stat Counter



Monday, June 4, 2018

ಪದ್ಮಾವತಿ ರಾವ್ - ನಾವು ಸಂಧಿಸದೆ ಹೋಗಿದ್ದರೆ { ಅನುವಾದ - ಭಾರತಿ . ಬಿ. ವಿ }

ನಾವು ಸಂಧಿಸದೆ ಹೋಗಿದ್ದರೆ
Had We Not
(ಪದ್ಮಾವತಿ ರಾವ್ ಅವರ ಕವಿತೆಯ ಅನುವಾದ)
ನಾವು ಸಂಧಿಸದೆ ಹೋಗಿದ್ದರೆ...
ನಾವು ಪರಸ್ಪರ ಪ್ರೀತಿಸದೆ ಇದ್ದಿದ್ದರೆ
ಆಗ ಸುಲಭವಾಗುತ್ತಿತ್ತು,
ಜಗತ್ತಿನೊಡನೆ ವ್ಯವಹರಿಸುವುದು
ತುಂಬ ಸುಲಭವಾಗುತ್ತಿತ್ತು
ಮತ್ತು ಅದರಂತೆ ಪ್ರಾಪಂಚಿಕ ಮಾರ್ಗದಲ್ಲಿ ಬದುಕಲು.
ಒಬ್ಬರೊಡನೆ ಒಬ್ಬರು
ಕಳೆಯದ ಆ ಸಮಯ
ಈ ನಮ್ಮ ಕಲ್ಪನೆಗೂ ನಿಲುಕದ
ಪ್ರೇಮವನ್ನು ನಮಗಾಗಿ ಉಳಿಸುತ್ತಿತ್ತೇನೋ.
ಆಗ ನೀನಿಲ್ಲದ ಬದುಕನ್ನು
ಬದುಕುವುದೂ ಸುಲಭವಾಗುತ್ತಿತ್ತೇನೋ.
ನೀನು ನನ್ನನ್ನು
ಹತ್ತಿರಕ್ಕೆ ಎಳೆದುಕೊಳ್ಳದಿದ್ದರೆ,
ನಿನ್ನ ಕಣ್ಣುಗಳು ನಂಬಿಕೆಯನ್ನು ಹಕ್ಕೊತ್ತಾಯಿಸದಿದ್ದರೆ
ಆಗ ಸುಲಭವಾಗುತ್ತಿತ್ತು...
ಸರಿಯಾಗಿ ಹೇಳಬೇಕೆಂದರೆ, ಅವರವರ ದಾರಿಯಲ್ಲಿ ಸಾಗುವುದು ಸುಲಭವಾಗುತ್ತಿತ್ತು,
ಒಂದೇ ಎಳೆತಕ್ಕೆ ಬಿಚ್ಚಿಕೊಂಡ ರೇಷಿಮೆಯ ರಿಬ್ಬನಿನಂತೆ.
ಇದು ಆಗದಿದ್ದರೆ
ನಮ್ಮ ಹೃದಯಗಳು ಕಾರಣವೇ ಇಲ್ಲದೆ
ಪದೇಪದೇ ಪ್ರಕ್ಷುಬ್ಧವಾಗಿ ಒದ್ದಾಡಬೇಕಿರಲಿಲ್ಲ
ಮತ್ತು ಸುಲಭವಾಗುತ್ತಿತ್ತು, ಜಗತ್ತಿನೊಡನೆ ವ್ಯವಹರಿಸುವುದು ತುಂಬ ಸುಲಭವಾಗುತ್ತಿತ್ತು,
ಮತ್ತು ನಮ್ಮ ಬದುಕಿನೊಡನೆ ಸಾಗಿಹೋಗುವುದು ಕೂಡ...
Had we not met...
Had we not loved each other
It would have been easy,
Ever so easy
To deal with the world
And live its worldly ways.
Time unspent
With each other
Might have spared us
This love beyond compare.
It would have been easy then
To live without you.
Had you not pulled me
Close to you,
Had your eyes not demanded faith
It would have been easy...
Rather easy to go one's way
Like a silken ribbon untied with just one pull.
Had this not happened
Our hearts might not have wallowed in restlessness
For no apparent reason at all
And it would have been easy, ever so easy
To deal with the world
And get on with life....

No comments:

Post a Comment