stat Counter



Showing posts with label kavya kadame. Show all posts
Showing posts with label kavya kadame. Show all posts

Tuesday, October 16, 2018

ಕಾವ್ಯ ಕಡಮೆಗೆ ‘ದಿನಕರ ದೇಸಾಯಿ ಪ್ರಶಸ್ತಿ’ -2018

ಕಾವ್ಯ ಕಡಮೆಗೆ ‘ದಿನಕರ ದೇಸಾಯಿ ಪ್ರಶಸ್ತಿ’ | Prajavani: ಅಂಕೋಲಾದ ದಿನಕರ ದೇಸಾಯಿ ಪ್ರತಿಷ್ಠಾನ ನೀಡುವ ಪ್ರಸಕ್ತ ಸಾಲಿನ ‘ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ಗೆ ಕಾವ್ಯ ಕಡಮೆ ನಾಗರಕಟ್ಟೆ ಅವರ ‘ಜೀನ್ಸ್‌ ತೊಟ್ಟ ದೇವರು’ ಕವನ ಸಂಕಲನ ಆಯ್ಕೆಯಾಗಿದೆ

.Deccan Herald

Monday, April 18, 2016

ಕಾವ್ಯಾ ಕಡಮೆ- ಬಾರ್ಸಿಲೋನಾ ಉಡಿಯಲ್ಲಿ ಉಳಿಸಿದ ಕಂಪನಗಳು

ಬಾರ್ಸಿಲೋನಾ ಉಡಿಯಲ್ಲಿ ಉಳಿಸಿದ ಕಂಪನಗಳು: ಸಾವಿರಾರು ವರ್ಷಗಳ ಹಿಂದೆ ಕಣ್ತೆರೆದ ಈ ಪುರಾತನ ಪಟ್ಟಣದ ಒಳಜೀವವನ್ನು ಒಂದು ವಾರದ ಮಟ್ಟಿಗೆ ಪ್ರವಾಸಿಗಳಾಗಿ ಹೋದ ನಾನು ಹೇಗೆ ತಾನೇ ಸ್ಪರ್ಶಿಸಲು ಸಾಧ್ಯ? ಕೊನೆಗೆ ಆ ಊರು ತಡವಿಲ್ಲದೇ ದಯಪಾಲಿಸಿದ ಕಂಪನವನ್ನಷ್ಟೇ ಉಡಿಯಲ್ಲಿ ಹಾಕಿಕೊಂಡು ಬರಲು ನನಗೆ ಸಾಧ್ಯವಾಯಿತು.

Saturday, August 10, 2013

ಕಾವ್ಯಾ ಕಡಮೆ- ಧ್ಯಾನಕೆ ತಾರೀಕಿನ ಹಂಗಿಲ್ಲ { ಕವನ ಸಂಕಲನ -2013 ]

ಕಾವ್ಯಾ ಕಡಮೆ ಅವರ ’ ಧ್ಯಾನಕೆ ತಾರೀಕಿನ ಹಂಗಿಲ್ಲ ’ ಸಂಕಲನದಲ್ಲಿ 34  ಕವನಗಳಿವೆ.
 ಈ ಸಂಕಲನದಲ್ಲಿ ’ಎಸ್ ಕೆಫೆ ’, ’ ನೀನು ಪದ್ಯಗಳು'," ಬರುತ್ತೇನೆ ’ ಮೀನು ಫ್ರೈ ’ ’ ಬೆಳಕ ಸುಳಿವು ’ ಪಾನಿಪುರಿಯ ಹುಡುಗ ’ ಮೊದಲ ಓದಿಗೆ ನನಗೆ  ಇಷ್ಟವಾದ ಕವನಗಳು .’ ಬರುತ್ತೇನೆ ’ ಹೊಸ ತಲೆಮಾರಿನ  ಕನ್ನಡ ಕಾವ್ಯದ ಒಂದು ಮುಖ್ಯ ಕವನ.
  " ಆದೇನೆಯೇ  ಒಮ್ಮೆಯಾದರು ನಾನು
    ಲ್ಯಾಂಬ್ರೆಟಾ ವೆಸ್ಪಾ ಬೆನ್ನ ಹಿಡಿಯ ಹೋದ
  ಕೀಲು ಕುದುರೆ ರಾಜ ಕುಮಾರಿ ? "
  ಎನ್ನುವ ಕಾವ್ಯ  ಕಡಮೆ  ಇಪ್ಪತ್ತನೆಯ ಶತಮಾನದ ಕನ್ನಡ ಕಾವ್ಯ ಪರಂಪರೆಯ ಸತ್ವವನ್ನು ಸವಿದು , ಇಪ್ಪತ್ತೊಂದನೆಯ ಶತಮಾನದ  ವರ್ತಮಾನವನ್ನು ನೋಡುತ್ತ ಬೆಳೆಯುತ್ತಿದ್ದಾರೆ .
     " ಒಂದು ಬಿಸಿಯಪ್ಪುಗೆ- ಉಸಿರ ಸ್ಪರ್ಶ
      ನೀಡಲು ಸೋಲುವ
      ಮೊಬೈಲ್-ಫೇಸ್ ಬುಕ್-ಇ ಮೇಲ್
     ಬಂದು ಬಾಗಿಲು ಬಡಿಯುತ್ತಿವೆ " [ ಬೆಳಕ ಸುಳಿವು ]
  ’ ಬೆಳಕ ಸುಳಿವು ’ , ’ಎಸ್ ಕೆಫೆ ’  ಬರುತ್ತೇನೆ ’ -  ಇಂಥ ಕವನಗಳಲ್ಲಿ ಹೊಸ ತಲೆಮಾರಿನ ತರುಣಿಯರ ಅಂತರಂಗದ ಲೋಕ  ಅನಾವರಣಗೊಳ್ಳುತ್ತದೆ .
  " ನಾಳೆಯ ದಿನ ಹೊರಬಾಗಿಲಿಗೆ ಬಂದು ಬದುಕಿನ ಗಾಢ  ವರ್ಣಗಳಿಗೆ ಮುಖ ಮಾಡಬಲ್ಲೆನೇನೊ ಅಂತ  ಪ್ರಾಮಾಣಿಕವಾಗಿ ನಂಬಿದ್ದೇನೆ " ಎನ್ನ್ಮುವ  ಕಾವ್ಯಾ ಕಡಮೆ ಅವರಿಗೆ " ಪ್ರತಿಭೆಗೆ ವಿಮರ್ಶೆಯ ಹಂಗಿಲ್ಲ " ಎನ್ನುತ್ತ ಶುಭ ಹಾರೈಸುತ್ತೇನೆ.
             - ಮುರಳೀಧರ ಉಪಾಧ್ಯ ಹಿರಿಯಡಕ
DHYANAKE THAREEKINA HANGILLA
{ collection of poems - Kannada ]
 By KAVYA KADAME
Published by
AHARNISHI PRAKASHANA
 Jnanavihara extention ,
Vidyanagara,
 Shimoga- [ Karnataka }
email-akshatha.shimoga@gmail.com
 First edition- 2013
 Price-Rs- 70
Pages-70
 Cover page Design -Apara