ಒಂದು ಜ್ವಾಲೆ- ಗುರುರಾಜ ಮಾರ್ಪಳ್ಳಿ
ಸೂರ್ಯ ಹಟ್ಟುವಾಗ ಹುಟ್ಟಿಕೊಳ್ಳುತ್ತದೆ ಆ ಜ್ವಾಲೆ, ಹೊತ್ತೇರುತ್ತಿದ್ದಂತೆ
ಮೈಯಿಡಿ ಆವರಿಸಿ ಉರಿಯತೊಡಗುತ್ತದೆ. ಧರ್ಮಗ್ರಂಥಗಳಲ್ಲಿ ಆ ಉರಿಯ ಕುರಿತು
ಎಲ್ಲೂ ಏನು ಹೇಳಿಲ್ಲ, ಮತ್ತು ಕತೆ ಕಾದಂಬರಿ ಕಾವ್ಯಗಳಲ್ಲಿ ಹುಡುಕಿ
ನೋಡಿದೇನೆ. ಸುದ್ದಿಯಿಲ್ಲ.
ಅದು ವಿರಹದ ಯಾತನೆಯಲ್ಲ. ಏಕೆಂದರದು ಶೃಂಗಾರವಲ್ಲ. ಒಂದು
ಭೀಭತ್ಸ
ಯಾತನೆಯಾಗಿದೆ ಅದು ತತ್ವಜ್ಞಾನಿಗಳಲ್ಲಿ ಕೇಳಿದ್ದೇನೆ ಉತ್ತರ ಸಿಕ್ಕಿಲ್ಲ
ದಿನರಾತ್ರಿ
ಕಡಲ ತಡಿಗಳಲ್ಲಿ ಬೆಟ್ಟಗಳ ನದಿ ಬಯಲುಗಳಲ್ಲಿ ಅಲೆದಾಡಿದ್ದೇನೆ
ಎಲ್ಲೂ ನೆಮ್ಮದಿ ದೊರೆಯಲಿಲ್ಲ. ರಾತ್ರಿಯಾದರೆ ನನ್ನೊಡನೆ ಮಲಗುವ
ಎಚ್ಚರವಾದರೆ
ಉರಿಯುವ ಆಜೀವ ಪರ್ಯಂತ ತಪ್ತಯಾತನೆ ಅದು. ಹುಚ್ಚೆದ್ದು
ಕೆದರುವುದು.
ಅಪರಿಹಾರ್ಯ ಕೆರಳುವುದು ಸೂರ್ಯ ಹುಟ್ಟುವಾಗ ಅದು ಹುಟ್ಟುವುದು
ನಾನು ಸೋತರೆ ಕೇಕೆ ಹಾಕುವುದು, ಪ್ರೇತದಂತೆ ಅಹನರ್ಿಶಿ ಕಾಡುವುದು,
ಜೀವವಿದ್ದರೆ ತಿಳಿಯುತ್ತಿತ್ತು ಅದು ದೇವರಿಗೆ, ಕಲಾವಿದನ ಚಿತ್ರಗಳಲ್ಲಿ
ಬರುವುದು ಬೇಕಾದಂತೆ ಬಣ್ಣಮೆತ್ತಿಕೊಳ್ಳುವುದು ಸವಾಧಿಕಾರಿಯ
ಮನಸ್ಸಿನಲ್ಲಿ
ಭುಗಿಳೇಲುವುದು ನಗ್ನವಾಗಿ, ತಾನು ಆಗಲಾರದ್ದಕ್ಕೆ ಹಪಹಪಿಸುವುದು.
ಅನಿಲ ಕೋಣೆಯಲ್ಲಿ
ಜನ ಸತ್ತಾಗ ತೃಪ್ತಿಕೊಡುವುದು. ಕೂದಲುಗಳ ಕಾಖರ್ಾನೆ ನಡೆಸುವುದು.
ಅದಕ್ಕೆ
ದಾರ್ಶನಿಕನಾಗಲು ಗೊತ್ತು. ಸವರ್ಾಧಿಕಾರಿಯಾಲು ಕಾತರಿಸುವುದು
ಅದೇ ಹೊತ್ತು
ಸಂನ್ಯಾಸಿಯ ವೇಷ ಧರಿಸುವುದು, ಧರ್ಮವೆಂದು ಉಳಿದವರ ತಲೆತಿನ್ನುವುದು.
ಬುದ್ಧಿ ತಿನ್ನುತ್ತ ಬುದ್ಧಿಜೀವಿಯಾಗುವುದು. ಚಿಂತನೆಯೆಂದು ಬೊಗಳೆ
ಬಿಡುವುದು.
ಸೂರ್ಯನ ಜತೆ ಹುಟ್ಟುವುದು ಆ ಅತೃಪ್ತಿ. ಮೊದಲು ತನ್ನನ್ನು
ಆಮೇಲೆ ಉಳಿದವರನ್ನು.
ಚೂರುಚೂರೇ ನುಂಗುವುದು.
ಅರ್ಧ ಒಪ್ಪಿದ ಹೆಣ್ಣನ್ನು ಆಕ್ರಮಿಸುವಂತಎ ಅಂಗಾಂಗ ಕೆಳಿಸುವುದು
ಮಾಂಸದ ತಾವರೆಗಳ ಅರಳಿಸುವುದು. ಆ ಬೆಟ್ಟಗಳನ್ನೇರಿ
ಕಂದಕಗಳನ್ನಿಳಿದು
ದೇಹ ದೇಹಗಳಲ್ಲಿ ಅವಿತು ತಾನು ಕಬಳಿಸುವುದು. ಲಜ್ಜೆ ಮೀರಿದ
ಭೋಗದಲ್ಲಿ
ಮಾತು ಮೀರಿದ ಯೋಗದಲ್ಲಿ ತನ್ನ ಸಂತಾನಗಳ ಹುಟ್ಟಿಸಿ ಕೃತಾರ್ಥವಾಗುವುದು
ಸೂರ್ಯನ ಜತೆಗೆ ಹುಟ್ಟುವುದು. ಹಗಲಿಡೀ ತಾನು ಉರಿಯುತ್ತ
ಕಾಯುವುದು. ಕಾಯುತ್ತೇನೆ ಈಗಲೂ
ರಾತ್ರಿಯಾಗುವುದನ್ನು, ಚಂದ್ರ ಬಾಡುವುದನ್ನು ಉರಿಯಲು ಬಿಟ್ಟಿದ್ದೇನೆ.
ಹಗಲು ತನ್ನಷ್ಟಕ್ಕೆ ಅನರ್ಥಕಾರಿ ಉರಿಯನ್ನು.
ನಾನು ನನ್ನೊಳಗೆ ಅದನ್ನು ಗಮನಿಸಿದ್ದೇನೆ. ನನ್ನನ್ನ ಜೀವಂತ ತಿನ್ನುವುದನ್ನು ಕಂಡಿದ್ದೇನೆ. ಅದು ತಿಂದು ಮುಗಿಯಲಾರದ ಕೆಲಸ.
ಆಯುಷ್ಯವಡೀ. ಎಷ್ಟು ದಿನಗಳಾದರೂ
ನುಂಗುತ್ತಲೇ ಇರುವ ಕೆಲಸ, ಹಾವು ಕಪ್ಪೆಗಳ ನುಂಗಿದಂತೆ, ಕೊನೆಗದು
ಸಾವಾಗಿ ಬರಬಹುದು. ಚಿಗೆ ಉರಿದು ದೇಹ ಅಳಿದಂತೆ
ಜೀವವನ್ನೆ ನುಂಗಬಹುದು.
ಸೂರ್ಯ ಹುಟ್ಟುವ ಹೊತ್ತು ಅದು ಹುಟ್ಟುತ್ತದೆ. ಅದು ಜೀವ,
ಮನ್ಮಥ, ಗರುಡ,
ಈಶ್ವರನೆಂದುಕೊಂಡಿದೆ ಪುರಾಣದಲ್ಲಿ. ಬದುಕುತ್ತದೆ ಎಲ್ಲರ
ಕಾಡುತ್ತ ಇಡಿಯ ಅಂತರಂಗದಲ್ಲಿ.

No comments:
Post a Comment