stat Counter



Thursday, January 27, 2011

Tel Malish by M S Sriram


ತೇಲ್ ಮಾಲಿಶ್ (ಕಥೆಗಳು)

ಎಂ.ಎಸ್. ಶ್ರೀರಾಮ್


ಅಹಮದಾಬಾದಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್‍ನಲ್ಲಿ ಪ್ರೊಫೆಸರ್ ಆಗಿರುವ ಶ್ರೀರಾಮ್ ಅವರ ಮೊದಲ ಸಂಕಲನ ಮಾಯಾದರ್ಪಣಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ಪಡೆದಿದೆ. ’ಅವರವರ ಸತ್ಯ’ - ಶ್ರೀರಾಮ್ ಅವರ ಎರಡನೆಯ ಸಂಕಲನ.

ಇದೀಗ ಪ್ರಕಟವಾಗಿರುವ 'ತೇಲ್ ಮಾಲಿಶ್' (2010) ಕಥಾಸಂಕಲನದಲ್ಲಿ ಲಾಟರಿ’, ’ತೇಲ್ ಮಾಲಿಶ್’, ’ಶಾರದಾ ಮೇಡಂ ಆಬ್ಸೆಂಟು’, ’ಹೋಗುವುದೆಲ್ಲ್ಗಿಗೆ’, ’ನಿಲ್ದಾಣ’, ’ಅಂತರಂಗ’, ’ಸ್ವಾತಿ’ - ಎಂಬ ಎಂಟು ಕಥೆಗಳಿವೆ.

ಕೆ.ವಿ. ತಿರುಮಲೇಶ್ ಬರೆದಿರುವಂತೆ, "ತೊಂಬತ್ತರ ದಶಕದಲ್ಲಿ ಕಾಣಿಸಿಕೊಂಡ ಕನ್ನಡದ ಕತೆಗಾರರಲ್ಲಿ ಎಂ.ಎಸ್. ಶ್ರೀರಾಮ್ ವಿಶಿಷ್ಟರಾಗಿದ್ದಾರೆ. ಕನ್ನಡದ ಮುಖ್ಯಧಾರೆಗೆ ಸೇರದೆ ಬರೆಯುವ ಈ ಲೇಖಕ ಒಂದು ರೀತಿಯಲ್ಲಿ ನಾನ್-ಅಕೆಡೆಮಿಕ್; ಎಂದರೆ ಕನ್ನಡದ ಕಥನ ಪರಂಪರೆಗೆ ಇವರು ಓರೆಯಾಗಿ ಮುಖಿಯಾಗುವವರು. ಕನ್ನಡದ ಸಮಕಾಲೀನ ಸಾಹಿತ್ಯ ಕ್ಷೇತ್ರದಲ್ಲಿ ಪ್ರಚಲಿತವಿದ್ದ ಯಾವುದೇ ಸೈದ್ಧಾಂತಿಕ ಅನುಕೂಲತೆಗಳೂ ಇಲ್ಲದೆ - ಅರ್ಥಾತ್ ದಲಿತ, ಬಂಡಾಯ, ಸ್ತ್ರೀವಾದ, ಮಾರ್ಕ್ಸಿಸಂ, ಇತ್ಯಾದಿ ವಾದ ಆಸರೆಗಳಿಲ್ಲದೆ - ಸಾಹಿತ್ಯ ಕ್ಷೇತ್ರವನ್ನು ಪ್ರವೇಶ ಮಾಡಿದ ಇಂಥ ಲೇಖಕರು ತಡವಾಗಿ ಮೂಡಿದ ನಕ್ಷತ್ರದಂತೆ ಕಣ್ಣಿಗೆ ಬೀಳದಿರುವುದೇ ಜಾಸ್ತಿ."


ಪ್ರ - ಅಂಕಿತ ಪುಸ್ತಕ
53, ಶ್ಯಾಮಸಿಂಗ್ ಕಾಂಪ್ಲೆಕ್ಸ್
ಗಾಂಧಿ ಬಜಾರ್ ಮುಖ್ಯರಸ್ತೆ
ಬಸವನಗುಡಿ, ಬೆಂಗಳೂರು 56004
080-26617100
ಬೆಲೆ ರೂ.95 ಪುಟಗಳು-136
ಆಕಾರ ಡೆಮಿ1/8
ಮುಖಪುಟ ವಿನ್ಯಾಸ - ಸೃಜನಾ ಕಾಯ್ಕಿಣಿ
ಮೊದಲ ಮುದ್ರಣ

 

mupadhyahiri.blogspot.com


No comments:

Post a Comment