ಕನ್ನಡದ ಹಿರಿಮೆ ಸಾರುವ ಹಲ್ಮಿಡಿಗೆ ಬೇಕಿದೆ ಕಾಯಕಲ್ಪ | Udayavani - ಉದಯವಾಣಿ: ಕನ್ನಡ ನಾಡು, ನುಡಿಯ ಗತ ವೈಭವವನ್ನು ಸಾಕ್ಷೀಕರಿಸಲು ಕೇಂದ್ರ ಸರ್ಕಾರವು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಣೆ ಮಾಡಬೇಕೆಂದು ಹೋರಾಟ ನಡೆದಿತ್ತು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಇಂತಹ ಸ್ಥಾನಮಾನ ಪಡೆಯಲು ನಡೆದ ಹೋರಾಟದ ಸಂದರ್ಭದಲ್ಲಿ ಕನ್ನಡ ಭಾಷೆಯ ಹಿರಿಮೆ, ಪ್ರಾಚೀನತೆಯ ದಾಖಲೆಗಳ ಸಂಗ್ರಹವೂ ನಡೆದಿತ್ತು. ಅಂತಹ ದಾಖಲೆಗಳಲ್ಲಿ ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸುವ ಹಲ್ಮಿಡಿ ಶಿಲಾಶಾಸನವೂ ಒಂದು.


