stat Counter



Showing posts with label muddana kavya prashasti. Show all posts
Showing posts with label muddana kavya prashasti. Show all posts

Thursday, November 1, 2018

ಡಾ. ಕುಮಾರಚಲ್ಯ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ -2018

ಡಾ. ಕುಮಾರಚಲ್ಯ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ | Vartha Bharati- ವಾರ್ತಾ ಭಾರತಿ: ಮೂಡುಬಿದಿರೆ, ಅ.31: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‍ನ ಪ್ರಾಯೋಜಕತ್ವದ 2018ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಶಿವಮೊಗ್ಗದ ಡಾ. ಕುಮಾರಚಲ್ಯ ಅವರ 'ಗುಲಾಬಿ ಮತ್ತು ಪಾರಿವಾಳ' ಎಂಬ ಕವನಸಂಕಲನ ಹಸ್ತಪ್ರತಿಯು ಗೆದ್ದುಕೊಂಡಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷರಾದ ಡಾ. ನಾ.ಮೊಗಸಾಲೆಯವರು ಘೋಷಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಒಟ್ಟು ಅರವತ್ತೆಂಟು ಹಸ್ತಪ್ರತಿಗಳು ಬಂದಿದ್ದು,  ಶ್ರೀ ಸುಬ್ರಾಯ ಚೊಕ್ಕಾಡಿ , ಡಾ. ಬಸವರಾಜ ಕಲ್ಗುಡಿ,  ಡಾ. ನೆಲ್ಲಿಕಟ್ಟೆ ಎಸ್. ಸಿದ್ಧೇಶ್ ಅವರುಗಳು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ.


ಕುಮಾರ ಚಲ್ಯ ಗೆ ಚಿತ್ರದ ಫಲಿತಾಂಶ