stat Counter



Monday, February 15, 2016

ಸಾ. ಶಿ. ಮರುಳಯ್ಯನವರ ನೃತ್ಯ ರೂಪಕಗಳು - ಮುರಳಿಧರ ಉಪಾಧ್ಯ ಹಿರಿಯಡಕ

ಆದರ್ಶ ಪ್ರಾಧ್ಯಾಪಕರಾಗಿದ್ದ ಲೇಖಕ ಸಾ. ಶಿ. ಮರುಳಯ್ಯ {೧೯೩೧ - ೨೦೧೬ ] ಅವರಿಗೆ ಅಂತಿಮ ನಮನ ಸಲ್ಲಿಸುತ್ತ ಅವರು ಬರೆದಿರುವ ನೃತ್ಯ ರೂಪಕಗಳ ಕುರಿತು  ನಾಲ್ಕು ಸಾಲು ಬರೆಯುತ್ತೇನೆ.
 ಮರುಳಯ್ಯನವರು ಕಾವ್ಯ , ಕಾದಂಬರಿ ,ನಾಟಕ , ವಿಮರ್ಶೆ ,ವ್ಯಕ್ತಿ ಚಿತ್ರ ಗಳನ್ನಲ್ಲದೆ ನೃತ್ಯ ರೂಪಕಗಳನ್ನು ಬರೆದಿದ್ದಾರೆ . ಯೂ ಟ್ಯೂಬ್ ನಲ್ಲಿ ಲಭ್ಯವಿರುವ  ಚಿಕಣಿ ಸಂದರ್ಶನವೊಂದರಲ್ಲಿ ಅವರು ತಾನು ವಿದೇಶಗಳಿಗೆ ಹೋದಾಗ ಹಲವು ನೃತ್ಯ  ರೂಪಕಗಳನ್ನು ನೋಡಿ ಪ್ರೇರಣೆ ಪಡೆದುದನ್ನು ವಿವರಿಸಿದ್ದಾರೆ .
 ಅವರು  ಇಪ್ಪತ್ತೈದಕ್ಕಿಂತ ಹೆಚ್ಚು ನೃತ್ಯ ರೂಪಕಗಳನ್ನು ಬರೆದಿದ್ದಾರೆ -’ರೇಣುಕ ಪರಂಜ್ಯೋತಿ ’ ,’ ಶಿವಲೀಲೆ ’ ’,’ಭಕ್ತಿ ಭಾವುಕಿ’, ’ ನಾಟ್ಯಾಂಜಲಿ ’ ,  ’ ಏನು ಚೆಲುವಿನ ಹಾಡು ’ ,’ಸ್ನೋವೈಟ್  ಮತ್ತು ಇತರ ನೃತ್ಯ  ರೂಪಕಗಳು ’ ’ ೨೫ ನೃತ್ಯ  ರೂಪಕಗಳು ’.
 ಮರುಳಯ್ಯವರ ನೃತ್ಯರೂಪಕಗಳು ನನಗೆ ಕೊಂಡುಕೊಳ್ಳಲು ,  ಓದಲು ಸಿಕ್ಕಿಲ್ಲ . ಅವರ  ಯಾವುದಾದರೂ ನೃತ್ಯ ರೂಪಕಗಳು ಪ್ರದರ್ಶನಗೊಂಡಿವೆಯೇ ? ಅವರ ನೃತ್ಯ  ರೂಪಕಗಳನ್ನು ಸಂಗೀತ , ನೃತ್ಯ ವಿಮರ್ಶಕರು  , ನಿರ್ದೇಶಕರು ಗಮನಿಸಿದ್ದಾರೆಯೇ ?
      ಕೆಲವು  ಸಾಹಿತ್ಯ ಪ್ರಕಾರಗಳು , ಲೇಖಕರು   ಅಲಕ್ಷಿತರಾಗುತ್ತಿರುವುದನ್ನು  ಕಂಡಾಗ ಸಖೇದ ಆಶ್ಚರ್ಯವಾಗುತ್ತದೆ.
        - ಮುರಳೀಧರ ಉಪಾಧ್ಯ ಹಿರಿಯಡಕ

No comments:

Post a Comment