stat Counter



Friday, May 27, 2016

ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016- ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ

ಇದೇ ವರ್ಷ  ಸೆಪ್ಟೆಂಬರ್ 2, 3 ಮತ್ತು 4ರಂದು ಅಮೇರಿಕದ ನ್ಯೂ ಜೆರ್ಸಿ ರಾಜ್ಯದ 'ಅಟ್ಲಾಂಟಿಕ್ ಸಿಟಿ'ಯಲ್ಲಿ ನಡೆಯಲಿರುವ ಒಂಬತ್ತನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016' ಕಾರ್ಯಕ್ರಮದ ಅಂಗವಾಗಿ, ಕನ್ನಡ ನಾಡಿನ ಇತಿಹಾಸ, ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕೆಂದು ನಿಶ್ಚಯಿಸಲಾಗಿದೆ. ಕನ್ನಡದ ಯುವ ಬರಹಗಾರರು ಪ್ರಬಂಧ ಸ್ಪರ್ಧೆಗೆ ಜೂನ್ 10ರೊಳಗಾಗಿ ಪ್ರಬಂಧ ಕಳುಹಿಸಬೇಕು ಎಂದು ಅಕ್ಕ ಆಹ್ವಾನಿಸಿದೆ. ಲೇಖಕರು ಬರೆದು ಕಳುಹಿಸಲಿರುವ ಪ್ರಬಂಧಗಳು, ಕೆಳಗೆ ನೀಡಿರುವ ನಿಯಮಗಳಿಗೆ ಬದ್ಧವಾಗಿರಬೇಕು.
[Shrishail S Jigeri, BRP, Vijayapur] 

*ಅರ್ಹತೆ* 

ಕಿರಿಯರ ವಿಭಾಗ: (ಕಾಲೇಜು ವಿದ್ಯಾರ್ಥಿಗಳು - ಪದವಿ ಪೂರ್ವ ವಿಭಾಗ ) ; 
ಹಿರಿಯರ ವಿಭಾಗ: (ಪದವಿ ತರಗತಿಯ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳು)

*ಪ್ರಬಂಧ ವಿಷಯಗಳು* 

1. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ 
2. ಇಂದಿನ ಯುವ ಪೀಳಿಗೆ ಮೇಲೆ ಸಾಮಾಜಿಕ ಮಾಧ್ಯಮದ (Social media) ಪ್ರಭಾವ 
3. ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದ ಪ್ರಸ್ತುತತೆ. 
4. ದೃಶ್ಯ ಮಾಧ್ಯಮದಲ್ಲಿ ಕನ್ನಡ ಆಡುಭಾಷೆಗಳ ಪ್ರಯೋಗ ಹಾಗು ಅದರ ಬೆಳವಣಿಗೆ 
5. ವಿದ್ಯಾವಂತವರಿಗೇಕೆ ರಾಜಕೀಯದ ಉಸಾಬರಿ? 
6. ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಸಮಸ್ಯೆಗಳು 
7. 21ನೇ ಶತಮಾನದಲ್ಲಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಹಾಗು ತಂತ್ರಜ್ಞಾನದ ಕೊಡುಗೆ
[Shrishail S Jigeri, BRP, Vijayapur]

*ವಿವರಗಳು* 

ಪ್ರಬಂಧ ವಿಷಯ : 
ವಿದ್ಯಾರ್ಥಿಯ ಪೂರ್ಣ ಹೆಸರು: 
ವಯಸ್ಸು : 
ಶಾಲೆ/ಕಾಲೇಜು ವಿವರಣೆ : 
ದೂರವಾಣಿ : 
ಇ-ಮೇಲ್ : 
(ನಿಮ್ಮ ವಿವರಗಳನ್ನು PDFನ ಮೊದಲ ಪುಟದಲ್ಲಿ  ಕೊಡಿ)

*ಸ್ಪರ್ಧೆಯ ನಿಯಮಗಳು*
 
* ಪ್ರಬಂಧಗಳು ಸ್ವಂತದ್ದಾಗಿರಬೇಕು. 
* ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. 
* ಸ್ಪರ್ಧೆಯ ನಂತರ ಪ್ರಬಂಧಗಳು ಪ್ರಕಟಿಸುವ ಹಕ್ಕು "ಅಕ್ಕ" ಸಂಸ್ಥೆಯದಾಗಿರುತ್ತದೆ. 
* ಎಲ್ಲಾ ಪ್ರಬಂಧಗಳು 1200 ಪದಗಳನ್ನು ಮೀರಬಾರದು.
*[Shrishail S Jigeri, Vijayapur]* 

*ಪ್ರಬಂಧ ಕಳುಹಿಸುವ ರೀತಿ ಹೀಗಿರಬೇಕು* 

ಸಂಪರ್ಕಿಸುವ ವಿಧಾನ : ಇ-ಮೇಲ್ 
ಫೈಲ್ ಮಾದರಿ : PDF 
ಫೈಲ್ ಹೆಸರಿಸುವ ರೀತಿ : A16_Essay_Name_Date.pdf 
ಹೆಸರು : ನಿಮ್ಮ ಹೆಸರಿನ ಮೊದಲ 6 ಅಕ್ಷರಗಳು 
ದಿನಾಂಕ : ಫೈಲ್ ಕಳಿಸುವ ದಿನಾಂಕ: 03Mar ಉದಾರರಣೆ : A16_Essay_RamKum_03Mar.pdf ಸ್ಪರ್ಧೆಗಳನ್ನು ಕಳಿಸಬೇಕಾದ ಕೊನೆಯ ದಿನಾಂಕ :  ಜೂನ್ 10, 2016 
ನಿಮ್ಮ ಸ್ಪರ್ಧೆಗಳನ್ನು ಕಳಿಸಬೇಕಾದ ವಿಳಾಸ : AKKA2016-souvenir@akkaonline.com ಇ-ಮೇಲ್  Subject line : AKKA_2016_Essay 

*ಬಹುಮಾನಗಳು*  

No comments:

Post a Comment