stat Counter



Monday, November 25, 2013

ಅಮೇರಿಕನ್ನಡಿಗರ ಬುಕ್ ಕ್ಲಬ್ - ತ್ರಿವೇಣಿ ರಾವ್

ಅಮೆರಿಕನ್ನಡಿಗರ ಬುಕ್ ಕ್ಲಬ್!

November 24, 2013 at 10:20pm
‘ ಬುಕ್ ಕ್ಲಬ್’ - ಇದು ಅಮೆರಿಕಾದ ವಿವಿಧ ರಾಜ್ಯಗಳಲಿ ಹಂಚಿಹೋಗಿರುವ ಸಾಹಿತ್ಯಾಸಕ್ತರು, ಪ್ರತಿ ತಿಂಗಳ ಕೊನೆಯ ಭಾನುವಾರ ಟೆಲಿಫೋನ್ ಮೂಲಕ ಸಭೆ ಸೇರಿ, ಕನ್ನಡದ ಯಾವುದೊಂದಾರೊಂದು ಸಣ್ಣ ಕಥೆಯ ಕುರಿತು ಚರ್ಚಿಸಲು, ಮಾಡಿಕೊಂಡಿರುವ ದೂರವಾಣಿ ವೇದಿಕೆ. ಮಾಸ್ತಿಯವರ ‘ಕಲ್ಮಾಡಿಯ ಕೋಣ’ ಕಥೆಯೊಂದಿಗೆ ಪ್ರಾರಂಭವಾದ, ಈ ಬುಕ್ ಕ್ಲಬ್ಬಿಗೀಗ ವರ್ಷದ ಸಂಭ್ರಮ!

ಈವರೆಗೆ, ಬೊಳುವಾರು ಮಹಮ್ಮದ ಕುಞಿ (ಒಂದು ತುಂಡು ಗೋಡೆ), ಗಿರೀಶ್ ಕಾರ್ನಾಡ್ (ಅಳಿದ ಮೇಲೆ), ವಿವೇಕ್ ಶಾನುಬಾಗ್ (ನಿರ್ವಾಣ), ಕಡೆಂಗೋಡ್ಲು ಶಂಕರಭಟ್ಟರು (ಕೈದಿ, ಅದ್ದಿಟ್ಟು)... ಮುಂತಾದ ಲೇಖಕರ ಕಥೆಗಳು ಈ ವೇದಿಕೆಯಲ್ಲಿ ಚರ್ಚೆಗೊಳಗಾಗಿವೆ.

ಈ ತಿಂಗಳ ಬುಕ್ ಕ್ಲಬ್ಬಿನಲ್ಲಿ  ಮಿತ್ರಾ ವೆಂಕಟ್ರಾಜ್  ಅವರ ಎರಡು ಕಥೆಗಳು (ಒಂದು ಒಸಗೆ ಒಯ್ಯುವುದಿತ್ತು, ಹೂವಿನ ಪೂಜೆ) ಚರ್ಚೆಗೆ ಸಿದ್ಧವಾಗಿವೆ. ಯಾರೇ ಸಾಹಿತಾಸಕ್ತರು, ಇಂದು, ಮಧ್ಯಾಹ್ನ ಸಮಯ - ೪-೫ ಘಂಟೆವರೆಗೆ  ನಡೆಯಲಿರುವ ಈ ಸಾಹಿತ್ಯ ಚರ್ಚೆಯಲ್ಲಿ ಭಾಗವಹಿಸಬಹುದಾಗಿದೆ.

When : Sun, November 24th 4pm – 5pm
Where : Conference call on 11/24/2013 at 4.00pm central

No comments:

Post a Comment