stat Counter



Showing posts with label ಚಂದ್ರಿಕಾ ನಾಗರಾಜ್ ಹಿರಿಯಡಕ. Show all posts
Showing posts with label ಚಂದ್ರಿಕಾ ನಾಗರಾಜ್ ಹಿರಿಯಡಕ. Show all posts

Friday, October 18, 2019

ಚಂದ್ರಿಕಾ ನಾಗರಾಜ್ ಹಿರಿಯಡಕ - ಧ್ಯಾನ

Image may contain: 1 person, smiling, sitting
chandrika nagaraj
Fri, 18 Oct, 10:13 (1 day ago)
#ಧ್ಯಾನ#

ಭವದ ಬಂಧನದೊಳ್ ಎನ್ನಾತ್ಮ ಬಂಧಿಯಾಗಿಹುದು..ಬಿಡಿಸೊಮ್ಮೆ ಧುಮಕಿಸು ನಿನ್ನಂತರಂಗದೊಳ್ಮು
ರಾರಿಯೇ..
ರಾಧೆಯಂತೆ ಕಾಯುತ್ತಿರುವೆ..
ಅಭಿಸಾರ ಬೇಯುತಿದೆ

ಕಡಲುಕ್ಕಿ ಹರಿಯಲಿ ನನ್ನೊಳ್
ನೀ ಬಂದ ಸಮಯದೊಳ್
ಅಲೆ ಅಪ್ಪುಗೆ ಸಿಡಿದು ಒಲವು ಮಾಗಲಿ...
ರಾಧೆಯಂತಾಗ ಬಯಸುತಿಹೆ...
ಕಾಲ್ಗೆಜ್ಜೆ ಅಲೆಯುತಿದೆ

ಚಪ್ಪರದ ಹೂವೊಳ್ 
ಮಂದಸ್ಮಿತ ಘಮದೊಳ್
ಲಜ್ಜೆಯೊಳ ಕನಸೊಳ್
ನೀ ಬಂದ ಸದ್ದಾಯಿತೆನಗೆ
ರಾಧೆಯಂತೆ ಸ್ವಪ್ನ ಕಂಡೆ...
ಸಜ್ಜೆಯದೋ ಸಿಡುಕುತಿದೆ

ನಿತ್ಯ ನಿನ್ನ ಧ್ಯಾನದೊಳ್...ಸಾಗರದೊಳ ಸುಳಿಯಂತಾಗಿಹುದು ಮನ
ಬಿಡಿಸೊಮ್ಮೆ , ನಿನ್ನ ನಾದದೊಳ್ 
ರಾಗಂಗಳ ನುಡಿಸೇ 
ಲೀನಳಾಗುವೆ
 ✍🏻 * ಚಂದ್ರಿಕಾ ನಾಗರಾಜ್ ಹಿರಿಯಡಕ*