ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Thursday, March 31, 2011
The Hindu : Opinion / Editorials : Don't ban Great Soul
The Hindu : Opinion / Editorials : Don't ban Great Soul[mahatma gandhi]
Wednesday, March 30, 2011
mahabharata[drama]- peter brook[book review]muralaleedhara upadhya hiriadka
ಪೀಟರ್ ಬ್ರೂಕ್ ಅನುವಾದಿಸಿದ ಮಹಾಭಾರತ
-ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ
ಇಲ್ಲಿರುವುದು ಎಲ್ಲ ಕಡೆಯೂ ಇದೆ, ಇಲ್ಲಿ ಇಲ್ಲದಿರುವುದು ಬೇರೆ ಎಲ್ಲಿಯೂ ಇಲ್ಲ ಎನ್ನುತ್ತದೆ ಮಹಾಭಾರತ. ಇದು ಮಹಾಭಾರತದ ಅಗ್ಗಳಿಕೆ. ಮಹಾಭಾರತ-ಪುರಾಣ, ಚರಿತ್ರೆ, ಆಖ್ಯಾನ, ಉಪಾಖ್ಯಾನ, ದೃಷ್ಟಾಂತ. ಧರ್ಮಶಾಸ್ತ್ರ, ಅರ್ಥಶಾಸ್ತ್ರಗಳನ್ನೊಳಗೊಂಡ ಇತಿಹಾಸ ಕಾವ್ಯ. ನಾಟಕೀಯ ಸನ್ನಿವೇಶ ಮತ್ತು ಸಂಭಾಷಣೆಗಳಿಂದ ಕೂಡಿದ ಮಹಾಭಾರತವನ್ನು ಹಾಡುತ್ತಿದ್ದ ಸೂತರು-ಚಾರಣರು-ಭಾರತೀಯ ರಂಗಭೂಮಿಯ ಆದ್ಯರು. ಈ ಉಪಜೀವ್ಯ ಕಾವ್ಯ ಭಾರತದ ಹಲವಾರು ಭಾಷೆಗಳ ಮಹಾಕಾವ್ಯಗಳಿಗೆ, ಭಾಸ, ಕಾಳಿದಾಸರಂಥ ಶ್ರೇಷ್ಠ ನಾಟಕಕಾರರ ನಾಟಕಗಳಿಗೆ ವಸ್ತುವನ್ನು ಒದಗಿಸಿದೆ. ಕುಮಾರವ್ಯಾಸರು, ಅಭಿನವವ್ಯಾಸರು ಭಾರತದ ಎಲ್ಲಾ ಭಾಷೆಗಳಲ್ಲೂ ಇದ್ದಾರೆ.
ಮಹಾಭಾರತ ರಂಗಕೃತಿ
ಪ್ಯಾರಿಸ್ನಲ್ಲಿರುವ ಅಂತಾರಾಷ್ಟ್ರೀಯ ರಂಗಭೂಮಿ ಸಂಶೋಧನ ಸಂಸ್ಥೆಯ ನಿದರ್ೇಶಕ ಪೀಟರ್ ಬ್ರೂಕ್ (ಜನನ-1925) ನಿದರ್ೇಶಿಸಿದ ಒಂಬತ್ತು ಗಂಟೆಗಳ ಅವಧಿಯ 'ಮಹಾಭಾರತ'ದ ರಂಗಕೃತಿಯನ್ನು ಫ್ರೆಂಚ್ ಭಾಷೆಯಲ್ಲಿ ಬರೆದವರು ಜೀನ್-ಕ್ಲಾಡ್ ಕ್ಯಾರಿಯೇರ್. ಅವರು ಪ್ಯಾರಿಸ್ನಲ್ಲಿರುವ 'ನ್ಯೂ ಫ್ರೆಂಚ್ ಸ್ಕೂಲ್ ಫಾರ್ ಸಿನಿಮಾ ಆಂಡ್ ಟೆಲಿವಿಷನ್'ನ ಅಧ್ಯಕ್ಷರಾಗಿದ್ದಾರೆ. ಫ್ರೆಂಚ್ ಕೃತಿಯನ್ನು ಪೀಟರ್ ಬ್ರೂಕ್ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಜೀನ್-ಕ್ಲಾಡ್ ಕ್ಯಾರಿಯೇರ್ ಮತ್ತು ಪೀಟರ್ ಬ್ರೂಕ್ರಿಗೆ 'ತತೋ ಜಯಮುದೀರಯೇತ್' ಎಂದು ಒಂದು ಲಕ್ಷ ಶ್ಲೋಕಗಳ 'ಮಹಾಭಾರತ'ದ ಕಥೆ ಹೇಳಿದವರು ಪ್ಯಾರಿಸ್ನಲ್ಲಿರುವ ಸಂಸ್ಕೃತ ವಿದ್ವಾಂಸ ಫಿಲಿಪ್ಪೆ ಲಾವಸ್ಟೈನ್. ಈ ಲೇಖನ ಪೀಟರ್ ಬ್ರೂಕ್ರ ನಾಟಕ ಪ್ರಯೋಗದ ವಿಮಶರ್ೆ ಅಲ್ಲ; ಜೀನ್-ಕ್ಲಾಡ್ ಕ್ಯಾರಿಯೇರ್ ಬರೆದಿರುವ ರಂಗಕೃತಿಯ ಒಂದು ಅವಲೋಕನ ಮಹಾಭಾರತವನ್ನು ನಿಮ್ಮ ಅಂಗೈಯಲ್ಲಿ ಹಿಡಿದಿಡುವುದು ಅಸಾಧ್ಯ. ಮೂಲ ಪಠ್ಯದಲ್ಲಿ ನಮ್ಮ ಕಲ್ಪನೆಗಳನ್ನು ತುರುಕುವುದಿಲ್ಲ. ನಮ್ಮ ತೀಮರ್ಾನಗಳನ್ನು ಹೇರುವುದಿಲ್ಲ. ಸಾಧ್ಯವಾದಷ್ಟೂ ಇಪ್ಪತ್ತನೆಯ ಶತಮಾನದ ನಮ್ಮ ವಿವೇಚನೆಯನ್ನು ಬಳಸುವುದಿಲ್ಲ ಎನ್ನುತ್ತಾರೆ ಕ್ಯಾರಿಯೇರ್.
ಕ್ಯಾರಿಯೇರ್ ಅವರ 238 ಪುಟಗಳ 'ಮಹಾಭಾರತ' ನಾಟಕದಲ್ಲಿ ದ್ಯೂತ ಕ್ರೀಡೆ, ಅರಣ್ಯವಾಸ ಮತ್ತು ಯುದ್ಧ ಎಂಬ ಮೂರು ಭಾಗಗಳಿವೆ. ಒಟ್ಟು ಇಪ್ಪತ್ತಾರು ದೃಶ್ಯಗಳಿವೆ. ಪುರಾಣಭಂಜನೆಯಲ್ಲಿ ನಿಗೂಢಗಳನ್ನು ಭೇದಿಸುವುದರಲ್ಲಿ ನಾಟಕಕಾರರಿಗೆ ಆಸಕ್ತಿ ಇಲ್ಲ. ಅಪನಂಬಿಕೆಯನ್ನು ಅಮಾನತ್ತಿನಲ್ಲಿಟ್ಟು ಅವಿಯಬೇಕಾದ ಪಾಶುಪಶಾಸ್ತ್ರ, ಊರ್ವಶಿ ಶಾಪ, ಭೀಮ-ಹನುಮರ ಭೇಟಿ, ಯಕ್ಷ ಪ್ರಶ್ನೆ, ಜಯದ್ರಥ ವಧೆಯ ಸಂದರ್ಭದಲ್ಲಿ ಕೃಷ್ಣನ ಇಂದ್ರಜಾಲದ ಸೂಯರ್ಾಸ್ತ, ಸ್ವಗರ್ಾರೋಹಣ, ಕುಂತಿ ಮಂತ್ರಾಭಿಮಾನಿ ದೇವತೆಗಳಿಂದ ಮಕ್ಕಳನ್ನು ಪಡೆಯುವುದು-ಇಂಥ ಪುರಾಣಾಂಶಗಳನ್ನು, ನಿಗೂಢಗಳನ್ನು ಉಳಿಸಿಕೊಳ್ಳಲಾಗಿದೆ. ಸಂಶೋಧಕರು ಪ್ರಕ್ಷಿಪ್ತಭಾಗವೆಂದು ಅಭಿಪ್ರಾಯ ಪಡುವ ಅಕ್ಷಯ ವಸ್ತ್ರದ ಪ್ರಸಂಗವೂ ಈ ನಾಟಕದಲ್ಲಿದೆ. ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆದಾಗ ಒಂದರ ಹಿಂದೆ ಇನ್ನೊಂದು, ಮತ್ತೊಂದು ಸೀರೆಗಳು ಬಂದವೆಂದು ಮಹಾಭಾರತ ವಣರ್ಿಸುತ್ತದೆ. ಆದರೆ ಜನಪ್ರಿಯ ಜನಪದ ಪರಂಪರೆಯಲ್ಲಿರುವಂತೆ ಒಂದೇ ಬಟ್ಟೆ ಅಸೀಮವಾಯಿತೆಂದು ನಾಟಕಕಾರ ಬರೆಯುತ್ತಾರೆ. ಕೃಷ್ಣ ಚತುರನಿದ್ದ, ದೂರದಶರ್ಿಯಾಗಿದ್ದ. ಆದರೆ ತ್ರಿಕಾಲಜ್ಞಾನಿ ಸರ್ವಶಕ್ತ ಆಗಿರಲಿಲ್ಲ ಎನ್ನುತ್ತಾರೆ 'ಯುಗಾಂತ'ದ ಲೇಖಕಿ ಇರಾವತಿ ಕವರ್ೆ. ಆದರೆ ಕ್ಯಾರಿಯೇರ್ ಹೇಳುತ್ತಾರೆ-ಮನುಷ್ಯನೋ? ದೇವರೋ? ನಿರ್ಧರಿಸುವುದು ನಮ್ಮಿಂದಾಗದು. ಚಚರ್ಾಸ್ಪದವಾದ ಐತಿಹಾಸಿಕ, ಆಧ್ಯಾತ್ಮಿಕ ಸತ್ಯಗಳಲ್ಲಿ ನಮಗೆ ಆಸಕ್ತಿ ಇಲ್ಲ. ನಿಸ್ಸಂಶಯವಾದ ನಾಟಕೀಯ ಸತ್ಯ ನಮ್ಮ ಗುರಿ. ಕೃಷ್ಣನ ಪಾತ್ರದ ಅಂತಃಸತ್ವ ಈ ಕೃತಿಯಲ್ಲಿ ಮೂಡಿಬಂದಿಲ್ಲ.
ಕ್ಯಾರಿಯೇರ್ ಅವರ 238 ಪುಟಗಳ 'ಮಹಾಭಾರತ' ನಾಟಕದಲ್ಲಿ ದ್ಯೂತ ಕ್ರೀಡೆ, ಅರಣ್ಯವಾಸ ಮತ್ತು ಯುದ್ಧ ಎಂಬ ಮೂರು ಭಾಗಗಳಿವೆ. ಒಟ್ಟು ಇಪ್ಪತ್ತಾರು ದೃಶ್ಯಗಳಿವೆ. ಪುರಾಣಭಂಜನೆಯಲ್ಲಿ ನಿಗೂಢಗಳನ್ನು ಭೇದಿಸುವುದರಲ್ಲಿ ನಾಟಕಕಾರರಿಗೆ ಆಸಕ್ತಿ ಇಲ್ಲ. ಅಪನಂಬಿಕೆಯನ್ನು ಅಮಾನತ್ತಿನಲ್ಲಿಟ್ಟು ಅವಿಯಬೇಕಾದ ಪಾಶುಪಶಾಸ್ತ್ರ, ಊರ್ವಶಿ ಶಾಪ, ಭೀಮ-ಹನುಮರ ಭೇಟಿ, ಯಕ್ಷ ಪ್ರಶ್ನೆ, ಜಯದ್ರಥ ವಧೆಯ ಸಂದರ್ಭದಲ್ಲಿ ಕೃಷ್ಣನ ಇಂದ್ರಜಾಲದ ಸೂಯರ್ಾಸ್ತ, ಸ್ವಗರ್ಾರೋಹಣ, ಕುಂತಿ ಮಂತ್ರಾಭಿಮಾನಿ ದೇವತೆಗಳಿಂದ ಮಕ್ಕಳನ್ನು ಪಡೆಯುವುದು-ಇಂಥ ಪುರಾಣಾಂಶಗಳನ್ನು, ನಿಗೂಢಗಳನ್ನು ಉಳಿಸಿಕೊಳ್ಳಲಾಗಿದೆ. ಸಂಶೋಧಕರು ಪ್ರಕ್ಷಿಪ್ತಭಾಗವೆಂದು ಅಭಿಪ್ರಾಯ ಪಡುವ ಅಕ್ಷಯ ವಸ್ತ್ರದ ಪ್ರಸಂಗವೂ ಈ ನಾಟಕದಲ್ಲಿದೆ. ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆದಾಗ ಒಂದರ ಹಿಂದೆ ಇನ್ನೊಂದು, ಮತ್ತೊಂದು ಸೀರೆಗಳು ಬಂದವೆಂದು ಮಹಾಭಾರತ ವಣರ್ಿಸುತ್ತದೆ. ಆದರೆ ಜನಪ್ರಿಯ ಜನಪದ ಪರಂಪರೆಯಲ್ಲಿರುವಂತೆ ಒಂದೇ ಬಟ್ಟೆ ಅಸೀಮವಾಯಿತೆಂದು ನಾಟಕಕಾರ ಬರೆಯುತ್ತಾರೆ. ಕೃಷ್ಣ ಚತುರನಿದ್ದ, ದೂರದಶರ್ಿಯಾಗಿದ್ದ. ಆದರೆ ತ್ರಿಕಾಲಜ್ಞಾನಿ ಸರ್ವಶಕ್ತ ಆಗಿರಲಿಲ್ಲ ಎನ್ನುತ್ತಾರೆ 'ಯುಗಾಂತ'ದ ಲೇಖಕಿ ಇರಾವತಿ ಕವರ್ೆ. ಆದರೆ ಕ್ಯಾರಿಯೇರ್ ಹೇಳುತ್ತಾರೆ-ಮನುಷ್ಯನೋ? ದೇವರೋ? ನಿರ್ಧರಿಸುವುದು ನಮ್ಮಿಂದಾಗದು. ಚಚರ್ಾಸ್ಪದವಾದ ಐತಿಹಾಸಿಕ, ಆಧ್ಯಾತ್ಮಿಕ ಸತ್ಯಗಳಲ್ಲಿ ನಮಗೆ ಆಸಕ್ತಿ ಇಲ್ಲ. ನಿಸ್ಸಂಶಯವಾದ ನಾಟಕೀಯ ಸತ್ಯ ನಮ್ಮ ಗುರಿ. ಕೃಷ್ಣನ ಪಾತ್ರದ ಅಂತಃಸತ್ವ ಈ ಕೃತಿಯಲ್ಲಿ ಮೂಡಿಬಂದಿಲ್ಲ.
ನಾಟಕ-ನಿರೂಪಣೆ
ಕಥನ ಸಂಪ್ರದಾಯದ ಮಹಾಕಾವ್ಯದ ಸೂತ-ಚಾರಣರ ಬದಲಿಗೆ ಈ ನಾಟಕದಲ್ಲಿ ವ್ಯಾಸನೇ ಸೂತ್ರಧಾರನಾಗಿದ್ದಾನೆ. ಅವನ ಜೊತೆಯಲ್ಲಿ ಆಗಾಗ ಮುಖ್ಯ ಪ್ರಶ್ನೆಗಳನ್ನು ಕೇಳುವ ಗಣೇಶ ಮತ್ತು ಒಬ್ಬ ಪುಟ್ಟ ಹುಡುಗ ಇದ್ದಾರೆ. ಈ ಪುಟ್ಟ ಬಾಲಕ ಮಹಾಯುದ್ಧವೊಂದರ ಅನಂತರ ಉಳಿಯುವ ಹತಭಾಗ್ಯ ತಲೆಮಾರಿನ ಪ್ರತಿನಿಧಿ. ದ್ಯೂತಕ್ರೀಡೆ ದೃಶ್ಯದ ಅಂತ್ಯದಲ್ಲಿ ವ್ಯಾಸ-ಗಣೇಶ-ಹುಡುಗ ಜೂಜಾಡುತ್ತಾರೆ. ಇಂಥಲ್ಲಿ ನಾಟಕಕಾರ ಮೌನದಲ್ಲಿ ಮಾತನಾಡುತ್ತಾನೆ. ವ್ಯಾಸ ಪಾತ್ರಧಾರಿ ಶಂತನುವಾಗಿ ಅಭಿನಯಿಸುವುದು. ಅಜರ್ುನ ಹನುಮಂತನಾಗಿ ಅಭಿನಯಿಸುವುದು-ಇಂಥ ಕಥನ ಸಂಪ್ರದಾಯದ ಅಂಶಗಳು ಈ ಕೃತಿಯಲ್ಲಿದೆ. ನಾಟಕೀಯ ತಂತ್ರದ ದೃಷ್ಟಿಯಿಂದ ಕ್ಯಾರಿಯೇರ್ ಮಾಡಿರುವ ಹಲವು ಸಣ್ಣಪುಟ್ಟ ಬದಲಾವಣೆಗಳು ಸೊಗಸಾಗಿವೆ. 'ಸ್ತ್ರೀಪರ್ವ'ದಲ್ಲಿ ಕುಪಿತ ಧೃತರಾಷ್ಟ್ರನ ಅಪ್ಪುಗೆಯಲ್ಲಿ ಭೀಮ ಸಾಯದಂತೆ ಕೃಷ್ಣ ಕಬ್ಬಿಣದ ವಿಗ್ರಹವನ್ನು ಮುಂದೆ ತಳ್ಳುವ ಸಂದರ್ಭ, ಈ ನಾಟಕದಲ್ಲಿ ಕೃಷ್ಣ ವಿಗ್ರಹದ ಬದಲಿಗೆ ಕುರುಕ್ಷೇತ್ರದಲ್ಲಿದ್ದ ಒಂದು ಹೆಣವನ್ನು ಧೃತರಾಷ್ಟ್ರ ಅಪ್ಪಿಕೊಳ್ಳುವಂತೆ ಮಾಡುತ್ತಾನೆ.
'ಮಹಾಭಾರತ' ನಾಟಕದಲ್ಲಿ ವಿದುರನ ಗೈರುಹಾಜರಿ ಎದ್ದುಕಾಣುತ್ತದೆ. ವಿದುರನ ಪಾತ್ರ ಮಹತ್ವದಲ್ಲ ಎನ್ನುವ ನಾಟಕಕಾರರ ವಾದವನ್ನು ಒಪ್ಪುವುದು ಕಷ್ಟ. ಮೂಲಕಾವ್ಯದ ಉಪಾಖ್ಯಾನಗಳಿಗೆ ಇಲ್ಲಿ ಸ್ಥಾನವಿಲ್ಲ. ಅನೇಕ ಮುಖ್ಯ ಪ್ರಸಂಗಗಳೂ ನಾಪತ್ತೆಯಾಗಿವೆ. ಅರಗಿನ ಮನೆಯ ವೃತ್ತಾಂತ, ಬಕಾಸುರ ವಧೆ, ದ್ರೌಪದೀ ಸ್ವಯಂವರ, ಖಾಂಡವದಹನ, ಸುಭದ್ರಾ ಕಲ್ಯಾಣ, ಇತ್ಯಾದಿ. ಭೀಮ-ಹಿಡಿಂಬೆಯರ ವಿವಾಹ ಆದಿಪರ್ವದ ಬದಲಿಗೆ ಅರಣ್ಯಪರ್ವದಲ್ಲಿ ನಡೆಯುತ್ತದೆ. ಭೀಷ್ಮ ಪರ್ವದ ಅನಂತರದ ಯುದ್ಧ ಕಾಲದ ದೃಶ್ಯಗಳು ಶರವೇಗದಲ್ಲಿ ಸಾಗುತ್ತವೆ. ಮಹಾಭಾರತದ ಕೊನೆಯಲ್ಲಿರುವ ಶಾಂತಿ ಪರ್ವ, ಅನುಶಾಸನ ಪರ್ವ, ಮಹಾಪ್ರಸ್ಥಾನಿಕ ಪರ್ವದ ಘಟನೆಗಳು ಈ ನಾಟಕದಲ್ಲಿಲ್ಲ. ಸೌಪ್ತಿಕ ಪರ್ವದಲ್ಲಿ ಅಶ್ವತ್ಥಾಮನಿಗೆ ಸ್ಫೂತರ್ಿ ನೀಡಿದ ಕಾಗೆ-ಗೂಬೆಗಳ ವೃತ್ತಾಂತ, ಮೌಸಲ ಪರ್ವದಲ್ಲಿ ಅಜರ್ುನ ತನ್ನ ಕಾವಲಲ್ಲಿದ್ದ ಯಾದವ ಸ್ತ್ರೀಯರನ್ನು ಕಳ್ಳರಿಂದ ರಕ್ಷಿಸಲು ಅಸಮರ್ಥನಾಗುವುದು-ಇಂಥ ಧ್ವನಿಪೂರ್ಣ ಘಟನೆಗಳ ಪರಿತ್ಯಾಗ ಸಮರ್ಥನೀಯವಲ್ಲ.
ಪ್ರಮಾದ?
ಈ ನಾಟಕದ ಇಂಗ್ಲಿಷ್ ಭಾಷಾಂತರದಲ್ಲಿರುವ ಭಾಷೆ ಆಡುಮಾತಿಗೆ ಹತ್ತಿರದ 'ಲೋಕಧಮರ್ೀ ಭಾಷೆ', ಲವಲವಿಕೆಯ ಚುರುಕು ಸಂಭಾಷಣೆ ಗಮನ ಸೆಳೆಯುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಮಹಾಭಾರತದ ಕಾವ್ಯ ಗುಣ-ರೂಪಕ ಶೈಲಿ ಕಾಣಿಸುವುದಿಲ್ಲ. ಆದರೆ ನಾಟಕಗಳಲ್ಲಿ ಸಂಭಾಷಣೆ ಮತ್ತು ಅಭಿನಯ ಅವಳಿ-ಜವಳಿಗಳು, ನಾಟಕ ಬರೇ ಸಂಭಾಷಣೆಯಲ್ಲ. ಒಂದು ಸಂಘಟನೆ ಎಂಬ ಎಚ್ಚರ ನಾಟಕಕಾರರಲ್ಲಿದೆ. 'ಕ್ಷತ್ರಿಯ' 'ಧರ್ಮ' ಶಬ್ದಗಳನ್ನು ಭಾಷಾಂತರಿಸುವುದು ಕಷ್ಟವೆಂದು ಮೂಲ ರೂಪದಲ್ಲೆ ಬಳಸಿದ್ದಾರೆ. ಸೂತಪುತ್ರ - 'ಖಿಜ ಠಟಿ ಠಜಿ ಚಿ ಜಡಿತಜಡಿ' ಆಗಿರುವುದು, ಸುದೇಷ್ಣಾ ಉಣಜಜಟಿಚಿ ಆಗಿರುವುದು - ಇಂಥ ಕೆಲವು ಪ್ರಮಾದಗಳಿವೆ. ವರ್ಣ-ವರ್ಣ ಸಂಕರ-ಜಾತಿ ವ್ಯವಸ್ಥೆಗಳ ಸೂಕ್ಷ್ಮಗಳನ್ನು ನಾಟಕಕಾರರು ಸರಿಯಾಗಿ ಗ್ರಹಿಸಿಲ್ಲ.
ತೃಷ್ಣಾಕ್ಷಯದಿಂದ ಉಂಟಾಗುವ ಸುಖದ ಪರಿಪೋಷವೇ ಶಾಂತ, ಅದೇ ಮಹಾಭಾರತದಲ್ಲಿ ಪ್ರಧಾನ ರಸ ಎಂದು 'ಧನ್ಯಾಲೋಕ'ದ ಆನಂದವರ್ಧನ ಹೇಳುತ್ತಾನೆ. ಯಾವುದನ್ನು ಜಯ ಎನ್ನುತ್ತಾರೋ ಅದಂತೂ ನನಗೆ ಪರಾಜಯದಂತೆ ಕಾಣುತ್ತದೆ ಎನ್ನುತ್ತಾರೆ ಮಹಾಭಾರತದ ಯುಧಿಷ್ಠಿರ. ವಿಧಿಯ ವಿಲಾಸ ಮತ್ತು ವ್ಯಕ್ತಿಯ ಸ್ವಾತಂತ್ರ್ಯಯದ ಪ್ರಶ್ನೆ ಮಹಾಭಾರತದ ವಸ್ತು ಎಂದು ಪೀಟರ್ ಬ್ರೂಕ್ ಅಥರ್ೈಸುತ್ತಾರೆ. ನಾಟಕಕಾರ ಕ್ಯಾರಿಯೇರ್ ಭಾರತ ಶಬ್ದಕ್ಕಿರುವ ಭಾರತ ವರ್ಷದ ಪ್ರಜೆ ಎಂಬ ಅರ್ಥದ ಕಡೆ ನಮ್ಮ ಗಮನ ಸೆಳೆಯುತ್ತ 'ಇದು ಮನುಕುಲದ ಮಹಾ ಇತಿಹಾಸ' ಎನ್ನುತ್ತಾರೆ. 'ಸರ್ವನಾಶವನ್ನು ತಪ್ಪಿಸುವುದು ಸಾಧ್ಯವೇ?' ಎಂಬ ಪ್ರಶ್ನೆ ಈ ನಾಟಕದಲ್ಲಿ ಮತ್ತೆ ಮತ್ತೆ ಕೇಳಿಸುತ್ತದೆ. ಮಹಾನಾಯಕರು ಕಾರಣಗೊತ್ತಿಲ್ಲದೆ ನಾಶವಾಗುತ್ತಾರೆ ಎನ್ನುತ್ತಾರೆ ವ್ಯಾಸ. ಯುದ್ಧ ಮುಗಿಯಿತೇ? ಎಂದು ಪ್ರಶ್ನಿಸಿದ ಹುಡುಗನಿಗೆ ವ್ಯಾಸ ಹೀಗೆ ಉತ್ತರಿಸುತ್ತಾನೆ-ನೂರ ಎಂಬತ್ತು ಲಕ್ಷ ಹೆಣಗಳ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ. ನಿನ್ನ ಕಾವ್ಯದ ಅಂತ್ಯ ನಿನಗೆ ತಿಳಿದಿದೆಯೇ? ಅಜರ್ುನನ ಪ್ರಶ್ನೆ. ವ್ಯಾಸನ ಉತ್ತರ-ಅದಕ್ಕೆ ಅಂತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ, ಈ ಜಗತ್ತು ಕ್ರೂರವಾಗಿದೆ. ಈ ಜಗತ್ತಿನ ಕ್ರೌರ್ಯವನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಧೃತರಾಷ್ಟ್ರನ ಈ ಪ್ರಶ್ನೆಗೆ ಭೀಷ್ಮ ಹೀಗೆನ್ನುತ್ತಾನೆ-ನೀನು ಅದರ ಭಾಗ.
'ಮಹಾಭಾರತ' ನಾಟಕದಲ್ಲಿ ವಿದುರನ ಗೈರುಹಾಜರಿ ಎದ್ದುಕಾಣುತ್ತದೆ. ವಿದುರನ ಪಾತ್ರ ಮಹತ್ವದಲ್ಲ ಎನ್ನುವ ನಾಟಕಕಾರರ ವಾದವನ್ನು ಒಪ್ಪುವುದು ಕಷ್ಟ. ಮೂಲಕಾವ್ಯದ ಉಪಾಖ್ಯಾನಗಳಿಗೆ ಇಲ್ಲಿ ಸ್ಥಾನವಿಲ್ಲ. ಅನೇಕ ಮುಖ್ಯ ಪ್ರಸಂಗಗಳೂ ನಾಪತ್ತೆಯಾಗಿವೆ. ಅರಗಿನ ಮನೆಯ ವೃತ್ತಾಂತ, ಬಕಾಸುರ ವಧೆ, ದ್ರೌಪದೀ ಸ್ವಯಂವರ, ಖಾಂಡವದಹನ, ಸುಭದ್ರಾ ಕಲ್ಯಾಣ, ಇತ್ಯಾದಿ. ಭೀಮ-ಹಿಡಿಂಬೆಯರ ವಿವಾಹ ಆದಿಪರ್ವದ ಬದಲಿಗೆ ಅರಣ್ಯಪರ್ವದಲ್ಲಿ ನಡೆಯುತ್ತದೆ. ಭೀಷ್ಮ ಪರ್ವದ ಅನಂತರದ ಯುದ್ಧ ಕಾಲದ ದೃಶ್ಯಗಳು ಶರವೇಗದಲ್ಲಿ ಸಾಗುತ್ತವೆ. ಮಹಾಭಾರತದ ಕೊನೆಯಲ್ಲಿರುವ ಶಾಂತಿ ಪರ್ವ, ಅನುಶಾಸನ ಪರ್ವ, ಮಹಾಪ್ರಸ್ಥಾನಿಕ ಪರ್ವದ ಘಟನೆಗಳು ಈ ನಾಟಕದಲ್ಲಿಲ್ಲ. ಸೌಪ್ತಿಕ ಪರ್ವದಲ್ಲಿ ಅಶ್ವತ್ಥಾಮನಿಗೆ ಸ್ಫೂತರ್ಿ ನೀಡಿದ ಕಾಗೆ-ಗೂಬೆಗಳ ವೃತ್ತಾಂತ, ಮೌಸಲ ಪರ್ವದಲ್ಲಿ ಅಜರ್ುನ ತನ್ನ ಕಾವಲಲ್ಲಿದ್ದ ಯಾದವ ಸ್ತ್ರೀಯರನ್ನು ಕಳ್ಳರಿಂದ ರಕ್ಷಿಸಲು ಅಸಮರ್ಥನಾಗುವುದು-ಇಂಥ ಧ್ವನಿಪೂರ್ಣ ಘಟನೆಗಳ ಪರಿತ್ಯಾಗ ಸಮರ್ಥನೀಯವಲ್ಲ.
ಪ್ರಮಾದ?
ಈ ನಾಟಕದ ಇಂಗ್ಲಿಷ್ ಭಾಷಾಂತರದಲ್ಲಿರುವ ಭಾಷೆ ಆಡುಮಾತಿಗೆ ಹತ್ತಿರದ 'ಲೋಕಧಮರ್ೀ ಭಾಷೆ', ಲವಲವಿಕೆಯ ಚುರುಕು ಸಂಭಾಷಣೆ ಗಮನ ಸೆಳೆಯುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಮಹಾಭಾರತದ ಕಾವ್ಯ ಗುಣ-ರೂಪಕ ಶೈಲಿ ಕಾಣಿಸುವುದಿಲ್ಲ. ಆದರೆ ನಾಟಕಗಳಲ್ಲಿ ಸಂಭಾಷಣೆ ಮತ್ತು ಅಭಿನಯ ಅವಳಿ-ಜವಳಿಗಳು, ನಾಟಕ ಬರೇ ಸಂಭಾಷಣೆಯಲ್ಲ. ಒಂದು ಸಂಘಟನೆ ಎಂಬ ಎಚ್ಚರ ನಾಟಕಕಾರರಲ್ಲಿದೆ. 'ಕ್ಷತ್ರಿಯ' 'ಧರ್ಮ' ಶಬ್ದಗಳನ್ನು ಭಾಷಾಂತರಿಸುವುದು ಕಷ್ಟವೆಂದು ಮೂಲ ರೂಪದಲ್ಲೆ ಬಳಸಿದ್ದಾರೆ. ಸೂತಪುತ್ರ - 'ಖಿಜ ಠಟಿ ಠಜಿ ಚಿ ಜಡಿತಜಡಿ' ಆಗಿರುವುದು, ಸುದೇಷ್ಣಾ ಉಣಜಜಟಿಚಿ ಆಗಿರುವುದು - ಇಂಥ ಕೆಲವು ಪ್ರಮಾದಗಳಿವೆ. ವರ್ಣ-ವರ್ಣ ಸಂಕರ-ಜಾತಿ ವ್ಯವಸ್ಥೆಗಳ ಸೂಕ್ಷ್ಮಗಳನ್ನು ನಾಟಕಕಾರರು ಸರಿಯಾಗಿ ಗ್ರಹಿಸಿಲ್ಲ.
ತೃಷ್ಣಾಕ್ಷಯದಿಂದ ಉಂಟಾಗುವ ಸುಖದ ಪರಿಪೋಷವೇ ಶಾಂತ, ಅದೇ ಮಹಾಭಾರತದಲ್ಲಿ ಪ್ರಧಾನ ರಸ ಎಂದು 'ಧನ್ಯಾಲೋಕ'ದ ಆನಂದವರ್ಧನ ಹೇಳುತ್ತಾನೆ. ಯಾವುದನ್ನು ಜಯ ಎನ್ನುತ್ತಾರೋ ಅದಂತೂ ನನಗೆ ಪರಾಜಯದಂತೆ ಕಾಣುತ್ತದೆ ಎನ್ನುತ್ತಾರೆ ಮಹಾಭಾರತದ ಯುಧಿಷ್ಠಿರ. ವಿಧಿಯ ವಿಲಾಸ ಮತ್ತು ವ್ಯಕ್ತಿಯ ಸ್ವಾತಂತ್ರ್ಯಯದ ಪ್ರಶ್ನೆ ಮಹಾಭಾರತದ ವಸ್ತು ಎಂದು ಪೀಟರ್ ಬ್ರೂಕ್ ಅಥರ್ೈಸುತ್ತಾರೆ. ನಾಟಕಕಾರ ಕ್ಯಾರಿಯೇರ್ ಭಾರತ ಶಬ್ದಕ್ಕಿರುವ ಭಾರತ ವರ್ಷದ ಪ್ರಜೆ ಎಂಬ ಅರ್ಥದ ಕಡೆ ನಮ್ಮ ಗಮನ ಸೆಳೆಯುತ್ತ 'ಇದು ಮನುಕುಲದ ಮಹಾ ಇತಿಹಾಸ' ಎನ್ನುತ್ತಾರೆ. 'ಸರ್ವನಾಶವನ್ನು ತಪ್ಪಿಸುವುದು ಸಾಧ್ಯವೇ?' ಎಂಬ ಪ್ರಶ್ನೆ ಈ ನಾಟಕದಲ್ಲಿ ಮತ್ತೆ ಮತ್ತೆ ಕೇಳಿಸುತ್ತದೆ. ಮಹಾನಾಯಕರು ಕಾರಣಗೊತ್ತಿಲ್ಲದೆ ನಾಶವಾಗುತ್ತಾರೆ ಎನ್ನುತ್ತಾರೆ ವ್ಯಾಸ. ಯುದ್ಧ ಮುಗಿಯಿತೇ? ಎಂದು ಪ್ರಶ್ನಿಸಿದ ಹುಡುಗನಿಗೆ ವ್ಯಾಸ ಹೀಗೆ ಉತ್ತರಿಸುತ್ತಾನೆ-ನೂರ ಎಂಬತ್ತು ಲಕ್ಷ ಹೆಣಗಳ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ. ನಿನ್ನ ಕಾವ್ಯದ ಅಂತ್ಯ ನಿನಗೆ ತಿಳಿದಿದೆಯೇ? ಅಜರ್ುನನ ಪ್ರಶ್ನೆ. ವ್ಯಾಸನ ಉತ್ತರ-ಅದಕ್ಕೆ ಅಂತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ, ಈ ಜಗತ್ತು ಕ್ರೂರವಾಗಿದೆ. ಈ ಜಗತ್ತಿನ ಕ್ರೌರ್ಯವನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಧೃತರಾಷ್ಟ್ರನ ಈ ಪ್ರಶ್ನೆಗೆ ಭೀಷ್ಮ ಹೀಗೆನ್ನುತ್ತಾನೆ-ನೀನು ಅದರ ಭಾಗ.
ವಿಮರ್ಶಕ ಕಂಡಂತೆ
ಪೀಟರ್ ಬ್ರೂಕ್ ನಿದರ್ೇಶಿಸಿದ ಈ ನಾಟಕದ ಪ್ರಯೋಗದಲ್ಲಿ ರಂಗಭೂಮಿ ವಿಮರ್ಶಕ ರುಸ್ತುಂಭರೂಚ ಮೆಚ್ಚಿಕೊಂಡ ದೃಶ್ಯ ದ್ರೋಣ-ಅಜರ್ುನ-ಏಕಲವ್ಯರ ಶಸ್ತ್ರಾಭ್ಯಾಸದ ಸನ್ನಿವೇಶ. ಪೀಟರ್ ಬ್ರೂಕ್ ಅವರ ನಿದರ್ೇಶನದ ಕುರಿತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. 'ಲಂಡನ್ ಟೈಮ್ಸ್'ನ ಕಲಾವಿಮರ್ಶಕ 'ಮಹಾಭಾರತ'ದ 'ರಂಗಪ್ರಯೋಗವನ್ನು ಈ ಶತಮಾನದ ಮುಖ್ಯ ರಂಗಘಟನೆ' ಎಂದು ಶ್ಲಾಘಿಸಿದ್ದಾನೆ. ಅಂತರ್ ಸಾಂಸ್ಕೃತಿಕ ಸಮನ್ವಯ ಪೀಟರ್ ಬ್ರೂಕರ ಪ್ರಯೋಗದ ವೈಶಿಷ್ಟ್ಯ. ಆದರೆ ಈ ಕಾರಣಕ್ಕಾಗಿಯೇ ಭಾರತೀಯ ವಿಮರ್ಶಕ ರುಸ್ತುಂಭರೂಚ ಇದನ್ನು 'ಸಾಂಸ್ಕೃತಿಕ ಮಸಾಲೆ' ಎಂದು ಗೇಲಿ ಮಾಡಿದ್ದಾರೆ. ಸಾಂಪ್ರದಾಯಿಕ ಭಾರತೀಯ ರಂಗಭೂಮಿಯ ಮಾಧ್ಯಮಗಳನ್ನು 'ವಿದೇಶೀಯನೊಬ್ಬ ಶ್ಲಾಘಿಸಬಹುದು. ಆದರೆ ಅನುಕರಿಸುವುದು ಅಸಾಧ್ಯ' ಎನ್ನುವ ಪೀಟರ್ ಬ್ರೂಕರಿಗೆ ತನ್ನ ಮಿತಿಗಳ ಅರಿವಿದೆ. 'ಈ ರೂಪಾಂತರದ ಮೂಖ್ಯ ಲಕ್ಷಣವೇ ಸರಳೀಕರಣ' (ರುಸ್ತುಂಭರೂಚ) ಎಂಬ ವಿಮಶರ್ೆ ಸರಿಯಾಗಿದೆ. ಆದರೆ 'ಪಾಶ್ಚಾತ್ಯ ಪ್ರೇಕ್ಷಕರಿಗಾಗಿ' 'ಭಾರತದ ರುಚಿ' ಇರುವ ಮಹಾಭಾರತ ನಾಟಕವನ್ನು ನೀಡುವುದು ಪೀಟರ್ ಬ್ರೂಕರ ಉದ್ದೇಶ. 'ತಾನ್ ಪ್ರತಿ ನೈಷ ಯತ್ನಃ, ವಿಪುಲಾಚ ಪೃಥ್ವೀ' (ಈ ಯತ್ನ ಅವರಿಗಿಲ್ಲ. ಪರಿಮಿತವೇ ಪೃಥ್ವಿ) ಎನ್ನುವ ಸ್ವಾತಂತ್ರ್ಯ ನಿದರ್ೇಶಕರಿಗಿದೆ. (ಈಗ ಈ ನಾಟಕದ ಸಿನಿಮಾ ಅವತರಣಿಕೆ ಬಿಡುಗಡೆಯಾಗಿದೆ.)
ಭಾಸ, ಮಹಾಭಾರತದ ಕಥೆಗಳನ್ನು ಆಧರಿಸಿ ಆರು ನಾಟಕಗಳನ್ನು ಬರೆದಿದ್ದಾನೆ. ಭವಭೂತಿ ಸಮಗ್ರ ರಾಮಾಯಣವನ್ನು ಅನೇಕ ಬದಲಾವಣೆಗಳೊಂದಿಗೆ ನಾಟಕ ಮಾಧ್ಯಮಕ್ಕೆ ತಂದ. ಆದರೆ ಭಾಸ ಸಂಪೂರ್ಣ ಮಹಾಭಾರತ ಪ್ರಯೋಗದ ಕುರಿತು ಯೋಚಿಸಲಿಲ್ಲ. ಗಂಡು-ಹೆಣ್ಣಿನ ಸಂಬಂಧದಲ್ಲಿ ಆಸಕ್ತನಾದ ಕಾಳಿದಾಸ ಮಹಾಭಾರತದ ಶಕುಂತಳೋಪಾಖ್ಯಾನಕ್ಕೆ ಅಭಿಜ್ಞಾನವನ್ನು ನೀಡಿ ರೂಪಾಂತರಿಸಿದ. ಯಕ್ಷಗಾನದಂಥ ಮಾಧ್ಯಮದಲ್ಲಿ 'ಮಹಾಭಾರತ'ದಿಂದ ಆಯ್ದ 'ಕಾಳಗ', 'ಸಂಧಿ', 'ಕಲ್ಯಾಣ'ಗಳ ಪ್ರಸಂಗಗಳಿವೆ. ಆದರೆ ಸಮಗ್ರ ಮಹಾಭಾರತದ ಪ್ರಸಂಗ-ಪ್ರಯೋಗ ಯಕ್ಷಗಾನ ಪರಂಪರೆಯಲ್ಲಿಲ್ಲ. ಆಧುನಿಕ ಭಾರತೀಯ ರಂಗಭೂಮಿಯಲ್ಲಿ ಧರ್ಮವೀರ ಭಾರತೀ ಅವರ 'ಅಂಧಯುಗ' (ಹಿಂದೀ) ಮಹಾಭಾರತದ ವಸ್ತುವಿರುವ ಒಂದು ಮುಖ್ಯ ನಾಟಕ. ಈ ಹಿನ್ನೆಲೆಯಲ್ಲಿ ಪೀಟರ್ ಬ್ರೂಕ್ ಮತ್ತು ಕ್ಯಾರಿಯೇರ್ 'ಮಹಾಭಾರತ'ವನ್ನು ಟಿವಿಗೆ ಇಳಿಸದೆ, ಸಿನಿಮಾ ಪರದೆಗೆ ಬೆಳೆಸದೆ, ರಂಗಭೂಮಿಯಲ್ಲಿ ಮೊದಲು ಪ್ರದಶರ್ಿಸಲು ಯೋಜಿಸಿದ್ದು ಮಹತ್ವದ, ಮಹತ್ವಾಕಾಂಕ್ಷೆಯ ನಿಧರ್ಾರ. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಜೀನ್-ಕ್ಲಾಡ್ ಕ್ಯಾರಿಯೇರ್ನ ನಾಟಕ 'ಒಂದು ಒಳ್ಳೆಯ ರಂಗಕೃತಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂಲ ಮಹಾಕಾವ್ಯದ ವಸ್ತುವನ್ನು ವಿರೂಪಗೊಳಿಸುವ ಯಾವ ಬದಲಾವಣೆಯನ್ನೂ ನಾಟಕಕಾರ ಮಾಡಿಲ್ಲ' ಈ ವ್ಯಾಸ ಭಕ್ತಿ ಆಶ್ಚರ್ಯ ಹುಟ್ಟಿಸುತ್ತದೆ.
ವಿದೇಶೀಯರು ಕಂಡ 'ಮಹಾಭಾರತ'
- ಜಗತ್ತಿನ ಶ್ರೇಷ್ಠ ವೀರಗಾಥೆ ಮಹಾಭಾರತ. ಹಲವರಿಂದ ಪ್ರಶಂಸೆ, ವಿಶ್ವದ ಒಲವು, ಇತಿಹಾಸ, ವಿವೇಕ, ಮಾನವನ ಮನಸ್ಸಿನ ಪದರುಗಳು, ದಂತಕಥೆಗಳೆಲ್ಲ ಒಂದಾಗಿ ಮೂಡಿರುವ, ಸ್ಫುಟವಾಗಿ ಅನುವಾದಿತಗೊಂಡು ಜಾಗತಿಕ ಘಟನೆಯಾಗಿರುವಂಥ ಒಂದು ಮಹಾನ್ ನಾಟಕ.
- ಇದು ಭಾರತದ್ದಾದರೂ ಸಮಸ್ತ ವಿಶ್ವಕ್ಕೆ ಅನ್ವಯಿಸುವಂಥದ್ದು. ಇದು ಭೂತಕಾಲದ್ದಾದರೂ ವರ್ತಮಾನಕಾಲದ್ದು. ವೈಯಕ್ತಿಕವಾದದ್ದಾದರೂ ನೆರೆಯವನದ್ದು. ಉದ್ವೇಗ ತುಂಬಿದ ಕಥೆ ಮತ್ತು ಉತ್ತಮ ಅಭಿನಯದಿಂದ ಕೂಡಿದ್ದು ವಿಧಿವಿಹಿತವಾಗಿದೆ. ಇದು ಸರಳವಾಗಿದ್ದು ಗುರುತಿಸನಹುದಾದಂಥದ್ದಾಗಿದ್ದರೂ ಇದಕ್ಕೆ ಇನ್ನೊಂದು ದೊಡ್ಡ ಆಯಾಮವಿದೆ.
- ಯುರೋಪಿನಲ್ಲಿ ಮಹಾಭಾರತ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಇದನ್ನು ಈ ಕಾಲದ ಒಂದು ಉತ್ತಮ ರಂಗಘಟನೆ ಎಂದು ಗುರುತಿಸಲಾಗಿದೆ.
- ರಂಗಭೂಮಿಯ ಒಂದು ಅಂಶವಾಗಿ ಇದು ಕಾಲದ ಒಂದು ಹೆಗ್ಗುರುತಿನಿಂತಿದೆ. ನಾಟಕವಾಗಿ ಓದಲು ಇದು ಕಲ್ಪನೆಗಳನ್ನು ಮಿತಿಮೀರಿ ಉದ್ದೀಪನಗೊಳಿಸುತ್ತದೆ. ಇದೊಂದು ವೀರಗಾಥೆ ಮತ್ತು ಇಡಿಯ ವಿಶ್ವದ ಇತಿಹಾಸ.
- ರುಸ್ತುಂ ಭರೂಚ
(ಅನುವಾದ: ಕೆ. ವಿ. ಅಕ್ಷರ)
ಬ್ರೂಕ್ ಇಷ್ಟಪಡಲಿ ಬಿಡಲಿ, ಈ ಮಹಾಭಾರತ ಆಗಿರುವುದು ಆತನೇ ಪಾಕಶಾಸ್ತ್ರಿಯಾಗಿರುವ ಒಂದು ಸಾಂಸಕ್ಕೃತಿಕ ಮಸಾಲೆಯಂತೆ. ಈ ಮಸಾಲೆಯ ಹಲವಾರು ಅಂಗಗಳು ಪ್ರಪಂಚದ ಹಲವಾರು ಕಡೆಗಳಿಂದ ಬಂದಿವೆ. ಆದರೆ ಇವೆಲ್ಲವನ್ನೂ ಕೂಡಿಸುವ ವೈಶಿಷ್ಟ್ಯ ರುಚಿ ಪೀಟರ್ ಬ್ರೂಕನ 'ಒಗ್ಗರಣೆ'ಯಿಂದ ಬಂದಿದೆ.
ಈ ಪ್ರಯೋಗದ ಯಾವುದೇ ಅಂಶವಿರಲಿ, ಅದರ ಮೇಲೆ ಬ್ರೂಕನ ಮುದ್ರೆ ಬಿದ್ದಿದೆಯೆಂಬುದಂತೂ ನಿವರ್ಿವಾದ. ಅದೊಂದು ಮುಖವಾಡವಿರಲಿ, ಸಂಗೀತೋಪಕರಣವಿರಲಿ, ಒಮ್ಮೆ ಪೀಟರ್ ಬ್ರೂಕನ ಮುದ್ರೆ ಬಿದ್ದಿತೆಂದಾದರೆ ಅವು ತಮ್ಮ ಸಂಸ್ಕೃತಿಯ ಛಾಯ ಕಳೆದು ಅವನದ್ದಾಗುತ್ತದೆ. ಅಂಥ ಛಾತಿ ಬ್ರೂಕನಿಗಿದೆ. ಇಂಥ ನಿದರ್ೇಶನದ ಹತೋಟಿಯನ್ನು ನಾನು 'ಸಂಸ್ಕೃತಿಕ ವಸಾಹತುಶಾಹಿ'ಯ ಮುಖ್ಯ ಲಕ್ಷಣವೆಂದೇ ಗಣಿಸುತ್ತೇನೆ.
ಈ ಮಹಾಭಾತರ ನೋಡಿದ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವುದಾದರೂ ಏನು? ಐದೇ ನಿಮಿಷದಲ್ಲಿ ಮುಗಿದುಹೋಗುವ ಭಗವದ್ಗೀತೆಯಲ್ಲ. ಯಾವ ಪಾತ್ರವೂ ಅಲ್ಲ. ಯಾಕೆಂದರೆ ಪಾತ್ರ ಪಾತ್ರಗಳೇ ವ್ಯತ್ಯಾಸಹೀನವಾಗಿ ಮನಸ್ಸಲ್ಲಿ ಕಲಸಿಹೋಗುತ್ತದೆ. 'ಕಥೆ' ಅಥವಾ ಆ ಕಥೆಯ ಅರ್ಥ ಅದಂತೂ ಅಲ್ಲವೇ ಅಲ್ಲ. ನೆನಪಿನಲ್ಲುಳಿಯುವವು ಬರೀ ದೃಶ್ಯ ಚಮತ್ಕಾರಗಳು. ವಿರಾಟನ ಆಸ್ಥಾನದಲ್ಲಿ ತೇಲುವ ದೃಶ್ಯ-ತುಂಡು ತುಂಡಾದ ಕೀಚಕನ ದೇಹ ಚೀಲದೊಳಗೆ-ಮಾಯವಾಗುವ ಯಕ್ಷಿಣಿ, ನೆಲದಿಂದೇಳುವ ಬೆಂಕಿಯ ಚಿಲುಮೆ ಇತ್ಯಾದಿ......ಇದಕ್ಕೆಲ್ಲ ಅಲಂಕಾರ ಪ್ರಾಯವಾಗಿ ಬರುವುದು ಹಲವು ಭಾರತೀಯ ಕುಶಲ ವಸ್ತುಗಳು, ರತ್ನಗಂಬಳಿ, ಜಮಖಾನೆ, ತಟ್ಟೆ, ಚೆಂಡು ಹೂ, ಧೂಪ, ದಿಂಬು-ಇತ್ಯಾದಿ ನಮ್ಮ ವಿದೇಶೀ ಪ್ರವಾಸಿಗರನ್ನು ಆಕಷರ್ಿಸುವ ಗುಡಿಕೈಗಾರಿಕೆಯ ವಸ್ತುಗಳು. ಈ ಪೌವರ್ಾತ್ಯ ದೃಶ್ಯವೈಭವ ಭಾರತದ ಹೊಸತನದ ಮೋಹವೊಂದನ್ನು ಹುಟ್ಟುಹಾಕುವಂತಿದೆ.....ಈ ಪ್ರಯೋಗವನ್ನು ಇತಿಹಾಸ ಬ್ರೂಕನ ಒಂದು ಸಾಹಸ ಎಂದು ನೆನಪಿಟ್ಟುಕೊಂಡೀತೇ ಹೊರತು ಈ ಮಹಾಭಾರತವನ್ನು ನೆನಪಿಟ್ಟುಕೊಳ್ಳುವುದಿಲ್ಲ.
Tuesday, March 29, 2011
baNabhattana kaadambari[kannada] bannanje govindacharya
ಬಾಣಭಟ್ಟನ ಕಾದಂಬರಿ
(ಭಾಷಾಂತರ - ಬನ್ನಂಜೆ ಗೋವಿಂದಾಚಾರ್ಯ,
ಈಶಾವಾಸ್ಯ ಪ್ರಕಾಶನ.)
ಏಳನೆಯ ಶತಮಾನದಲ್ಲಿ ಹರ್ಷವರ್ಧನನ ಆಸ್ಥಾನದಲ್ಲಿದ್ದ ಬಾಣ ತನ್ನ 'ಕಾದಂಬರಿ'ಗೆ ವಸ್ತುವನ್ನು ಗುಣಾಢ್ಯನು ಪ್ರಾಕೃತದ ಉಪಭಾಷೆಯಾದ ಪೈಶಾಚಿಯಲ್ಲಿ ಬರೆದ 'ಬೃಹತ್ಕಥೆ'ಯಿಂದ ಆಯ್ದುಕೊಂಡಿದ್ದಾನೆ. ರಾಮಾಯಣ, ಮಹಾಭಾರತಗಳಂತೆ 'ಬೃಹತ್ಕಥೆ'ಯನ್ನೂ ಬಾಣ 'ಮೇರುಕೃತಿ' ಎಂದು ಗೌರವಿಸುತ್ತಾನೆ. 'ಬೃಹತ್ಕಥೆ' ಪ್ರಾಚೀನ ಭಾರತದಲ್ಲಿ ಧರ್ಮದ ಚೌಕಟ್ಟಿನಿಂದ ಕತೆಯನ್ನು ಸ್ವತಂತ್ರಗೊಳಿಸಿದೆ. ಮೊದಲ ಗ್ರಂಥ ಎಂಬ ಮನ್ನಣೆ ಗಳಿಸಿದೆ. ಈಶಾನ, ವೇಣೀಭಾರತ, ವಾಯುವಿಕಾರ ಮೊದಲಾದ ಜಾನಪದ, ಆಶುಕವಿಗಳ ಗೆಳೆಯನಾಗಿದ್ದ ಬಾಣ ತನ್ನ 'ಕಾದಂಬರಿ'ಯಲ್ಲಿ ಗುಣಾಢ್ಯನ ಕತೆಯಲ್ಲಿರುವ ಶಾಪ, ಪವಾಡಗಳು, ಕನಸುಗಾರಿಕೆ, ಅದ್ಭುತ ಮೊದಲಾದ ಜಾನಪದ ಅಂಶಗಳನ್ನು, ಕಥನ ತಂತ್ರವನ್ನು ಉಳಿಸಿಕೊಂಡಿದ್ದಾನೆ. ಪುಂಡರೀಕ ತನ್ನ ವೈಶಂಪಾಯನ ಮತ್ತು ಗಿಳಿಯ ಜನ್ಮ ಮುಗಿಸುವವರೆಗೆ, ಚಂದ್ರಾಪೀಡ ತನ್ನ ಶೂದ್ರಕ ಜನ್ಮ ಮುಗಿಸುವವರೆಗೆ ಮಹಾಶ್ವೇತೆ, ಕಾದಂಬರಿಯರು ಚಿರಕನ್ನಿಕೆಯರಾಗಿಯೇ ಇರುತ್ತಾರೆ. ಪುಂಡರೀಕನ ಹೆಣ ಚಂದ್ರಲೋಕದಲ್ಲಿ, ಚಂದ್ರಾಪೀಡನ ಹೆಣ ಭೂಲೋಕದಲ್ಲಿ ಆತ್ಮಗಳನ್ನು ಕಾಯುತ್ತಿರುತ್ತವೆ!
'ಬೃಹತ್ಕಥೆ'ಯ ಸುಮನರಾಜನ ಕಥೆಯ ಪಾತ್ರಗಳ ಹೆಸರುಗಳನ್ನು ಬಾಣ ಜಾಣತನದಿಂದ ಬದಲಾಯಿಸಿದ್ದಾನೆ. ಹಂಸ-ಗೌರಿ ಇವರ ಮಗಳು ಮಹಾಶ್ವೇತೆ. ಅವಳನ್ನು ಪ್ರೀತಿಸುವವ ಪುಂಡರೀಕ. ಎಲ್ಲವೂ ಬಿಳಿ ಹೆಸರುಗಳು. ಬಾಣನ ಸ್ವಂತಿಕೆ ಇರುವುದು ಅವನ ರೂಪಕಗಳು ಮತ್ತು ವೈವಿಧ್ಯಪೂರ್ಣ ವರ್ಣನೆಗಳಲ್ಲಿ. ಪ್ರಶಾಂತವಾದ ಹಾರೀತನ ಆಶ್ರಮ ವಿಚಿತ್ರವಾದ ಚಂಡಿಕಾಲಯ, ಕಪ್ಪು ಚೆಲುವೆ ಚಂಡಾಲಕನ್ಯೆ - ಬಿಳಿ ಚೆಲುವೆ ಮಹಾಶ್ವೇತೆ, ಮೈವೆತ್ತು ಬಂದ ಮುನಿಗಳ ಧ್ಯಾನ ಸಂಪತ್ತಿನಂತಿರುವ ತಪಸ್ವಿನಿ ಮಹಾಶ್ವೇತೆ - ಚಂದ್ರಾಪೀಡನನ್ನು ಕೆರಳಿಸುವ ಕಾದಂಬರಿಯ ಲಾವಣ್ಯ. ಗಂಡು-ಹೆಣ್ಣುಗಳ ವಿರಹ - ಮಾನಸಸುರತ ಎಲ್ಲವನ್ನೂ ಬಾಣ ಹೃದ್ಯವಾಗಿ ವಣರ್ಿಸುತ್ತಾನೆ. ಅವನು 'ವಶ್ಯವಾಣೀ - ಚಕ್ರವತರ್ಿ'. ಮಕ್ಕಳ ವಿವಾಹ ನಿರ್ಣಯವನ್ನು ಪ್ರಶ್ನಿಸುವ ಹಕ್ಕು ತಂದೆ - ತಾಯಿಗಳಿಗೆ ಇಲ್ಲ ಎಂದು ಬಾಣ ಹೇಳುತ್ತಾನೆ. ಸಹಗಮನವನ್ನು 'ಇದು ದಡ್ಡರು ಬರೆದ ಧರ್ಮ ಶಾಸ್ತ್ರ' ಎಂದು ಗೇಲಿ ಮಾಡುತ್ತಾನೆ.
'ಪ್ರೀತಿ ಕೂಟ'ದಲ್ಲಿ ಹುಟ್ಟಿದ ಬಾಣ, 'ಕಾದಂಬರಿಯಲ್ಲಿ ಗೆಳೆಯರ ಸ್ನೇಹ, ಗಂಡು-ಹೆಣ್ಣಿನ ಆಕರ್ಷಣೆಯಂಥ ಚಿರಂತನ ವಿಷಯಗಳ ಬಗ್ಗೆ ಬರೆದಿದ್ದಾನೆ. 'ಕಾಮನ ಶಾಸನವನ್ನು ಮೀರುವುದು ಯಾರಿಗೂ ಸಾಧ್ಯವಿಲ್ಲ', 'ಕವಿ ಬುದ್ಧಿಯ ಚಾಪಲ ನೂರು ಕನಸುಗಳನ್ನು ಕಾಣುತ್ತದೆ', 'ಬೇಕು ಬೇಡಗಳನ್ನು ದಾಟಿ ನಿದ್ರ್ವಂದ್ವವಾದ ಬಾಳನ್ನು ಬಾಳುವುದು ಬಲು ಕಷ್ಟ.' ಈ ಮಾತುಗಳ ಹಿಂದೆ 'ಮಹಾಭುಜಂಗ' ಬಾಣವನ್ನು ಕಾಣುತ್ತೇವೆ. ಕೋಶ ಓದುವುದು ಜತೆಯಲ್ಲೆ ದೇಶ ನೋಡಬೇಕೆಂದು ಹದಿಹರೆಯದಲ್ಲಿ ಊರು ಬಿಟ್ಟು, ಹಲವರ ಒಡನಾಟದಲ್ಲಿ ಬೆಳೆದ ಬಾಣ 'ಹರ್ಷ ಚರಿತ'ದಲ್ಲಿರುವ ತನ್ನ ಆತ್ಮಕತೆಯಲ್ಲಿ ಹೇಳುತ್ತಾನೆ - ಈ ಎಲ್ಲ ಮಂದಿಯ ಪರಿಚಯಕ್ಕೆ ಕಾರಣವಾದ ಈ ಧರ್ಮಭ್ರಷ್ಟ ಅಲೆಮಾರಿತನದಿಂದ ತನ್ನ ಬಾಳು ಸಮೃದ್ಧವಾಗಿದೆ. ಅನುಭವ ಮಾಗಿದೆ. ನಾನು ಕೆಳಕ್ಕಿಳಿದು ಸಂಸ್ಕೃತ ಸಾಹಿತ್ಯವನ್ನು ಎತ್ತರಕ್ಕೇರಿಸಿದ್ದೇನೆ. ಈ ಮಾತು ಅಹಂಕಾರದ್ದಲ್ಲ, ಸರಿಯಾದ ಸ್ವವಿಮಶರ್ೆ ಎಂದು 'ಕಾದಂಬರಿ' ಓದಿದಾಗ ಸ್ಪಷ್ಟವಾಗುತ್ತದೆ. ಬಾಣ 'ಕಾದಂಬರಿ'ಯನ್ನು ಪೂರ್ಣಗೊಳಿಸದೆ ತೀರಿಕೊಂಡಾಗ ಅವನ ಮಗ ಭೂಷಣ ಅದನ್ನು ಮುಂದುವರಿಸಿದ. ಬಾಣ ಬರೆದ ಕಥಾಭಾಗದ - ಕಾದಂಬರಿಯ ಪ್ರಣಯಸಂದೇಶದ ಕೊನೆಯ ಸಾಲಿನಲ್ಲಿ ಸಾವಿನ ಪ್ರಸ್ತಾಪವಿದೆ.
ದೀರ್ಘ ಸಮಾಸದ ಪದಪುಂಜಗಳ ಬಾಣನ ಶೈಲಿಯನ್ನು ಪಾಶ್ಚಾತ್ಯ ವಿಮರ್ಶಕರು ಕ್ಲಿಷ್ಟ ಎಂದು ಟೀಕಿಸಿದ್ದುಂಟು. ಬನ್ನಂಜೆಯವರು 'ಕಾದಂಬರಿ'ಯ ದ್ವಿತೀಯ ಮುದ್ರಣಕ್ಕೆ ಬರೆದಿರುವ 'ಬಾಣನ ಬದುಕು ಬರೆಹ'ವನ್ನು ಕುರಿತ ಲೇಖನದಲ್ಲಿ ಈ ಆರೋಪವನ್ನು ಅಲ್ಲಗಳೆಯುತ್ತಾರೆ. ಈ ವಿಷಯವನ್ನು ಅವರು ವಿವರವಾಗಿ ಉದಾಹರಣೆ ಸಹಿತ ಚಚರ್ಿಸಬೇಕಿತ್ತು. ಬನ್ನಂಜೆಯವರ ಭಾಷಾಂತರ ಮೂಲಕೃತಿಗೆ ನಿಷ್ಠವಾಗಿರುವ ಸ್ವತಂತ್ರ ಕೃತಿ. ಬಾಣನದು ಹೊಸದನ್ನು ಕಾಣುವ ಪ್ರತಿಭೆ; ಬನ್ನಂಜೆಯವರದು ಹೊಸದಾಗಿ ನಿರೂಪಿಸುವ ಪ್ರತಿಭೆ. 'ಬಾಣನ ಕಾದಂಬರಿ ಭಾರಿ ಜರದ ಶಾಲಿಯುಟ್ಟ ನೀರೆ. ಬನ್ನಂಜೆಯವರು ಅಪ್ಸರೆಗೆ ನೈಲಾನ್ ಸೀರೆ ಉಡಿಸಿದ್ದಾರೆ' ಎಂಬ ದ. ರಾ. ಬೇಂದ್ರೆಯವರ ಮುನ್ನುಡಿಯ ಮಾತಿನಲ್ಲಿ ಬನ್ನಂಜೆಯವರ ಭಾಷಾಂತರ ಒಂದು ಪುನರ್ಸೃಷ್ಟಿ ಎಂಬ ಮೆಚ್ಚಿಗೆ ಇದೆ. ಬೇಂದ್ರೆಯವರ ಕನ್ನಡ 'ಮೇಘದೂತ'ದಂತೆ, ಬನ್ನಂಜೆಯವರ 'ಕಾದಂಬರಿ' ಭಾಷಾಂತರ ಕೂಡ ಕನ್ನಡ ಸಾಹಿತ್ಯಕ್ಕೆ ಮುಖ್ಯ ಕೊಡುಗೆ.
ಬಾಣ ಬರೆದ ಕೊನೆಯ ಸಾಲುಗಳನ್ನು - ಕಾದಂಬರಿಯ ಪ್ರಣಯ ಸಂದೇಶವನ್ನು - ಬನ್ನಂಜೆಯವರು ಹೀಗೆ ಭಾಷಾಂತರಿಸಿದ್ದಾರೆ - ನಿನ್ನ ಪ್ರೀತಿಯ ಹಿರಿಮೆಯನ್ನು ನಾನು ಬಲ್ಲೆ, ಶಿರೀಥದಂಥ ಮೃದುಹೃದಯದ ಹೆಮ್ಮಕ್ಕಳಿಗೆ ಎಲ್ಲಿಂದ ಬರಬೇಕು ಇಂಥ ಗಡಸುಗಾರಿಕೆ! ಅದರಲ್ಲು ಇನ್ನೂ ಬಾಲ್ಯವನ್ನು ದಾಟದ ಹುಡುಗಿಯರ ಮಾತೇನು? ತಾವೆ ಸಂದೇಶ ಕಳಿಸುವವರು, ತಾವಾಗಿಯೇ ಪ್ರಿಯನೆಡೆಗೆ ತೆರಳುವವರು. ಯಾರಾದರೂ ಇದ್ದರೆ ಅವರ ಕೆಚ್ಚು ಮೆಚ್ಚುವಂಥದ್ದು. ನಾನಂತು ಮುದ್ದು ಹುಡುಗಿ. ಸಂದೇಶ ಕಳಿಸುವುದೆಂದರೆ ಬಲು ನಾಚಿಕೆ! ಸಂದೇಶ ಕಳಿಸುವುದಾದರೂ ಏನೆಂದು? 'ನೀನು ನನಗೆ ಅತಿ ಪ್ರಿಯ' ಎಂದರೆ ಪುನರುಕ್ತಿಯಾದೀತು. 'ನಿನಗೆ ನಾನು ಪ್ರಿಯಳೆ, ಅಲ್ಲವೆ?' ಎನ್ನುವುದು ಜಡ ಪ್ರಶ್ನೆಯಾದೀತು. 'ನಿನ್ನಲ್ಲಿ ನನಗೆ ಭಾರೀ ಪ್ರೇಮ' ಎಂದರೆ ಸೂಳೆಯರ ಮಾತಾಯಿತು'. 'ನಿನ್ನನ್ನು ಬಿಟ್ಟು ಬದುಕಲಾರೆ' ಎಂದರೆ ಅನುಭವಕ್ಕೆ ವಿರೋಧ. 'ಕಾಮದೇವ ನನ್ನನ್ನು ಕಾಡುತ್ತಿದ್ದಾನೆ' ಎನ್ನುವುದು ನನ್ನ ಸ್ವಂತದ ದೋಷವಾಯಿತು. 'ಕಾಮದೇವ ನನ್ನನ್ನು ನಿನಗೆ ಒಪ್ಪಿಸಿದ್ದಾರೆ' ಎನ್ನುವುದು ಅಭಿಸರಣದ ಒಂದು ಉಪಾಯವಾದೀತು. 'ನಿನ್ನನ್ನು ನಾನು ಬಗೆಯಲ್ಲಿ ಹೊತ್ತಿರುವೆ' ಎಂದರೆ ಬೆಲೆವೆಣ್ಣೆನ ದಿಟ್ಟತನವಾದೀತು. 'ನೀನು ಅವಶ್ಯ ನನ್ನೆಡೆಗೆ ಬರಬೇಕು' ಎಂದರೆ ಸೌಭಾಗ್ಯದ ಹೆಮ್ಮೆ ಎನಿಸೀತು. 'ನಾನೆ ನಿನ್ನೆಡೆಗೆ ಬರುವೆ' ಎನ್ನುವುದು ಹೆಣ್ತನದ ಚಾಪಲ. 'ಈ ಸೇವಕಿ ನಿನ್ನಲ್ಲೆ ಅನುರಕ್ತಳಾಗಿದ್ದಾಳೆ' ಎನ್ನುವುದು ಭಕ್ತಿಯನ್ನು ಪ್ರದಶರ್ಿಸುವ ಸಣ್ಣತನ. 'ನಿರಾಕರಣೆಯ ಭಯದಿಂದ ಸಂದೇಶವನ್ನೆ ಕಳಿಸಲಾರೆ' ಎನ್ನುವುದು ದಿಟ್ಟತನದ ಮಾತು. 'ನಿನ್ನನ್ನುಳಿದು ನನಗೆ ಬದುಕೆ ಭಯವಾಗಿದೆ' ಎನ್ನುವುದು ಅತಿಪ್ರಣಯವಾದೀತು. 'ನನ್ನ ಸಾವಿ ನಿನಗೆ ನನ್ನ ಪ್ರೀತಿಯ ಮಹತಿಯನ್ನು ತೋರಿಸೀತು' ಎನ್ನುವುದು ಅರ್ಥವಿಲ್ಲದ ಉದ್ಗಾರ......'
ಕಾದಂಬರಿ ಶಬ್ದಕ್ಕೆ ಹೆಂಡ ಎಂಬ ಅರ್ಥ ಇದೆ. ಪುರುಷಾರ್ಥಗಳಲ್ಲಿ ಒಂದಾದ ಕಾಮವನ್ನು ಚಿತ್ರಿಸುವ 'ಬಾಣನ ಕಾದಂಬರಿ', ಒಂದು ಅದ್ಭುತ ಕಾದಂಬರಿಯೂ ಹೌದು; ಹೆಂಡವೂ ಹೌದು. 'ಕಾದಂಬರಿ'ಯನ್ನು ಕನ್ನಡಕ್ಕೆ ನೀಡಿದ ಬನ್ನಂಜೆಯವರು, ಇತಿಹಾಸ, ಆತ್ಮಕಥೆ ಮತ್ತು ಸಾಹಿತ್ಯಕೃತಿಯಾಗಿ ಮುಖ್ಯವಾದ ಬಾಣನ 'ಹರ್ಷ ಚರಿತ'ವನ್ನು ಭಾಷಾಂತರಿಸಬೇಕು ಎಂದು ವಿನಂತಿಸುತ್ತೇನೆ.
Portraits of women
women in india- a social and cultural history- by- sita anantha raman[review] by indu agnihotri-Portraits of women
Monday, March 28, 2011
Saturday, March 26, 2011
Friday, March 25, 2011
Sirigannada (Contemporary Kannada Writings) edited by Vivek Shanbhag
'ಫ್ಲಿಪ್‍ಕಾರ್ಟ್'ನಲ್ಲಿ ಯಾವ ಕನ್ನಡ ಪುಸ್ತಕಗಳಿವೆ ಎಂದು ಅಂತರ್ಜಾಲದಲ್ಲಿ ಹುಡುಕಿದಾಗ 'ಸಿರಿಗನ್ನಡ' ಎಂಬ ಇಂಗ್ಲಿಷ್ ಪುಸ್ತಕ ಕಣ್ಣಿಗೆ ಬಿತ್ತು. ವಿಪಿಪಿ ಮೂಲಕ ಕಳುಹಿಸಿ ಎಂದು ವಿನಂತಿಸಿ, ಒಂದು ವಾರದೊಳಗೆ ಪುಸ್ತಕ ಮನಗೆ ಬಂತು.
ಯು.ಆರ್. ಅನಂತಮೂರ್ತಿಯವರ 'ಕಾಮರೂಪಿ' (ಅನುವಾದ- ದೀಪಾ ಗಣೇಶ್), ಲಂಕೇಶರ 'ಕ್ಲಾಸ್‍ಮೇಟ್'' (ಮೂಲಕತೆ? - ಅನುವಾದ - ಸಂತೋಷಕುಮಾರ), ಜಯಂತ ಕಾಯ್ಕಿಣಿ ಅವರ 'ಟಿಕ್ ಟಿಕ್ ಗೆಳೆಯ' (ಅನುವಾದ - ಜಯಂತ ಕೋಡ್ಕಣಿ) ವಸುದೇಂದ್ರರ ----------------(ಅನುವಾದ - ಜಯಂತ ಕೋಡ್ಕಣಿ) ಅಬ್ದುಲ್ ರಶೀದ್ ಅವರ 'ಕಾಮ್ರೇಡ್ ಮತ್ತು ಉಮ್ಮ', ಸುನಂದಾ ಪ್ರಕಾಶ ಕಡಮೆ ಅವರ ಒಂದು ಕತೆ (ಮೂಲ ಕತೆಯ ಹೆಸರು?), ಅನುವಾದ - ದೀಪಾ ಗಣೇಶ್) - ಇವು ಇಲ್ಲಿರುವ ಆರು ಕತೆಗಳು.
ಎಚ್. ಎಸ್. ಶಿವಪ್ರಕಾಶರ ಒಂದು ಕವನ (ಮೂಲ ಕವನದ ಹೆಸರು? ಅನುವಾದ - ದೀಪಾ ಗಣೇಶ್), ಸಂಧ್ಯಾದೇವಿ ಅವರ ಒಂದು ಕವನ (ಮೂಲ ಕವನ? - ಅನುವಾದ- ಜಯಂತ ಕೋಡ್ಕಣಿ), ಪ್ರತಿಭಾ ನಂದಕುಮಾರ್ ಅವರ ಒಂದು ಕವನ (ಮೂಲ ಕವನ? - ಅನುವಾದ- ಜಯಂತ ಕೋಡ್ಕಣಿ), ಎಸ್. ಮಂಜುನಾಥ್ ಅವರ ಒಂದು ಕವನ (ಅನುವಾದ - ದೀಪಾ ಗಣೇಶ್) - ಇವು ಇಲ್ಲಿರುವ ನಾಲ್ಕು ಕವನಗಳು.
ಚಂದ್ರಶೇಖರ ಕಂಬಾರರ 'ಶಿಖರ ಸೂರ್ಯ' ಕಾದಂಬರಿಯ ಆಯ್ದ ಭಾಗ (ಅನುವಾದ - ಲಕ್ಷ್ಮೀ ಚಂದ್ರಶೇಖರ್), ಶ್ರೀನಿವಾಸ ವೈದ್ಯರ''ಹಳ್ಳ ಬಂತು ಹಳ್ಳ' ಕಾದಂಬರಿಯ ಮೊದಲ ಅಧ್ಯಾಯ (ಅನುವಾದ ಶ್ರೀಕಾಂತ ಶಾಸ್ತ್ರಿ) - ಈ ಪುಸ್ತಕದಲ್ಲಿವೆ.
ಪೂರ್ಣಚಂದ್ರ ತೇಜಸ್ವಿಯವರ 'ಪರಿಸರದ ಕತೆ'ಯ ಒಂದು ಭಾಗ (ಅನುವಾದ - ಚಂದನಗೌಡ), ವೈದೇಹಿ ಅವರ 'ಮೇಜು ಕುರ್ಚಿಯ ಮೂಲಕ' (ಅನುವಾದ - ಪ್ರಕಾಶ ಬೆಳವಾಡಿ), ಕುಂ.ವೀರಭದ್ರಪ್ಪರವರ 'ರಾಯಲಸೀಮೆ'ಯ ಒಂದು ಅಧ್ಯಾಯ (ಅನುವಾದ - ಎಸ್. ಆರ್. ರಾಮಕೃಷ್ಣ) - ಇವು ಸಂಪಾದಕರು ಆಯ್ಕೆಮಾಡಿರುವ ಪ್ರಬಂಧಗಳು.
ಗಿರೀಶ ಕಾರ್ನಾಡರ 'ಅಗ್ನಿ ಮತ್ತು ಮಳೆ' ನಾಟಕದ ಒಂದು ದೃಶ್ಯ (ಅನುವಾದ - ಕಾರ್ನಾಡ), ಕೆ.ವಿ. ಅಕ್ಷರ ಅವರ 'ಸ್ವಯಂವರ ಲೋಕ' ನಾಟಕದ ಒಂದು ದೃಶ್ಯ (ಅನುವಾದ - ಜಯಂತ ಕೋಡ್ಕಣಿ) - ಈ ಪುಸ್ತಕದಲ್ಲಿವೆ. ಸಿದ್ಧಲಿಂಗಯ್ಯನವರ ಆತ್ಮಕತೆ 'ಊರುಕೇರಿ'ಯ ಎರಡು ಭಾಗಗಳನ್ನು ಎಸ್. ಆರ್. ರಾಮಕೃಷ್ಣ ಹಾಗೂ ಚಂದನಗೌಡ ಭಾಷಾಂತರಿಸಿದ್ದಾರೆ. ಡಿ. ಆರ್. ನಾಗರಾಜರ 'ಕನ್ನಡ-ಇಂಗ್ಲಿಷ್ ಜಗಳ' (ಅನುವಾದ ಎಸ್. ಬಾಗೇಶ್ರೀ), ಕೆ.ವಿ. ಸುಬ್ಬಣ್ಣನವರ 'ಶ್ರೇಷ್ಠತೆಯ ವ್ಯಸನ' (ಅನುವಾದಕರ ಹೆಸರು ಉಲ್ಲೇಖವಿಲ್ಲ) ಇಲ್ಲಿರುವ ವಿಮರ್ಶೆಗಳು.
ಇಲ್ಲಿನ ಇಂಗ್ಲಿಷ್ ಭಾಷಾಂತರದ ಗುಣಮಟ್ಟದ ಬಗ್ಗೆ ಭಾಷಾಂತರ ತಜ್ಞರು ಚರ್ಚೆ ಆರಂಭಿಸಬೇಕು. ಸಂಪಾದಕರ ಆಯ್ಕೆಯ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು. ಆದರೆ ದೇವನೂರು ಮಹಾದೇವ ಬಂಡಾಯ ಸಾಹಿತ್ಯದ ಮಹತ್ವದ ಲೇಖಕ ಎಂದು ಸಂಪಾದಕೀಯದಲ್ಲಿ ಗುರುತಿಸಿರುವ ವಿವೇಕ ಶಾನುಭಾಗರು ದೇವನೂರು ಮಹಾದೇವರನ್ನು ಈ ಗ್ರಂಥದಲ್ಲಿ ಕೈಬಿಟ್ಟದ್ದೇಕೆ?
ಮೂಲಕೃತಿಗಳ ಹೆಸರು, ಪ್ರಕಟಣೆಯ ವಿವರ, ಭಾಷಾಂತಕಾರರ ಪರಿಚಯ ನೀಡದಿರುವುದು ಈ ಪುಸ್ತಕದ ಪ್ರಮಾದಗಳು. ಕನ್ನಡದ ಸಮಕಾಲೀನ ಲೇಖಕರ ಕೆಲವು ಮುಖ್ಯ ಕೃತಿಗಳನ್ನು ಇಂಗ್ಲಿಷ ಭಾಷಾಂತರದ ಮೂಲಕ ಜಗತ್ತಿಗೆ ಪರಿಚಯಿಸಿರುವ ವಿವೇಕ ಶ್ಯಾನುಭಾಗರಿಗೆ ಅಭಿನಂದನೆಗಳು.
- ಮುರಳೀಧರ ಉಪಾಧ್ಯ ಹಿರಿಯಡಕ
SIRIGANNADA
(Contemporary Kannada Writings)
Edited by Vivek Shanbhag\
Published by - TRANQUEBAR (2010)
Rs. 295/-
Vachanasahitya.gov.in
ವೆಬ್‍ಸೈಟ್‍ಗಳಿವುಂಟು, ವಚನಕ್ಕಳಿವಿಲ್ಲ!
ಸಮಗ್ರ ವಚನಗಳ ವೆಬ್‍ಸೈಟ್ ಆರಂಭವಾದಾಗ ಸುದ್ದಿಯಾಗಿತ್ತು. ಆದರೆ ಈಗ ವೆಬ್‍ಸೈಟ್‍ನ ದು:ಸ್ಥಿತಿ ನೋಡಿದಾಗ 'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ' ಎಂಬ ಬಸವಣ್ಣನವರ ವಚನ ನೆನಪಾಗುತ್ತದೆ. ವೆಬ್‍ಸೈಟ್‍ನ ದು:ಸ್ಥಿತಿಗೆ ತಾಂತ್ರಿಕ ತೊಂದರೆ ಕಾರಣವೋ, ಹಣ ಪಾವತಿ ಬಾಕಿ ಇರುವುದು ಕಾರಣವೋ - ತನಿಖೆ ಮಾಡುವವರು ಯಾರು?
ಆದರೆ ಬ್ಲಾಗ್ ಭಕ್ತರಾದ ಶರಣರು, ವಚನಪ್ರಿಯರು ಮನಸ್ಸು ಮಾಡಿದರೆ, ಒಬ್ಬೊಬ್ಬ ವಚನಕಾರನ ಹೆಸರಲ್ಲಿ ಒಂದೊಂದು ಬ್ಲಾಗ್ ಆರಂಭಿಸಿ, ದಿನಕ್ಕೊಂದು ವಚನ ಅಂತರ್ಜಾಲಕ್ಕೆ ಸೇರಿಸಿ, ಅನುಭವ ಗಳಿಸುತ್ತ, ಅನುಭಾವಿಗಳಾಗಬಹುದು. ನೀವು 'ಅನುಭವ ಮಂಟಪ', 'ಚೆನ್ನಮಲ್ಲಿಕಾರ್ಜುನ', ಕೂಡಲಸಂಗಮದೇವ', 'ಗುಹೇಶ್ವರ', 'ನಗೆಯ ಮಾರಿತಂದೆ' -ಇಂಥ ಬ್ಲಾಗ್‍ಗಳನ್ನುಆರಂಭಿಸಿದರೆ ದಯವಿಟ್ಟು ನನಗೆ ತಿಳಿಸಿ.
mhupadhya@gmail.com
mobile -9448215779
Thursday, March 24, 2011
Article
ತುಳುವರ ಆಚರಣೆಗಳಲ್ಲಿ ಕಲಾವಂತಿಕೆ
-ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ
-ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ
ಪ್ರಾದೇಶಿಕ ಕಲೆಗಳ ಆಧುನಿಕ ಸೂಕ್ಷ್ಮ ಅಧ್ಯಯನದ ಉದ್ದೇಶದಿಂದ ಕನರ್ಾಟಕ ಲಲಿತಕಲಾ ಅಕಾಡೆಮಿ ಈ ಪುಸ್ತಕವನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು, 'ಕನ್ನಡಾಂತರ್ಗತಂ ತುಳುನಾಡು ನನ್ನದಿದು' (ಕಯ್ಯಾರ) ಎಂದು ನಂಬಿದವರು. ಈ ಜಿಲ್ಲೆಯ ರಂಗಪ್ರಭೇದಗಳು, ಧಾಮರ್ಿಕ ಆಚರಣೆಗಳು, ಕಂಠಸ್ಥ ಸಂಪ್ರದಾಯಗಳು, ಜನಪದ ಕುಣಿತ, ವಿನೋದ, ಕ್ರೀಡೆಗಳು, ಸಾಮಾಜಿಕ ಸಂಸ್ಥೆ, ಸಂಪ್ರದಾಯಗಳು, ಭಾಷೆ-ಉಪಭಾಷೆಗಳು ಕರಾವಳಿಯ ಪ್ರಾದೇಶಿಕ ಬಣ್ಣವಿರುವ ವಿಶಿಷ್ಟ ಪ್ರತ್ಯೇಕ ಸಂಸಕ್ಕೃತಿಯೊಂದನ್ನು ಪ್ರತಿನಿಧಿಸುತ್ತವೆ. ಈ ಜಿಲ್ಲೆಯ ಹೆಚ್ಚಿನ ಜನರು ಐದು ಪ್ರಧಾನ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಮಾತೃಭಾಷೆಯವರು.
ಈ ಗ್ರಂಥದಲ್ಲಿ, ತುಳುವರ ಆಚರಣೆಗಳಲ್ಲಿ ಅಲಂಕರಣ (ಅಮೃತ ಸೋಮೇಶ್ವರ), ತುಳುವರ ಸಿರಿಜಾತ್ರೆ (ಮುಕುಂದ ಪ್ರಭು, ಮಂಜೇಶ್ವರ), ನಾಗಮಂಡಲ, ಡೆಕ್ಕೆಬಲಿ (ಎ. ವಿ. ನಾವಡ), ಭೂತಾರಾಧನೆಯಲ್ಲಿ ಅಲಂಕರಣ-1 (ಡಾ| ಕೆ. ಚಿನ್ನಪ್ಪ ಗೌಡ), ಭೂತಾರಾಧನೆಯಲ್ಲಿ ಅಲಂಕರಣ-2 (ಲೀಲಾ ಭಟ್), ದಕ್ಷಿಣ ಕನ್ನಡ ಜಿಲ್ಲೆಯ ಮೆಕ್ಕಿಕಟ್ಟೆಯ ಉರುಗಳು (ಡಾ| ಪುರುಷೋತ್ತಮ ಬಿಳಿಮಲೆ), ದಕ್ಷಿಣ ಕನ್ನಡ ಜಿಲ್ಲೆಯ ಮುಖವಾಡಗಳು ಮತ್ತು ಗೊಂಬೆಯಾಟ (ಎಸ್. ಎ. ಕೃಷ್ಣಯ್ಯ), ದಕ್ಷಿಣ ಕನ್ನಡ ಜಿಲ್ಲೆಯ ಭಿತ್ತಿ ಚಿತ್ರಗಳು (ಅ. ಲ. ನರಸಿಂಹನ್), ಒಂದು ಆರಾಧನಾ ವಿಶೇಷ-ವಿಷ್ಣುಮೂತರ್ಿ ದೈವ (ಕೆ. ಎಂ. ರಾಘವ ನಂಬಿಯಾರ್), ದಕ್ಷಿಣ ಕನ್ನಡ ಜಿಲ್ಲೆಯ ಆಚರಣೆಗಳು (ಕೆ. ವೆಂ. ರಾಜಗೋಪಾಲ), ಎಂಬ ಹನ್ನೊಂದು ಲೇಖನಗಳಿವೆ. ಬಹುಶ್ರುತರಾದ ಲೇಖಕರ ಕ್ಷೇತ್ರಕಾರ್ಯ ಮತ್ತು ಸಂಶೋಧನೆಯ ಫಲ ಈ ಗ್ರಂಥದ ಎಲ್ಲ ಲೇಖನಗಳಲ್ಲೂ ಕಾಣಿಸುತ್ತದೆ. ನಾಗಮಂಡಲ, ಭೂತಾರಾಧನೆ, ಮುಖವಣರ್ಿಕೆ, ಮೆಕ್ಕಿಕಟ್ಟೆಯ ಉರುಗಳು, ಸಿರಿಯ ಬಳಗ, ಕಲಾವಿದರು, ಹಾಳೆಯ ಮುಖವಾಡಗಳು, ಆರಾಧನೆಯ ಸಲಕರಣೆ, ಗೊಂಬೆಯಾಟ, ಭಿತ್ತಿಚಿತ್ರಗಳು-ಇವುಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚಿನ ಕಪ್ಪು ಬಿಳುಪಿನ, ಬಣ್ಣದ ಚಿತ್ರಗಳು ಈ ಪುಸ್ತಕದ ಪ್ರಯೋಜನವನ್ನು ಹೆಚ್ಚಿಸಿವೆ.
ಡಾ| ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನದ ವೇಷಭೂಷಣಗಳ ಪ್ರಭಾವ ಮೆಕ್ಕಿಕಟ್ಟೆಯ ಉರುಗಳ ಮೇಲೆ ಆಗಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಎಸ್. ಎ. ಕೃಷ್ಣಯ್ಯನವರು ಹೇಳುವಂತೆ ಮೆಕ್ಕಿಟ್ಟೆಯ, ದೈವಗಣದ ವರ್ಗದಲ್ಲಿ ಅತಿದೊಡ್ಡ ಮರದ ಶಿಲ್ಪ (ಸು. 22 ಅಡಿ ಎತ್ತರ) ರಾಹುತಮಲ್ಲ ಮತ್ತು ಕೇಚ (ರ) ಮಲ್ಲ ದೈವ-ಈ ಶಿಲ್ಪದ ಕಿರೀಟವು ಯಕ್ಷಗಾನದ ರಾಜಕಿರೀಟದ ಪ್ರತಿಮೆಯನ್ನು ಪ್ರತಿಬಿಂಬಿಸುವುದರಲ್ಲಿ ಸಂಶಯವಿಲ್ಲ. ಈ ಕುರಿತು ಇನ್ನಷ್ಟು ವಿಚಾರ ಮಥನ ನಡೆಯಬೇಕಾಗಿದೆ. ಕೆ. ವೆಂ. ರಾಜಗೋಪಾಲರು ತನ್ನ ಲೇಖನದಲ್ಲಿ, ಪಾಣಾರ ಎಂಬ ಹಿಂದುಳಿದ ವರ್ಗದವರನ್ನೂ ಫನಿಯರರು = ನಾಗಾರಾಧಕರು ಎಂದೇ ಗುರುತಿಸಬೇಕಾಗುತ್ತದೆ ಎನ್ನುತ್ತಾರೆ. ದ್ರಾವಿಡ ಮೂಲದ 'ಪಾಣ' ಶಬ್ದಕ್ಕೆ ಗಾನ, ಕುಣಿತಗಳ ತಜ್ಞ ಎಂದು ಅರ್ಥವಿರುವಾಗ ಪಾಣಾರರನ್ನು ಫಣಿಯರರು ಎಂದು ಗುರುತಿಸುವ ಅಗತ್ಯವಿಲ್ಲ. ಅ. ಲ. ನರಸಿಂಹನ್ ತನ್ನ ಲೇಖನದಲ್ಲಿ ಕಾರ್ಕಳದ ಬಳಿಯ ಬಜೆಗೋಳಿಯ ಭೂತಸ್ಥಾನದ ಹಜಾರದಲ್ಲಿರುವ 77 ಜೈನ ಮುನಿಗಳ ಚಿತ್ರಗಳ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ. ಈ ಗ್ರಂಥದಲ್ಲಿ ಬಿಟ್ಟುಹೋಗಿರುವ ತುಳುನಾಡಿನ ಜಾತ್ರೆಗಳು, ರಥಶಿಲ್ಪ, ವಾಸ್ತುಶಿಲ್ಪ, ಮೂತರ್ಿಶಿಲ್ಪ, ರಂಗವಲ್ಲಿಗಳ ಕುರಿತು ಅಕಾಡೆಮಿ ಪ್ರತ್ಯೇಕ ಗ್ರಂಥವೊಂದನ್ನು ಪ್ರಕಟಿಸಬಹುದು.
ಈ ಕೃತಿಯ ಪ್ರಯೋಜನವನ್ನು ಕೊಂಚ ಬಿಡಿಸಿ ಹೇಳಬಹುದು. ನಮ್ಮ ಕಲೆಗಳ (ಚಿತ್ರ-ಶಿಲ್ಪ-ದರ್ಶನ ಕಲೆಗಳು) ಅಭಿವೃದ್ಧಿಗೆ ಅವಶ್ಯವಾದ ಒಂದು ಐತಿಹಾಸಿಕ-ಧಾಮರ್ಿಕ ಕಲಾಪ್ರಜ್ಞೆಯು ಇದರಿಂದ ಒಡಮೂಡಬಹುದೆಂಬ ಭರವಸೆಯು ನಮಗಿದೆ. ಈ ಗ್ರಂಥದಲ್ಲಿ ಜಾನಪದ ಹಂತದ ಪರಿಶೀಲನೆಯು ಮುಖ್ಯವಾಗಿರಬಹುದಾದರೂ ಇಲ್ಲಿನ ತಾಂತ್ರಿಕ ಪ್ರಜ್ಞೆ ಕೂಡ ನಮ್ಮ ಕಲಾ ಪ್ರಕಾರಗಳಿಗೆ ದರ್ಶನ ಶಕ್ತಿ (ಗಿಣಚಿಟ ಖಣಡಿಜಟಿರಣ) ಯನ್ನು ಒದಗಿಸಬಲ್ಲದು ಎಂದು ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಆರ್. ಎಂ. ಹಡಪದ ಅವರು ಹೇಳಿದ್ದಾರೆ. ಪರಂಪರೆ ಅನುಕ್ರಮವಾಗಿ ಉತ್ತರಾಧಿಕಾರಿಗಳಿಗೆ ಹಸ್ತಾಂತರಗೊಳ್ಳುತ್ತದೆ. ಸೃಜನಶೀಲ ಕಲಾವಿದ ಪರಂಪರೆಯನ್ನು ಮತಾಂಧನಂತೆ ಸ್ವೀಕರಿಸುವುದಿಲ್ಲ. ಪರಂಪರೆಯ ಉತ್ತಮ ಅಂಶಗಳನ್ನು ಆಯ್ಕೆಮಾಡಿ, ತನ್ನ 'ಅಪೂರ್ವ ವಸ್ತು ನಿಮರ್ಾಣ' ಪ್ರತಿಭೆಯಿಂದ ಹೊಸದನ್ನು ಸೇರಿಸಿ ಪರಂಪರೆಯನ್ನು ಬೆಳೆಸುತ್ತಾನೆ. 'ಕಾಲಕ್ಕೆ ತಕ್ಕ ಕೋಲ ಕಟ್ಟಬೇಕು' ಎಂಬುದು ತುಳುನಾಡಿನ ಜನಪ್ರಿಯ ಗಾದೆ. 'ಕೋಲ' ಶಬ್ದಕ್ಕೆ ಅಲಂಕಾರ ಎಂಬ ಅರ್ಥವಿದೆ. ಲಲಿತಕಲಾ ಅಕಾಡೆಮಿ ಪ್ರಕಟಿಸಿರುವ 'ತುಳುವರ ಆಚರಣೆಗಳಲ್ಲಿ ಕಲಾವಂತಿಕೆಯ ಗ್ರಂಥ ಮತಾಚರಣೆಯ ಕಲಾ ಪರಂಪರೆಯ ಮೌಲಿಕ ಅಂಶಗಳನ್ನು ಶೋಧಿಸಿ ಉಳಿಸುವ ಕೆಲಸ ಮಾಡುವುದರ ಜೊತೆಗೆ ಅವುಗಳಿಗೆ ಕಾಲಕ್ಕೆ ತಕ್ಕ ಹೊಸ ಅಲಂಕಾರವನ್ನು ನೀಡಿ ಬೆಳೆಸಲು ಪ್ರೇರಣೆಯನ್ನೂ ನೀಡುತ್ತದೆ.
The Hindu : Friday Review Bangalore / Books : Views from within
tondu mevu- k v narayana[review-h s raghavendra rao],,yakeega bhumi prashne- chandra poojari[review-shivasunder]The Hindu : Friday Review Bangalore / Books : Views from within[kannada books
Wednesday, March 23, 2011
Tuesday, March 22, 2011
Samara Saugandhike (Yakshagana)
ಚಿನ್ನದ ಚಿಕ್ಕ ತುಂಡಿನಂತಿರುವ ಮಹಾಭಾರತದ ಈ ಪುಟ್ಟ ಕಥೆ ಗಣೇಶ ಕೊಲೆಕಾಡಿಯ ಪ್ರತಿಭಾಗ್ನಿಯಲ್ಲಿ ಪುಟಗೊಂಡು ಪುತ್ಥಳಿಗೊಂಬೆಯಾಗಿ ಮೂಡಿಬಂದಿದೆ. ಸತ್ಯವನ್ನು ಸುಂದರಗೊಳಿಸುವವನೇ ಕವಿ. ಮೂಲವು ಹೇಗೆ ಹೊಸ ದೃಷ್ಟಿಯ-ಸೃಷ್ಟಿಯ ಪ್ರಸಂಗವಾಗಿದೆ ಎಂಬುದು 'ಸಮರ ಸೌಗಂಧಿಕೆ ಅರಳುವ ಬಗೆ' ಎಂಬ ಕವಿಯ ಬಿನ್ನಹವನ್ನು ಓದಿದರೆ
ಮಂದಟ್ಟಾಗುತ್ತದೆ. ಮೂಲದ ಭಾವ ಪ್ರಸಂಗದಲ್ಲಿ ಇನ್ನಷ್ಟು ದಟ್ಟವಾಗಿ ಮೂಡಿಬಂದಿದೆ. ಅಣ್ಣನ ಅಪ್ಪಣೆಯಂತೆಯೇ ಭೀಮನು ಆತನ ಕಿವಿಯಿಂದ ಹೊರಬಂದು ಹನುಮನಂತೆಯೇ ಈತನು ವಜ್ರಗಾತ್ರನಾಗುವ ಹೊಚ್ಚ ಹೊಸ ಕಲ್ಪನೆಯು ಹೃದ್ಯ, ಅನವದ್ಯ, ಆಸ್ವಾಧ್ಯ, ಆರಾಧ್ಯ.'ತಿಂದಬೋನಕ್ಕಿಂತಲಧಿಕನೋವುಂಟೆ' ಎಂಬುದು ಕೇವಲ ಕೌಂತೇಯ ಮಧ್ಯಮ (ಭೀಮ)ನೊಬ್ಬನ ಕೊರಳ ಕೂಗಲ್ಲ. ಈ ಮಣ್ಣಿನಲ್ಲಿ ಹುಟ್ಟಿ ಮೆಟ್ಟಿ ಸಂಸಾರದ ಸಂಕಟ ಸಂತಾಪಗಳನ್ನು ಹೊಟ್ಟಯಲ್ಲಿಟ್ಟುಕೊಂಡ ಪ್ರತಿ ಜೀವದ ಕರುಳ ಕೂಗು.
ಕನ್ನವಿಕ್ಕಿದ ಕೈಗೆ ಚಿನ್ನ ತೊಡಿಸಬೇಕೆಂಬ ಚಿತ್ತವೃತ್ತಿಯ ಧರ್ಮಜ ಕುರುಪತಿಗೆ ಸನ್ಮತಿ ದೊರಕಿ ಸುಖವಾಗಿರಲೆಂದು ಹರಿಯನ್ನು ಬೇಡುವುದು ಅಜಾತಶತ್ರುವೆನಿಸಿಕೊಂಡ ಆತನಿಗೆ ಸಮುಚಿತವಾದ ರೀತಿಯೇ ಸರಿ. ಭೀಮ ದ್ರೌಪದಿಯರ ಸಾಂಗತ್ಯ-ದಾಂಪತ್ಯಗಳ ತಾದಾತ್ಮ್ಯವು ಸುಂದರ ಸಂವಾದವಾಗಿ ಮೈದಾಳಿದೆ. 'ನಲಿಯುತಿರೆ ದುಂಬಿಗಳು' 'ಚೆಲುವಿಕೆಯ ಯಾವಾಯ್ತೊ ವನದಲಿ' ಎಂಬೆರಡು ಭಾಮಿನಿಗಳು, ಸರಸಿಯೆ ಬಾಂದಲವಾದುದು ಎಂಬ ಕಂದಗರ್ಭಿತಸಾಂಗತ್ಯ ಇವು ಮೂರು, ಈ ಕವಿ ಬಣ್ಣಿಸಹೊರಟರೆ ಎಷ್ಟು ಬಂಧುರವಾಗಿ ಬಣ್ಣಿಸಬಲ್ಲನೆಂಬುದಕ್ಕೆ ಸೂರ್ಯಸಾಕ್ಷಿಗಳಾಗಿವೆ.
ಸಂವಾದದಲ್ಲೂ ವಾದ ಮಾಡುವವರೇ ಬಹಳ. ವಾದದಲ್ಲಿ ಸಂವಾದ ಮಾಡುವವರು ವಿರಳ. ಹನುಮ ಭೀಮರ ನುಡಿ ಪಡಿನುಡಿಗಳು ಒಲವಿನ ಕುಡಿಗಳು, ಚೆಲುವಿನ ಗುಡಿಗಳು. ಭೀಮ ಮಡದಿಗೆ ಹೂಗೊಡಲು ಮುಂದಾದಾಗ - ಆಕೆ ನಕ್ಕು ಮುಡಿ ತೋರಿಸಿದಳು - ಎಂಬಲ್ಲಿ ಇಡಿಯ ಪ್ರಸಂಗದ ಧ್ವನಿ ಸಮಗ್ರವಾಗಿ, ಸಾಂಗೋಪಾಂಗವಾಗಿ ಸಪರಿವಾರವಾಗಿ, ಸುಪ್ರತಿಷ್ಠಿತವಾಗಿದೆ. ಆ ಮಾತು ಈ ಪ್ರಸಂಗದ ಜೀವಕೇಂದ್ರ. ಯಕ್ಷಗಾನ ಪ್ರಸಂಗಸಾಹಿತ್ಯವು ಇತರ ಕಾವ್ಯಪ್ರಕಾರಗಳಿಗಿಂತ ವಿಭಿನ್ನವೂ, ವಿಶಿಷ್ಟವೂ, ಆರಾಧನೀಯವೂ, ಆದರಣೀಯವೂ ಆಗಿರುವುದು ಅಲ್ಲಿಯ ಕಥಾಸಂವಿಧಾನ - ಸಂವಾದ - ಕಲ್ಪನೆ - ವರ್ಣನೆ - ನಿರೂಪಣೆ - ನಿರ್ವಹಣೆ - ಪದಪ್ರಯೋಗದ ಆಕರ್ಷಣಿಗಳಿಂದಲ್ಲ -
ಸುಮಾರು ನೂರು ಪದ್ಯಗಳ ಈ ಪುಟ್ಟ ಪ್ರಸಂಗದಲ್ಲಿಯೇ ಮೂವತ್ತನಾಲ್ಕು ಬಗೆಯ ಛಂದೋಬಂಧಗಳನ್ನು ಈತ ಬಳಸಿದ್ದಾನೆಂದರೆ ಪ್ರಸಂಗ ಹಿರಿದಾಗಿದ್ದರೆ ಇನ್ನೆಷ್ಟು ಬಳಸುತ್ತಿದ್ದನೋ?........ ಈ ಪ್ರಸಂಗವನ್ನು ಬರೆದೀತ ಎಳೆಯವನಿರಬಹುದು. ಈತನ ಕವಿತ್ವ ಎಳೆಯದಲ್ಲ.
'ಸಮರಸೌಗಂಧಿಕೆ' ಕೇವಲ ತಾಳಮದ್ದಲೆಗೆ ಸೀಮಿತವಾಗಬೇಕಾದ ಪ್ರಸಂಗವಲ್ಲವೇ ಅಲ್ಲ. ವನಪಾಲಕನಿಂದ ತೊಡಗಿ ಸ್ತ್ರೀಪಾತ್ರದ ವರೆಗೆ ಉತ್ತಮ ರಂಗಪ್ರದರ್ಶನಕ್ಕೆ ಬೇಕಾದ ಎಲ್ಲ ಬಗೆಯ ಪಾತ್ರ ಪ್ರಸಂಗ ಪರಿಕರಗಳೂ ಇಲ್ಲಿವೆ. ಬಣ್ಣದ ವೇಷ ಬೇಕೆಂಬ ಹಂಬಲವಿದ್ದರೆ ಕುಬೇರನ ಬಲವಾಗಿ ಒಬ್ಬ ರಾಕ್ಷಸನನ್ನು ಯುದ್ಧಕ್ಕೆ ನಿಯೋಜಿಸಬಹುದು.
- ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ
'ಪ್ರಜ್ಞಾದೀಪ್ತಿ'
ಕಟೀಲು - 574148 (ದ.ಕ.)
ದೂರವಾಣಿ - ಸ್ಥಿರ 08242200070
ಚರ 9448840053
ಸಮರ ಸೌಗಂಧಿಕೆ (ಯಕ್ಷಗಾನ)
- ಗಣೇಶ ಕೊಲೆಕಾಡಿ
ಪ್ರ - ಗಾಯತ್ರೀ ಪ್ರಕಾಶನ
ಅನಂತ ಪ್ರಕಾಶ, ಕಿನ್ನಿಗೋಳಿ (ದ.ಕ.)
ಮೊದಲ ಮುದ್ರಣ - 2009
ಬೆಲೆ ರೂ.50/-
ಮೊಬೈಲ್ - 9341763655
ಕಟೀಲು - 574148 (ದ.ಕ.)
ದೂರವಾಣಿ - ಸ್ಥಿರ 08242200070
ಚರ 9448840053
ಸಮರ ಸೌಗಂಧಿಕೆ (ಯಕ್ಷಗಾನ)
- ಗಣೇಶ ಕೊಲೆಕಾಡಿ
ಪ್ರ - ಗಾಯತ್ರೀ ಪ್ರಕಾಶನ
ಅನಂತ ಪ್ರಕಾಶ, ಕಿನ್ನಿಗೋಳಿ (ದ.ಕ.)
ಮೊದಲ ಮುದ್ರಣ - 2009
ಬೆಲೆ ರೂ.50/-
ಮೊಬೈಲ್ - 9341763655
Pranavaroopada Bhavashuddhi
- ದೇವು ಹನೆಹಳ್ಳಿ
ನನ್ನನ್ನು ನಾನು 'ಕೇವಲ ಪ್ರೇಕ್ಷಕ' ಎಂದು ಒಪ್ಪಿಕೊಂಡ ಮೇಲೂ ಇಷ್ಟೆಲ್ಲವನ್ನು ಬರಹದಲ್ಲಿ ನಿವೇದಿಸಿಕೊಂಡದ್ದರಿಂದ ಕಲೆಯಲ್ಲಿ ಬದಲಾವಣೆ, ಕಲೆಯ ವಿಕಾಸಗಳು ಕುರಿತು ನನ್ನ ಧೋರಣೆಯೇನು ಎಂಬ ಪ್ರಶ್ನೆ ಯಕ್ಷಗಾನದ ವಿವಿಧ ಸ್ತರಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಲ್ಲಿ ಉದ್ಭವಿಸುವುದು ಸಹಜ. ಅದಕ್ಕೆ ಉತ್ತರ ಸಿದ್ಧ-ಸೂತ್ರ-ವ್ಯಾಖ್ಯೆಯ ರೂಪದಲ್ಲಿ ನಾನು ಹೇಳಿರದಿದ್ದರೂ ಅದು ಮೂರ್ನಾಲ್ಕುಲೇಖನಗಳಲ್ಲಿ ಸೂಚ್ಯವಾಗಿ ಬಿಂಬಿತವಾಗಿದೆ. ನನ್ನ ನಿಲುವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದೇನೋ? 1. ಬದಲಾವಣೆಯೆಂಬುದು ರಂಗದ ಮೇಲೆ ಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿಯಿಂದ 'ಅಪ್ರಜ್ಞಾಪೂರ್ವಕವಾಗಿ' ಘಟಿಸುವಂತಾದ್ದು. 2. ಬದಲಾವಣೆಯೆಂಬುದು ಪ್ರೇಕ್ಷಕರ, ವಿಮರ್ಶಕರ ಸಾಲಿನಲ್ಲಿ ಕುಳಿತ ವ್ಯಕ್ತಿ ('ಕ್ರಿಯೆಯಲ್ಲಿ ತೊಡಗದ') ಪ್ರಜ್ಞಾಪೂರ್ವಕವಾಗಿ ಹೇರುವಂತಾದ್ದಲ್ಲ. ಅದಕ್ಕೆ ನಿರ್ದೇಶನವೆಂಬ ದೊಡ್ಡ ಪದ ಬೇಡ. ಕಲೆ ಕಲಾವಿದನದ್ದು, ಪ್ರೇಕ್ಷಕನದ್ದಲ್ಲ. 3. ವರ್ತಮಾನದ ಸಾಮಾಜಿಕ-ಮತೀಯ-ಆರ್ಥಿಕ-ಸಾಂಸ್ಕೃತಿಕ-ತಂತ್ರಜ್ಞಾನಾಧಾರಿತ ವಿಪ್ಲವದಲ್ಲಿ ಒಂದು ಕಲೆಯ ಸಾಂಪ್ರದಾಯಿಕ ಸ್ವರೂಪವನ್ನು ಉಳಿಸುವುದೆಂದರೆ ಒಂದು ನೆಲೆಯಲ್ಲಿ ಸ್ಥಾಗಿತ್ಯವನ್ನು ಬಯಸುವುದು. ಅದು ಅನಿವಾರ್ಯವಿರಬಹುದು. ಆ Freeze Point ಯಾವುದು ಎಂಬುದು ಕಲಾವಿದರ ವಿವೇಚನೆ, ವಿವೇಕಕ್ಕೆ ಬಿಟ್ಟ ವಿಚಾರ. 4. ದೈಹಿಕರೋಗಕ್ಕೆ ಔಷಧವನ್ನು ಸಿದ್ಧಪಡಿಸುವಾಗ ಅಂತಿಮ ಹಂತವನ್ನು ಗಮನದಲ್ಲಿಟ್ಟುಕೊಂಡು ವಸ್ತುಗಳನ್ನು ಸಂಯೋಗಗೊಳಿಸಿದಂತೆ ಭಾವವಿರೇಚನವಲ್ಲ. ಅಂದರೆ ಅದು ವಾಚ್ಯವಲ್ಲ. ಅದು ಮನೋಧರ್ಮಕ್ಕೆ ಸಂಬಂಧಿಸಿದ್ದು, ಬೌದ್ಧಿಕ ನಿರ್ದೇಶಕ್ಕೆ ಒಳಪಡುವಂತಾದ್ದಲ್ಲ. 5. ಯಕ್ಷಗಾನ ಪರಿಭಾಷೆಯಲ್ಲಿ ವೇಷ ಮತ್ತು ಪಾತ್ರ ಎಂಬವು ಪ್ರತ್ಯೇಕವಲ್ಲ. (ಪಾತ್ರ ಎಂಬ ಪಾರಿಭಾಷಿಕ ಪದಪ್ರಯೋಗವೇ ಯಕ್ಷಗಾನದಲ್ಲಿ ತೀರಾ ಇತ್ತೀಚಿನದು). 'ವೇಷ' ಎಂಬದು ಬಲು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳದ್ದು. 'ವೇಷ' ಮತ್ತು 'ಚಿತ್ರ' ಎರಡೂ ಸ್ಥಾಯೀಭಾವಕ್ಕೆ ಸಂಬಂಧಿಸಿದವುಗಳು. ಆದುದರಿಂದ ವೇಷ'ಗಾರಿಕೆ' ಮತ್ತು 'ಚಿತ್ರಣ'ಗಳಲ್ಲಿ ಹಸ್ತಕ್ಷೇಪ ಮಾಡುವ ಮೊದಲು ಒಂದಲ್ಲ, ಹತ್ತಲ್ಲ, ನೂರು ಬಾರಿ ಯೋಚಿಸಬೇಕಾಗುತ್ತದೆ. 6. ಒಂದು ವೇಷವನ್ನು ಹಲವರು ಮಾಡುವುದು; ಓರ್ವ 'ಪಾತ್ರಧಾರಿ' ಹಲವು ವೇಷಗಳನ್ನು ಮಾಡುವುದು (ಏಕಪಾತ್ರಾಭಿನಯ); ಬಯಲಾಟದ ಒಂದೊಂದೇ ಅಂಗಗಳನ್ನು ಪ್ರತ್ಯೇಕವಾಗಿ ತುಣುಕುಗಳಲ್ಲಿ ಪ್ರದರ್ಶಿಸುವುದು; ಪೂರ್ವರಂಗದ ಇತರ ಹಲವು ಸಂಗತಿಗಳಿರಲಿ, ಒಡ್ಡೋಲಗವೂ ಇಲ್ಲದೆ ಪ್ರಸಂಗ ಶುರುವಾಗುವುದು; ಸಮಯ ಇಲ್ಲದ್ದಕ್ಕೆ, 'ಜನ' ಇಲ್ಲದ್ದಕ್ಕೆ, 'ಚಿಕ್ಕಪುಟ್ಟ' 'ಅಮುಖ್ಯ' ಪಾತ್ರಗಳನ್ನು ಬಿಟ್ಟುಬಿಡುವುದು...... ಇವೆಲ್ಲಾ ಯಕ್ಷಗಾನದ ಸಮಗ್ರತೆ ಮತ್ತು ವ್ಯಾಪ್ತಿಗಳನ್ನು ಪ್ರಶ್ನಿಸಿದಂತೆ. ಎಷ್ಟೆಂದರೆ, ಪೂರ್ವರಂಗವೂ ಪ್ರದರ್ಶನವೇ. 'ಆಟ ನೋಡುವುದೆಂದರೆ ಕುಶಾಲಲ್ಲ. ಅಷ್ಟು ಸಿದ್ಧತೆ ಬೇಕು' ಎನ್ನುತ್ತಾರೆ ಡಾ. ಕೆ. ಎಂ. ರಾಘವ ನಂಬಿಯಾರರು! ಈ ನಿಟ್ಟಿನಲ್ಲಿ ಡಾ. ಕೆ. ಮಹಾಲಿಂಗರ ತೆಂಕುತಿಟ್ಟು ಬಯಲಾಟವನ್ನು ನೋಡುವ ಬಗೆ ಎಂಬ ಉಪನ್ಯಾಸ ಉಲ್ಲೇಖನೀಯ.
ಪ್ರಣವರೂಪದ ಭಾವಶುದ್ಧಿ - ದೇವು ಹನೆಹಳ್ಳಿ (2010)
ಗಾಯತ್ರಿ ಪ್ರಕಾಶನ, ಅನಂತ ಪ್ರಕಾಶ
ಕಿನ್ನಿಗೋಳಿ - 574150
ಬೆಲೆ - ರೂ.150
ಗಾಯತ್ರಿ ಪ್ರಕಾಶನ, ಅನಂತ ಪ್ರಕಾಶ
ಕಿನ್ನಿಗೋಳಿ - 574150
ಬೆಲೆ - ರೂ.150
Sunday, March 20, 2011
secular tradition in kannada literature- G. Rajashekhar
ಕನ್ನಡ ಸಾಹಿತ್ಯ ಜಾತ್ಯಾತೀತ ಪರಂಪರೆ
- ಜಿ. ರಾಜಶೇಖರ್.
ಪಂಪನಿಂದ ದಾಸರನ್ನು ಒಳಗೊಂಡಂತೆ ಕನ್ನಡ ಸಾಹಿತ್ಯ ಪರಂಪರೆ ಒಂದು ಜಾತ್ಯಾತೀತ ಪರಂಪರೆ. ಈ ಪರಂಪರೆಯಲ್ಲಿ ಧರ್ಮ ಅಥವಾ ಮೂಲಭೂತವಾದ ನೆರಳು ಬಿದ್ದದ್ದೇ ಇಲ್ಲ. ಕನ್ನಡ ಸಾಹಿತಿಗಳೆಲ್ಲರೂ, ಕವಿಗಳೆಲ್ಲರೂ ಮನುಷ್ಯನ ಘನತೆ, ಮನುಷ್ಯನ ಗೌರವ ಮತ್ತು ಮನುಷ್ಯನ ಸ್ವಾತಂತ್ರ್ಯ ಮತ್ತು ಸಮಾನತೆ - ಈ ಮೌಲ್ಯಗಳನ್ನೇ ಒತ್ತಿ ಹೇಳಿದರು. ಅದಕ್ಕೆ ವಿರುದ್ಧವಾದ ಒಂದು ಉದಾಹರಣೆ ಎಲ್ಲೂ ಸಿಗದು. ಬಹುಶಃ ಇದಕ್ಕೆ ಒಂದೇ ಒಂದು ಅಪವಾದವಾಗಿ ನಿಲ್ಲುವುದು ಎಸ್. ಎಲ್. ಭೈರಪ್ಪ ಒಬ್ಬರೇ. ಅಂದರೆ ನೇರವಾಗಿ ಮತೀಯ ಸಂಘರ್ಷ ಮತ್ತು ಮತೀಯ ದ್ವೇಷವನ್ನು ಪ್ರತಿಪಾದಿಸದ ಒಂದು ಕೃತಿ ಇದ್ದರೆ ಅದು ಭೈರಪ್ಪನವರ 'ಆವರಣ'. ಅದು ಅವರ ಒಂದು ಕೃತಿಯಷ್ಟೇ. ಅವರ ಬೇರೆ ಕೃತಿಗಳ ಬಗ್ಗೆ ಹೇಳುತ್ತಿಲ್ಲ. ಭೈರಪ್ಪ ಪ್ರತಿಭಾವಂತ ಲೇಖಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರ 'ಗೃಹಭಂಗ' ಒಳ್ಳೇ ಕಾದಂಬರಿ. ಅವರ ಆತ್ಮಚರಿತ್ರೆ ಬಹಳ ಒಳ್ಳೇ ಬರವಣಿಗೆ. ಆ 'ಆವರಣ' ಎನ್ನುವ ಒಂದು ಕೃತಿಯನ್ನು ಬಿಟ್ಟರೆ ಕನ್ನಡ ಸಾಹಿತ್ಯದಲ್ಲಿ ಮನುಷ್ಯನ ಘನತೆ, ಮನುಷ್ಯನ ಗೌರವ ಮತ್ತು ಮನುಷ್ಯನ ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ವಿರೋಧಿಸುವ ಲೇಖಕರು ಅಥವಾ ಕೃತಿಗಳು ಇಲ್ಲ. ಕನ್ನಡದ ಪರಂಪರೆ ಆ ದೃಷ್ಟಿಯಿಂದ ನೋಡಿದರೆ ಮನುಷ್ಯನ ವಿಮೋಚನೆಗೆ ಏನು ಬೇಕೋ ಅದನ್ನು ಕೊಡುವಂತಹದ್ದು.
ಎಡ ಅಥವಾ ಬಲ ಎನ್ನುವ ತಾಕಲಾಟ ಇರುವ ಚಚರ್ೆಗಳು, ಬರಹಗಳು ಇರಬಹುದು. ಅದು ಅನಿವಾರ್ಯ. ನಿಜವಾದ ವಿಮೋಚನೆಯ ದಾರಿ ಯಾವುದು ಎನ್ನುವುದರ ಕುರಿತ ಭಿನ್ನಾಭಿಪ್ರಾಯವೇ ಹೊರತು ವಿಮೋಚನೆಗೆ ಮೂಲಭೂತವಾಗಿ ವಿರೋಧವಾದ ವಾಗ್ವಾದವಲ್ಲ. ಬಲಪಂಥೀಯ ಚಟುವಟಿಕೆಗಳು ಒಂದು ಅಖಿಲ ಭಾರತ ವಿದ್ಯಮಾನ. ಮಹಾತ್ಮ ಗಾಂಧಿಯವರಿಗೆ ಜನ್ಮ ಕೊಟ್ಟ ಗುಜರಾತ್ ಇಂದು ಯಾವ ಕಾರಣಕ್ಕೆ ಕೋಮುವಾದದ ಕೇಂದ್ರವಾಗಿದೆಯೋ, ಬುದ್ಧನಿಗೆ ಜನ್ಮ ಕೊಟ್ಟ ಬಿಹಾರ ಇಂದು ಯಾವ ಕಾರಣಕ್ಕೆ ಬಿಜೆಪಿಯ ನೆಲೆಯಾಗಿದೆಯೋ ಅದೇ ಕಾರಣಕ್ಕೆ ಕರಾವಳಿಯೂ, ಕನರ್ಾಟಕವೂ ಇಂದು ಬಿಜೆಪಿಯ ನೆಲೆಯಾಗಿದೆ. ಆದರೆ ಈ ಬಲಪಂಥೀಯ ಚಟುವಟಿಕೆಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಂಡು ಬಂದದ್ದಿಲ್ಲ.
ಇನ್ನು ಜಾತಿಯ ಕುರಿತ ವಿವಾದ. ಜಾತೀಯತೆಯ ಪಕ್ಷಪಾತದಿಂದಾಗಿ ತಮಗೆ ಅನ್ಯಾಯವಾಗಿದೆ ಎಂದು ದೂರುತ್ತಿರುವವರು ಅತೃಪ್ತರು. ವೈಯಕ್ತಿಕ ಕಾರಣಕ್ಕೆ ಅವರು ಜಾತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಜಾತೀಯತೆ ಕೆಲಸ ಮಾಡಿದೆ ಎನ್ನುವುದು ಪೊಳ್ಳು ಮಾತು. ಜಾತಿ ಹಿಡಿದು ಮಾತನಾಡುವುದಾದರೆ ಕನ್ನಡದಲ್ಲಿ ಜಾತಿಯ ವ್ಯವಸ್ಥೆ ಬಗ್ಗೆ, ಬ್ರಾಹ್ಮಣ್ಯವನ್ನು ವಿರೋಧಿಸಿ ಮೊದಲು ಮಾತಾಡಿದವರು ತಮ್ಮ ಹುಟ್ಟಿನ ಜಾತಿಯಿಂದ ಬ್ರಾಹ್ಮಣರೇ ಆಗಿದ್ದರು. ಅದೇ ರೀತಿ ಜಾತಿ ತಾರತಮ್ಯದ ಆರೋಪ ಮಾಡುವವರ ಜಾತಕವನ್ನು ಗಮನಿಸಿದರೆ ಸ್ವತಃ ಅಷ್ಟೇನೂ ಪ್ರತಿಭಾವಂತ ಲೇಖಕರು ಅಲ್ಲ. ಪ್ರತಿಭಾವಂತ ವಿಮರ್ಶಕರಲ್ಲ. ಅಲಕ್ಷ್ಯಕ್ಕೆ ಒಳಗಾದ ಲೇಖಕರು ಅದಕ್ಕೆ ಅರ್ಹರು. ಇಡೀ ಸಾಹಿತ್ಯ ಮತ್ತು ಜಾತೀಯತೆ ಎನ್ನುವ ಚಚರ್ೆಯೇ ಪೊಳ್ಳು.
ದ ಸಂಡೆ ಇಂಡಿಯನ್ | 20 ಫೆಬ್ರುವರಿ 2011
Saturday, March 19, 2011
. . : : Samagra Vachana Sahitya : : . .
pls- what is the problem in this website?. . : : Samagra Vachana Sahitya : : . .
Friday, March 18, 2011
Thursday, March 17, 2011
kannada jaimini bharatha- laksmeesha[ edited by dr d r panduranga[2010]
kannada jaimini bharatha- a kannada classic by lakshmeesha
edited by-dr d r panduranga
published by-
devanooru charitable trust[r]
no 76, maithri, 4th cross,
ramarao layout,
bangalore-560085
phone- 26690433 first edition - 2010
pages- 580
price-rs 350[paper back]
rs 400 [hard bound]
cover design- ravindra nadig, manipal
this edition contains two introductions to jaimini bharatha written by
1 dr g venkatasubbaiyya
2 v shivasmoorthy shastry
dr panduranga has written summary of the kaavya in kannada prose
for more details about lakshmeesha visit www classical kannada and huliyarunews.blogspot.com
jaikmini bharatha edited by daniel sanderson is available for download in google books
- muraleedhara upadhya hiriadka- mhupadhya@gmail. com
edited by-dr d r panduranga
published by-
devanooru charitable trust[r]
no 76, maithri, 4th cross,
ramarao layout,
bangalore-560085
phone- 26690433 first edition - 2010
pages- 580
price-rs 350[paper back]
rs 400 [hard bound]
cover design- ravindra nadig, manipal
this edition contains two introductions to jaimini bharatha written by
1 dr g venkatasubbaiyya
2 v shivasmoorthy shastry
dr panduranga has written summary of the kaavya in kannada prose
for more details about lakshmeesha visit www classical kannada and huliyarunews.blogspot.com
jaikmini bharatha edited by daniel sanderson is available for download in google books
- muraleedhara upadhya hiriadka- mhupadhya@gmail. com
Wednesday, March 16, 2011
Tuesday, March 15, 2011
Monday, March 14, 2011
Sunday, March 13, 2011
Kannadha Prabha.com PDF files
kannada kadalalli english dweepagalu- h s venkateshamoorthy-Kannadha Prabha.com PDF files
Saturday, March 12, 2011
Friday, March 11, 2011
Taayi- s devendra pejattaaya[kannada-2011
(ಮಹರ್ಷಿ ಅರಬಿಂದೋರವರ ಚಿಂತನೆಯ ಧಾರೆಯಲ್ಲಿ)
ಎಸ್. ದೇವೇಂದ್ರ ಪೆಜತ್ತಾಯರು (ಜನನ - 1931) ತಾಯಿಯನ್ನು ಕುರಿತ ಮಹರ್ಷಿಅರವಿಂದರ ತೊಂಬತ್ತೆರಡು ಸಾಲುಗಳನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ತಂದಿದ್ದಾರೆ. ಈ ಭಾಷಾಂತರದಲ್ಲಿ ಅರವಿಂದರ ಹೊಳಹುಗಳು ಮಾತ್ರವಲ್ಲದೆ ಅವರ ಕಾವ್ಯಸ್ಪರ್ಶವಿರುವ ಗದ್ಯವೂ ಕಾಣಿಸುತ್ತದೆ.
ಮೂರು ಉದಾಹರಣೆಯ ಸಾಲುಗಳು ಇಲ್ಲಿವೆ.
ಅವಳು ಭಿನ್ನ, ವಿಭಿನ್ನ ಬನ್ನಗಳನ್ನು ದಾಟಿಸುವ, ಚಿನ್ನದ ಹರಿಗೋಲಾಗುತ್ತಾಳೆ. ಅಚ್ಚರಿಯ ಅವಿಚ್ಛಿನ್ನ ಶಕ್ತಿ ಸೌಂದರ್ಯದ ಪ್ರಜ್ವಲಿಸುವ ಜ್ಯೋತಿಯಾಗುತ್ತಾಳೆ. (44)
ತಾಯಿಯ ಸನಿಹದಲ್ಲಿ ತರೆದು ನಿರ್ಮಲ ಹೃದಯೀ ಮನಸ್ಕರಾಗಿರಬೇಕಾದರೆ ನೀನು ಸದಾ ಶಾಂತಚಿತ್ತನಾಗಿ, ಆತ್ಮಸ್ಥೈರ್ಯದಿಂದ, ಆನಂದದಿಂದ ಇರಬೇಕು. ಚಂಚಲಚಿತ್ತನಾಗಿ, ದುಃಖಿತನಾಗಿ ಅಥವಾ ಹತಾಶನಾಗಿ ನೀನು ಇರಬಾರದು. (49)
ನೀನು ತರೆದ ಮನಸ್ಸಿನ ಪ್ರಶಾಂತತೆಯಲ್ಲಿ ಇರಲು ಅಸಾಧ್ಯವೆನಿಸಿದಾಗ ಸತತ ಧ್ಯಾನ, ಏಕಾಗ್ರತೆಯ ಮೌನದಿಂದ ಇರಬೇಕು. ಆಗ ಪ್ರಯತ್ನಶೀಲ ನಿನ್ನ ನಿರ್ಮಲ ಚಿತ್ತ ತರೆದುಕೊಳ್ಳುತ್ತದೆ - ಅವಳೆಡೆಗೆ. (51)
ಇದು ಅರವಿಂದ ಮಾತೃಸಂಹಿತೆ. ದೇವೇಂದ್ರ ಪೆಜತ್ತಾಯರ ಅನುವಾದ ಅರವಿಂದ ಮಾತೃಸಂಹಿತೆಯನ್ನು ಮನದಟ್ಟು ಮಾಡಿಸುತ್ತದೆ.
- ಮುರಳೀಧರ ಉಪಾಧ್ಯ ಹಿರಿಯಡಕ
ತಾಯಿ
(ಮಹರ್ಷಿ ಅರಬಿಂದೋರವರ ಚಿಂತನೆಯ ಧಾರೆಯಲ್ಲಿ)
ವಲ್ಲರಿ ಶಾರ್ವರಿ ಪ್ರಕಾಶನ
'ದೇವತಾ'
ವಳಕಾಡು, ಉಡುಪಿ 576 101
ಮೊದಲ ಮುದ್ರಣ - 2011
lಬೆಲೆ ರೂ.38
mobile-9449615308[ s d pejattaya]
Vishwa kannada Sammelana 2011 Belgaum Karnataka: Accomodation related help & SMS
Vishwa kannada Sammelana 2011 Belgaum Karnataka: Accomodation related help & SMS: "For Accommodation Details please visit :- Swagat Bhavan, &nb..."
Thursday, March 10, 2011
Tuesday, March 8, 2011
Monday, March 7, 2011
-:: Karnataka Sahithya Academy -Video Section ::
vaidhehi reciting her poem- aduge maneya hudugi-Karnataka Sahithya Academy -Video Section ::
Sunday, March 6, 2011
Saturday, March 5, 2011
Friday, March 4, 2011
Thursday, March 3, 2011
svasti[essays in honour of pro nagarajaiah]edited by-pro nalini balbir[2010]
svasti[essays in honour of pro hampa nagarajaiaih for his 75th birthday
edited by nalini balbir
published by-dr m byregowda
for- k s muddappa smaraka trust
krishnapuradoddi, 119,3rd cross. 8th makin,
haminagara,
bangalore-560104 karnataka
phone- 080-23409512
email- baraha.ph@gmail.com
first impression-2010
price- rs- 600
pages- 40+404
cover page- v raj, chamalapura
secion 1[1 to 11]-epigraphy,iconography,manussripts
secion 2-[12 to 19]-literature
section-3 [ 17 to 19 ]- kundakunda and his legasy
section 4 [20 to 27]- general issues
section 5 [28 to 33 ]- facets of contemporary jainism
this is an important reference book for all research scholars in jainism, ancient kannada literature, indian epigraphy, iconography , and manusripts. congrats to dr nalini balbir.abhivandanam to pro hampana-
mupaleedhara upadhya hiriadka
edited by nalini balbir
published by-dr m byregowda
for- k s muddappa smaraka trust
krishnapuradoddi, 119,3rd cross. 8th makin,
haminagara,
bangalore-560104 karnataka
phone- 080-23409512
email- baraha.ph@gmail.com
first impression-2010
price- rs- 600
pages- 40+404
cover page- v raj, chamalapura
secion 1[1 to 11]-epigraphy,iconography,manussripts
secion 2-[12 to 19]-literature
section-3 [ 17 to 19 ]- kundakunda and his legasy
section 4 [20 to 27]- general issues
section 5 [28 to 33 ]- facets of contemporary jainism
this is an important reference book for all research scholars in jainism, ancient kannada literature, indian epigraphy, iconography , and manusripts. congrats to dr nalini balbir.abhivandanam to pro hampana-
mupaleedhara upadhya hiriadka
Wednesday, March 2, 2011
Tuesday, March 1, 2011
Subscribe to:
Posts (Atom)