stat Counter



Showing posts with label sediyapu award-2012. Show all posts
Showing posts with label sediyapu award-2012. Show all posts

Friday, May 22, 2015

ಅ. ರಾ. ಮಿತ್ರರಿಗೆ ಸೇಡಿಯಾಪು ಪ್ರಶಸ್ತಿ -2015

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಪ್ರತಿವರ್ಷ ನೀಡುತ್ತಿರುವ ಸೇಡಿಯಾಪು ಪ್ರಶಸ್ತಿಗೆ ಖ್ಯಾತ ಗ್ರಂಥ ಸಂಪಾದಕ, ಸಂಶೋಧಕ, ವಿಮರ್ಶಕ, ಪ್ರಬಂಧಕಾರ, ಉಪನ್ಯಾಸಕ ಪ್ರೊ| ಅ.ರಾ ಮಿತ್ರ ಆಯ್ಕೆಯಾಗಿದ್ದಾರೆಂದು ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಿತ್ರರು "ವಚನಕಾರರು ಮತ್ತು ಶಬ್ದಕಲ್ಪ', "ಒಳನೋಟಗಳು', "ಛಂದೋಮಿತ್ರ, "ನಾನೇಕೆ ಕೊರೆಯುತ್ತೇನೆ', "ಆರತಕ್ಷತೆ' ಮೊದಲಾದ ವಿಮಶಾìಕೃತಿಗಳು, "ಬಾಲ್ಕನಿಯ ಬಂಧುಗಳು' ಪ್ರಬಂಧಗಳ ಸಂಗ್ರಹ, "ಯಾರೋ ಬಂದಿದ್ದರು' ಹಾಸ್ಯ ಮಿಶ್ರಿತ ಹರಟೆ ಲೇಖನಗಳ ಸಂಗ್ರಹ, "ಪುರಂದರ ಸಾಹಿತ್ಯ ದರ್ಶನ' ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. "ಜಗತ್ತಿನ ಪ್ರಣಯ ಕಥೆಗಳ ಸಂಪುಟ', "ಪ್ರೇಮನದಿಯ ದಡಗಳಲ್ಲಿ' ಮತ್ತು "ಕುಮಾರವ್ಯಾಸ ಭಾರತ ಕಥಾಮಿತ್ರ' ಅವರ ಇತ್ತೀಚಿನ ಬೃಹತ್‌ ಗದ್ಯ ಕೃತಿ ಪ್ರಕಟಗೊಂಡಿವೆ.
a. r. mitra ಗೆ ಚಿತ್ರದ ಫಲಿತಾಂಶ