stat Counter



Monday, May 20, 2013

0ುಶವಂತ ಚಿತ್ತಾಲರ ಪೀಜೀ


0ುಶವಂತ ಚಿತ್ತಾಲರ ಪೀಜೀ

 'ಅತಿಥಿ ದೇವೋಭವ' ಎಂದು ಸಾರುತ್ತಿದ್ದ ಸಂಸ್ಕೃತಿ0ೊಂದು 'ಗಿರಾಕಿ' ಅಥವಾ 'ಕಸ್ಟಮರ್' ಎಂಬ ಹೊಸದೊಂದು ವರ್ಗವನ್ನು ಸೃಷ್ಟಿಸಿರುವಲ್ಲಿ ನಮ್ಮ ನಾಗರೀಕತೆ0ುು ಆಧುನಿಕಪೂರ್ವ ಘಟ್ಟದಿಂದ ಆಧುನಿಕ ಘಟ್ಟಕ್ಕೆ ಹೊರಳಿಕೊಂಡಿರುವ ಸ್ಪಷ್ಟಸೂಚನೆ ಕಂಡುಬರುತ್ತದೆ. ಜೀವನಕ್ರಮ ಮತ್ತು ಮೌಲ್ಯಕಲ್ಪನೆಗಳಲ್ಲಿ ನಿಣರ್ಾ0ುಕ ಪಲ್ಲಟ ಕಂಡಿರುವ ಸಂಗತಿಗಳಲ್ಲಿ ಮೇಲುನೋಟಕ್ಕೇ ಎದ್ದುಕಾಣುವ ಪರಿಕಲ್ಪನೆಗಳೆಂದರೆ, 'ಅತಿಥಿ', 'ಅತಿಥೇ0ು' ಮತ್ತು 'ಆತಿಥ್ಯ'. ಅತಿಥಿ0ುನ್ನು ದೇವರಾಗಿ ಕಾಣದಿದ್ದವರೂ ಅಗತ್ಯವೆಂದೋ, ಅನಿವಾ0ರ್ುವೆಂದೋ ಅಪರಿಚಿತರಿಗೆ, ಪರವೂರಿನವರಿಗೆ ಕೈಲಾದ ಆತಿಥ್ಯವನ್ನು ಉಚಿತವಾಗಿ ನೀಡುತ್ತಿದ್ದುದು ಸಹಜವಾಗಿತ್ತು. ಇಂದಿಗೂ ಆಧುನಿಕ ನಾಗರಿಕ ಸವಲತ್ತುಗಳು ಇಲ್ಲದ ಅನೇಕ ಗ್ರಾಮಗಳಲ್ಲಿ  ಈ ಪದ್ಧತಿ ಇನ್ನೂ ಮುಂದುವರೆದಿದೆ. ನಗರಗಳು ಬೆಳೆದು ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ, ವೈದ್ಯಕೀ0ು ಚಿಕಿತ್ಸೆ, ಕೋಟರ್ು-ಕಛೇರಿ ವ್ಯವಹಾರಗಳು ಮುಂತಾದ ಕಾರಣಗಳಿಗಾಗಿ ದೊಡ್ಡ ಸಂಖ್ಯೆ0ುಲ್ಲಿ ಜನರು ಪಟ್ಟಣಗಳಿಗೆ ಬರುವುದು ಜಾಸ್ತಿ0ಾದ ಮೇಲೆ ಅವರ ಅಗತ್ಯಗಳನ್ನು ಪೂರೈಸುವ ಹೊಸ ಸಂಸ್ಥೆಗಳು ಅನಿವಾ0ರ್ುವಾಗಿ ಹುಟ್ಟಿಕೊಳ್ಳಬೇಕಾಯಿತು. ಇಂಥ ಎರಡು ಮುಖ್ಯ ವ್ಯವಸ್ಥೆಗಳೆಂದರೆ ಹೊಟೆಲ್ ಮತ್ತು ಪೀಜಿ. ಹಿಂದಿನ ಕಾಲದಲ್ಲಿ ನಗರಗಳಲ್ಲಿ ಇರುತ್ತಿದ್ದ ಧರ್ಮಛತ್ರಗಳು ಮತ್ತು ಇಂದೂ ನಗರಗಳಲ್ಲಿ ಇರುವ ಉಚಿತ ಹಾಸ್ಟೆಲ್ಲುಗಳಿಗೂ ಈ  ಹೊಟೆಲ್ ಮತ್ತು ಪೀಜಿಗಳಿಗೂ ಇರುವ ವ್ಯತ್ಯಾಸಗಳನ್ನು ವಿವರಿಸುವ ಅಗತ್ಯವಿಲ್ಲ. ಹಣ ಪಡೆದು ಊಟ-ವಸತಿಗಳನ್ನು ಒದಗಿಸುವ ಈ ಸಂಸ್ಥೆಗಳು ಮುಖ್ಯವಾಗಿ ಈ ಕಾರಣದಿಂದಲೇ ಉಳಿದ ವ್ಯವಸ್ಥೆಗಳಿಗಿಂತ ನಿರ್ಣ0ಾತ್ಮಕವಾಗಿ ಭಿನ್ನ. 'ವಾರಾನ್ನ'ದ ಪದ್ಧತಿ ಈಗ ನಿಂತು ಹೋಗಿರುವ ಹಾಗೆ ಕಾಣುತ್ತದೆ. ಬಡಮಕ್ಕಳನ್ನು ಮನೆ0ುಲ್ಲಿಟ್ಟುಕೊಂಡು ಅವರ ವಿದ್ಯಾಭ್ಯಾಸಕ್ಕೆ ನೆರವಾಗುವವರ ಸಂಖ್ಯೆ0ುೂ ಕಡಿಮೆ0ಾದಂತಿದೆ. ಹಾಗಾಗಿ ಹೊಟೆಲ್ಲುಗಳು ಮತ್ತು ಪೀಜಿಗಳು ಇಂದು ಪಟ್ಟಣಗಳಲ್ಲಿ ಮತ್ತು ನಗರ-ಮಹಾನಗರಗಳ ಅವಿಭಾಜ್ಯ, ಅನಿವಾ0ರ್ು ಅಂಗಗಳಾಗಿವೆ.
        ಈ ಬೆಳವಣಿಗೆ0ು ಮಾನಸಿಕ ಮತ್ತು ನೈತಿಕ ಪರಿಣಾಮಗಳನ್ನು ನಮ್ಮ ಸಾಹಿತ್ಯ ಕೃತಿಗಳು ಪರಿಶೀಲಿಸದೆ ಬಿಟ್ಟಿಲ್ಲ. ಕಾರಂತರ ಮರಳಿ ಮಣ್ಣಿಗೆ, ಶ್ರೀಕೃಷ್ಣ ಆಲನಹಳ್ಳಿ ಅವರ ಭುಜಂಗ0್ಯುನ ದಶಾವತರಗಳು ಕಾದಂಬರಿಗಳಲ್ಲಿ ಹೊಟೆಲ್ ಇಡುವುದರ ಬಗ್ಗೆ0ೆು ಪರ-ವಿರೋಧಗಳ ಸ್ವಾರಸ್ಯಕರ ಚಚರ್ೆಗಳಿವೆ. ಹೊಟೆಲ್ಗಳು ನಮ್ಮ ಸಾಮಾಜಿಕ ವ್ಯವಸ್ಥೆ0ು ಮೇಲೆ, ಅದರಲ್ಲೂ ಜಾತಿ ಸಂಬಂಧಗಳ ಮೇಲೆ ಮಾಡಿದ ಪರಿಣಾಮಗಳನ್ನು ಕಾರಂತ, ಅನಂತಮೂತರ್ಿ, ಆಲನಹಳ್ಳಿ ಕೃಷ್ಣ, ದೇವನೂರ ಮಹಾದೇವ ಮೊದಲಾದವರ ಕತೆ-ಕಾದಂಬರಿಗಳಲ್ಲಿ ವಿವರವಾಗಿ ಗಮನಿಸಬಹುದು. ಅನ್ನದಾನವನ್ನು ಶ್ರೇಷ್ಠದಾನವೆಂದು ನಂಬಿದ್ದ ಸಮುದಾ0ುಗಳಿಂದ ಬಂದವರೇ ಅನ್ನವಿಕ್ರ0ುಕ್ಕೆ ತೊಡಗಿದ್ದರಲ್ಲಿ ಆಧುನಿಕ ಇತಿಹಾಸದ ಒಂದು  ಹೊಸ ಘಟ್ಟವೇ ಗೋಚರವಾಗುವಂತಿದೆ. ಇದಕ್ಕೆ ಹೋಲಿಸಿದರೆ  ಪೀಜಿಗಳು ಆಮೇಲಿನ ಬೆಳವಣಿಗೆ ಎಂದು ಕಾಣುತ್ತದೆ. ಹೋಟೆಲ್ ಒಂದು 'ಉದ್ಯಮ'ವಾದರೆ ಪೀಜಿಗಳು ಅವುಗಳ ಮುಂದೆ ತೀರ ಸಣ್ಣವು. ಅವುಗಳು ಒಬ್ಬರ ಮನೆ0ು ಪರಿಧಿ0ೊಳಗೆ ನಡೆ0ುುವಂಥವು. ಅವುಗಳ ಪ್ರಮಾಣದಲ್ಲಿ ಒಂದು ಪೀಜಿ ಮತ್ತೊಂದಕ್ಕಿಂತ ತುಸು ಸಣ್ಣ-ದೊಡ್ಡ ಎನಿಸಿದರೂ 'ಮನೆ0ು ಆತಿಥ್ಯ' ಎಂಬ ನೆಲೆ0ುಲ್ಲಿ ಅವು ಹೊಟೆಲ್ಗಳಿಗಿಂತ ಭಿನ್ನವೆಂದು ಮೇಲುನೋಟಕ್ಕೆ ಕಾಣುತ್ತದೆ. ಅಂದರೆ ಒಂದು ಕುಟುಂಬವು ತನ್ನ ಮನೆ0ುನ್ನು ಮತ್ತು ತನಗಾಗಿ ತ0ಾರಿಸುವ ಆಹಾರವನ್ನು 'ಅತಿಥಿ'ಅಥವಾ ಅತಿಥಿಗಳೊಂದಿಗೆ ಹಂಚಿಕೊಂಡು ಅದಕ್ಕಾಗಿ ಪರಸ್ಪರ ಒಪ್ಪಿತ 'ಪ್ರತಿಫಲ'ವನ್ನು ಪಡೆ0ುುವ ಪೀಜಿ ವ್ಯವಸ್ಥೆ0ುು 'ಹೋಮ್ ಲವಿಂಗ್' ವ್ಯಕ್ತಿಗಳಿಗೆ ಆಥರ್ಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ಸುರಕ್ಷಿತವೆಂದು ಅನಿಸಿದರೆ ಅದು ಸುಳ್ಳಲ್ಲ. ಹೊಟೆಲ್ಗಳಲ್ಲಿ ಅಷ್ಟಾಗಿ ಮುಖ್ಯವಲ್ಲದ 'ಹೊಂದಾಣಿಕೆ'0ು ಪ್ರಶ್ನೆ0ುನ್ನು ಇಲ್ಲಿ ಅತಿಥಿ-ಅತಿಥೇ0ುರು ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ. ಏಕೆಂದರೆ ಇಲ್ಲಿ ಅವರೀರ್ವರ ಸಂಬಂಧವು ಕೇವಲ ಮಾರಾಟಗಾರ-ಬಳಕೆದಾರ ಸಂಬಂಧಕ್ಕಿಂತ ತುಸು ಭಿನ್ನವಾಗಿರುತ್ತದೆ. ಮನೆ ಮಾಲೀಕ-ಬಾಡಿಗೆದಾರರ ಸಂಬಂಧಕ್ಕಿಂತಲೂ ಇದು ಸ್ವಲ್ಪ ಬೇರೆ0ುದೇ ಆದ ಸ್ತರದಲ್ಲಿರುತ್ತದೆ. ಪೀಜಿ0ುು ಮುಖ್ಯವಾಗಿ, ಉದ್ಯಮವೊಂದರ ಲಾಭ-ನಷ್ಟಗಳ ಪ್ರಶ್ನೆಗೆ ಹೊರತಾಗಿ ಇಬ್ಬರು ಅಥವಾ ಅದಕ್ಕಿಂತ ತುಸುವೇ ಹೆಚ್ಚಿನ ಸಂಖ್ಯೆ0ು ವ್ಯಕ್ತಿಗಳ ನಡುವಣ ಸಣ್ಣಪ್ರಮಾಣದ ಆಥರ್ಿಕ ಒಪ್ಪಂದವಾಗಿರುತ್ತದೆ. ಹೀಗಾಗಿ ಇದು ಹೆಚ್ಚಿನ ಪ್ರಚಾರವಿಲ್ಲದ ಆದರೆ ನಗರ-ಮಹಾನಗರಗಳಲ್ಲಿ ತುಂಬ ಜನಪ್ರಿ0ುವಾದ ಒಂದು ವ್ಯವಸ್ಥೆ0ಾಗಿ ಕಳೆದ ಆರೇಳು ದಶಕಗಳಿಂದ ಚಾಲ್ತಿ0ುಲ್ಲಿದೆ. ಪೀಜೀ ಅಂದರೆ 'ಪೇಯಿಂಗ್ ಗೆಸ್ಟ್'. ಇದಕ್ಕೆ ಸೂಕ್ತವಾದ ಸಮಾನಾರ್ಥಕ ಪದವೊಂದು ಕನ್ನಡದಲ್ಲಿ ಇಲ್ಲದಿರುವುದೂ ಈ ವ್ಯವಸ್ಥೆ0ುು ನಮ್ಮ ಸಂಸ್ಕೃತಿಗೆ ಹೊಸದು ಎಂಬುದನ್ನು ಸೂಚಿಸುತ್ತದೆ. ಅತಿಥೇ0ು ಮತ್ತು ಅತಿಥಿ ಇಬ್ಬರ ಆಥರ್ಿಕ ಅಡಚಣೆ0ುನ್ನೂ ತುಸು ನೀಗುವ ವ್ಯವಸ್ಥೆ ಇದು. ಕುಟುಂಬದ ಆದಾ0ು ಅದರ ಖಚರ್ಿಗೆ ಸಾಕಾಗುವಂತಿದ್ದರೆ ತಮ್ಮ ಮನೆ0ುನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಲು 0ಾರು ಬ0ುಸುತ್ತಾರೆ? ಹಾಗೆ0ೆು ಸ್ವಂತ ಮನೆ ಮಾಡುವಷ್ಟು ಅನುಕೂಲ ಇದ್ದವರು ಮತ್ತೊಬ್ಬರ ಮನೆ0ುಲ್ಲಿ ವಾಸಿಸಲು ಬ0ುಸುವರೆ? ಹಾಗಾಗಿ ಸರಳ ನೈತಿಕ ನೆಲೆಗಳಿಂದಷ್ಟೇ ಈ ಪ್ರಶ್ನೆ0ುನ್ನು ಚಚರ್ಿಸಲಾಗದು.
ಇನ್ನು ಹೊಸ ಆತಿಥ್ಯ ಪರಿಕಲ್ಪನೆ0ು ತೀರಾ ಈಚಿನ ಘಟ್ಟವೆಂದರೆ ಹೋಮ್ ಸ್ಟೇಗಳು. ನಗರ ಜೀವನದಿಂದ ಬೇಸತ್ತವರು ಬದಲಾವಣೆಗೋ, ಮನರಂಜನೆಗೋ, ಮನಃಶಾಂತಿಗೋ, ಮೋಜಿಗೋ, ಪ್ರಕೃತಿ0ು ಸಾಮೀಪ್ಯ ಬ0ುಸಿ0ೋ ಹಳ್ಳಿಗೆ ಬಂದು ನಾಲ್ಕಾರು ದಿನ 0ಾರ ಮನೆ0ುಲ್ಲಿ0ೋ ಉಳಿದು ಸ್ಥಳೀ0ು ಆತಿಥ್ಯವನ್ನು ಸವಿದು, ಸ್ಥಳೀ0ು ಜೀವನಕ್ರಮವನ್ನು ಕೆಲಕಾಲ ಬದುಕಿ ಮತ್ತೆ ನಗರಕ್ಕೆ ಹಿಂದಿರುಗುವ ಹೊಸ ವ್ಯವಸ್ಥೆ ಇದು. ಇಲ್ಲಿ ಸ್ಥಳೀ0ು ಊಟ-ವಸತಿ ಮಾತ್ರವಲ್ಲ ಒಂದು ಜೀವನಕ್ರಮವನ್ನೇ ಮಾರಾಟಕ್ಕೆ ಇಡಲಾಗುತ್ತದೆ. ಇದರ ಸ್ವರೂಪ ಮತ್ತು ಪರಿಣಾಮಗಳನ್ನು ಕುರಿತ ಕತೆಗಳೂ ಈಚೆಗೆ ಪ್ರಕಟವಾಗಿವೆ. ಉದಾಹರಣೆಗೆ, ಎಲ್.ಸಿ.ಸುಮಿತ್ರಾ ಅವರ ಕಣಿವೆ ಮನೆ.ಕಾಮ್, ಅನಂತಮೂತರ್ಿ0ುವರ ಪಚ್ಚೆ ರೆಸಾಟರ್್ ಕತೆಗಳನ್ನು ಈ ಹಿನ್ನೆಲೆ0ುಲ್ಲಿ ಓದಬಹುದು.
    ಮುಂಬಯಿ ಎಂಬ ಮಹಾನಗರದ ಜೀವನದ ಅನೇಕ ಮುಖಗಳನ್ನು ಸೂಕ್ಷ್ಮವಾಗಿ ಚಿತ್ರಿಸಿರುವ 0ುಶವಂತ ಚಿತ್ತಾಲರು ಪೀಜೀ  ಎಂಬ ಕತೆ0ುನ್ನು ತಮ್ಮ ಬರವಣಿಗೆ0ು ಮೊದಲ ಘಟ್ಟದಲ್ಲೇ ರಚಿಸಿರುವುದರಲ್ಲಿ ಆಶ್ಚ0ರ್ುವೇನಿಲ್ಲ. 1956ರಲ್ಲಿ ರಚಿತವಾದ ಈ ಕತೆ0ುು ಚಿತ್ತಾಲರ ಮೊದಲ ಕಥಾಸಂಕಲನ ಸಂದರ್ಶನ(1957)ದಲ್ಲಿ ಸೇರಿದೆ. ಅನಂತ ಕುಲಕಣರ್ಿ ಈ ಕತೆ0ು ಕೇಂದ್ರ ಪಾತ್ರ. ಧಾರವಾಡದ ಕಡೆಯಿಂದ ನೌಕರಿಗಾಗಿ ಮುಂಬಯಿಗೆ ಬಂದಿರುವ, ಇನ್ನೂ ಅವಿವಾಹಿತನಾಗಿ ಉಳಿದಿರುವ ಇವನು ಕಳೆದ ಏಳು ವರುಷಗಳ 'ರುಕ್ಷ ಆಫೀಸು ಕೆಲಸ, ದಣಿಸುವ ಬಸ್ ಕ್ಯೂ, ರುಚಿಯಿಲ್ಲದ ಬದಲಿಲ್ಲದ ಹೋಟೆಲೂಟ'ಗಳಿಂದ 'ವ್ಯಗ್ರ'ನಾಗಿದ್ದಾನೆ. ಬಹಳ ವರುಷಗಳ ನಂತರ ಗಜಾನನನೆಂಬ ಸಹಪಾಠಿ ಸಿಕ್ಕಾಗ, 'ಮುಂಬಯಿ0ುಲ್ಲಿ ಮನೆ ಸಿಗುವುದೇ ಕಠಿಣವಂತೆ. ನಿಮಗೆ ಮಾತ್ರ ಒಳ್ಳೇ ಮನೆ ಸಿಕ್ಕಿರಬೇಕು-ನೀವು ಮುಂಬಯಿಗೆ ಬಂದು ಬಹಳ ವರ್ಷಗಳಾದುವು' ಎಂದು ಅತಿ ಸಹಜವಾಗಿ ಕೇಳಿದ ಪ್ರಶ್ನೆಯಿಂದ 'ಅನಂತ ಒಮ್ಮೆಲೇ ಮ್ಲಾನಗೊಂಡ. ಅವನ ಇಂದಿನ ಮನಸ್ಥಿತಿ0ುಲ್ಲಂತೂ ಈ ಪ್ರಶ್ನೆ ಅತೀವ ಗಾಸಿಗೊಳಿಸಿತು', 'ಇಲ್ಲ, ನನಗೂ ಈ ವರೆಗೆ ಮನೆ ಸಿಗಲಿಲ್ಲ.(ಸಿಗುವ ಆಸೆ0ುೂ ಇಲ್ಲ. ನನಗೇಕೆ ಮನೆ?) ಗಿರಗಾಂವದಲ್ಲಿ ಒಂದು ಮಹಾರಾಷ್ಟ್ರೀ0ುನ್ ಕುಟುಂಬದಲ್ಲಿ 'ಪೇಯಿಂಗ್ ಗೆಸ್ಟ್' ಅಂತ ಇದ್ದೇನೆ' ಎಂದು ಉತ್ತರಿಸುತ್ತಾನೆ. ಗಜಾನನನು ಸಲಿಗೆಯಿಂದ, 'ಅಹುದೆ? ಟೈಮ್ಸ್ ಆಫ್ ಇಂಡಿ0ಾದಲ್ಲಿ ಬಹಳೇ ಬರುತ್ತಿವೆ ಜಾಹಿರಾತುಗಳು-ಪೀಜೀ ಅಕೋಮೊಡೇಷನ್ ಕುರಿತು, ಕೋಣೆಗಳೆಷ್ಟೋ?'. ತನ್ನ ಬಗ್ಗೆ ತಾನೇ ಕನಿಕರ ತುಂಬಿಕೊಂಡು ಅನಂತ ಉತ್ತರಿಸುತ್ತಾನೆ: 'ಕೋಣೆಗಳ ಪ್ರಶ್ನೆ0ೆು ಇಲ್ಲ; ಒಂದೇ ಒಂದು ಕೋಣೆ. ಹಾಗೆ ನೋಡಿದರೆ ಕೋಣೆ0ೆು ಅಲ್ಲ. ಬಾಲ್ಕನಿ0ೊಂದನ್ನು ಎಲ್ಲ ಬದಿಯಿಂದಲೂ ಬ್ಲ್ಯಾಂಡ್ಸು(ತಟ್ಟಿ)ಗಳಿಂದ ಮುಚ್ಚಿ ರೂಮಿನ ರೂಪ ತಂದಿದ್ದಾರೆ'. ತನ್ನಂತಹನಿಗಲ್ಲ ಮದುವೆ. ಮನೆ, ಮದುವೆ, ಸಂಸಾರ ಎಂದರೆ ಹೋರಾಟ. ಹೋರಾಡುವ ಶಕ್ತಿ ತನ್ನಲ್ಲಿ ಉಳಿದಿದೆ0ೆು? ಏಕೋ ಇದ್ದಲ್ಲೇ ಹಣ್ಣಾಗುತ್ತಿದ್ದೇನೆ. ಒಣಗುತ್ತಿದ್ದೇನೆ-ಎಂದೆಲ್ಲ ಅನಂತ ನೋ0ುುತ್ತಾನೆ. ಸಮುದ್ರತೀರದಲ್ಲಿ ಕುಳಿತು ಮುಂಬಯಿ0ು ಜನಸಾಗರವನ್ನು ನೋಡುವಾಗ ತನ್ನಂತೆ ಎಷ್ಟೋ ಜನ ಇದೇ ಪರಿಸ್ಥಿತಿ0ುಲ್ಲಿರಬಹುದಲ್ಲವೆ ಎನಿಸುತ್ತದೆ: ಈ ಎಲ್ಲ ಜನರಿಗೆ ಮನೆಗಳಿವೆ0ೆು? ಇಷ್ಟೆಲ್ಲ ಜನರಿಗೆ ಮನೆ ಒದಗಿಸಿದ ಮುಂಬಯಿ, ತನಗೊಬ್ಬನಿಗಷ್ಟೇ..ಹುಚ್ಚು, ತನ್ನಂತೆ0ೆು ಪರರ ಮನೆ0ು ಬಾಲ್ಕನಿ0ುಲ್ಲೋ, ಅಡುಗೆ ಮನೆ0ುಲ್ಲೋ ಮಲಗುವ ಜನ ಇವರಲ್ಲೆಷ್ಟೋ! ತನ್ನಂತೆ0ೆು ಕೂಡ್ರಲೂ ರೂಮು ಇಲ್ಲದೆ, ಆಫೀಸು ಬಿಟ್ಟ ಮೇಲೆ ಅಲ್ಲಿ ಇಲ್ಲಿ ವೇಳೆ ಕಳೆದು, ರಾತ್ರಿ ಮಲಗಲಷ್ಟೇ ಮನೆ(ಹೆರವರದು) ಸೇರುವ ಜನ ಅದೆಷ್ಟೋ!
ಇಂದು ಅನಂತನ ಮನಸ್ಸು ಅಸ್ತವ್ಯಸ್ತಗೊಂಡಿದೆ. ಇಷ್ಟು ದಿನ ತಾನು, ಅರವಿಂದ-ಇಬ್ಬರೂ ಉಪ0ೋಗಿಸುತ್ತಿದ್ದ ಕೋಣೆ ಇಂದಿನಿಂದ ಅರವಿಂದ ಹಾಗೂ ಅವನ ಹೆಂಡತಿ0ು ಕೋಣೆ0ಾಗಲಿದೆ. ಮನೆ0ುಲ್ಲೆಲ್ಲ ಒಬ್ಬ ಹೊಸ ಹೆಣ್ಣು(ಗೆಳೆ0ುನ ಹೆಂಡತಿ0ಾದರೇನಂತೆ!) ಓಡಾಡುತ್ತಿರುವಾಗ, ತಾನೊಬ್ಬನೇ ಬಾಲ್ಕನಿ0ುಲ್ಲಿ ಮುದುಡಿ ಕೂಡ್ರುವುದಕ್ಕಿಂತ, ಇಲ್ಲಿ ತುಸು ಹೊತ್ತು ಕಳೆದು ಇಲ್ಲಿಂದಲೇ ಹೋಟೆಲ್ಲಿಗೆ ಹೋಗಿ ಆದಷ್ಟು ರಾತ್ರಿ ಮಾಡಿ ಮನೆ ಸೇರಿದರೆ ಬಾಲ್ಕನಿ0ುಲ್ಲಿ ಮಲಗುವ ತನಗೆ 0ಾರಿಂದಲೂ ತೊಂದರೆಯಿಲ್ಲ, ತನ್ನಿಂದಲೂ ಇತರರಿಗೆ ತೊಂದರೆಯಿಲ್ಲ. ರಾತ್ರಿ ಬಾಲ್ಕನಿ0ುಲ್ಲಿ ಮಲಗಿದಾಗ ಪಕ್ಕದ ಕೋಣೆಯಿಂದ ನವದಂಪತಿಗಳ ಸರಸ-ಸಂಭಾಷಣೆ ಬೇಡ ಬೇಡವೆಂದರೂ ಅವನ ಕಿವಿ0ುನ್ನು ತುಂಬುತ್ತದೆ. 'ಥೂ ಇದೇನು! ತುಸು ಮೆಲ್ಲಗೆ ಮಾತನಾಡಬಾರದೆ? ತಾನು ಇಲ್ಲಿ ಮಲಗಿದ್ದೇನೆ ಎನ್ನುವ ಅರಿವೂ ಇರಬಾರದೇ?-ಅನಂತನ ಸುಸಂಸ್ಕೃತ ಮನಸ್ಸು ತಿರಸ್ಕಾರ ವ್ಯಕ್ತಪಡಿಸಿತು. ಆದರೆ?..ಹೃದ0ುದಲ್ಲೋ ಅಲ್ಲೋಲಕಲ್ಲೋಲ. ಮರುಕ್ಷಣ ತನ್ನ ಸ್ಥಿತಿಗೆ ತನಗೇ ಮರುಕವೆನಿಸಿತು. ತಾನಿದ್ದೇನೆ ಎನ್ನುವ ಅರಿವೇ ಇಲ್ಲ ಇವರಿಗೆ. ತಾನು ಇದ್ದರೇನು? ಇಲ್ಲದಿದ್ದರೇನು?..'.ಕ್ರಮೇಣ 'ಅನಂತನ ಜಾಗೃತ ಸುಸಂಸ್ಕೃತ ಪ್ರಜ್ಞೆ0ುನ್ನು ಮೀರಿ ನಿಂತ ಅಗಾಧ ಶಕ್ತಿ0ೊಂದು'ಅವನನ್ನು ಸಾವಕಾಶ ಹಾಸಿಗೆಯಿಂದ ಹೊಡೆದೆಬ್ಬಿಸುತ್ತದೆ. ಗೋಡೆಗೆ ಕಿವಿ ಹಚ್ಚಿ ನವದಂಪತಿಗಳ ಸಂಭಾಷಣೆ0ುನ್ನು ಆಲಿಸುತ್ತಾನೆ:
'ತುಸು ಮೆಲ್ಲಗೆ(ಮಾತನಾಡಬಾರದೆ?)'
ನಾಳೆ0ೆು ಹೇಳುತ್ತೀರಲ್ಲ, ಹಾಗಾದರೆ?'
'ಏನೆಂದು?'
'ಬೇರೆ0ೆುಡೆ ರೂಮು ಹಿಡಿ0ುಲು?'
ಅವನಿದ್ದರೆ ತೊಂದರೆ0ೆು?'
'ತೊಂದರೆ0ುಲ್ಲ..ಏನೋ ಸಂಕೋಚ..ಮೇಲಾಗಿ ಇದ್ದುದೊಂದು ಬಾಲ್ಕನಿ..ಆರಾಮಾಗಿ ಕೂಡ್ರೋಣ ಎಂದರೆ..'
'ಇಷ್ಟೆಲ್ಲ ವರುಷ ನಮ್ಮಲ್ಲಿದ್ದವ..ಮೇಲಾಗಿ ಅಪ್ಪ ಒಪ್ಪುತ್ತಾರೊ, ಇಲ್ಲವೊ..ಕುಳಿತಲ್ಲಿ 40 ರೂ ಬಾಡಿಗೆ..'.
'ಅವರನ್ನು ಒಪ್ಪಿಸುವ ಕೆಲಸ ನನ್ನದು.''ಇಂತಹ ಸುಖದ ಸಮ0ುದಲ್ಲಿ ಅವನ ಹೆಸರೇಕೆ?..ತುಸು ಹತ್ತಿರ ಬಾರಲ್ಲ..'.
ಅನಂತನ ಮೇಲೆ ಈ ಸಂಭಾಷಣೆ ಮಾಡುವ ಪರಿಣಾಮಗಳನ್ನು ವಿವರಿಸುವ ಅಗತ್ಯವಿಲ್ಲ. ಅನಂತನ ಪಾಡು ಆಮೇಲೆ ಏನಾಯಿತೆಂದು ಕತೆ ಲಂಬಿಸಿಕೊಂಡು ಹೋಗುವುದಿಲ್ಲ.  ಮುಖ್ಯವಾದ ಸಂಗತಿ ಎಂದರೆ ಚಿತ್ತಾಲರ ಕಥನಪ್ರತಿಭೆ0ುು ಅರ್ಧ ಶತಮಾನದಷ್ಟು ಹಿಂದೆ0ೆು ಆಧುನೀಕರಣ-ನಗರೀಕರಣಗಳ ಪರಿಣಾಮಗಳ ಒಂದು ಮುಖ್ಯ ಮಾದರಿ0ುನ್ನು ಪೀಜೀ ಎಂಬ ರೂಪಕದಲ್ಲಿ ಸಮರ್ಥವಾಗಿ ಕಟ್ಟಲು ಸಾಧ್ಯವಾಗಿರುವುದು. ಲೇಖಕರ ಸಹಾನುಭೂತಿ0ುು ಎಲ್ಲ ಪಾತ್ರಗಳ ಬಗ್ಗೆ0ುೂ ಸಮಾನವಾಗಿ ವ್ಯಕ್ತವಾಗಿರುವುದು ಈ ಕತೆ0ು ಸಂಕೀರ್ಣತೆಗೆ ಒದಗಿಬಂದಿದೆ. ಮತ್ತು ಪೀಜೀ ಎಂಬ ವ್ಯವಸ್ಥೆ0ುನ್ನು ಸಮಸ್ಯಾತ್ಮಕಗೊಳಿಸಿದೆ.  ಇಂದು ಈ ಪರಿಸ್ಥಿತಿ0ುು ಅನಂತ ಎಂಬ ಓರ್ವ ವ್ಯಕ್ತಿಗಾಗಲೀ ಮುಂಬಯಿ ಎಂಬ ಒಂದು ಮಹಾನಗರಕ್ಕಾಗಲೀ ಸೀಮಿತಗೊಂಡಿಲ್ಲ. ಹಳ್ಳಿ ಮತ್ತು ಸಣ್ಣ ಊರುಗಳಿಂದ ಇಂದು ಬೆಂಗಳೂರಿಗೆ (ಅಥವಾ ಅಂಥ ನಗರಗಳಿಗೆ) ವಲಸೆ ಹೋಗುತ್ತಿರುವ ಸಾವಿರಾರು ತರುಣ-ತರುಣಿ0ುರ ಪಾಡು ಇದಕ್ಕಿಂತ ಬೇರೆ0ುಲ್ಲ. ತನ್ನ ಕಾಲದೇಶಗಳಿಗೆ ಬದ್ಧವಗಿದ್ದೂ ಚಿತ್ತಾಲರ ಈ ಕತೆ ಗಳಿಸಿಕೊಂಡಿರುವ ಸಾಧಾರಣೀಕರಣ ಅಸಾಧಾರಣವಾದದ್ದು.
                              ******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228


No comments:

Post a Comment