stat Counter



Showing posts with label h. dundiraj. Show all posts
Showing posts with label h. dundiraj. Show all posts

Sunday, October 21, 2018

ಎಚ್. ಡುಂಡಿರಾಜ್ -- ಆಕಳಿಕೆ ಎಂಬ (ಅ)ಭಾವಗೀತೆ

ಆಕಳಿಕೆ ಎಂಬ (ಅ)ಭಾವಗೀತೆ – ವಿಜಯವಾಣಿ: | ಎಚ್.ಡುಂಡಿರಾಜ್ ಈ ಲೇಖನ ನಿಮಗೆ ಇಷ್ಟವಾದರೆ ಒಂದು ಇ-ಮೈಲ್ ಕಳಿಸಿ ಇಷ್ಟವಾಗದಿದ್ದರೆ ಆಕಳಿಸಿ! ಹೌದು. ನನ್ನ ಭಾಷಣ ಅಥವಾ ಕವನ ವಾಚನವನ್ನು ಕೇಳಿ ನೀವು ಆಕಳಿಸಿದರೆ ನನಗೆ ಖಂಡಿತ ಬೇಸರವಾಗುತ್ತದೆ. ಆದರೆ ಈ ಲೇಖನವನ್ನು ಓದಿ ಆಕಳಿಸಿದರೆ ಬೇಸರವಾಗುವುದಿಲ್ಲ. ಏಕೆಂದರೆ ನೀವು ಓದುತ್ತಿರುವ ಲೇಖನದ ವಿಷಯವೇ ಆಕಳಿಕೆ. ‘ನಿಮ್ಮ ಲೇಖನಕ್ಕೆ ಉಪಚುನಾವಣೆ,

Thursday, May 8, 2014

ಡುಂಡಿರಾಜ್ -ದಾಂಪತ್ಯಕ್ಕೆ ಮೂರು ದಶಕ

ಮೊನ್ನೆ ನಮ್ಮ ದಾಂಪತ್ಯಕ್ಕೆ ಮೂರು ದಶಕ ತುಂಬಿದಾಗ ಬರೆದದ್ದು :
ದಾಂಪತ್ಯದ ವಿಮಾನದಲ್ಲಿ
ಹಾಯಾಗಿ ವಿಹರಿಸಲಿಕ್ಕೆ
ನಂಬಿಕೆಯೇ ರೆಕ್ಕೆ
ಪ್ರೀತಿಯೇ ಇಂಧನ
ಇವೆರಡು ಇಲ್ಲದಿದ್ದರೆ
ದಾಂಪತ್ಯ ಬಂಧನ !

-ಎಚ್ ಡುಂಡಿರಾಜ್
Like · ·

Sunday, August 18, 2013

ಎಚ್. ಡುಂಡಿರಾಜ್-- ವರ್ತಮಾನದ ಪ್ರತಿ ಕ್ಷಣ

ಭವಿಷ್ಯ ಅನ್ನುವುದು ನಿಗೂಢ 
ಅದರ ಚಿಂತೆ ಈಗ ಬೇಡ 
ಭೂತವನ್ನು ಮರೆಯ ಬೇಕು 
ಅದು ವಾಯಿದೆ ಮುಗಿದ ಚೆಕ್ಕು 
ನಗು ನಗುತ್ತ ಕಳೆಯೋಣ 
ವರ್ತಮಾನದ ಪ್ರತಿ ಕ್ಷಣ
ನಗದು ಹಣ !

Saturday, December 15, 2012

ಪ್ರತಿಕ್ರಿಯೆ - ಎಚ್. ಡುಂಡಿರಾಜ್


ತಡವಾಗಿ ಮನೆಗೆ ಬಂದ
ಪತಿರಾಯ ಹೇಳಿದ -
ಆಹಾ ! ಎಷ್ಟು ಸುಂದರ
ಪ್ರಿಯೆ ನಿನ್ನ ಮುಖ ಚಂದಿರ
ಮಡದಿ ಗೊಣಗಿದಳು -
ಅಯ್ಯೋ ಪ್ರಾರಬ್ಧವೆ
ಇಂದೂ ಕುಡಿದು ಬಂದಿರಾ ?
-ಎಚ್.ಡುಂಡಿರಾಜ್
Like ·  ·  · 2 hours ago ·