stat Counter



Showing posts with label ramachandra udupa. Show all posts
Showing posts with label ramachandra udupa. Show all posts

Friday, October 26, 2012

ವಿಟ್ಲದ ರಾಮಚಂದ್ರ ಉಡುಪರಿಗೆ ಅಂತಿಮ ನಮನ

ಅಳಿಕೆಯ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ನನ್ನ ನಿಡುಗಾಲದ ಗೆಳೆಯ ರಾಮಚಂದ್ರ ಉಡುಪರು { ಜನನ-1952 }  ಇನ್ನಿಲ್ಲ.ಕ್ಯಾನ್ಸರ್ ಆಕ್ರಮಣದ ಸುದ್ದಿ ತಿಳಿದು ಹದಿನೈದು ದಿನದೊಳಗೆ  ಅವರು ನಿನ್ನೆ 26-10-2012  ತೀರಿಕೊಂಡಿದ್ದಾರೆ.
ಮೈಸೂರು ವಿ. ವಿ ಯಲ್ಲಿ ಡಾ / ಬಿ ದಾಮೋದರ ರಾಯರ ವಿದ್ಯಾರ್ಥಿಯಾಗಿ ಇಂಗ್ಲಿಷ್ ಎಮ್.ಎ.ಕಲಿತ ಅವರು ವಿಟ್ಲದ ಸಾಹಿತ್ಯ ಬಳಗಕ್ಕೆ ವೈಚಾರಿಕತೆಯ ಸ್ಪರ್ಶ ನೀಡಿದರು . ರಾಮಚಂದ್ರ ಉಡುಪರು , ಅನಂತ ಕ್ರೃಷ್ಣ ಹೆಬ್ಬಾರರೊಂದಿಗೆ ಅನುವಾದಿಸಿದ ಶ್ರಿಪಾದ ಅಮೃತ ಡಾಂಗೆಯವರ- ಸಂಘ್ಹ ಜೀವನದಿಂದ ಗುಲಾಮಗಿರಿಯೆಡೆಗೆ ’ ಪುಸ್ತಕ 1984 ರಲ್ಲಿ ಪ್ರಕಟವಾಗಿದೆ. ಉಡುಪರು ಅನುವಾದಿಸಿದ ಚೆಕಾವ್ ಕತೆಗಳು ’ ರುಜುವಾತು ’ ಪತ್ರಿಕೆಯಲ್ಲಿ ಪ್ರಕಟವಾಗಿವೆ.ನಾನು ಸಂಪಾದಿಸಿದ ಯು.ಆರ್.ಅನಂತಮೂರ್ತಿ ಗ್ರಂಥಕ್ಕೆ ಉಡುಪರು ಶ್ರಿಮತಿ ಹೈಡ್ರುನ್ ಬ್ರೂಕ್ನರ್ ’ಸಂಸ್ಕಾರ ’ದ ಕುರಿತು ಬರೆದ ಲೇಖನವನ್ನು ಅನುವಾದಿಸಿ ನೀಡಿದ್ದರು .  ದಿಡೀರನೆ ಕಣ್ಮರೆಯಾದ ಸಂಗಾತಿ ಉಡುಪರಿಗೆ ಅಂತಿಮ ನಮನ.
Photo: ಗೆಳೆಯ   ರಾಮ ಚಂದ್ರ ಉಡುಪ ...ಇನ್ನಿಲ್ಲ ಎನ್ನುವುದನ್ನು ನೆನೆಯುವುದೇ ಕಷ್ಟ.....
ramachandra udupa
 Pro. Ramachandra Udupa { 1952 -2012 ] , Dep of English , Satya Sai Pre University College, Vitla   passed away on  26-19-2012 at Bangalore . He has  translated Cherkov's stories & S. K. Dange's book to Kannada.