stat CounterWednesday, August 29, 2018

ಪ್ರಸನ್ನ - ‘ಉಗ್ರ ಧರ್ಮಾಂಧ ದೈತ್ಯರು ಇರದಿರುತ್ತಿದ್ದರೆ...’

ಎಮ್. ಎಸ್. ಸತ್ಯು { ಸಂದರ್ಶನ } Director M S Sathyu In Shubhodaya Karnataka | DD Chandana

ಬಿ. ಆರ್‍. ಛಾಯಾ --- ನನ್ನಿಯನೊಲುಮೆ - Naniniyanolume Bhavageethe By B.R.Chaya

ಮಂಡ್ಯ: ಕುವೆಂಪು ಸಾಂಸ್ಕೃತಿಕ ಪ್ರಶಸ್ತಿಗೆ ಆರು ಮಂದಿ ಆಯ್ಕೆ

ಚೇತನಾ ತೀರ್ಥ ಹಳ್ಲಿ - ಹಿಂದೂ ಕೋರ್ಟ್: ಹಿಮ್ಮುಖ ಚಲನೆಗೆ ಮತ್ತೊಂದು ಹೆಜ್ಜೆ

ಉಷಾ ಪ್ರೀತಮ್ ಮಗ್ಗುಲ - ‘ಊರಿಗೆ ಹೋಗಲು ಹೆದರಿಕೆ ಆಗುತ್ತೆ’ ಅಂತಾರೆ ಬದುಕುಳಿದವರು

Tuesday, August 28, 2018

ಬಿ. ಎ. ಮೊಹಿದೀನ್ -- ನಿನ್ನೊಳಗಿನ ನಾನು

ಜೋರು ಮಳೆಯಲ್ಲಿ ಭಾರವಾದ ನೆತ್ತಿ ಮೇಲಿನ ಜಲಮೂಲಗಳು: ಕೆರೆಗಳಿಂದ ಗುಡ್ಡ ಕುಸಿತ?

ಮಧ್ಯರಾತ್ರಿ ನಾಟಕೀಯ ಬೆಳವಣಿಗೆ: ವಕೀಲೆ ಸುಧಾ ಭಾರದ್ವಾಜ್ ಬಂಧನಕ್ಕೆ ತಡೆಯಾಜ್ಞೆ

ಚಳವಳಿಗಾರರ ಬಂಧನ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ಸುಪ್ರಿಂಕೋರ್ಟ್ ಅಸ್ತು

ಮೋದಿ ಹತ್ಯೆಗೆ ಸಂಚು: ಕವಿ ವರವರರಾವ್‌ ಬಂಧನ, ವ್ಯಾಪಕ ಟೀಕೆ

ಮಿತ್ರಾ ವೆಂಕಟರಾಜ - : ಬೊಳ್ಳದ ಸಂಕ | Katheya Jothe : Bollada Sanka

ಟಿ. ವಿ. ವೆಂಕಟಾಚಲ ಶಾಸ್ತ್ರಿ -- Dr.T. V. Venkatachala Sastry in Shubhodaya Karnataka | DD Chandana

ಗೊಂಡಿ ಭಾಷೆಯಲ್ಲಿ - The Wire Bulletin in Gondi

ಜಿ. ಎನ್. ಅಶೋಕವರ್ಧನ -ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ

ಭೈರಪ್ಪ ಆವರಣ: ಖ್ಯಾತ ಕಾದಂಬರಿಕಾರ ಎಸ್ ಲ್ ಭೈರಪ್ಪ ವಿಶೇಷ ಕಾರ್ಯಕ್ರಮ - ಭಾಗ - ೦೧

Monday, August 27, 2018

ಕವಿ ಅಂದರೆ ಗೂಗಲ್ ಅಲ್ಲ -

Image may contain: 1 person, smiling

ನನೆಗುದಿಗೆ ಬಿದ್ದ ಗಂಗಾ ಶುದ್ಧೀಕರಣ ಯೋಜನೆ; ಇನ್ನಷ್ಟು ಮಲಿನವಾದ ನದಿ

On The Translation of Kumarvyasa Bharata | ಭಾಷೆಯ ಗಡಿ ದಾಟಿದ ಗದುಗಿನ ಭಾರತ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು - Official Trailer | Anant Nag | Ris...

ಉತ್ತರ ಕನ್ನಡದ ಜೋಯಿಡಾ - ಕಾಳಿ ನದಿಯ ಹುಟ್ಟೂರು

ಕರ್ನಾಟಕ ಸಾಹಿತ್ಯ ಅಕಾಡೆಮಿ --ಶಾಂತರಸ ಅವರ ಗಜಲ್ ಸಾಹಿತ್ಯ ಅವಲೋಕನ

No automatic alt text available.

ರಾಜೇಂದ್ರ ಪ್ರಸಾದ್ - ಬೊಳುವಾರು ಅವರ ಕಾದಂಬರಿ -- " ಉಮ್ಮಾ "ಇಸ್ಲಾಂ ಭಾರತಕ್ಕೆ ಬಂದು ಹತ್ತತ್ತಿರ ಒಂದೂಕಾಲು ಸಾವಿರ ವರ್ಷಗಳಾಗುತ್ತಿವೆ. ಈ ನೆಲದ ಸಂಸ್ಕೃತಿ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಅಡುಗೆಯಾದಿಯಾಗಿ ಸರ್ವಕ್ಷೇತ್ರಗಳಲ್ಲೂ ಇಸ್ಲಾಂ/ಪರ್ಷಿಯನ್ ನ ಪ್ರಭಾವಗಳನ್ನು ಗುರುತಿಸಬಹುದಾಗಿದೆ. ಆದರೆ ಈ ನೆಲದ ಇಸ್ಲಾಮೇತರರಿಗೆ 'ಇಸ್ಲಾಂ' ಕುರಿತು ಎಷ್ಟು ತಿಳಿದಿದೆಯೆಂದು ಹುಡುಕಿದರೆ ಉತ್ತರ ಬಹಳ ನಿರಾಶದಾಯಕವಾಗಿದೆ. ಭಾರತೀಯ ಪುರಾಣ, ಕಾವ್ಯಗಳು ಬಗ್ಗೆ ಎಲ್ಲಾ ಮತಧರ್ಮದವರೂ ಮಾತಾಡಬಲ್ಲರು.. ರಾಮನ ಬಗ್ಗೆ‌, ಕೃಷ್ಣನ‌ ಬಗ್ಗೆ, ಅವರ‌ ಹೆಂಡತಿಯರ ಬಗ್ಗೆ ; ಆದರೆ ಪೈಗಂಬರ್ ಯಾರು ಅವರ ಹೆಂಡತಿಯರಾರು? ಎಂದು ಕೇಳಿದರೆ ನಮಗೇ ಗೊತ್ತೇ ಇಲ್ಲ. ಇಸ್ಲಾಂ‌ ಇತಿಹಾಸ ನಮಗೆ ಗೊತ್ತಿಲ್ಲ, ಅದನ್ನು ಗೊತ್ತು ಮಾಡಿಕೊಳ್ಳುವುದು ಯಾರಿಗೂ ಬೇಕಾಗಿಲ್ಲ.‌ ಎನ್ನುವ ಮಟ್ಟಿಗೆ ಸಮಾಜವನ್ನು ಭ್ರಷ್ಟಗೊಳಿಸಿ, ಅಮಾನತು ಮಾಡಿಬಿಟ್ಟಿದ್ದೇವೆ.
ಕನ್ನಡದಲ್ಲಂತೂ ಇಸ್ಲಾಂನ ಇತಿಹಾಸ ಕುರಿತಂತೆ ಸೃಜನಶೀಲ ಕೃತಿ ಬಂದಿದ್ದೇ ಇಲ್ಲ. ಯಾಕಂದರೆ ಅಷ್ಟು ಸ್ವಾತಂತ್ರ್ಯ ತೆಗೆದುಕೊಂಡು ಬರೆವ ಲೇಖಕ ನಮ್ಮ‌ ಭಾಷೆಗಷ್ಟೇ ಅಲ್ಲ, ಅನ್ಯ ಭಾಷೆಗಳಲ್ಲೂ ಇಲ್ಲ. ಆದರೆ ಅಂತಹ‌ ಒಂದು ಸಾಹಸವನ್ನು 'ಓದಿರಿ' ಕಾದಂಬರಿಯ ಮೂಲಕ ಮಾಡಿದ್ದು ಬೊಳುವಾರು ಮಹಮದ್ ಕುಂಞ ಅವರು. ಆದಾದ ನಂತರ ಇದೀಗ ' ಉಮ್ಮಾ ' ಮೂಲಕ ಪ್ರವಾದಿ ಮಹಮ್ಮದರ ಕುಟುಂಬದ ಹೆಣ್ಣುಮಕ್ಕಳು ಕಂಡ ಪ್ರವಾದಿಯವರ ಬಗ್ಗೆ/ ಇಸ್ಲಾಂ‌ ಬಗ್ಗೆ , ಅದು ಬೆಳೆದು ಬಂದ ಬಗ್ಗೆ ಬರೆದಿದ್ದಾರೆ. ಅಪಾರ ಓದಿನ- ಅಧ್ಯಯನದ ಶ್ರಮ ಈ ಕಾದಂಬರಿ‌ ಹಿಂದೆ ಇದೆ. ಒಂದೂವರೆ ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಕುರಿತು ಅದು ವ್ಯಕ್ತಿಗತ ನೆಲೆಯಲ್ಲಿ ಕಾವ್ಯದಂತೆ ಕಟ್ಟುತ್ತಾ ಹೋಗುವುದು ಸವಾಲಿನ- ಸಾಹಸದ ಕೆಲಸ. ತೀರಾ ವಿಭಿನ್ನವಾದ ದೇಶ-ಕಾಲ ಎರಡರಲ್ಲೂ ಬದುಕುತ್ತಿರುವ ಹೊತ್ತಿನಲ್ಲಿ ಆವತ್ತಿನ ದೇಶಕಾಲವನ್ನು ಮುಂದಿಟ್ಟುಕೊಟ್ಟು ಭೌಗೋಳಿಕ ವಿವರಗಳು, ವ್ಯಕ್ತಿಗಳು, ಸಂದರ್ಭ ಮುಂತಾದವನ್ನು ಕಟ್ಟೋದು ಅಂತಿಂತಹದಲ್ಲ!‌ ಪ್ರತಿ ಸಂದರ್ಭಕ್ಕೂ ಅದರದೇ ವಿವರಣೆಗಳಿವೆ. ಅದರದೇ ಐತಿಹಾಸಿಕ ಪುರಾವೆಗಳೂ ಇವೆ. ಅದಾಗ್ಯೂ ಲೇಖಕರು ಇದನ್ನು ಕಲ್ಪನೆ ಎನ್ನುತ್ತಾರೆ. ಓದುಗನಿಗೆ ಯಾವುದು ವಾಸ್ತವ ಯಾವುದು ಕಲ್ಪನೆ ಎಂದು ಕಂಡುಹಿಡಿಯುವುದು ಕಷ್ಟವಿಲ್ಲ.‌ ಮತ್ತು ಕಲ್ಪನೆಯ ಭಾಗವಿಲ್ಲದೆ ಇತಿಹಾಸವನ್ನು ಬರೆಯಲಾಗದು.
ಉಮ್ಮಾ - ಕಾದಂಬರಿಗೆ ಇರುವ ವಿಶೇಷ 'ಹೆಣ್ಣು'. ಪ್ರವಾದಿಯವರ ಹೆಂಡತಿಯರು, ಮಕ್ಕಳು, ಸಂಬಂಧಿಗಳು, ಕೆಲಸದವರು ಹೀಗೆ ಸಾಲುಸಾಲು ಮಹಿಳೆಯರ ಪಟ್ಟಿಯೇ ಈ ಕಾದಂಬರಿಯ ಉದ್ದಕೂ ನಮಗೆ ಸಿಗುತ್ತಾ ಹೋಗುತ್ತದೆ. ಈ ಒಂದೊಂದು ಪಾತ್ರವೂ 'ಪ್ರವಾದಿಯವರ ಜೀವನದಲ್ಲಿ ಎಂತಹ ಮುಖ್ಯಪಾತ್ರವನ್ನು ವಹಿಸಿದೆ' ಎಂಬುದನ್ನು ಓದಿಯೇ ತಿಳಿಯಬೇಕು. ಅರೇಬಿಕ್ ಭಾಷೆ ಮತ್ತು ಪರಿಸರಕ್ಕೆ ದೂರದಲ್ಲಿರುವ ನಮಗೆ ವ್ಯಕ್ತಿಗತ ಹೆಸರುಗಳನ್ನು, ಭೌಗೋಳಿಕ ಪ್ರದೇಶಗಳ ಹೆಸರುಗಳನ್ನು ಮೊದಲ ಓದಿಗೆ ನೆನೆಪಿಟ್ಟುಕೊಳ್ಳುವುದು ಕಷ್ಟ. ಮೊದಲೇ ಹೇಳಿದಂತೆ ಈ ಇಡೀ ಪರಿಸರವೇ ನಮಗೆ ಹೊಸದು. ಮರಳು, ಬಿಸಿಗಾಳಿ, ಅಡುಗೆ, ಉಡುಗೆ, ಹೆಸರು, ಸಂಪ್ರದಾಯಗಳು, ಹೋರಾಟಗಳು ಎಲ್ಲವೂ ನಮಗೆ ಹೊಸವು. ಯಾಕಂದರೆ ಈ ಒಂದೂಕಾಲು ಸಾವಿರ ವರ್ಷಗಳಲ್ಲಿ ಇಷ್ಟು ಅಚ್ಚಕಟ್ಟಾದ ಪ್ರಯತ್ನವು ನಡೆದಿರಲಿಕ್ಕಿಲ್ಲ. ಅದರಲ್ಲೂ ಇಸ್ಲಾಂ ಮತಸ್ಥರು ಹೆಣ್ಣುಮಕ್ಕಳ ಮೂಲಕ ಪ್ರವಾದಿಯವರ ಜೀವನವನ್ನು ನೋಡುವ ಪಯತ್ನ ಮಾಡುವುದು ಕಷ್ಟಸಾಧ್ಯ! ಅದಕ್ಕಿರುವ ಕಾರಣಗಳು ನಮಗೆಲ್ಲಾ ಗೊತ್ತಿರುವಂತವೇ ಆಗಿವೆ.
ಕನ್ನಡ ಅಥವಾ ಸಂಸ್ಕೃತ ಮಹಾಕಾವ್ಯಗಳಿಗಿರುವಂತೆ ಈ ಕಥನಕ್ಕೆ ' ಕಥನಕಾರನ ಮೂಲಕ ಸಿಗುವ ಪ್ರವೇಶಿಕೆ ಕೊನೆಯಲ್ಲಿ ಅವನ‌ ಮೂಲಕವೇ ಮುಕ್ತಾಯವಾಗುತ್ತದೆ.‌ ಇಡೀ ಕಥನವನ್ನು ಇತಿಹಾಸದ ಪುಟಗಳನ್ನು ಆಯ್ದು ನಿಧಾನವಾಗಿ ಸಜ್ಜುಗೊಳಿಸಿದ ಸಜ್ಜಿಗೆಯಂತೆ ನಿರೂಪಿಸಲಾಗಿದೆ. ಪ್ರತಿಭಾಗವೂ ಒಬ್ಬೊಬ್ಬ ಹೆಣ್ಣುಮಗಳ ಮೂಲಕ ಕಥನವನ್ನು ಕಟ್ಟಿಕೊಂಡಿದೆ. ಅವರೆಲ್ಲಾ ಮಾತಾಡಿದಂತೆಯೇ ಕಥನ ಸಾಗುತ್ತಲೇ ಇರುತ್ತದೆ.
ಸಾಹಿತ್ಯಕ ಮಹತ್ವ ಮತ್ತು ವಿಮರ್ಶೆಯ ದೃಷ್ಟಿಯಿಂದ ಹೇಳಬೇಕಾದ ಮಾತುಗಳು ಬಹಳ ಇವೆ. ಹತ್ತತ್ತಿರ ಹತ್ತು ತಿಂಗಳ ಹಿಂದೆ ಅರ್ಧವಾಗಿದ್ದ ಈ ಕಾದಂಬರಿಯನ್ನು ಓದಿದ್ದೆ. ನನ್ನ ಒಂದಷ್ಟು ಮಾತು ತಿಳಿಸಿದ್ದೆ. ಇದೀಗ ಪೂರ್ಣವಾಗಿ ಫೆಬ್ರವರಿಯಲ್ಲಿ ಬಂದು ತಲುಪಿದ 'ಉಮ್ಮಾ' ಕಾದಂಬರಿಯನ್ನು ಪೂರ್ಣವಾಗಿ ಓದಲು ಸಾಧ್ಯವಾಗಿರಲಿಲ್ಲ. ಅರ್ಧಕ್ಕೆ ಬರುವುದು ನಂತರ ನಿಲ್ಲುವುದು ಹೀಗೇ ಈಗಲೂ ಮತ್ತೊಮ್ಮೆ ನಿಲ್ಲದ ನಿರಂತರವಾದ ಒಂದು ಪೂರ್ಣವಾದ ಮತ್ತೆ ಬೇಕು ಅನಿಸಿದೆ.
ಸಂಕಥನದಲ್ಲಿ ಈ ಕುರಿತ ಬರಹ ಪ್ರಕಟವಾಗುವುದು. ಅಷ್ಟರೊಳಗೆ ಕಾದಂಬರಿಯೂ ನಿಮಗೆಲ್ಲಾ ಓದಲು ಸಿಗುವುದು.‌
 {Rajendra Prasad ಅವರ Face Book  ನಿಂದ }

‘ಫೇಸ್‌ಬುಕ್‌’ನಲ್ಲಿ ಬಿಡುಗಡೆಯಾದ ಬೊಳುವಾರರ ‘ಉಮ್ಮಾ’

ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಒಗ್ಗಟ್ಟಿಗೆ ಅಮರ್ತ್ಯ ಸೇನ್‌ ಆಗ್ರಹಿಸುತ್ತಿರುವುದೇಕೆ?

ಬೊಳುವಾರು -- " ಉಮ್ಮಾ " { ಕಾದಂಬರಿ }

Image may contain: 1 person, smiling

Thursday, August 23, 2018

| ಕವಿತಾ ಕುರುಗಂಟಿ ಮನದ ಮಾತು

ಕಿರಣ್ ಕುಮಾರ್ - ಕೊಡಗು ಅಭಿವೃದ್ಧಿ ಹೊಂದುವುದು ಬೇಡವೆ?

ಖ್ಯಾತ ಪತ್ರಕರ್ತ ಕುಲ್‌ದೀಪ್ ನಯ್ಯರ್ ನಿಧನ

ಸುಳ್ಯ, ಕಲ್ಮಕಾರ್, ಕಡಮಕಲ್ಲು ಪ್ರದೇಶಗಳಲ್ಲಿ ಆದದ್ದು ಯಾವ ಸ್ಪೋಟ...?

Monday, August 20, 2018

ಮುರಳೀಧರ ಉಪಾಧ್ಯ ಹಿರಿಯಡಕ - - ಡಾ / ಬಿ. ಎ. ವಿವೇಕ ರೈ ಸಾಹಿತ್ಯ ಮಂಥನ ಉದ್ಘಾಟನೆ

ರಾಜಾರಾಮ ತಲ್ಲೂರ್ --ಹಾರಿ ಬಂದ ಹಾರು ಬೂದಿಗೊಂದು ಬಹಿರಂಗ ಪತ್ರ

ಹಾರಿ ಬಂದ ಹಾರುಬೂದಿಗೊಂದು ಬಹಿರಂಗ ಪತ್ರ!
- - - - - - - - - - - -
ಆಗಸ್ಟ್ 3-4 ರಂದು ಉಡುಪಿ ಮಣಿಪಾಲಗಳಲ್ಲಿ ಸುರಿದಿರುವ ಹಾರುಬೂದಿ ಎಂದು ನಾವಂದುಕೊಂಡಿರುವ ನಿಗೂಢ ವಸ್ತುವೇ… ನಮಸ್ಕಾರ!
ನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯು ನೀನು “ಸಿಲಿಕಾ” ಎಂದು ತೀರ್ಮಾನ ಕೊಟ್ಟಿದೆ. ಅದಕ್ಕೆಂದೇ “ಮಣಿಪಾಲದ ಭೂಗರ್ಭತಜ್ನರು ಮತ್ತು ಎನ್ ಐ ಟಿ ಕೆ ಸುರತ್ಕಲ್ಲಿನ ತಜ್ನರು ಅದು ಸಿಲಿಕಾ ಎಂದು ಗುರುತಿಸಿದ್ದಾರೆ” ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿದ್ದು ಬೆಳಗ್ಗೆ ನೋಡಿದ್ದೇನೆ.
ನೀನು ಗಲ್ಫಿನಿಂದ ಬಂದದ್ದು ಹೌದಾದರೆ, ನಿನಗೆ ಸುಮಾರು ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿ ಇರುವ ಉಡುಪಿಯೇ ಏಕೆ ಕಣ್ಣಿಗೆ ಬಿತ್ತು ಎಂದು ಗೊತ್ತಾಗಲಿಲ್ಲ. ಹೆಚ್ಚಿನಂಶ ಇಲ್ಲಿನವರು ಬಹಳ ಮಂದಿ ದುಬಾಯಿಯಂತಹ ಕಡೆ ಇರುವವರ ಮೂಲ ಉಡುಪಿ ಆಗಿರುವುದರಿಂದ ಅವರ ಮಣ್ಣಿನ ಋಣ ತೀರಿಸಲು ನೀನು ಇಲ್ಲಿಗೆ ಬಂದದ್ದಿರಬೇಕು ಎಂದುಕೊಂಡಿದ್ದೇನೆ. ಇರಲಿ. ಗಲ್ಫಿನಲ್ಲಿ ಎಲ್ಲವೂ ಕುಶಲವೇ? ಕ್ಷೇಮವೇ?!!
ಆದರೂ ನೀನು 2500ಕಿಲೋಮೀಟರ್ ಗಳಷ್ಟು ದೂರಕ್ಕೆ ಗಾಳಿಗೆ ಎಲ್ಲೂ ಚದುರದೇ, ನೇರವಾಗಿ ಉಡುಪಿಗೇ ಬಂದು ತಲುಪಿದ್ದಕ್ಕಾಗಿ ನಿನಗೆ ವಿಶೇಷ ಪ್ರಶಸ್ತಿಯೊಂದನ್ನು ಕೊಡಲು ಶಿಫಾರಸು ಮಾಡುತ್ತೇನೆ. ಹೇಗೂ ರಾಜ್ಯೋತ್ಸವ ಹತ್ತಿರ ಬರ್ತಾ ಉಂಟು!!
ಅಂದಹಾಗೆ ನಾನಂತೂ ನಿನ್ನನ್ನು ಹಾರುಬೂದಿ ಎಂದುಕೊಂಡಿದ್ದೆ. ನನ್ನಂತೆ ಬಹಳ ಜನ ನಿನ್ನನ್ನು ಹಾರುಬೂದಿ ಎಂದುಕೊಂಡಿದ್ದೆವು. ಯಾಕೆ ಗೊತ್ತಾ? ಈಗ ಇಂಟರ್ನೆಟ್ ಯುಗದಲ್ಲಿ ಏನು ಕಂಡರೂ ಗೂಗಲ್ ಮಾಡುವ ಚಟ ನಮಗೆ. ಹಾರು ಬೂದಿಯ ಬಗ್ಗೆ ಗೂಗಲಣ್ಣ ಏನಂದ ಗೊತ್ತಾ?
ಸುಡುವ ಕಲ್ಲಿದ್ದಲು ಎಲ್ಲಿಂದ ಬಂದಿದೆ ಎಂಬುದನ್ನಾಧರಿಸಿ, ಅದರ ಹಾರುಬೂದಿಯಲ್ಲಿ ಬೇರೆ ಬೇರೆ ಅಂಶಗಳಿರಬಹುದು. ಆದರೆ ಈ ಮೂರು ಅಂಶಗಳು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಅವು ಯಾಕಿರುತ್ತವೆ ಎಂದರೆ, ಹಲವು ಬಗೆಯ ಖನಿಜಾಂಶಗಳಿರುವ ಕಲ್ಲಿನ ಪದರಗಳಡಿಯಲ್ಲೇ ಈ ಕಲ್ಲಿದ್ದಲು ಸಿಗುವುದು!. ಆ ಮೂರು ಅಂಶಗಳು ಯಾವುವೆಂದರೆ:
೧. ಹರಳು ಗಟ್ಟಿದ ಅಥವಾ ಹರಳುಗಟ್ಟಿರದ “ಸಿಲಿಕಾ” (SiO2)
೨. ಅಲುಮೀನಿಯಂ ಆಕ್ಸೈಡ್ (Al2O3)
೩. ಕ್ಯಾಲ್ಷಿಯಂ ಆಕ್ಸೈಡ್ (CaO)
ಇವಲ್ಲದೇ ಸಣ್ಣ ಪ್ರಮಾಣದಲ್ಲಿ ಆರ್ಸೆನಿಕ್, ಬೆರಿಲಿಯಂ, ಬೊರಾನ್, ಕ್ಯಾಡ್ಮಿಯಂ, ಕೋರಿಯಂ, ಕೋಬಾಲ್ಟ್, ಸೀಸ, ಮ್ಯಾಂಗನೀಸ್, ಪಾದರಸ, ಮಾಲಿಬ್ಡಿನಂ, ಸೆಲೆನಿಯಂ, ಸ್ಟ್ರೋಂಟಿಯಂ, ಥಾಲಿಯಂ, ವಾನಾಡಿಯಂ ಇತ್ಯಾದಿ ಲೋಹಾಂಶಗಳು, ವಿಷಕಾರಿ ರಾಸಾಯನಿಕಗಳೂ ಇರಬಹುದು.
ಸಿಲಿಕಾ ಚರ್ಮಕ್ಕೆ ತಾಗಿದಾಗ ಚರ್ಮದ ಕಿರಿಕಿರಿ, ಶ್ವಸಕೋಶದ ತೊಂದರೆಗಳು, ಸಿಲಿಕೋಸಿಸ್ ಎಂಬ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಜೊತೆಗೆ ಹರಳು ಸಿಲಿಕಾ ಕ್ಯಾನ್ಸರ್ ಕಾರಕ ಎಂದು ಅಮೆರಿಕದ ತಜ್ನರು ಕಂಡುಕೊಂಡಿದ್ದಾರೆ.
ಡಿಯರ್ ಸಿಲಿಕಣ್ಣ, ನೀನು ಗಲ್ಫಿನಿಂದ ಬಂದದ್ದೇ ಹೌದಾದರೆ ನಿನ್ನ ಇಮಿಗ್ರೇಷನ್ ದಾಖಲೆಗಳನ್ನೂ ಪಾಸ್ ಪೋರ್ಟನ್ನೂ ತೋರಿಸಿಬಿಡು, ಜನ ನಿನ್ನನ್ನು ಅಪಾರ್ಥ ಮಾಡಿಕೊಳ್ಳುವುದಿಲ್ಲ. ಇಲ್ಲದಿದ್ದರೆ ಜನ ಏನೆಂದುಕೊಳ್ಳುತ್ತಾರೆ ಗೊತ್ತಾ?
ಹಾರುಬೂದಿ ಮಳೆ ಬಂದಾಗ ಉಡುಪಿಯ ಮೇಲೆ ಉದುರಿತು. ಅದರಲ್ಲಿದ್ದ ಬೇರೆ ರಾಸಾಯನಿಕಾಂಶಗಳು ಒಂದೋ ಮಳೆ ನೀರಿನಲ್ಲಿ ತೊಳೆದುಹೋದವು, ಇಲ್ಲವೇ ಕರಗಿಹೋದವು, ಕಡೆಗೆ ಪರಿಸರ ಮಾಲಿನ್ಯದವರು ಬಂದು ಮಾದರಿ ಸಂಗ್ರಹಿಸುವಾಗ ಕೇವಲ “ ಸಿಲಿಕಾ” ಅಂಶ (ನಾವಿಲ್ಲಿ ಅದನ್ನು ಸೂಕ್ಷ್ಮ ಮರಳು ಧೂಳಿನ ಕಣಗಳು ಎಂದೂ ಕರೆಯುತ್ತೇವೆ!) ಮಾತ್ರ ಉಳಿಯಿತು ಅಂತ!
ಸುಮ್ಮನೇ ಉಡುಪಿಗೂ ನಿನಗೂ ಗೊಂದಲ, ಮನಸ್ಥಾಪ ಬೇಡ. ಹಾಗಾಗಿ ದಯಮಾಡಿ ನೀನು ಯಾರೆಂಬುದನ್ನು ಬಹಿರಂಗವಾಗಿ ಹೇಳಿಬಿಡು.
ಅಂದಹಾಗೆ ಮುಂದಿನ ಬಾರಿ ನಿನ್ನ ಉಡುಪಿ ಭೇಟಿ ಯಾವಾಗ?
ಬರುವಾಗ ದುಬಾಯಿ ಚಾಕಲೇಟು ಮರೆಯದೇ ತೆಗೆದುಕೊಂಡು ಬಾ. ಆಯ್ತಾ ಸಿಲಿಕಣ್ಣ!!
ನಿನ್ನ ಪ್ರೀತಿಯ
ಉಡುಪಿಯ 'ಜುಜುಬಿ' ನಾಗರಿಕ.
#ಹಾರುಬೂದಿ #ಉಡುಪಿ_ಪಾಡು #ಸಿಲಿಕಾ
P V Bhandary Shrinivas Karkala Suresha Kanjarpane Nikhil KolpeRamakrishna Herle Dinesh Holla M.G. Hegde

ಸುಗತ ಶ್ರಿನಿವಾಸ --- ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌

Friday, August 17, 2018

ಸೌಹಾರ್ದದ ವಾತಾವರಣ ಮತ್ತೆ ಕಟ್ಟುವಲ್ಲಿ ಆತ್ಮಕಥನ ಪ್ರೇರಣೆಯಾಗಲಿ: ಬಿ.ಎ.ವಿವೇಕ ರೈ

ಅಂತಿಮ ನಮನಕ್ಕೆ ಬಂದ ಸ್ವಾಮಿ ಅಗ್ನಿವೇಶ್‌ ಮೇಲೆ ಹಲ್ಲೆ

ಕೇರಳ: 82442 ಮಂದಿ ರಕ್ಷಣೆ,  ನಿರಾಶ್ರಿತರ ಶಿಬಿರದಲ್ಲಿದ್ದಾರೆ 3.14 ಲಕ್ಷ ಜನರು

ವಾಜಪೇಯಿ ಅವರ ಎರಡು ಕವಿತೆಗಳು

ಕವಿ ವಾಜಪೆಯಿ - Bharat Ratna probable Atal Bihari Vajpayee recites poems

ವೈದೇಹಿ ಅವರ ಹೊಸ ಕತೆ ‘ಸಲ್ಮಾ ಮತ್ತು ಸುರಭಿ’

Tuesday, August 14, 2018

ಗಿರೀಶ್ ಕಾರ್ನಾಡ್ --ನಾನೇಕೆ ರಾಕ್ಷ್ಸಸ ತಂಗಡಿ ಬರೆದೆ ? GIRISH KARNAD SPL

ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ? ಗಿರೀಶ್‌ ಕಾರ್ನಾಡ್‌ ಹೇಳುತ್ತಾರೆ | ಭಾಗ ೧

ಜೋಗದಲ್ಲಿ ಜಲ ನಾಟ್ಯ - India's tallest waterfall in full flow

ಮಹಾದಾಯಿ ತೀರ್ಪು ಪ್ರಕಟ: ಕರ್ನಾಟಕಕ್ಕೆ 5.5 ಟಿಎಂಸಿ ಕುಡಿಯುವ ನೀರು

Monday, August 13, 2018

ಕಾದಂಬರಿ ಲೋಕಕ್ಕೆ ಹೊಸ ದಿಕ್ಕು ತೋರಿಸಿದ ‘ಹಿಜಾಬ್‌’

ಎಸ್. ಆರ್. ವಿಜಯಶಂಕರ -- |ಅದಮ್ಯೋತ್ಸಾಹದ ಸಾಹಿತ್ಯನಿಷ್ಠ: ಡಾ. ಸುಮತೀಂದ್ರ ನಾಡಿಗ -

ಡಾ / ಕಾ. ವೆಂ ಶ್ರೀನಿವಾಸ ಮೂರ್ತಿ - ಬಿ . ಆರ್ . ಲಕ್ಷ್ಮಣ ರಾಯರ " ಹಾಡಿನ ಜಾಡು " ಹಾಡು ಸಾಗಿಬಂದ ಜಾಡಿನ ಮೆಲುಕು

ಅನನ್ಯ ಭಟ್ ---- ತೂಗು ಮಂಚದಲ್ಲಿ ಕೂತು THOOGU MANCHADALLI - Cover | ANANYA BHAT | Kirik Party | Rakshit Shetty ...

ಶ್ರೀದೇವಿ ಕೆರೆಮನೆ - ಮನದಾಳದ ಮಾತು

No automatic alt text available.
sridevi keremane

ಬಿ. ಎಸ್. ವೆಂಕಟಲಕ್ಷ್ಮಿ --" ಪತ್ನಿ ಯರು ಕಂಡಂತೆ ಪ್ರಸಿದ್ದರು "

ಗುರುಪ್ರಸಾದ್ ಕಾಗಿನೆಲೆ ಅವರಿಗೆ ಡಾ/ ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ -2018

guruprasad kaginele

ಟಿ. ಎಸ್. ಗೊರವರ - ಮಲ್ಲಿಗೆ ಹೂವಿನ ಸಖ { ಕಥಾ ಸಂಕಲನ }

Image may contain: 1 person, text

Sunday, August 12, 2018

ಅತ್ಯಂತ ವಿವಾದಾತ್ಮಕ ಬರಹಗಾರ, ಮಹಾ ನಿಷ್ಠುರವಾದಿ ವಿ ಎಸ್ ನೈಪಾಲ್

ವಿ. ಎಸ್ ನೈಪಾಲ್ -- V.S. Naipaul Interview on Charlie Rose

ನೊಬೆಲ್‌ ಪುರಸ್ಕೃತ ಲೇಖಕ ವಿ ಎಸ್‌ ನೈಪಾಲ್‌ ನಿಧನ; ಲೇಖಕರ ನುಡಿನಮನ

ಎಸ್. ಎನ್. ಶ್ರೀಧರ್ - { ಸಂದರ್ಶನ - ರಘುನಾಥ ಚ ಹ } -- ‘ಭಾಷಾವಿಜ್ಞಾನ ನಮ್ಮಲ್ಲಿ 50 ವರ್ಷ ಹಿಂದುಳಿದಿದೆ’

ವಿಜಯನಗರ ಕಾಲದ ಶಾಸನ

Image may contain: text

- ಯಶೋದರ ಚರಿತೆ - ಅಮೃತಮತಿ ಪ್ರಣಯ ಪ್ರಸಂಗ

ಪ್ರೊ.ಸಿ.ನಾಗಣ್ಣ, ಅಬ್ದುಲ್ ಹಮೀದ್ ಕ್ಕಲಡ್ಕ, ಪ್ರೊ.ಟಿ.ಯಲ್ಲಪ್ಪರಿಗೆ ವರ್ಧಮಾನ ಪ್ರಶಸ್ತಿ -2018

Friday, August 10, 2018

ಸುಬ್ರಾಯ ಚೊಕ್ಕಾಡಿ---ಮನೆImage may contain: 1 person, smiling

ಸುಬ್ರಾಯ ಚೊಕ್ಕಾಡಿ --- ಮನೆ
ನೀಟಾಗಿ ಕತ್ತರಿಸಿದ ಹೂಗಿಡಗಳ ನಡುವೆ
ಒಡ್ಡೋಲಗಸ್ಥ ಮಹಾರಾಜನ ಹಾಗೆ
ವಿರಾಜಮಾನವಾಗಿದೆ ಆ ಮನೆ.
ಶೆಡ್ಡಿನಲಿ ಮಲಗಿದ ಕಾರು,ಪಕ್ಕದಲೆ
ಆಳೆತ್ತರದ ಆಲ್ಸೇಶನ್ ನಾಯಿ-ಗೇಟಿನಲಿ
*ನಾಯಿಗಳಿವೆ ಎಚ್ಚರಿಕೆ* ಫಲಕ.
ಒಳ ಹೊಕ್ಕರೆ ಸ್ವಾಗತಿಸುವ ಭವ್ಯ ದಿವಾನಖಾನೆ
ಬೃಹದ್ಗಾತ್ರದ ಟಿ.ವಿ.ಮೂಲೆಗಳಲ್ಲಿ ಸೈನಿಕರಂತೆ ನಿಂತ
ಎತ್ತರದ ವಿಗ್ರಹಗಳು;ಹೂ ಕುಂಡಗಳು.
ಕುಳಿತರೆ ಪಾತಾಳಕ್ಕೆಸೆವ ಸೋಫಾಗಳು.ಅದರಾಚೆ
ಹೊಕ್ಕರೆ ಹೊರಡಲು ದಾರಿ ಸಿಗದಂತೆ ಹತ್ತಾರು
ಕೊಠಡಿಗಳು,ಮುಚ್ಚಿರುವ ಬಾಗಿಲುಗಳು,ತಿರುವುಗಳಲ್ಲಿ
ಮಾಯವಾಗುವ ಪುಟ್ಟ ಹಾದಿಗಳು.ಎಲ್ಲಿಂದಲೋ
ಕೇಳಿಸುವ ಹಾಡಿನ ತುಣುಕುಗಳು,ಅಹಹಾ!ಈ
ಮಯನರಮನೆ ತುಂಬ ವಿದೇಶೀ ಸೆಂಟಿನ ಘಮಲು.
ತಾಯಿ,ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳು
ಅವರವರ ಕೋಣೆಗಳಲ್ಲಿ.ನಡುವೆ
ಸಂಪರ್ಕ ಆಗೀಗಮೊಬೈಲ್ ಗಳ ಮೂಲಕವೇ
ಇಳಿದನಿಯ ತುಂಡು ಮಾತುಗಳು.ಕಂಪ್ಯೂಟರಲ್ಲಿ
ಕೀಲಿಸಿದ ಕಣ್ಣುಗಳು.ಆಗೀಗೊಮ್ಮೆ ಆಚೀಚೆ
ಸರಿದಾಡುವ ನೆರಳುಗಳು;ಹೆಜ್ಜೆ ಸದ್ದುಗಳು.
ಇನ್ನೂ ಒಳಗೆ-ಅನಾಥ ಎಂಬಂತೆ
ತೆರೆದುಕೊಂಡೇ ಇರುವ ಡೈನಿಂಗ್ ಹಾಲ್ ,ಮೇಜಿನ ಮೇಲೆ
ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವ
ವಿಧವಿಧದ ತಿಂಡಿ ತಿನಿಸುಗಳು;ಹಣ್ಣುಗಳು.ಯಾವಾಗ
ಯಾರು ಇಲ್ಲಿಗೆ ಬರುತ್ತಾರೆ;ಯಾವಾಗ
ಇವೆಲ್ಲ ಖಾಲಿಯಾಗುತ್ತವೆ-ಯಾರಿಗೂ ಗೊತ್ತಿಲ್ಲ.
ಒಮ್ಮೊಮ್ಮೆ ಕೇಳಿಸುವ ನಗುವಿನ ಸದ್ದು,ಗದರುವ ಸದ್ದು
ಪಿಸುದನಿಯ ಗೊಣಗಿನ ಸದ್ದು-ಸದ್ದಿನ ಆಚೆ
ಸದಾ ನೆಲೆ ನಿಂತಿರುವ ಗಾಢ ನಿಗೂಢ ಮೌನ.
ಹೊರಗೆ,
ಎಲೆಯುದುರಿಸಿದ ಮರದ ಕೊಂಬೆಯಲಿ
ಕುಳಿತ ಆ ಒಂಟಿ ಹಕ್ಕಿ ಉಲಿಯುತ್ತದೆ:
ಆಹ!ಎಷ್ಟು ಸುಂದರ!ಆಹ!
ಅಲ್ಲಿರುವುದು ಅಂಥ ಮನೆ,
ಇಲ್ಲಿರುವುದು ಸುಮ್ಮನೆ!
--ಸುಬ್ರಾಯ ಚೊಕ್ಕಾಡಿ

ಸುಭಾಷ್ ಪಾಲೇಕರ್ Zero Budget Natural Farming: Interview with Subhash Palekar

ಕೆ. ಪಿ. ಸುರೇಶ್ -|ಪಾಳೇಕರ್‌ ಅವರಿಗೆ ಸಿಟ್ಟು ಯಾಕೆ ಬರುತ್ತೆ? - columns - News in kannada, vijaykarnataka

ರಾಮಚಂದ್ರ ಗುಹಾ - ಅರುಂಧತಿಯವರ ಛಲದ ಎದುರು ಕರಗಿದ್ದು ಬೆಟ್ಟದಂಥ ನಾಲ್ಕು ಸವಾಲು

ನ್ಯಾಯ ನಡಾವಳಿಯನ್ನೂ ನಿಯಂತ್ರಿಸುವ ಕೇಂದ್ರದ ಪ್ರಯತ್ನಕ್ಕೆ ಸುಪ್ರೀಂ ತಿರುಗೇಟು

Thursday, August 9, 2018

ಕಥಕ್ ಶೃಂಗಾರ - Sringaram An Immersion | Hues of Shringara in Kathak | Smt Nirupama

ಕೆ. ಪಿ. ನಟರಾಜ್ --- ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕಾರ ಭಾಷಣ

ಮುರಳೀಧರ ಉಪಾಧ್ಯ ಹಿರಿಯಡಕ - - -ಕೆ. ಪಿ. ನಟರಾಜ್ ಅವರ " ನಿತ್ಯವೂ ನಿನ್ನೊಡನೆ"

ಚಿಂತಕ ವಲಯದಲ್ಲಿ ಆತಂಕ, ಪ್ರಕ್ಷುಬ್ದ ಸ್ಥಿತಿ: ಡಾ.ಕೆ.ಪಿ.ನಟರಾಜ್

ಎಚ್. ಎಸ್. ವೆಂಕಟೇಶಮೂರ್ತಿ -- -ಮಕ್ಕಳಿರಲಮ್ಮಾ ಮಕ್ಕಳಾಗಿ -

Wednesday, August 8, 2018

ಮಾರಿಷಸ್ ನಲ್ಲಿ ವಿಶ್ವ ಹಿಂದಿ ಸಮ್ಮೇಳನ - 11th विश्व हिंदी सम्मेलन 2018 - World Hindi Conference (History, Theme, ...

ವಿಶ್ವ ಹಿಂದಿ ಸಮ್ಮೇಳನಕ್ಕೆ ಡಾ/ ಮಾಧವಿ , ಡಾ/ ಪಟ್ಟಣ ಶೆಟ್ಟಿ

Image may contain: 2 people, including Dr-Madhavi S Bhandary, people smiling

ಕೆ. ಪಿ. ನಟರಾಜ- ನಿತ್ಯವೂ ನಿನ್ನೊಡನೆ { ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ ಕವನ ಸಂಕಲನ -2018 }

No automatic alt text available.

ಜಿ. ಬಿ. ಹರೀಶ್ -- ಕವಿ ಗೋಷ್ಠಿ ಗೆಂದು ಹೊರಟು ಹೋದಿರಾ ?

Tuesday, August 7, 2018

ಬಿ. ಎ. ವಿವೇಕ ರೈ--- ನಾಡಿಗೆ "ದಾಂಪತ್ಯ ಗೀತ' ಕೊಟ್ಟ ನಾಡಿಗರು

ಕರುಣಾನಿಧಿ/ Karunanidhi

ದ್ರಾವಿಡ ಆಂದೋಲನದ ಕೋಟೆ ಕಟ್ಟಿದ್ದ ರಾಜಕೀಯ ಪ್ರತಿಭೆ -ಕರುಣಾನಿಧಿ

ಭುವನೇಶ್ವರಿ ಹೆಗಡೆ --- ಬೆಟ್ಟದ ಭಾಗೀರಥಿ -{ ಪ್ರಬಂಧ ಸಂಕಲನ ಬಿಡುಗಡೆ } 12-8- 2018

ಎಚ್. ಎಸ್ . ವೆಂಕಟೇಶಮೂರ್ತಿ - - -- ಕನ್ನಡಿಯ ಸೂರ್ಯ

ಕಬೀರದಾಸ - Gundecha Brothers, Kabir bhajan

ಸುಮತೀಂದ್ರ ನಾಡಿಗ-- ಪಂಚ ಭೂತಗಳು { ಕಾವ್ಯ ವಾಚನ }

Monday, August 6, 2018

ಸುಮತೀಂದ್ರ ನಾಡಿಗ -- ಕಾವ್ಯ ಲೋಕ --13 -{ ನಗರದೇವಿಯ ಕೊರಳಿನಲ್ಲಿ } Sumatheendra Nadig Kavya Loka - 13

ಸುಮತೀಂದ್ರ ನಾಡಿಗ - ಕಾವ್ಯ ಲೋಕ -12 -- { ಲಂಕೇಶ್ ನೆನಪು } Sumatheendra Nadig Kavya Loka - 12

ಸುಮತೀಂದ್ರ ನಾಡಿಗ -- ಕಾವ್ಯ ಲೋಕ -11 - { ಕವಿತೆಯೇ ಹೀಗೆ } Sumatheendra Nadig Kavya Loka - 11

ಸುಮತೀಂದ್ರ ನಾಡಿಗ _ ಕಾವ್ಯ ಲೋಕ -10 --{ ಜಡ ಚೇತನ } Sumatheendra Nadig Kavya Loka - 10

ಸುಮತೀಂದ್ರ ನಾಡಿಗ --ಕಾವ್ಯ ಲೋಕ -9 { ಯಾರು ತಡೆವರು ನನ್ನ ನೆನಪು ಮಲೆನಾಡನ್ನ ? } Sumatheendra Nadig Kavya Loka - 9

ಸುಮತೀಂದ್ರ ನಾಡಿಗ -- ಕಾವ್ಯ ಲೋಕ -8 { ದ್ರೋಣಾಚಾರ್ಯರು .. } Sumatheendra Nadig Kavya Loka - 8

ಸುಮತೀಂದ್ರ ನಾಡಿಗ - ಕಾವ್ಯಲೋಕ -7 - { ಮದುವೆಯಾದವನೊಬ್ಬ ... } Sumatheendra Nadig Kavya Loka - 7

ಸುಮತೀಂದ್ರ ನಾಡಿಗ - ಕಾವ್ಯ ಲೋಕ - 6 { ನ್ಯೂಯಾರ್ಕ್ ನ } Sumatheendra Nadig Kavya Loka - 6

ಸುಮತೀಂದ್ರ ನಾಡಿಗ - ಕಾವ್ಯ ಲೋಕ -5 - { ಹಿರಿಯ ಕುಲದವರು } Sumatheendra Nadig Kavya Loka - 5

ಸುಮತೀಂದ್ರ ನಾಡಿಗ - ಕಾವ್ಯಲೋಕ 4 - { ಎಚ್ಚರಿಕೆ } Sumatheendra Nadig Kavya Loka - 4

ಸುಮತೀಂದ್ರ ನಾಡಿಗ - ಕಾವ್ಯ ಲೋಕ -3 - Sumatheendra Nadig Kavya Loka - 3

ಸುಮತೀಂದ್ರ ನಾಡಿಗ - ಕಾವ್ಯ ಲೋಕ - 2 Sumatheendra Nadig Kavya Loka

ಸುಮತೀಂದ್ರ ನಾಡಿಗ್ - ಕಾವ್ಯಲೋಕ -1 Sumatheendra Nadig Kavya Loka - 1

ಹಿರಿಯ ಕವಿ, ಲೇಖಕ ಸುಮತೀಂದ್ರ ನಾಡಿಗ ನಿಧನ 7- -8- 2018

ದೇಸಿ ನಾಟಕಕ್ಕೆ ಸ್ಪರ್ಶ ನೀಡಿದ ಬಿ.ವಿ.ಕಾರಂತ: --- ರಂಗಕರ್ಮಿ ಶ್ರೀನಿವಾಸಪ್ರಭು

ಬಿ. ಆರ್. ಲಕ್ಷ್ಮಣ ರಾವ್ --- ದೇವರೇ ಅಗಾಧ ನಿನ್ನ

Sunday, August 5, 2018

ಕಬೀರ್ - Bhupendra (Non Film)- Moko Kahan Dhoondhe Re Bande

ಯುಜಿಸಿ ಪಟ್ಟಿ: ಕನ್ನಡ ಜರ್ನಲ್‌ಗಳಿಗೆ ಕೊಕ್‌

ತುಂಬಿದೆ ಮದಗಾದ ಕೆರೆ

ಮಾಯದಂಥ ಮಳೆಗೆ ತುಂಬಿ ಹರಿವ ಮದಗದ ಕೆರೆ ಸೌಂದರ್ಯ ನೋಡಬನ್ನಿ

ವಿಜಯಕಾಂತ ಪಾಟೀಲರ " ಬೆವರ ಬಣ್ಣ " { ಕವನ ಸಂಕಲನ } ಬಿಡುಗಡೆ --9-8-2018

ಐತಿಹಾಸಿಕ ಸೋಮನಾಥಪುರ ಜನಕ್ಕೆ ಜನಪ್ರಿಯ ದೇಗುಲವೇ ತಲೆನೋವಾದ ಸೋಜಿಗ

ಸುಲಭವಾಗಿ ವಿಮರ್ಶಿಸಲು ಸಾಧ್ಯವಿಲ್ಲದಿರುವುದೇ ಕವಿತೆ: ಡಾ.ಎಚ್.ಎಸ್.ವೆಂಕಟೇಶಮೂರ್ತಿ

Friday, August 3, 2018

ನಟರಾಜ . ಕೆ. ಪಿ--- ಹುಣಸೆಯ ಮರವ ನೋಡವ್ವ

ಹುಣಸೆಯ ಮರವ ನೋಡವ್ವ ಕಣ್ಣಿಗೆ ಕಟ್ಟಿ ನಿಲ್ಲುವ ಹುಣಸೆ ಮರವ ನೋಡವ್ವ ಶ್ರಾವಣ ಮಾಸದ ಕಡು ಹಸಿರು ಎಲೆ ಎಲೆಗಳಲ್ಲಿ ದಟ್ಟೈಸಿ ನಿಂತಿರುವ ಹುಣುಸೆಯ ಮರವ ನೋಡವ್ವ ನೋಡುವುದಕ್ಕೆರಡು ಕಣ್ಣು ಸಾಲದವ್ವ
ಜಾತರೆ ಯಾತರೆ ಬಿಟ್ಟಿಲ್ಲಿ ಬಾರವ್ವ ನಿಂತ ನಿಲುವಿಗೆ ಲೋಕವ ಕೈಮಾಡಿ ಕರೆದಿರುವ ಹುಣಸೆಯ ಮರವ ನೋಡವ್ವ ಅವ್ವ ನಾನು ಚಿಕ್ಕವನಿರುವಾಗ ನೀನು ಚಿಕ್ಕವಳಿರುವಾಗ ಮುದ್ರೆಯ ಹೊಲದ ತಿಪ್ಪೆಯ ಗುಂಡಿಯ ಹತ್ತಿರವಿದ್ದ ಹುಣಸೆಯ ಮರವ ನೋಡವ್ವ
ಕೊಂಬೆ ರೆಂಬೆ ಟೊಂಗೆ ಟಿಸಿಲುಗಳ ಹೊಕ್ಕು ಒಳ ಹೊಕ್ಕು ಮರದೊಳ ಹೊಕ್ಕು ದಟ್ಟೈಸಿರುವ ಹಸಿರು ಎಲೆಗಳ ನುಸಿದು ಮರದ ಒಳಹೊಕ್ಕು ನಿಗೂಢ ಕತ್ತಲ ಒಳಾಯಕ್ಕೆ ಹೋಗವ್ವ ಹುಣಸೆಯ ಮರಾಂತರಂಗಕ್ಕೆ ಹೋಗವ್ವ
ಬಳ್ಳಿ ಬಿಳಲುಗಳಂತದರ ಇಳಿ ಬೀಳುವ ಟಿಸಿಲುಗಳು ವಾಲಾಡುವ ಪರಿಯ ನೋಡವ್ವ ಅವ ಹಸುರು ಶಿಶುಗಳ ಜೀವವಾಡುವ ಪರಿಯ ನೋಡವ್ವ
ಅವ್ವ ಲೋಕ ಯಾತ್ರೆಯಿದು ಮುಗಿತಾಯ ಕ್ಕೆ ಬರುವ ವೇಳೆಯಾಯಿತು ಬಂದಿಲ್ಲಿ ನಿಲ್ಲವ್ವ
ಹುಣುಸೆಯ ಬೀಜ ಹುಣಸೆಯ ಹಣ್ಣು ಹುಣಸೆಯ ಕಾಯಿ ಹುಣಸೆಯ ಬರಲು ಹುಣಸೆಯ ಹುಳಿ ಹುಣಸೆಯ ಮರದ ಜೊತೆ ಬದುಕಿ ಬಂದಿದ್ದೇವವ್ವ ಹುಣಸೆಯ ಮರ ಮುಪ್ಪು ಹುಣಸೇಯ ಹುಳಿ ಮುಪ್ಪೆ ಗಾದೆಯ ರಸದ ಹೆಸರುವಾಸಿ ಮರವ ನೋಡವ್ವ
ಊರು ಓಡಾಡುವ ಜಾಗದಲ್ಲಿರುವ ಮೂರು ಹಾದಿ ಕೂಡುವ ಜಗದ್ಜಾಗದಲ್ಲಿರುವ ಲೌಕಿಕಕು ಅಲೌಕಿಕಕು ಆಗಿಬರುವ ಹುಣಸೆಯ ಮರಕೆ ಬಾರವ್ವ ಅರಸಿ ಬಾರವ್ವImage may contain: Nataraja Kalkere, smiling, closeup

ಮೀನು ಮಾರುವ ವಿದ್ಯಾರ್ಥಿನಿ ಇದೀಗ ಕೇರಳ ಸರ್ಕಾರದ ದೇಶಿ ಉತ್ಸನ್ನಗಳ ರಾಯಭಾರಿ!

ಕೃತಿಚೌರ್ಯಕ್ಕೆ ಕಾದಿದೆ ಕಠಿಣ ಶಿಕ್ಷೆ!

Thursday, August 2, 2018

ಸಾಹಿತಿಗಳಿಗೆ ಜೀವಬೆದರಿಕೆ; ಸಾಹಿತ್ಯ ಅಕಾಡೆಮಿ ಸ್ಪಂದನೆಗೆ ಆಗ್ರಹಿಸಿ ಸಾಹಿತಿಗಳ ಪತ್ರ

ಕಾಜೂರು ಸತೀಶ್ -- : ಅಂತರ್ಜಾಲ ಬಳಕೆ: ಓದು ಮತ್ತು ಬರಹದ ಸಾಧ್ಯತೆಗಳು

ಉಂಬಾಯಿ - ಮಲಯಾಲಮ್ ಗಜಲ್- ಒರು ಪುಷ್ಪಮ್ ಮಾತ್ರಮ್ - Oru Pushpam Maathramen.......Ghazal by Umbayi

Manipal Lake --- ಮಣಿಪಾಲದ ಮಣ್ಣಪಳ್ಳ - ಒಂದು ಸಂಜೆ

Wednesday, August 1, 2018

ರಾಘವೇಂದ್ರ ಜೋಶಿ -- ಕತೆಯೆಂಬ ಮಂತ್ರವೂ ಕಥನವೆಂಬ ತಂತ್ರವೂ.. ಕತೆಯೆಂಬ ಮಂತ್ರವೂ ಕಥನವೆಂಬ -

ಭಾರತೀಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕು: ಪ್ರೊ.ಸಿ.ಎನ್.ಆರ್.ರಾವ್

ಮೀನಾಕುಮಾರಿ ಹಾಡಿದ ಸ್ವರಚಿತ ಘಜ಼ಲ್ - - ಚಂದ್ರನೊಬ್ಬನೆ , ಆಕಾಶ ಒಂಟಿ Meena Kumari : I write , I recite ( 1 of 8 )

ಕುಮಾರ್ . ಎಸ್ - ಮೀನಾಕುಮಾರಿ ಎಂಬ ಸಮ್ಮೋಹಕ ನಟಿಯೊಳಗೊಬ್ಬಳಿದ್ದಳು ನೊಂದ ಕವಿ