ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಮಹಿಳಾ ಭಾರತ. Show all posts
Showing posts with label ಮಹಿಳಾ ಭಾರತ. Show all posts
Saturday, December 17, 2016
Monday, April 18, 2016
Thursday, July 30, 2015
Sunday, July 26, 2015
ಡಾ/ಶ್ರೀಪಾದ ಭಟ್ ನಿರ್ದೇಶಿಸಿದ - ಮಹಿಳಾ ಭಾರತ -- ಉದಯ ಗಾಂವ್ಕರ್
ಗೆಳೆಯ ಶ್ರೀಪಾದ ಭಟ್ ನಿರ್ಧೇಶನದ ಮಹಿಳಾ ಮಹಾಭಾರತದ ಮೊದಲ ಪ್ರದರ್ಶನ ನೋಡಿದೆ. ನಿಜಕ್ಕೂ ಅದ್ಭುತ. ಮಹಾಭಾರತವನ್ನು ವರ್ತಮಾನದೊಂದಿಗೆ ಸಮೀಕರಿಸುವ ಪ್ರಯತ್ನ ಹೊಸದಲ್ಲ, ಮಹಾಭಾರತವನ್ನು ಮಹಿಳೆಯ ಕಣ್ಣಿನಿಂದ ಕಾಣುವ ಪ್ರಯತ್ನವೂ ಹೊಸದಲ್ಲ. ಆದರೆ, ಹೆಣ್ತನವನ್ನು ಜಗದ ಎಲ್ಲ ವೈರುಧ್ಯಗಳ ಜೊತೆ ಮುಖಾಮುಖಿಯಾಗಿಸುತ್ತ ಯಾವುದೇ ತೀರ್ಪುಗಳನ್ನು ನೀಡದೇ ನೋಡುಗರನ್ನು ಸಂವಾದಕ್ಕೆಳೆಯುವ ನಿರೂಪಣೆ ಬಹಳ ಹೊಸದು. ಒಂದುವರೆ ಗಂಟೆಗಳ ಕಾಲ ಎಮ್ ಜಿ ಎಮ್ ಕಾಲೇಜಿನ ಹಾಲಿನಲ್ಲಿ ಕಿಕ್ಕಿರಿದ ಪ್ರೇಕ್ಷಕರನ್ನು ಹಿಡಿದಿಟ್ಟಿದಷ್ಟೇ ಅಲ್ಲ ಆನಂತರವೂ ನಾಟಕದಿಂದ ಹೊರಬಂದು ಆ ನಾಟಕಕ್ಕೆ ಹೊರತಾದದ್ದನ್ನು ಯೋಚಿಸಲು ಸಾಧ್ಯವಾಗದಂತೆ ಮಾಡಿರುವುದು ಶ್ರೀಪಾದರ ಶಕ್ತಿ. ಕಥನಗಳ ನಡುವಿನ transition, ನೆರಳು ಬೆಳಕುಗಳನ್ನು ಭಾಷೆಯಂತೆ ಬಳಸಿದ ರೀತಿ, ಹಿಂಸೆಯ ಎಲ್ಲ ಆಯಾಮಗಳೂ ಅಂತಿಮವಾಗಿ ಇಡೀ ಜಗದ ಮಮತೆಯನ್ನು ತನ್ನೊಳಗೆ ಅಡಗಿಸಿಕೊಂಡ ಹೆಣ್ತನದ ಮೇಲಿನ ದಾಳಿಗಳು ಎಂಬುದನ್ನು ಸೂಚಿಸುವ ಅಂತ್ಯ ಎಲ್ಲವೂ ಅದ್ಭುತ. ನಾಟಕದುದ್ದಕ್ಕೂ ಸ್ಥಾಯಿಯಾಗಿ ಕಾಣುವ ತೊಟ್ಟಿಲು ನನಗೆ ತಾಯ್ತನದ ಸಂಕೇತವಾಗಷ್ಟೇ ತೋರದೇ ತಕ್ಕಡಿಯ
ಒಂದು ಬದಿಯಂತೆ ಕಂಡಿತು ನಾಟಕದ ನಿರೂಪಣೆ ತಕ್ಕಡಿಯ ಇನ್ನೊಂದು ಬದಿಯನ್ನು ಶೋಧಿಸುವಂತಿತ್ತು.-ಉದಯ ಗಾಂವ್ಕರ್
ಒಂದು ಬದಿಯಂತೆ ಕಂಡಿತು ನಾಟಕದ ನಿರೂಪಣೆ ತಕ್ಕಡಿಯ ಇನ್ನೊಂದು ಬದಿಯನ್ನು ಶೋಧಿಸುವಂತಿತ್ತು.-ಉದಯ ಗಾಂವ್ಕರ್Saturday, July 18, 2015
Subscribe to:
Posts (Atom)

