stat Counter



Showing posts with label muraleedhara upadhya hiriadka. Show all posts
Showing posts with label muraleedhara upadhya hiriadka. Show all posts

Thursday, October 10, 2013

ಮುರಳೀಧರ ಉಪಾಧ್ಯ ಹಿರಿಯಡಕ { Audio ] -ಶಿವರಾಮ ಕಾರಂತ

Muraleedhara Upadhya -Karantha Manthana - Muraleedhara.upadhya pls clik here to listen Muraleedhara upadhya's interview by Jayanth kaikini - topic-  Shivarama karanth  and Journalism
ಶಿವರಾಮ  ಕಾರಂತ ಮಂಥನ - ಮುರಳೀಧರ ಉಪಾಧ್ಯ/ ಜಯಂತ ಕಾಯ್ಕಿಣಿ
ಶಿವರಾಮ ಕಾರಂತರ ಪತ್ರಿಕೋದ್ಯಮ , ಕಾರಂತರ  ಒಡನಾಟ

Monday, August 19, 2013

ಎಚ್. ಗೋಪಾಲಕೃಷ್ಣ ಕೆದ್ಲಾಯರಿಗೆ ಶ್ರದ್ದಾಂಜಲಿ

ಗೋಪಾಲಕೃಷ್ಣ ಕೆದ್ಲಾಯ 
ಉಡುಪಿ : ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ನಿವೃತ್ತ ಪ್ರಾಂಶುಪಾಲ ಎಚ್‌. ಗೋಪಾಲಕೃಷ್ಣ ಕೆದ್ಲಾಯ (90) ವೃದ್ಧಾಪ್ಯದಿಂದ ಆ.17ರಂದು ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 
ಮೂಲತಃ ಹೆರ್ಗ ಗ್ರಾಮದವರಾದ ಕೆದ್ಲಾಯರು ಉಡುಪಿ ಕ್ರಿಶ್ಚಿಯನ್‌ ಪ್ರೌಢ ಶಾಲೆಯಲ್ಲಿ ಸೇವೆ ಆರಂಭಿಸಿ ಕಿದಿಯೂರು ಶಾಲೆ, ಉಡುಪಿ ಬೋರ್ಡ್‌ ಹೈಸ್ಕೂಲ್‌, ಕುಂದಾಪುರ, ಫ‌ಲಿಮಾರು, ಹೆಬ್ರಿ, ಉಪ್ಪಿನಂಗಡಿ, ಹಿರಿಯಡಕ, ತೆಂಕನಿಡಿಯೂರು ಸರಕಾರಿ ಪ್ರೌಢ ಶಾಲೆಗಳಲ್ಲಿ ಹಾಗೂ ಶಿಕಾರಿಪುರ, ಶ್ರೀನಿವಾಸಪುರ, ಬೆಂಚಿನ ಪದವು ಜೂನಿಯರ್‌ ಕಾಲೇಜು ಗಳಲ್ಲಿ ಸೇವೆ ಸಲ್ಲಿಸಿದ್ದರು. ಹೆಬ್ರಿಯಲ್ಲಿ ಪ್ರೌಢಶಾಲೆ ಆರಂಭಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟವರು. ಸುಮಾರು 36 ವರ್ಷಗಳ ಕಾಲ ಅಧ್ಯಾಪಕರಾಗಿ, ಮುಖ್ಯೋಪಾ ಧ್ಯಾಯರಾಗಿ ಹಾಗೂ ಪ್ರಾಂಶು ಪಾಲರಾಗಿ ಸೇವೆ ಸಲ್ಲಿಸಿ 1980ರಲ್ಲಿ ನಿವೃತ್ತರಾದರು.  ಬಳಿಕ ಅಂಬಲಪಾಡಿಯಲ್ಲಿ  ವಿಶ್ರಾಂತ ಜೀವನ ನಡೆಸುತ್ತಿದ್ದರು.
 -ಹಿರಿಯಡಕ ಸರಕಾರಿ ಹೈಸ್ಕೂಲಿನಲ್ಲಿ  ನಾನು ವಿದ್ಯಾರ್ಥಿಯಾಗಿದ್ದಾಗ  ಮುಖ್ಯೋಪಾಧ್ಯಾಯರಾಗಿದ್ದ ಶ್ರಿ  ಗೋಪಾಲಕೃಷ್ಣ ಕೆದ್ಲಾಯರು ಶಿಸ್ತಿನ ಸಿಪಾಯಿಯಾಗಿದ್ದ ಆದರ್ಶ ಅಧ್ಯಾಪಕರಾಗಿದ್ದರು .ಅವರಿಗೆ ನನ್ನ ಅಂತಿಮ ನಮನ.
    - ಮುರಳೀಧರ ಉಪಾಧ್ಯ ಹಿರಿಯಡ್ಕ
    H.GOPALAKRISHNA KEDLAYA [90 } expierd on 19-8-2013 at Ambalapady Udupi .
    

Saturday, August 10, 2013

ಕಾವ್ಯಾ ಕಡಮೆ- ಧ್ಯಾನಕೆ ತಾರೀಕಿನ ಹಂಗಿಲ್ಲ { ಕವನ ಸಂಕಲನ -2013 ]

ಕಾವ್ಯಾ ಕಡಮೆ ಅವರ ’ ಧ್ಯಾನಕೆ ತಾರೀಕಿನ ಹಂಗಿಲ್ಲ ’ ಸಂಕಲನದಲ್ಲಿ 34  ಕವನಗಳಿವೆ.
 ಈ ಸಂಕಲನದಲ್ಲಿ ’ಎಸ್ ಕೆಫೆ ’, ’ ನೀನು ಪದ್ಯಗಳು'," ಬರುತ್ತೇನೆ ’ ಮೀನು ಫ್ರೈ ’ ’ ಬೆಳಕ ಸುಳಿವು ’ ಪಾನಿಪುರಿಯ ಹುಡುಗ ’ ಮೊದಲ ಓದಿಗೆ ನನಗೆ  ಇಷ್ಟವಾದ ಕವನಗಳು .’ ಬರುತ್ತೇನೆ ’ ಹೊಸ ತಲೆಮಾರಿನ  ಕನ್ನಡ ಕಾವ್ಯದ ಒಂದು ಮುಖ್ಯ ಕವನ.
  " ಆದೇನೆಯೇ  ಒಮ್ಮೆಯಾದರು ನಾನು
    ಲ್ಯಾಂಬ್ರೆಟಾ ವೆಸ್ಪಾ ಬೆನ್ನ ಹಿಡಿಯ ಹೋದ
  ಕೀಲು ಕುದುರೆ ರಾಜ ಕುಮಾರಿ ? "
  ಎನ್ನುವ ಕಾವ್ಯ  ಕಡಮೆ  ಇಪ್ಪತ್ತನೆಯ ಶತಮಾನದ ಕನ್ನಡ ಕಾವ್ಯ ಪರಂಪರೆಯ ಸತ್ವವನ್ನು ಸವಿದು , ಇಪ್ಪತ್ತೊಂದನೆಯ ಶತಮಾನದ  ವರ್ತಮಾನವನ್ನು ನೋಡುತ್ತ ಬೆಳೆಯುತ್ತಿದ್ದಾರೆ .
     " ಒಂದು ಬಿಸಿಯಪ್ಪುಗೆ- ಉಸಿರ ಸ್ಪರ್ಶ
      ನೀಡಲು ಸೋಲುವ
      ಮೊಬೈಲ್-ಫೇಸ್ ಬುಕ್-ಇ ಮೇಲ್
     ಬಂದು ಬಾಗಿಲು ಬಡಿಯುತ್ತಿವೆ " [ ಬೆಳಕ ಸುಳಿವು ]
  ’ ಬೆಳಕ ಸುಳಿವು ’ , ’ಎಸ್ ಕೆಫೆ ’  ಬರುತ್ತೇನೆ ’ -  ಇಂಥ ಕವನಗಳಲ್ಲಿ ಹೊಸ ತಲೆಮಾರಿನ ತರುಣಿಯರ ಅಂತರಂಗದ ಲೋಕ  ಅನಾವರಣಗೊಳ್ಳುತ್ತದೆ .
  " ನಾಳೆಯ ದಿನ ಹೊರಬಾಗಿಲಿಗೆ ಬಂದು ಬದುಕಿನ ಗಾಢ  ವರ್ಣಗಳಿಗೆ ಮುಖ ಮಾಡಬಲ್ಲೆನೇನೊ ಅಂತ  ಪ್ರಾಮಾಣಿಕವಾಗಿ ನಂಬಿದ್ದೇನೆ " ಎನ್ನ್ಮುವ  ಕಾವ್ಯಾ ಕಡಮೆ ಅವರಿಗೆ " ಪ್ರತಿಭೆಗೆ ವಿಮರ್ಶೆಯ ಹಂಗಿಲ್ಲ " ಎನ್ನುತ್ತ ಶುಭ ಹಾರೈಸುತ್ತೇನೆ.
             - ಮುರಳೀಧರ ಉಪಾಧ್ಯ ಹಿರಿಯಡಕ
DHYANAKE THAREEKINA HANGILLA
{ collection of poems - Kannada ]
 By KAVYA KADAME
Published by
AHARNISHI PRAKASHANA
 Jnanavihara extention ,
Vidyanagara,
 Shimoga- [ Karnataka }
email-akshatha.shimoga@gmail.com
 First edition- 2013
 Price-Rs- 70
Pages-70
 Cover page Design -Apara


Tuesday, May 31, 2011

ಬಿ.ವಿ.ಕಾರಂತ-ಮುರಳೀಧರ ಉಪಾಧ್ಯ ಹಿರಿಯಡಕ[೨೦೧೦]


ಬಿ.ವಿ. ಕಾರಂತ[ಜೀವನ- ಸಾಧನೆ]- ಮುರಳೀಧರ ಉಪಾಧ್ಯ ಹಿರಿಯಡಕ[೨೦೧೦]ಸಾಧನಾ ಪ್ರಕಾಶನ, ಬೆಂಗಳೂರು
B. V. Karanta
-Muraleedhara Upadhya Hiriadka
published by-
SADHANA PRAKASHANA
no- 15/16
first floor,balepet, main road,
bengaluru-53
mobile-9480088960
first edition-2010
pages-100
price- rs-50
This is an abridged edition of my book b. v . karanta published in 1996, by karnataka sangha puttur.My editorial  is reprinted in this booklet.