆ- "ತುಂಬು ತಿಂಗಳ ಬದುಕು| ಈಗ ಬರಿ ತಂಗಳು ನಿನ್ನೆ ಮೊನ್ನೆಯ ಇವತ್ತು ನಿನ್ನೆಯ್ |ನಾಳೆ ಇಂದಿನ ಕಾರ್ಬನ್ ಕಾಪಿ", "ಸಾರ ತೀರಿದ ಬಾಳು ತುರಿದ ತಿರುಳಿನ ಕರಟ್" ಎನಿಸುತ್ತದೆ. ಬದುಕಿನ ಸಾಧನೆಗಳನ್ನು ಕುರಿತ ಅತೃಪ್ತಿ ’ಸಂಕ್ರಾಂತಿ’ ಕವನದಲ್ಲಿ ಕಾಣಿಸುತ್ತದೆ. ತನ್ನ ಸಾಧನೆಗಳಿಗೆ ತಕ್ಕ ಮನ್ನಣೆ ಸಿಗದಿದ್ದರೂ ತಾಳ್ಮೆಯಿಂದ ಕಾಯಲು ಇಲ್ಲಿನ ನಿರೂಪಕ ನಿರ್ಧರಿಸುತ್ತಾನೆ-

"ಮಗೂ
ಈ ಅಬ್ಬರದಲಿ ನಿನ್ನ ಹಂಸಧ್ವನಿ
ಕೇಳುತ್ತದೆ ಹೇಳು ಯಾರ ಕಿವಿಗೆ?
ಗಂಟೆ ಬಾರಿಸುತಿರಲು ತಂತಿ ಮಿಂಚಿದ ಗಾನ
ಕಂತಿ ಹೋಗದೆ ಹೇಳು ಮೊರೆತದೊಳಗೆ?
ಆದರೂ ಚಿಂತಿಲ್ಲ
ಸರದಿಗಳು ಉಂಟಲ್ಲ!
ನುಡಿತವನ್ನೇ ಬಿಟ್ಟುಕೊಡುವ ಗೋಜಿಲ್ಲ
ನಡೆದಿರಲಿ ಸಾಧನೆ ತನ್ನಷ್ಟಕ್ಕೆ ಒಳಗೊಳಗೆ
ತಿಳಿದಿರಲಿ ಜೊತೆಗೆ
ಮೆಚ್ಚಿಗೆ ನಿರೀಕ್ಷಿಸಲು ನಿನ್ನ ಕಲೆಗೆ
ಇದಲ್ಲ ತಕ್ಕ ಗಳಿಗೆ."

ಟಿ.ಎಸ್.ಎಲಿಯಟ್ ನ ’ವೇಸ್ತ್ ಲ್ಯಾಂಡ್’ ಕವನದ ಎರಡನೆಯ ಭಾಗ ’ಚದುರಂಗದಾಟ’, ಯೇಟ್ಸ್ ನ, ’ಹಂಸಗಳ ಹಿಂಡು’ ಮತ್ತು ’ಮಗಳಿಗಾಗಿ ಪಾರ್ಥನೆ’ ಪ್ರಾಚೀನ ಗ್ರೀಕ್ ಕವಯತ್ರಿ ಸ್ಯಾಫೊ ಬರೆದ ’ಆಫ್ರೋದಿತೆ’, ಮೋತಿಲಾಲ್ ಜೋಸ್ವಾನಿಯವರ ಸಿಂಧಿ ಕವನ ’ಪಕ್ಷಿ ತೀರ್ಥ’-ಇವುಗಳನ್ನು ಲಕ್ಷ್ಮೀನಾರಾಯಣ ಭಟ್ಟರು ಭಾಷಾಂತರಿಸಿದ್ದಾರೆ. ಇವುಗಳು ಸೃಜನಶೀಲ ಅನುವಾದಗಳಾಗಿವೆ.
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ನವ್ಯಕಾವ್ಯದ ಜೊತೆಗೆ ಭಾವಗೀತೆಗಳನ್ನೂ ಬರೆದ ಕವಿ. ಅವರು ಎರಡು ದೋಣೆಗಳಲ್ಲಿ ಕಾಲಿಟ್ಟು ಜಯಿಸಿದ್ದಾರೆ. ’ಹೊಳೆಸಾಲಿನ ಮರ’ ಕನ್ನಡದ ನವ್ಯಕಾವ್ಯ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಕಾವ್ಯಪ್ರತಿಭೆ ಎರಡೂ ಕ್ರಿಯಾಶೀಲವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸುವ ಸಂಕಲನ.
ಮುರಳೀಧರ ಉಪಾಧ್ಯ ಹಿರಿಯಡಕ
(ತರಂಗ-ಅವಲೋಕನ ೧೯೮೮)

Wednesday, August 7, 2019

ಮುರಳೀಧರ ಉಪಾಧ್ಯ ಹಿರಿಯಡಕ - ಪುಸ್ತಕ ಪ್ರತಿಷ್ಠೆ - 2018 -KANNADA BEST BOOKS -2018

(kannada BEST Books-2018 ಪುಸ್ತಕ ಪ್ರತಿಷ್ಠೆ-2018 ಓದುಗರಿಗೆ, ಸಾಹಿತ್ಯ ವಿದ್ಯಾಥಿ೯ಗಳಿಗೆ ಸಂಶೋಧಕರಿಗೆ ಉಪಯುಕ್ತ ಮಾಹಿತಿ. ನಾನು ಓದಿದ, ನೋಡಿದ ಪತ್ರಿಕೆಗಳಲ್ಲಿ ಗಮನಿಸಿದ ಅಸಾಧಾರಣ ಪುಸ್ತಕಗಳ ಮಾಹಿತಿ ಇಲ್ಲಿದೆ : ಯಾವುದಾದರೂ ಒಳ್ಳೆಯ ಪುಸ್ತಕ ಈ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ, ಅವರ ಮಾಹಿತಿ ಮುಖಪುಟವನ್ನು ದಯವಿಟ್ಟು ಕಳುಹಿಸಿ -muraleedhara upadhya@gmali.com- ಮುರಳೀಧರ ಉಪಾಧ್ಯ ಹಿರಿಯಡಕ.) 

   ಕಾವ್ಯ -2018

1. ಸವಿತಾ ನಾಗಭೂಷಣ- ದೇವರಿಗೆ ಹೋದೆವು.

2.ಮಾಲತಿ ಪಟ್ಟಣ ಶೆಟ್ಟಿ- ಬಾಳೆಂಬ ವ್ರತ.

3.ರಾಜೇಂದ್ರ ಪ್ರಸಾದ್- ಬ್ರೆಕ್ಟ ಪರಿಣಾಮ.

4.ರವಿಶಂಕರ ಒಡ್ಡಂ ಬೆಟ್ಟು ಸಮಗ್ರ ಸಾಹಿತ್ಯ (ನು) ಜ್ಯೋತಿ ಮಹದೇವ, ಕವಿತಾ ಅಡೂರು.

5.ಎಚ್.ದುಂಡಿರಾಜ್-ಮಾದ೯ನಿ.

6.ಜಿ.ಎ.ಬಸವರಾಜ-ಬೆಳಕಿನ ಬೆರಗು

7.ದೋಡ್ಡರಂಗೇ ಗೌಡ-ತೂಗಿ ತೂನೆದಾವೋ ತೆನೆಗಳು.

8.ಕುತ್ಯಾಳ ನಾಗಪ್ಪಗೌಡ-ಮರದ ಎದುರು  ಪಾಮರ

9.ಜ್ಯೋತಿ ಗುರುಪ್ರಸಾದ್-ಜಟಾಯು ಪಕ್ಷಿಗೆ ಶ್ರದ್ಧಾಂಜಲಿ.

10.ಚಂದ್ರಶೇಖರ  ಪ್ರಸಾದ್-ಅರಿವು ಅಕ್ಷರದಾಚೆ

11.ಮಾಧವಿ ಭಂಡಾರಿ ಕೆರೆಕೋಣ-ಮೌನಗಭ೯ದ ಒಡಲು.

12.ಪೂಣಿ೯ಮಾ ಸುರೇಶ-ಶಬ್ದ ಸೀಮೆಯ ಆಚೆ.

13.ಎಚ್.ಎಸ್.ರಮೇಶ್ -ಅದರ ನಂತರ.

14.ರಮೇಶ್ ಗಬ್ಬೂರ್-ಗಬ್ಬೂರು ಗಜಲ್.

15.ಮ್ಯಲಾರಪ್ಪ ಬೂದಿಹಾಳ-ದಾಟಬೇಡ ಹೊಸ್ತಿಲು

16.ಭುವನಾ ಹಿರೇಮಠ-ಟ್ರಯಲ್ ರೂಮಿನ ಅಪ್ಸರೆಯರು.

17.ಭಾರತಿ.ಬಿ.ವಿ-ಕಿಚನ್ ಕವಿತೆಗಳು.

18.ನಾಗೇಶ್.ಜೆ.ನಾಯಕ್-ಒಡಲ ಕಿಚ್ಚನ ಹಿಲಾಲು ಹಿಡಿದು.

19.ಆರತಿ.ಎಚ್.ಎನ್-ಸ್ಪೋಕಿಂಗ್ ಝೋನ್

20.ರಜಿನಿ ನಾಯ್ಕಪು-ಒಂದರೊಳಗೊಂದು.

21.ರೇಣುಕಾ ರಮಾನಂದ- ಮೀನು ಪೇಟೆಯ ತಿರುವು.

22.ಮುದ್ದು ಮೂಡುಬೆಳ್ಳಿ-ಭಾವಗೂಂದು ಯಾನ.

23.ಜಿ. ಈಶ್ವರ ಭಟ್-ಒಡಲು/ಪರಿಚಯ ಲಹರಿ.

24.ಎಸ್.ಅಂಬರಿಶ್  ಪೂಜಾರಿ-ಪರಿವತ೯ನೆ.

25.ಚಂದ್ರಶೇಖರ ತಾಳ್ಯ-ಮೌನ ಮಾತಿನ ಸದ್ದು.

                                                       ಸಣ್ಣಕತೆ-2018

1.ಕ.ವಿ.ತಿರುಮಲೇಶ-ಅಪರೂಪದ ಕತೆಗಳು.

2.ಉದ್ಯಾವರ ಮಾಧವಾಚಾರ್ಯರ ಸಮಗ್ರ ಕತೆಗಳು (ನು)-ಬಿ. ಜನಾರ್ದನ ಭಟ್.

3.ಟಿ.ಎಸ್.ಗೊರವರ-ಮಲ್ಲಿಗೆಹೂವಿನ ಸಖ.

4.ಗಿರಿಜಾ ಹೋಡೆ ಗಾಂವ್ಕರ್-ನತ್ತು

5.ಎಚ್.ಎಸ್.ಮಂಜುನಾಥ್-ಇಂಡಿರಾನ್ ಮತ್ತು ಇತರೆ ಕತೆಗಳು.

6.ಹಗೇವು (ರಾಯಚೂರು ಜಿಲ್ಲಾ ಕ.ಸಾ.ಪ.)

7.ವಿಂಗ್ ಕಮಾಂಡರ್ ಬಿ.ಎಸ್.ಸುದಶ೯ನ್-ಹಸಿರು ಹಂಪೆ ಜನಸಾಮಾನ್ಯರ ಕತೆಗಳು.

8.ಕೆ.ಎನ್. ಗಣೇಶಯ್ಯ -ಆರ್ಯ ವೀರ್ಯ

9.ಆರ್.ರಾಮಚಂದ್ರ-ಕಥಾವತಾರ.

10.ಆಶಾರಘು-ಬೊಗಸೆಯಲ್ಲಿ ಕತೆಗಳು.

11.ಅಂಬರೀಶ ಪೂಜಾರಿ-ಪರಿವತ೯ನೆ.

12.ಪಾಲಹಳ್ಳಿ ವಿಶ್ವನಾಥ-ಅಲ್ಪಸ್ವಲ್ಪ ವುಢ್ ಹೌಸ್ ಮತ್ತು ಇತರ ಕತೆಗಳು.

13.ಬೆಳಗೋಡು ರಮೇಶ  ಭಟ್ --ಅಮ್ಮನ ಚಿನ್ನದ ಸಾಲು ಮಾವಿನ ಮರ.

14.ವಿಜಯಾ ಶ್ರೀಧರ್-ಸಮಗ್ರ ಕತೆಗಳು

15.ಸ್ವಾಮಿ ಪೊನ್ನಾಟಿ-ಧೂಪದ ಮಕ್ಕಳು.

16.ಹೇಮಾ ಸದಾನಂದ ಅಪಿನ್-ಅವರು ದೇವರಾಗಿದ್ದಾರೆ.

17.ಡಾ| ಪದ್ಮಿನಿ ನಾಗರಾಜ್-ಸಮಾಧಿ ಮೇಲಣ ಹೂ.

18.ಕೆ.ಭುವನೇಶ್ವರಿ ಮೊಕಾ-ಅಂತರಾಳ.

19.ನಿಡಸಾಲೆ ಪುಟ್ಟಸ್ವಾಮಯ್ಯ-ಬಿಸಿಲುಗುದುರೆ ಮತ್ತು ಇತರ ಕತೆಗಳು

20.ಡಾ| ಅಜಿತ್ ಹೆಗಡೆ ಹರೀಶ-ಪರಿಧಾವಿ.

21.ಭಾಸ್ಕರ ಹೆಗಡೆ- ಮೀಸೆ ಮಾವ

22.ಕೆ.ಪಿ.ಸತ್ಯನಾರಾಯಣ-ಅಮೂಲ್ಯ ಉಡುಗೊರೆ.

23.ಗುರುಪ್ರಸಾದ ಕಂಬಲಗತಿ-ಗೋವಿನ  ಜಾಡು.

24.ವಲ್ಲಿವಗ್ಗ-ಹೆಗಲ ಶಿಲುಬೆ.

25.ಶೇಷಾದ್ರಿ ಕಿನಾರ-ಅಂತವಾರ.

26.ಜಯಶ್ರಿ  ಕಾಸರವಳ್ಳಿ  ---ಚಿತ್ರಗುಪ್ತನ ಸನ್ನಿಧಿಯಲ್ಲಿ.


                                       ಕಾದಂಬರಿ-2018

1.ರಮೇಶ ಬಾಬು-ಟೈರ್  ಸಾಯಿ

2.ಮಂಜುನಾಥ.ವಿ.ಎಮ್-ಅಸ್ಪೃಶ್ಯ ಗುಲಾಬಿ.

3.ವಿ.ಗಾಯತ್ರಿ-ತುಂಗಾ

4.ಅಮರೇಂದ್ರ ಹೊಲ್ಲಂಬಳ್ಳಿ-ಕಾಯ.

5.ಸಹನಾ ವಿಜಯ ಕುಮಾರ್-ಕಶೀರ.

6.ಕೇಶವ ಮಳಗಿ-ಒಂದೇ ಗುರಿ ಬೇರೆ ಹಾದಿ.

7.ತೇಜಸ್ವಿನಿ ಹೆಗಡೆ-ಹಂಸಯಾನ.

8.ಬಿ.ಎಲ್.ವೇಣು-ಹಗಲು ಕಗ್ಗೊಲೆ ಮಾನ್ಯ ರಾಜಾ ಮತಿ ತಿ ಮ್ಮಣ್ಣನಾಯಕ.

9.ಎಂ.ಆರ್.ದತ್ತಾತ್ರಿ-ತಾರಾಬಾಯಿಯ ಪತ್ರ.

10.ನುಮಂಗಲಾ-ಅಗೆದಷ್ಟೂ ನಕ್ಷತ್ರ.

                                                                ನಾಟಕ-2018

1.ಗಿರೀಶ ಕಾನಾ೯ಡ್-ರಾಕ್ಷಸ ತಂಗಡಿ.

2.ಬಿ.ಆರ್.ಲಕ್ಷಣರಾವ್-ಮೂರು ರಂಗ ರೂಪಾಂತರಗಳು.

3.ಶಶಿರಾಜ ಕಾವೂರ್-ವೈದ್ಧೊ ನಾರಾಯಣೋ ಹರಿಃ.

Tuesday, October 9, 2018

ಮುರಳೀಧರ ಉಪಾಧ್ಯ ಹಿರಿಯಡಕ - -ಅಂತರ್ಜಾಲದಲ್ಲಿ ಕನ್ನಡ ರಂಗಭೂಮಿ

 ಸರಕಾರಿ ಕಾಲೇಜು , ಕಾಸರಗೋಡು -Government College Kasaragod ,

ವಿಚಾರಗೋಷ್ಠಿ - ಕನ್ನಡ ನಾಟಕ - ವಿಸ್ತು - ವಿನ್ಯಾಸ

ಅಕ್ಟೋಬರ್ -10/ 11 / 2018

-ಅಂತರ್ಜಾಲದಲ್ಲಿ ಕನ್ನಡ ರಂಗಭೂಮಿ

-ಮುರಳೀಧರ ಉಪಾಧ್ಯ ಹಿರಿಯಡಕ

11- 10- 2018 --- 11am

Kannada Theatre in Internet

 - by-Pro. Muraleedhara Upadhya Hirtiadka

ಈ  ಉಪನ್ಯಾಸದಲ್ಲಿ ನಾನು ಉಲ್ಲೀಖಿಸಿದ ವೀಡಿಯೋ  link ಗಳು  ಈ ಬ್ಲಾಗ್ ನಲ್ಲಿವೆ --------------------------

Tuesday, June 28, 2016

ಮುರಳೀಧರ ಉಪಾಧ್ಯ ಹಿರಿಯಡಕ { Audio } ರವಿಶಂಕರ ಒಡ್ಡಂಬೆಟ್ಟು ಅವರ ಕವಿತೆಗಳು

Muralaeedhara Upadhya -Kalaka Award 2014 Uploaded by muraleedhara.upadhya at Your Listen

ರವಿಶಂಕರ ಒಡ್ಡಂಬೆಟ್ಟು ಮತ್ತು  ಕವಿತಾ ನರೇಶ್ ಮಂಚಿ ಅವರಿಗೆ ಕಲಕ {  Kadri Lions Club Award }  ಪ್ರಶಸ್ತಿ { 2014 }  ನೀಡುವ ಸಮಾರಂಭದಲ್ಲಿ ನಾನು ಮಾಡಿದ ಭಾಷಣ
Muraleedhara Upadhya Hiriadka { Audio } - KALAKA { Kadri Lions Club  } Award to Ravishankar Oddambettu

Saturday, April 4, 2015

5 --4-2015 ರಂದು ಬೆಳಿಗ್ಗೆ 9.30 ಕ್ಕೆ -ETVnews -ಸೈಡ್ ವಿಂಗ್ಸ್ ನಲ್ಲಿ ಬ್ಲಾಗ್ಗರ್ ಮುರಳೀಧರ ಉಪಾಧ್ಯ

’ಚಕ್ರರತ್ನ’ ನಾಟಕದ ಒಂದು ದೃಶ್ಯ, ’ಅವಿರತ’ ತಂಡದ ಬಗ್ಗೆ, ಮಕ್ಕಳ ಶಿಕ್ಷಣದಲ್ಲಿ, ಸಾಹಿತ್ಯ, ಕಲೆ, ರಂಗ ಚಟುವಟಿಕೆಗಳಲ್ಲಿ ’ಅವಿರತ’ ತೊಡಗಿಕೊಂಡ ಬಗ್ಗೆ, ಅದರ ಮುಂದಿನ ಯೋಜನೆಗಳ ಬಗ್ಗೆ ರೋಹಿತ್ ಜೊತೆ ಒಂದು ಚಿಟ್ ಚಾಟ್, ರಂಗಭೂಮಿಯನ್ನು, ಮದುಮಗಳ ಹೆಜ್ಜೆ ಗುರುತನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ಸುರೇಶ್, ಎಂ ಎಸ್ ಶ್ರೀರಾಂ ಜೊತೆ ಬುಕ್ ಟಾಕ್, ಮುರಳಿಧರ ಉಪಾಧ್ಯ ಬ್ಲಾಗ್ ನನ್ನ ಜೊತೆ ಈ ಸಲದ ಸೈಡ್ ವಿಂಗ್ ನಲ್ಲಿ. ನಾಳೆ ಬೆಳಗ್ಗೆ ETV News - Kannada ಸೈಡ್ ವಿಂಗ್ ಕಾರ್ಯಕ್ರಮದಲ್ಲಿ ನನ್ನ ಜೊತೆ. ನಾಳೆ ಬೆಳಗ್ಗೆ ೯.೩೦ ಗೆ ಕಾರ್ಯಕ್ರಮ, ಮತ್ತೆ ಮಂಗಳವಾರ ಬೆಳಗ್ಗೆ ೮ಕ್ಕೆ ರಿಪೀಟ್ ಟೆಲಿಕಾಸ್ಟ್! (ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ) ಅಕಸ್ಮಾತ್ ನಿಮ್ಮ ಮನೆ ಟಿವಿಯಲ್ಲಿ ಈಟಿವಿ ನ್ಯೂಸ್ ಬರದಿದ್ದರೆ ಲೈವ್ ಸ್ಟ್ರೀಮಿಂಗ್ ಗೆ ಈ ಲಿಂಕನ್ನು ಕ್ಲಿಕ್ಕಿಸಿ (ಇದು ಲೈವ್ ಸ್ಟ್ರಿಮ್ ಆದ್ದರಿಂದ ಕಾರ್ಯಕ್ರಮದ ಪ್ರಸಾರದ ವೇಳೆಯಲ್ಲಿ ಮಾತ್ರ ಈ ಲಿಂಕಿನಲ್ಲಿ ಅದನ್ನು ನೋಡಬಹುದು) : http://m.news18.com/live-tv/etv-kannada
 -ಸಂಧ್ಯಾ ರಾಣಿ