stat Counter



Showing posts with label ಎಚ್. ಡುಂಡಿರಾಜ್. Show all posts
Showing posts with label ಎಚ್. ಡುಂಡಿರಾಜ್. Show all posts

Sunday, October 21, 2018

ಎಚ್. ಡುಂಡಿರಾಜ್ -- ಆಕಳಿಕೆ ಎಂಬ (ಅ)ಭಾವಗೀತೆ

ಆಕಳಿಕೆ ಎಂಬ (ಅ)ಭಾವಗೀತೆ – ವಿಜಯವಾಣಿ: | ಎಚ್.ಡುಂಡಿರಾಜ್ ಈ ಲೇಖನ ನಿಮಗೆ ಇಷ್ಟವಾದರೆ ಒಂದು ಇ-ಮೈಲ್ ಕಳಿಸಿ ಇಷ್ಟವಾಗದಿದ್ದರೆ ಆಕಳಿಸಿ! ಹೌದು. ನನ್ನ ಭಾಷಣ ಅಥವಾ ಕವನ ವಾಚನವನ್ನು ಕೇಳಿ ನೀವು ಆಕಳಿಸಿದರೆ ನನಗೆ ಖಂಡಿತ ಬೇಸರವಾಗುತ್ತದೆ. ಆದರೆ ಈ ಲೇಖನವನ್ನು ಓದಿ ಆಕಳಿಸಿದರೆ ಬೇಸರವಾಗುವುದಿಲ್ಲ. ಏಕೆಂದರೆ ನೀವು ಓದುತ್ತಿರುವ ಲೇಖನದ ವಿಷಯವೇ ಆಕಳಿಕೆ. ‘ನಿಮ್ಮ ಲೇಖನಕ್ಕೆ ಉಪಚುನಾವಣೆ,

Thursday, May 8, 2014

ಡುಂಡಿರಾಜ್ -ದಾಂಪತ್ಯಕ್ಕೆ ಮೂರು ದಶಕ

ಮೊನ್ನೆ ನಮ್ಮ ದಾಂಪತ್ಯಕ್ಕೆ ಮೂರು ದಶಕ ತುಂಬಿದಾಗ ಬರೆದದ್ದು :
ದಾಂಪತ್ಯದ ವಿಮಾನದಲ್ಲಿ
ಹಾಯಾಗಿ ವಿಹರಿಸಲಿಕ್ಕೆ
ನಂಬಿಕೆಯೇ ರೆಕ್ಕೆ
ಪ್ರೀತಿಯೇ ಇಂಧನ
ಇವೆರಡು ಇಲ್ಲದಿದ್ದರೆ
ದಾಂಪತ್ಯ ಬಂಧನ !

-ಎಚ್ ಡುಂಡಿರಾಜ್
Like · ·

Friday, November 15, 2013

ಶುಭ ವಿದಾಯ ಸಚಿನ್ ! - ಡುಂಡಿರಾಜ್

ಸಚಿನ್ ಸೆಹ್ವಾಗ್ ಜೋಡಿ 
ಬೀಸತೊಡಗಿದರೆ ಬ್ಯಾಟು 
ಒಮ್ಮೆಲೇ ತೆಗೆದಹಾಗೆ
ಕನ್ನಂಬಾಡಿಯ ಗೇಟು !

ಶುಭ ವಿದಾಯ ಸಚಿನ್ !

Sunday, August 18, 2013

ಎಚ್. ಡುಂಡಿರಾಜ್-- ವರ್ತಮಾನದ ಪ್ರತಿ ಕ್ಷಣ

ಭವಿಷ್ಯ ಅನ್ನುವುದು ನಿಗೂಢ 
ಅದರ ಚಿಂತೆ ಈಗ ಬೇಡ 
ಭೂತವನ್ನು ಮರೆಯ ಬೇಕು 
ಅದು ವಾಯಿದೆ ಮುಗಿದ ಚೆಕ್ಕು 
ನಗು ನಗುತ್ತ ಕಳೆಯೋಣ 
ವರ್ತಮಾನದ ಪ್ರತಿ ಕ್ಷಣ
ನಗದು ಹಣ !

Monday, December 3, 2012

ಎಚ್. ಡುಂಡಿರಾಜ್ -ಬೆಳದಿಂಗಳ ಸಾಹಿತ್ಯ ಕೂಟ { AUDIO }

Vocaroo Voice Message -Clik here to listen H. Dundiraj , Kannada Poet { AUDIO ]. ಶ್ರಿ ಮಹಾದೇವ , ಶ್ರಿಮತಿ ಜ್ಯೋತಿ ಮಹಾದೇವರ, ಮಣಿಪಾಲ ಸಮೀಪದ ಮಂಜುಲಹರಿ ತೋಟದಮನೆಯಲ್ಲಿ 1-12- 2012ರಂದು ನಡೆದ ಬೆಳದಿಂಗಳ ಸಾಹಿತ್ಯ ಕೂಟದಲ್ಲಿ ಕನ್ನಡ ಹಾಸ್ಯ ಕವಿ ಎಚ್. ಡುಂಡಿರಾಜ್ ಮಾತನಾಡುತ್ತ-......

Sunday, October 21, 2012

ಕೂರಿಸುತ್ತಾರೆ - ಎಚ್. ಡುಂಡಿರಾಜ್

ದಸರೆಯ ಸಂದರ್ಭದಲ್ಲಿ 
ಜನರು ತಮ್ಮ ಮನೆಗಳಲ್ಲಿ 
ಗೊಂಬೆ ಕೂರಿಸುತ್ತಾರೆ 
ರಾಜಕಾರಣಿಗಳು ಎಂದಿನಂತೆ
ಒಬ್ಬರ ಮೇಲೆ ಇನ್ನೊಬ್ಬರು
ಗೂಬೆ ಕೂರಿಸುತ್ತಾರೆ !

Monday, October 15, 2012

ಸುವರ್ಣ ಸೌಧ - ಎಚ್.ಡುಂಡಿರಾಜ್


ಪ್ರಶ್ನೆ
------
ಕುಂದನಗರಿಯಲ್ಲಿ
ಉದ್ಘಾಟನೆಗೊಂಡಿದೆ
ಸುಂದರ ಸುವರ್ಣ ಸೌಧ
ಸಚಿವರೊಬ್ಬರು ಕೇಳಿದರಂತೆ
Dundiraj Hattikudruಇಲ್ಲಾದರೂ ನಿಶ್ಚಿಂತೆಯಿಂದ
ಬ್ಲೂ ಫಿಲಂ ನೋಡಬಹುದಾ ?

-ಎಚ್ .ಡುಂಡಿರಾಜ್
Like ·