stat Counter



Showing posts with label ಸಾ. ಶಿ. ಮರುಳಯ್ಯ. Show all posts
Showing posts with label ಸಾ. ಶಿ. ಮರುಳಯ್ಯ. Show all posts

Monday, February 15, 2016

ಸಾ. ಶಿ. ಮರುಳಯ್ಯನವರ ನೃತ್ಯ ರೂಪಕಗಳು - ಮುರಳಿಧರ ಉಪಾಧ್ಯ ಹಿರಿಯಡಕ

ಆದರ್ಶ ಪ್ರಾಧ್ಯಾಪಕರಾಗಿದ್ದ ಲೇಖಕ ಸಾ. ಶಿ. ಮರುಳಯ್ಯ {೧೯೩೧ - ೨೦೧೬ ] ಅವರಿಗೆ ಅಂತಿಮ ನಮನ ಸಲ್ಲಿಸುತ್ತ ಅವರು ಬರೆದಿರುವ ನೃತ್ಯ ರೂಪಕಗಳ ಕುರಿತು  ನಾಲ್ಕು ಸಾಲು ಬರೆಯುತ್ತೇನೆ.
 ಮರುಳಯ್ಯನವರು ಕಾವ್ಯ , ಕಾದಂಬರಿ ,ನಾಟಕ , ವಿಮರ್ಶೆ ,ವ್ಯಕ್ತಿ ಚಿತ್ರ ಗಳನ್ನಲ್ಲದೆ ನೃತ್ಯ ರೂಪಕಗಳನ್ನು ಬರೆದಿದ್ದಾರೆ . ಯೂ ಟ್ಯೂಬ್ ನಲ್ಲಿ ಲಭ್ಯವಿರುವ  ಚಿಕಣಿ ಸಂದರ್ಶನವೊಂದರಲ್ಲಿ ಅವರು ತಾನು ವಿದೇಶಗಳಿಗೆ ಹೋದಾಗ ಹಲವು ನೃತ್ಯ  ರೂಪಕಗಳನ್ನು ನೋಡಿ ಪ್ರೇರಣೆ ಪಡೆದುದನ್ನು ವಿವರಿಸಿದ್ದಾರೆ .
 ಅವರು  ಇಪ್ಪತ್ತೈದಕ್ಕಿಂತ ಹೆಚ್ಚು ನೃತ್ಯ ರೂಪಕಗಳನ್ನು ಬರೆದಿದ್ದಾರೆ -’ರೇಣುಕ ಪರಂಜ್ಯೋತಿ ’ ,’ ಶಿವಲೀಲೆ ’ ’,’ಭಕ್ತಿ ಭಾವುಕಿ’, ’ ನಾಟ್ಯಾಂಜಲಿ ’ ,  ’ ಏನು ಚೆಲುವಿನ ಹಾಡು ’ ,’ಸ್ನೋವೈಟ್  ಮತ್ತು ಇತರ ನೃತ್ಯ  ರೂಪಕಗಳು ’ ’ ೨೫ ನೃತ್ಯ  ರೂಪಕಗಳು ’.
 ಮರುಳಯ್ಯವರ ನೃತ್ಯರೂಪಕಗಳು ನನಗೆ ಕೊಂಡುಕೊಳ್ಳಲು ,  ಓದಲು ಸಿಕ್ಕಿಲ್ಲ . ಅವರ  ಯಾವುದಾದರೂ ನೃತ್ಯ ರೂಪಕಗಳು ಪ್ರದರ್ಶನಗೊಂಡಿವೆಯೇ ? ಅವರ ನೃತ್ಯ  ರೂಪಕಗಳನ್ನು ಸಂಗೀತ , ನೃತ್ಯ ವಿಮರ್ಶಕರು  , ನಿರ್ದೇಶಕರು ಗಮನಿಸಿದ್ದಾರೆಯೇ ?
      ಕೆಲವು  ಸಾಹಿತ್ಯ ಪ್ರಕಾರಗಳು , ಲೇಖಕರು   ಅಲಕ್ಷಿತರಾಗುತ್ತಿರುವುದನ್ನು  ಕಂಡಾಗ ಸಖೇದ ಆಶ್ಚರ್ಯವಾಗುತ್ತದೆ.
        - ಮುರಳೀಧರ ಉಪಾಧ್ಯ ಹಿರಿಯಡಕ

Friday, February 5, 2016

ಸೌಜನ್ಯವಂತ ಗುರು -ಸಾ. ಶಿ. ಮರುಳಯ್ಯ - ಎ. ಶಿವರಾಮ್

ಸೌಜನ್ಯವಂತ ಗುರು: ದಶಕಗಳ ಹಿಂದಿನ ಮಾತು. ಆವತ್ತು ಸಾ.ಶಿ. ಮರುಳಯ್ಯ ಅವರ ಮುಂದೆ ನಿಂತು ನಾನು ಕೇಳಿದ್ದೆ, ‘ನಮಸ್ಕಾರ ಸಾರ್‌, ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆಯಬೇಕೆಂಬ ಅಪೇಕ್ಷೆ ಇದೆ. ನನಗೆ ಮಾರ್ಗದರ್ಶನ ಮಾಡುವಿರಾ?’