stat Counter



Wednesday, March 30, 2011

mahabharata[drama]- peter brook[book review]muralaleedhara upadhya hiriadka

ಪೀಟರ್ ಬ್ರೂಕ್ ಅನುವಾದಿಸಿದ ಮಹಾಭಾರತ
                                            -ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ
                                   
          ಇಲ್ಲಿರುವುದು ಎಲ್ಲ ಕಡೆಯೂ ಇದೆ, ಇಲ್ಲಿ ಇಲ್ಲದಿರುವುದು ಬೇರೆ ಎಲ್ಲಿಯೂ ಇಲ್ಲ ಎನ್ನುತ್ತದೆ ಮಹಾಭಾರತ. ಇದು ಮಹಾಭಾರತದ ಅಗ್ಗಳಿಕೆ. ಮಹಾಭಾರತ-ಪುರಾಣ, ಚರಿತ್ರೆ, ಆಖ್ಯಾನ, ಉಪಾಖ್ಯಾನ, ದೃಷ್ಟಾಂತ. ಧರ್ಮಶಾಸ್ತ್ರ, ಅರ್ಥಶಾಸ್ತ್ರಗಳನ್ನೊಳಗೊಂಡ ಇತಿಹಾಸ ಕಾವ್ಯ. ನಾಟಕೀಯ ಸನ್ನಿವೇಶ ಮತ್ತು ಸಂಭಾಷಣೆಗಳಿಂದ ಕೂಡಿದ ಮಹಾಭಾರತವನ್ನು ಹಾಡುತ್ತಿದ್ದ ಸೂತರು-ಚಾರಣರು-ಭಾರತೀಯ ರಂಗಭೂಮಿಯ ಆದ್ಯರು. ಈ ಉಪಜೀವ್ಯ ಕಾವ್ಯ ಭಾರತದ ಹಲವಾರು ಭಾಷೆಗಳ ಮಹಾಕಾವ್ಯಗಳಿಗೆ, ಭಾಸ, ಕಾಳಿದಾಸರಂಥ ಶ್ರೇಷ್ಠ ನಾಟಕಕಾರರ ನಾಟಕಗಳಿಗೆ ವಸ್ತುವನ್ನು ಒದಗಿಸಿದೆ. ಕುಮಾರವ್ಯಾಸರು, ಅಭಿನವವ್ಯಾಸರು ಭಾರತದ ಎಲ್ಲಾ ಭಾಷೆಗಳಲ್ಲೂ ಇದ್ದಾರೆ.

ಮಹಾಭಾರತ ರಂಗಕೃತಿ 
           ಪ್ಯಾರಿಸ್ನಲ್ಲಿರುವ ಅಂತಾರಾಷ್ಟ್ರೀಯ ರಂಗಭೂಮಿ ಸಂಶೋಧನ ಸಂಸ್ಥೆಯ ನಿದರ್ೇಶಕ ಪೀಟರ್ ಬ್ರೂಕ್ (ಜನನ-1925) ನಿದರ್ೇಶಿಸಿದ ಒಂಬತ್ತು ಗಂಟೆಗಳ ಅವಧಿಯ 'ಮಹಾಭಾರತ'ದ ರಂಗಕೃತಿಯನ್ನು ಫ್ರೆಂಚ್ ಭಾಷೆಯಲ್ಲಿ ಬರೆದವರು ಜೀನ್-ಕ್ಲಾಡ್ ಕ್ಯಾರಿಯೇರ್. ಅವರು ಪ್ಯಾರಿಸ್ನಲ್ಲಿರುವ 'ನ್ಯೂ ಫ್ರೆಂಚ್ ಸ್ಕೂಲ್ ಫಾರ್ ಸಿನಿಮಾ ಆಂಡ್ ಟೆಲಿವಿಷನ್'ನ ಅಧ್ಯಕ್ಷರಾಗಿದ್ದಾರೆ. ಫ್ರೆಂಚ್ ಕೃತಿಯನ್ನು ಪೀಟರ್ ಬ್ರೂಕ್ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಜೀನ್-ಕ್ಲಾಡ್ ಕ್ಯಾರಿಯೇರ್ ಮತ್ತು ಪೀಟರ್ ಬ್ರೂಕ್ರಿಗೆ 'ತತೋ ಜಯಮುದೀರಯೇತ್' ಎಂದು ಒಂದು ಲಕ್ಷ ಶ್ಲೋಕಗಳ 'ಮಹಾಭಾರತ'ದ ಕಥೆ ಹೇಳಿದವರು ಪ್ಯಾರಿಸ್ನಲ್ಲಿರುವ ಸಂಸ್ಕೃತ ವಿದ್ವಾಂಸ ಫಿಲಿಪ್ಪೆ ಲಾವಸ್ಟೈನ್. ಈ ಲೇಖನ ಪೀಟರ್ ಬ್ರೂಕ್ರ ನಾಟಕ ಪ್ರಯೋಗದ ವಿಮಶರ್ೆ ಅಲ್ಲ; ಜೀನ್-ಕ್ಲಾಡ್ ಕ್ಯಾರಿಯೇರ್ ಬರೆದಿರುವ ರಂಗಕೃತಿಯ ಒಂದು ಅವಲೋಕನ ಮಹಾಭಾರತವನ್ನು ನಿಮ್ಮ ಅಂಗೈಯಲ್ಲಿ ಹಿಡಿದಿಡುವುದು ಅಸಾಧ್ಯ. ಮೂಲ ಪಠ್ಯದಲ್ಲಿ ನಮ್ಮ ಕಲ್ಪನೆಗಳನ್ನು ತುರುಕುವುದಿಲ್ಲ. ನಮ್ಮ ತೀಮರ್ಾನಗಳನ್ನು ಹೇರುವುದಿಲ್ಲ. ಸಾಧ್ಯವಾದಷ್ಟೂ ಇಪ್ಪತ್ತನೆಯ ಶತಮಾನದ ನಮ್ಮ ವಿವೇಚನೆಯನ್ನು ಬಳಸುವುದಿಲ್ಲ ಎನ್ನುತ್ತಾರೆ ಕ್ಯಾರಿಯೇರ್.
          ಕ್ಯಾರಿಯೇರ್ ಅವರ 238 ಪುಟಗಳ 'ಮಹಾಭಾರತ' ನಾಟಕದಲ್ಲಿ ದ್ಯೂತ ಕ್ರೀಡೆ, ಅರಣ್ಯವಾಸ ಮತ್ತು ಯುದ್ಧ ಎಂಬ ಮೂರು ಭಾಗಗಳಿವೆ. ಒಟ್ಟು ಇಪ್ಪತ್ತಾರು ದೃಶ್ಯಗಳಿವೆ. ಪುರಾಣಭಂಜನೆಯಲ್ಲಿ ನಿಗೂಢಗಳನ್ನು ಭೇದಿಸುವುದರಲ್ಲಿ ನಾಟಕಕಾರರಿಗೆ ಆಸಕ್ತಿ ಇಲ್ಲ. ಅಪನಂಬಿಕೆಯನ್ನು ಅಮಾನತ್ತಿನಲ್ಲಿಟ್ಟು ಅವಿಯಬೇಕಾದ ಪಾಶುಪಶಾಸ್ತ್ರ, ಊರ್ವಶಿ ಶಾಪ, ಭೀಮ-ಹನುಮರ ಭೇಟಿ, ಯಕ್ಷ ಪ್ರಶ್ನೆ, ಜಯದ್ರಥ ವಧೆಯ ಸಂದರ್ಭದಲ್ಲಿ ಕೃಷ್ಣನ ಇಂದ್ರಜಾಲದ ಸೂಯರ್ಾಸ್ತ, ಸ್ವಗರ್ಾರೋಹಣ, ಕುಂತಿ ಮಂತ್ರಾಭಿಮಾನಿ ದೇವತೆಗಳಿಂದ ಮಕ್ಕಳನ್ನು ಪಡೆಯುವುದು-ಇಂಥ ಪುರಾಣಾಂಶಗಳನ್ನು, ನಿಗೂಢಗಳನ್ನು ಉಳಿಸಿಕೊಳ್ಳಲಾಗಿದೆ. ಸಂಶೋಧಕರು ಪ್ರಕ್ಷಿಪ್ತಭಾಗವೆಂದು ಅಭಿಪ್ರಾಯ ಪಡುವ ಅಕ್ಷಯ ವಸ್ತ್ರದ ಪ್ರಸಂಗವೂ ಈ ನಾಟಕದಲ್ಲಿದೆ. ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆದಾಗ ಒಂದರ ಹಿಂದೆ ಇನ್ನೊಂದು, ಮತ್ತೊಂದು ಸೀರೆಗಳು ಬಂದವೆಂದು ಮಹಾಭಾರತ ವಣರ್ಿಸುತ್ತದೆ. ಆದರೆ ಜನಪ್ರಿಯ ಜನಪದ ಪರಂಪರೆಯಲ್ಲಿರುವಂತೆ ಒಂದೇ ಬಟ್ಟೆ ಅಸೀಮವಾಯಿತೆಂದು ನಾಟಕಕಾರ ಬರೆಯುತ್ತಾರೆ. ಕೃಷ್ಣ ಚತುರನಿದ್ದ, ದೂರದಶರ್ಿಯಾಗಿದ್ದ. ಆದರೆ ತ್ರಿಕಾಲಜ್ಞಾನಿ ಸರ್ವಶಕ್ತ ಆಗಿರಲಿಲ್ಲ ಎನ್ನುತ್ತಾರೆ 'ಯುಗಾಂತ'ದ ಲೇಖಕಿ ಇರಾವತಿ ಕವರ್ೆ. ಆದರೆ ಕ್ಯಾರಿಯೇರ್ ಹೇಳುತ್ತಾರೆ-ಮನುಷ್ಯನೋ? ದೇವರೋ? ನಿರ್ಧರಿಸುವುದು ನಮ್ಮಿಂದಾಗದು. ಚಚರ್ಾಸ್ಪದವಾದ ಐತಿಹಾಸಿಕ, ಆಧ್ಯಾತ್ಮಿಕ ಸತ್ಯಗಳಲ್ಲಿ ನಮಗೆ ಆಸಕ್ತಿ ಇಲ್ಲ. ನಿಸ್ಸಂಶಯವಾದ ನಾಟಕೀಯ ಸತ್ಯ ನಮ್ಮ ಗುರಿ. ಕೃಷ್ಣನ ಪಾತ್ರದ ಅಂತಃಸತ್ವ ಈ ಕೃತಿಯಲ್ಲಿ ಮೂಡಿಬಂದಿಲ್ಲ.

ನಾಟಕ-ನಿರೂಪಣೆ 
          ಕಥನ ಸಂಪ್ರದಾಯದ ಮಹಾಕಾವ್ಯದ ಸೂತ-ಚಾರಣರ ಬದಲಿಗೆ ಈ ನಾಟಕದಲ್ಲಿ ವ್ಯಾಸನೇ ಸೂತ್ರಧಾರನಾಗಿದ್ದಾನೆ. ಅವನ ಜೊತೆಯಲ್ಲಿ ಆಗಾಗ ಮುಖ್ಯ ಪ್ರಶ್ನೆಗಳನ್ನು ಕೇಳುವ ಗಣೇಶ ಮತ್ತು ಒಬ್ಬ ಪುಟ್ಟ ಹುಡುಗ ಇದ್ದಾರೆ. ಈ ಪುಟ್ಟ ಬಾಲಕ ಮಹಾಯುದ್ಧವೊಂದರ ಅನಂತರ ಉಳಿಯುವ ಹತಭಾಗ್ಯ ತಲೆಮಾರಿನ ಪ್ರತಿನಿಧಿ. ದ್ಯೂತಕ್ರೀಡೆ ದೃಶ್ಯದ ಅಂತ್ಯದಲ್ಲಿ ವ್ಯಾಸ-ಗಣೇಶ-ಹುಡುಗ ಜೂಜಾಡುತ್ತಾರೆ. ಇಂಥಲ್ಲಿ ನಾಟಕಕಾರ ಮೌನದಲ್ಲಿ ಮಾತನಾಡುತ್ತಾನೆ. ವ್ಯಾಸ ಪಾತ್ರಧಾರಿ ಶಂತನುವಾಗಿ ಅಭಿನಯಿಸುವುದು. ಅಜರ್ುನ ಹನುಮಂತನಾಗಿ ಅಭಿನಯಿಸುವುದು-ಇಂಥ ಕಥನ ಸಂಪ್ರದಾಯದ ಅಂಶಗಳು ಈ ಕೃತಿಯಲ್ಲಿದೆ. ನಾಟಕೀಯ ತಂತ್ರದ ದೃಷ್ಟಿಯಿಂದ ಕ್ಯಾರಿಯೇರ್ ಮಾಡಿರುವ ಹಲವು ಸಣ್ಣಪುಟ್ಟ ಬದಲಾವಣೆಗಳು ಸೊಗಸಾಗಿವೆ. 'ಸ್ತ್ರೀಪರ್ವ'ದಲ್ಲಿ ಕುಪಿತ ಧೃತರಾಷ್ಟ್ರನ ಅಪ್ಪುಗೆಯಲ್ಲಿ ಭೀಮ ಸಾಯದಂತೆ ಕೃಷ್ಣ ಕಬ್ಬಿಣದ ವಿಗ್ರಹವನ್ನು ಮುಂದೆ ತಳ್ಳುವ ಸಂದರ್ಭ, ಈ ನಾಟಕದಲ್ಲಿ ಕೃಷ್ಣ ವಿಗ್ರಹದ ಬದಲಿಗೆ ಕುರುಕ್ಷೇತ್ರದಲ್ಲಿದ್ದ ಒಂದು ಹೆಣವನ್ನು ಧೃತರಾಷ್ಟ್ರ ಅಪ್ಪಿಕೊಳ್ಳುವಂತೆ ಮಾಡುತ್ತಾನೆ.
          'ಮಹಾಭಾರತ' ನಾಟಕದಲ್ಲಿ ವಿದುರನ ಗೈರುಹಾಜರಿ ಎದ್ದುಕಾಣುತ್ತದೆ. ವಿದುರನ ಪಾತ್ರ ಮಹತ್ವದಲ್ಲ ಎನ್ನುವ ನಾಟಕಕಾರರ ವಾದವನ್ನು ಒಪ್ಪುವುದು ಕಷ್ಟ. ಮೂಲಕಾವ್ಯದ ಉಪಾಖ್ಯಾನಗಳಿಗೆ ಇಲ್ಲಿ ಸ್ಥಾನವಿಲ್ಲ. ಅನೇಕ ಮುಖ್ಯ ಪ್ರಸಂಗಗಳೂ ನಾಪತ್ತೆಯಾಗಿವೆ. ಅರಗಿನ ಮನೆಯ ವೃತ್ತಾಂತ, ಬಕಾಸುರ ವಧೆ, ದ್ರೌಪದೀ ಸ್ವಯಂವರ, ಖಾಂಡವದಹನ, ಸುಭದ್ರಾ ಕಲ್ಯಾಣ, ಇತ್ಯಾದಿ. ಭೀಮ-ಹಿಡಿಂಬೆಯರ ವಿವಾಹ ಆದಿಪರ್ವದ ಬದಲಿಗೆ ಅರಣ್ಯಪರ್ವದಲ್ಲಿ ನಡೆಯುತ್ತದೆ. ಭೀಷ್ಮ ಪರ್ವದ ಅನಂತರದ ಯುದ್ಧ ಕಾಲದ ದೃಶ್ಯಗಳು ಶರವೇಗದಲ್ಲಿ ಸಾಗುತ್ತವೆ. ಮಹಾಭಾರತದ ಕೊನೆಯಲ್ಲಿರುವ ಶಾಂತಿ ಪರ್ವ, ಅನುಶಾಸನ ಪರ್ವ, ಮಹಾಪ್ರಸ್ಥಾನಿಕ ಪರ್ವದ ಘಟನೆಗಳು ಈ ನಾಟಕದಲ್ಲಿಲ್ಲ. ಸೌಪ್ತಿಕ ಪರ್ವದಲ್ಲಿ ಅಶ್ವತ್ಥಾಮನಿಗೆ ಸ್ಫೂತರ್ಿ ನೀಡಿದ ಕಾಗೆ-ಗೂಬೆಗಳ ವೃತ್ತಾಂತ, ಮೌಸಲ ಪರ್ವದಲ್ಲಿ ಅಜರ್ುನ ತನ್ನ ಕಾವಲಲ್ಲಿದ್ದ ಯಾದವ ಸ್ತ್ರೀಯರನ್ನು ಕಳ್ಳರಿಂದ ರಕ್ಷಿಸಲು ಅಸಮರ್ಥನಾಗುವುದು-ಇಂಥ ಧ್ವನಿಪೂರ್ಣ ಘಟನೆಗಳ ಪರಿತ್ಯಾಗ ಸಮರ್ಥನೀಯವಲ್ಲ.

ಪ್ರಮಾದ?
          ಈ ನಾಟಕದ ಇಂಗ್ಲಿಷ್ ಭಾಷಾಂತರದಲ್ಲಿರುವ ಭಾಷೆ ಆಡುಮಾತಿಗೆ ಹತ್ತಿರದ 'ಲೋಕಧಮರ್ೀ ಭಾಷೆ', ಲವಲವಿಕೆಯ ಚುರುಕು ಸಂಭಾಷಣೆ ಗಮನ ಸೆಳೆಯುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಮಹಾಭಾರತದ ಕಾವ್ಯ ಗುಣ-ರೂಪಕ ಶೈಲಿ ಕಾಣಿಸುವುದಿಲ್ಲ. ಆದರೆ ನಾಟಕಗಳಲ್ಲಿ ಸಂಭಾಷಣೆ ಮತ್ತು ಅಭಿನಯ ಅವಳಿ-ಜವಳಿಗಳು, ನಾಟಕ ಬರೇ ಸಂಭಾಷಣೆಯಲ್ಲ. ಒಂದು ಸಂಘಟನೆ ಎಂಬ ಎಚ್ಚರ ನಾಟಕಕಾರರಲ್ಲಿದೆ. 'ಕ್ಷತ್ರಿಯ' 'ಧರ್ಮ' ಶಬ್ದಗಳನ್ನು ಭಾಷಾಂತರಿಸುವುದು ಕಷ್ಟವೆಂದು ಮೂಲ ರೂಪದಲ್ಲೆ ಬಳಸಿದ್ದಾರೆ. ಸೂತಪುತ್ರ - 'ಖಿಜ ಠಟಿ ಠಜಿ ಚಿ ಜಡಿತಜಡಿ' ಆಗಿರುವುದು, ಸುದೇಷ್ಣಾ ಉಣಜಜಟಿಚಿ ಆಗಿರುವುದು - ಇಂಥ ಕೆಲವು ಪ್ರಮಾದಗಳಿವೆ. ವರ್ಣ-ವರ್ಣ ಸಂಕರ-ಜಾತಿ ವ್ಯವಸ್ಥೆಗಳ ಸೂಕ್ಷ್ಮಗಳನ್ನು ನಾಟಕಕಾರರು ಸರಿಯಾಗಿ ಗ್ರಹಿಸಿಲ್ಲ.
          ತೃಷ್ಣಾಕ್ಷಯದಿಂದ ಉಂಟಾಗುವ ಸುಖದ ಪರಿಪೋಷವೇ ಶಾಂತ, ಅದೇ ಮಹಾಭಾರತದಲ್ಲಿ ಪ್ರಧಾನ ರಸ ಎಂದು 'ಧನ್ಯಾಲೋಕ'ದ ಆನಂದವರ್ಧನ ಹೇಳುತ್ತಾನೆ. ಯಾವುದನ್ನು ಜಯ ಎನ್ನುತ್ತಾರೋ ಅದಂತೂ ನನಗೆ ಪರಾಜಯದಂತೆ ಕಾಣುತ್ತದೆ ಎನ್ನುತ್ತಾರೆ ಮಹಾಭಾರತದ ಯುಧಿಷ್ಠಿರ. ವಿಧಿಯ ವಿಲಾಸ ಮತ್ತು ವ್ಯಕ್ತಿಯ ಸ್ವಾತಂತ್ರ್ಯಯದ ಪ್ರಶ್ನೆ ಮಹಾಭಾರತದ ವಸ್ತು ಎಂದು ಪೀಟರ್ ಬ್ರೂಕ್ ಅಥರ್ೈಸುತ್ತಾರೆ. ನಾಟಕಕಾರ ಕ್ಯಾರಿಯೇರ್ ಭಾರತ ಶಬ್ದಕ್ಕಿರುವ ಭಾರತ ವರ್ಷದ ಪ್ರಜೆ ಎಂಬ ಅರ್ಥದ ಕಡೆ ನಮ್ಮ ಗಮನ ಸೆಳೆಯುತ್ತ 'ಇದು ಮನುಕುಲದ ಮಹಾ ಇತಿಹಾಸ' ಎನ್ನುತ್ತಾರೆ. 'ಸರ್ವನಾಶವನ್ನು ತಪ್ಪಿಸುವುದು ಸಾಧ್ಯವೇ?' ಎಂಬ ಪ್ರಶ್ನೆ ಈ ನಾಟಕದಲ್ಲಿ ಮತ್ತೆ ಮತ್ತೆ ಕೇಳಿಸುತ್ತದೆ. ಮಹಾನಾಯಕರು ಕಾರಣಗೊತ್ತಿಲ್ಲದೆ ನಾಶವಾಗುತ್ತಾರೆ ಎನ್ನುತ್ತಾರೆ ವ್ಯಾಸ. ಯುದ್ಧ ಮುಗಿಯಿತೇ? ಎಂದು ಪ್ರಶ್ನಿಸಿದ ಹುಡುಗನಿಗೆ ವ್ಯಾಸ ಹೀಗೆ ಉತ್ತರಿಸುತ್ತಾನೆ-ನೂರ ಎಂಬತ್ತು ಲಕ್ಷ ಹೆಣಗಳ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ. ನಿನ್ನ ಕಾವ್ಯದ ಅಂತ್ಯ ನಿನಗೆ ತಿಳಿದಿದೆಯೇ? ಅಜರ್ುನನ ಪ್ರಶ್ನೆ. ವ್ಯಾಸನ ಉತ್ತರ-ಅದಕ್ಕೆ ಅಂತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ, ಈ ಜಗತ್ತು ಕ್ರೂರವಾಗಿದೆ. ಈ ಜಗತ್ತಿನ ಕ್ರೌರ್ಯವನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಧೃತರಾಷ್ಟ್ರನ ಈ ಪ್ರಶ್ನೆಗೆ ಭೀಷ್ಮ ಹೀಗೆನ್ನುತ್ತಾನೆ-ನೀನು ಅದರ ಭಾಗ.

ವಿಮರ್ಶಕ ಕಂಡಂತೆ
          ಪೀಟರ್ ಬ್ರೂಕ್ ನಿದರ್ೇಶಿಸಿದ ಈ ನಾಟಕದ ಪ್ರಯೋಗದಲ್ಲಿ ರಂಗಭೂಮಿ ವಿಮರ್ಶಕ ರುಸ್ತುಂಭರೂಚ ಮೆಚ್ಚಿಕೊಂಡ ದೃಶ್ಯ ದ್ರೋಣ-ಅಜರ್ುನ-ಏಕಲವ್ಯರ ಶಸ್ತ್ರಾಭ್ಯಾಸದ ಸನ್ನಿವೇಶ. ಪೀಟರ್ ಬ್ರೂಕ್ ಅವರ ನಿದರ್ೇಶನದ ಕುರಿತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. 'ಲಂಡನ್ ಟೈಮ್ಸ್'ನ ಕಲಾವಿಮರ್ಶಕ 'ಮಹಾಭಾರತ'ದ 'ರಂಗಪ್ರಯೋಗವನ್ನು ಈ ಶತಮಾನದ ಮುಖ್ಯ ರಂಗಘಟನೆ' ಎಂದು ಶ್ಲಾಘಿಸಿದ್ದಾನೆ. ಅಂತರ್ ಸಾಂಸ್ಕೃತಿಕ ಸಮನ್ವಯ ಪೀಟರ್ ಬ್ರೂಕರ ಪ್ರಯೋಗದ ವೈಶಿಷ್ಟ್ಯ. ಆದರೆ ಈ ಕಾರಣಕ್ಕಾಗಿಯೇ ಭಾರತೀಯ ವಿಮರ್ಶಕ ರುಸ್ತುಂಭರೂಚ ಇದನ್ನು 'ಸಾಂಸ್ಕೃತಿಕ ಮಸಾಲೆ' ಎಂದು ಗೇಲಿ ಮಾಡಿದ್ದಾರೆ. ಸಾಂಪ್ರದಾಯಿಕ ಭಾರತೀಯ ರಂಗಭೂಮಿಯ ಮಾಧ್ಯಮಗಳನ್ನು 'ವಿದೇಶೀಯನೊಬ್ಬ ಶ್ಲಾಘಿಸಬಹುದು. ಆದರೆ ಅನುಕರಿಸುವುದು ಅಸಾಧ್ಯ' ಎನ್ನುವ ಪೀಟರ್ ಬ್ರೂಕರಿಗೆ ತನ್ನ ಮಿತಿಗಳ ಅರಿವಿದೆ. 'ಈ ರೂಪಾಂತರದ ಮೂಖ್ಯ ಲಕ್ಷಣವೇ ಸರಳೀಕರಣ' (ರುಸ್ತುಂಭರೂಚ) ಎಂಬ ವಿಮಶರ್ೆ ಸರಿಯಾಗಿದೆ. ಆದರೆ 'ಪಾಶ್ಚಾತ್ಯ ಪ್ರೇಕ್ಷಕರಿಗಾಗಿ' 'ಭಾರತದ ರುಚಿ' ಇರುವ ಮಹಾಭಾರತ ನಾಟಕವನ್ನು ನೀಡುವುದು ಪೀಟರ್ ಬ್ರೂಕರ ಉದ್ದೇಶ. 'ತಾನ್ ಪ್ರತಿ ನೈಷ ಯತ್ನಃ, ವಿಪುಲಾಚ ಪೃಥ್ವೀ' (ಈ ಯತ್ನ ಅವರಿಗಿಲ್ಲ. ಪರಿಮಿತವೇ ಪೃಥ್ವಿ) ಎನ್ನುವ ಸ್ವಾತಂತ್ರ್ಯ ನಿದರ್ೇಶಕರಿಗಿದೆ. (ಈಗ ಈ ನಾಟಕದ ಸಿನಿಮಾ ಅವತರಣಿಕೆ ಬಿಡುಗಡೆಯಾಗಿದೆ.)
          ಭಾಸ, ಮಹಾಭಾರತದ ಕಥೆಗಳನ್ನು ಆಧರಿಸಿ ಆರು ನಾಟಕಗಳನ್ನು ಬರೆದಿದ್ದಾನೆ. ಭವಭೂತಿ ಸಮಗ್ರ ರಾಮಾಯಣವನ್ನು ಅನೇಕ ಬದಲಾವಣೆಗಳೊಂದಿಗೆ ನಾಟಕ ಮಾಧ್ಯಮಕ್ಕೆ ತಂದ. ಆದರೆ ಭಾಸ ಸಂಪೂರ್ಣ ಮಹಾಭಾರತ ಪ್ರಯೋಗದ ಕುರಿತು ಯೋಚಿಸಲಿಲ್ಲ. ಗಂಡು-ಹೆಣ್ಣಿನ ಸಂಬಂಧದಲ್ಲಿ ಆಸಕ್ತನಾದ ಕಾಳಿದಾಸ ಮಹಾಭಾರತದ ಶಕುಂತಳೋಪಾಖ್ಯಾನಕ್ಕೆ ಅಭಿಜ್ಞಾನವನ್ನು ನೀಡಿ ರೂಪಾಂತರಿಸಿದ. ಯಕ್ಷಗಾನದಂಥ ಮಾಧ್ಯಮದಲ್ಲಿ 'ಮಹಾಭಾರತ'ದಿಂದ ಆಯ್ದ 'ಕಾಳಗ', 'ಸಂಧಿ', 'ಕಲ್ಯಾಣ'ಗಳ ಪ್ರಸಂಗಗಳಿವೆ. ಆದರೆ ಸಮಗ್ರ ಮಹಾಭಾರತದ ಪ್ರಸಂಗ-ಪ್ರಯೋಗ ಯಕ್ಷಗಾನ ಪರಂಪರೆಯಲ್ಲಿಲ್ಲ. ಆಧುನಿಕ ಭಾರತೀಯ ರಂಗಭೂಮಿಯಲ್ಲಿ ಧರ್ಮವೀರ ಭಾರತೀ ಅವರ 'ಅಂಧಯುಗ' (ಹಿಂದೀ) ಮಹಾಭಾರತದ ವಸ್ತುವಿರುವ ಒಂದು ಮುಖ್ಯ ನಾಟಕ. ಈ ಹಿನ್ನೆಲೆಯಲ್ಲಿ ಪೀಟರ್ ಬ್ರೂಕ್ ಮತ್ತು ಕ್ಯಾರಿಯೇರ್ 'ಮಹಾಭಾರತ'ವನ್ನು ಟಿವಿಗೆ ಇಳಿಸದೆ, ಸಿನಿಮಾ ಪರದೆಗೆ ಬೆಳೆಸದೆ, ರಂಗಭೂಮಿಯಲ್ಲಿ ಮೊದಲು ಪ್ರದಶರ್ಿಸಲು ಯೋಜಿಸಿದ್ದು ಮಹತ್ವದ, ಮಹತ್ವಾಕಾಂಕ್ಷೆಯ ನಿಧರ್ಾರ. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಜೀನ್-ಕ್ಲಾಡ್ ಕ್ಯಾರಿಯೇರ್ನ ನಾಟಕ 'ಒಂದು ಒಳ್ಳೆಯ ರಂಗಕೃತಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂಲ ಮಹಾಕಾವ್ಯದ ವಸ್ತುವನ್ನು ವಿರೂಪಗೊಳಿಸುವ ಯಾವ ಬದಲಾವಣೆಯನ್ನೂ ನಾಟಕಕಾರ ಮಾಡಿಲ್ಲ' ಈ ವ್ಯಾಸ ಭಕ್ತಿ ಆಶ್ಚರ್ಯ ಹುಟ್ಟಿಸುತ್ತದೆ. 

ವಿದೇಶೀಯರು ಕಂಡ 'ಮಹಾಭಾರತ'

  •          ಜಗತ್ತಿನ ಶ್ರೇಷ್ಠ ವೀರಗಾಥೆ ಮಹಾಭಾರತ. ಹಲವರಿಂದ ಪ್ರಶಂಸೆ, ವಿಶ್ವದ ಒಲವು, ಇತಿಹಾಸ, ವಿವೇಕ, ಮಾನವನ ಮನಸ್ಸಿನ ಪದರುಗಳು, ದಂತಕಥೆಗಳೆಲ್ಲ ಒಂದಾಗಿ ಮೂಡಿರುವ, ಸ್ಫುಟವಾಗಿ ಅನುವಾದಿತಗೊಂಡು ಜಾಗತಿಕ ಘಟನೆಯಾಗಿರುವಂಥ ಒಂದು ಮಹಾನ್ ನಾಟಕ.
  •          ಇದು ಭಾರತದ್ದಾದರೂ ಸಮಸ್ತ ವಿಶ್ವಕ್ಕೆ ಅನ್ವಯಿಸುವಂಥದ್ದು. ಇದು ಭೂತಕಾಲದ್ದಾದರೂ ವರ್ತಮಾನಕಾಲದ್ದು. ವೈಯಕ್ತಿಕವಾದದ್ದಾದರೂ ನೆರೆಯವನದ್ದು. ಉದ್ವೇಗ ತುಂಬಿದ ಕಥೆ ಮತ್ತು ಉತ್ತಮ ಅಭಿನಯದಿಂದ ಕೂಡಿದ್ದು ವಿಧಿವಿಹಿತವಾಗಿದೆ. ಇದು ಸರಳವಾಗಿದ್ದು ಗುರುತಿಸನಹುದಾದಂಥದ್ದಾಗಿದ್ದರೂ ಇದಕ್ಕೆ ಇನ್ನೊಂದು ದೊಡ್ಡ ಆಯಾಮವಿದೆ.
  •          ಯುರೋಪಿನಲ್ಲಿ ಮಹಾಭಾರತ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಇದನ್ನು ಈ ಕಾಲದ ಒಂದು ಉತ್ತಮ ರಂಗಘಟನೆ ಎಂದು ಗುರುತಿಸಲಾಗಿದೆ.
  •          ರಂಗಭೂಮಿಯ ಒಂದು ಅಂಶವಾಗಿ ಇದು ಕಾಲದ ಒಂದು ಹೆಗ್ಗುರುತಿನಿಂತಿದೆ. ನಾಟಕವಾಗಿ ಓದಲು ಇದು ಕಲ್ಪನೆಗಳನ್ನು ಮಿತಿಮೀರಿ ಉದ್ದೀಪನಗೊಳಿಸುತ್ತದೆ. ಇದೊಂದು ವೀರಗಾಥೆ ಮತ್ತು ಇಡಿಯ ವಿಶ್ವದ ಇತಿಹಾಸ.
'ಸಾಂಸ್ಕೃತಿಕ ಮಸಾಲೆ'
-    ರುಸ್ತುಂ ಭರೂಚ
(ಅನುವಾದ: ಕೆ. ವಿ. ಅಕ್ಷರ)

          ಬ್ರೂಕ್ ಇಷ್ಟಪಡಲಿ ಬಿಡಲಿ, ಈ ಮಹಾಭಾರತ ಆಗಿರುವುದು ಆತನೇ ಪಾಕಶಾಸ್ತ್ರಿಯಾಗಿರುವ ಒಂದು ಸಾಂಸಕ್ಕೃತಿಕ ಮಸಾಲೆಯಂತೆ. ಈ ಮಸಾಲೆಯ ಹಲವಾರು ಅಂಗಗಳು ಪ್ರಪಂಚದ ಹಲವಾರು ಕಡೆಗಳಿಂದ ಬಂದಿವೆ. ಆದರೆ ಇವೆಲ್ಲವನ್ನೂ ಕೂಡಿಸುವ ವೈಶಿಷ್ಟ್ಯ ರುಚಿ ಪೀಟರ್ ಬ್ರೂಕನ 'ಒಗ್ಗರಣೆ'ಯಿಂದ ಬಂದಿದೆ.
          ಈ ಪ್ರಯೋಗದ ಯಾವುದೇ ಅಂಶವಿರಲಿ, ಅದರ ಮೇಲೆ ಬ್ರೂಕನ ಮುದ್ರೆ ಬಿದ್ದಿದೆಯೆಂಬುದಂತೂ ನಿವರ್ಿವಾದ. ಅದೊಂದು ಮುಖವಾಡವಿರಲಿ, ಸಂಗೀತೋಪಕರಣವಿರಲಿ, ಒಮ್ಮೆ ಪೀಟರ್ ಬ್ರೂಕನ ಮುದ್ರೆ ಬಿದ್ದಿತೆಂದಾದರೆ ಅವು ತಮ್ಮ ಸಂಸ್ಕೃತಿಯ ಛಾಯ ಕಳೆದು ಅವನದ್ದಾಗುತ್ತದೆ. ಅಂಥ ಛಾತಿ ಬ್ರೂಕನಿಗಿದೆ. ಇಂಥ ನಿದರ್ೇಶನದ ಹತೋಟಿಯನ್ನು ನಾನು 'ಸಂಸ್ಕೃತಿಕ ವಸಾಹತುಶಾಹಿ'ಯ ಮುಖ್ಯ ಲಕ್ಷಣವೆಂದೇ ಗಣಿಸುತ್ತೇನೆ.
          ಈ ಮಹಾಭಾತರ ನೋಡಿದ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವುದಾದರೂ ಏನು? ಐದೇ ನಿಮಿಷದಲ್ಲಿ ಮುಗಿದುಹೋಗುವ ಭಗವದ್ಗೀತೆಯಲ್ಲ. ಯಾವ ಪಾತ್ರವೂ ಅಲ್ಲ. ಯಾಕೆಂದರೆ ಪಾತ್ರ ಪಾತ್ರಗಳೇ ವ್ಯತ್ಯಾಸಹೀನವಾಗಿ ಮನಸ್ಸಲ್ಲಿ ಕಲಸಿಹೋಗುತ್ತದೆ. 'ಕಥೆ' ಅಥವಾ ಆ ಕಥೆಯ ಅರ್ಥ ಅದಂತೂ ಅಲ್ಲವೇ ಅಲ್ಲ. ನೆನಪಿನಲ್ಲುಳಿಯುವವು ಬರೀ ದೃಶ್ಯ ಚಮತ್ಕಾರಗಳು. ವಿರಾಟನ ಆಸ್ಥಾನದಲ್ಲಿ ತೇಲುವ ದೃಶ್ಯ-ತುಂಡು ತುಂಡಾದ ಕೀಚಕನ ದೇಹ ಚೀಲದೊಳಗೆ-ಮಾಯವಾಗುವ ಯಕ್ಷಿಣಿ, ನೆಲದಿಂದೇಳುವ ಬೆಂಕಿಯ ಚಿಲುಮೆ ಇತ್ಯಾದಿ......ಇದಕ್ಕೆಲ್ಲ ಅಲಂಕಾರ ಪ್ರಾಯವಾಗಿ ಬರುವುದು ಹಲವು ಭಾರತೀಯ ಕುಶಲ ವಸ್ತುಗಳು, ರತ್ನಗಂಬಳಿ, ಜಮಖಾನೆ, ತಟ್ಟೆ, ಚೆಂಡು ಹೂ, ಧೂಪ, ದಿಂಬು-ಇತ್ಯಾದಿ ನಮ್ಮ ವಿದೇಶೀ ಪ್ರವಾಸಿಗರನ್ನು ಆಕಷರ್ಿಸುವ ಗುಡಿಕೈಗಾರಿಕೆಯ ವಸ್ತುಗಳು. ಈ ಪೌವರ್ಾತ್ಯ ದೃಶ್ಯವೈಭವ ಭಾರತದ ಹೊಸತನದ ಮೋಹವೊಂದನ್ನು ಹುಟ್ಟುಹಾಕುವಂತಿದೆ.....ಈ ಪ್ರಯೋಗವನ್ನು ಇತಿಹಾಸ ಬ್ರೂಕನ ಒಂದು ಸಾಹಸ ಎಂದು ನೆನಪಿಟ್ಟುಕೊಂಡೀತೇ ಹೊರತು ಈ ಮಹಾಭಾರತವನ್ನು ನೆನಪಿಟ್ಟುಕೊಳ್ಳುವುದಿಲ್ಲ.


No comments:

Post a Comment