ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Tuesday, August 4, 2020
ಕೀರಿಕ್ಕಾಡು ವಿಷ್ಣು ಭಟ್ಟರ ಆತ್ಮಕತೆ- " ಯಕ್ಷರಸ ಜೀವನ "
Monday, August 3, 2020
Sunday, August 2, 2020
ಮುರಳೀಧರ ಉಪಾಧ್ಯ ಹಿರಿಯಡಕ - ಆಶೀಶ್ ನಂದಿ ವಿಚಾರ - ಆವೇಗದವರ ನಡುವೆ ಅಂತರ್ಮುಖಿ
ಡಾ| ಆಶೀಶ್ ನಂದಿ ಅವರು ದಿಲ್ಲಿಯ ’ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’ನ್ ನಿರ್ದೇಶಕರಾಗಿದ್ದಾರೆ. ರಾಜಕೀಯ ಮನೋವಿಜ್ಞಾನಿಯಾಗಿರುವ ಅವರು ಸಮಕಾಲೀನ್ ಭಾರತದ ಜಿಜ್ಞಾಸುಗಳಲ್ಲೊಬ್ಬರಾಗಿ ಹೆಸರುವಾಸಿಯಾಗಿದ್ದಾರೆ. ಈ ಪುಸ್ತಕದಲ್ಲಿ ಅವರ್ ಮೂರು ಲೇಖನಗಳು ಮತ್ತು ಎರಡು ಭಾಷಣಗಳಿವೆ. ಇವು ಗಳನ್ನು ಕೆ.ವಿ. ಸುಬ್ಬಣ್ಣ, ಕು.ಶೀ. ಹರಿದಾಸ ಭಟ್ಟ, ಕೆ.ವಿ. ಅಕ್ಷರ ಮತ್ತು ಜಶವಂತ ಜಾಧವ್ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಚೆನ್ನಾಗಿ ಭಾಷಾಂತರಿಸಿದ್ದಾರೆ.
’ಸತಿ-ಹತ್ತೊಂಬತ್ತನೆಯ ಶತಮಾನದ ಹೆಂಗಸರು ಹಿಂಸೆ ಹಾಗೂ ಪ್ರತಿಭಟನೆಯ ಒಂದು ವೃತ್ತಾಂತ’ ಹಾಗೂ ’ಅಂತಿಮ ಮುಖಾಮುಖಿ-ಗಾಂಧೀ ಹತ್ಯೆಯ ರಾಜಕೀಯ’ ಇವು ಡಾ| ಆಶೀಶ್ ನಂದಿ ಯವರ ಸಂಶೋಧನಾತ್ಮಕ ಲೇಖನಗಳು.
ಸತಿ ಪದ್ಧತಿ ಬಂಗಾಳದ ನವ ಶ್ರೀಮಂತರಲ್ಲಿ ಜನಪ್ರಿಯವಾಗಿತ್ತು. ಈ ನವ ಶ್ರೀಮಂತ ವರ್ಗಗಳವರು ಪಶ್ಚಿಮದ ಪ್ರಭಾವಕ್ಕೆ ತೆರೆದುಕೊಂಡು ಆ ಕಾರಣದಿಂದಲೇ ಮನೋವೈಜ್ಞಾನಿಕವಾಗಿ ಮೂಲೆ ಗುಂಪಾಗಿದ್ದರು. ಮೇಲು ಜಾತಿಯ ಹಿಂದು ಗಳು, ಸಂಸ್ಕೃತೀಕರಣಗೊಳ್ಳುತ್ತ ಮೇಲು ಮುಖ ಚಲನೆಯನ್ನಾರಂಭಿಸಿದ್ದ ಕೆಳ ಜಾತಿಗಳವರು ಸತಿ ಪದ್ಧತಿಯನ್ನು ಆಚರಿಸುತ್ತಿದ್ದರು. ಸತಿ ಪದ್ದತಿಯು ಆಸ್ತಿಯ ಹಂಚಿಕೆಯಲ್ಲಿ ಹಸ್ತಕ್ಷೇಪ ನಡೆಸುವ ತಂತವೂ ಆಗಿತ್ತು. ಆಶೀಶ್ ನಂದಿ ತನ್ನ್ ಲೇಖನದಲ್ಲಿ ರಾಮಮೋಹನ ರಾಯ್ ಅವರ ಎಳೆ ವಯಸ್ಸಿನ ಅಂತರಂಗದ ಅನುಭವಗಳ ಮೇಲೆ ಒತ್ತು ನೀಡುತ್ತಾರೆ. ರಾಮ್ ಮೋಹನ ರಾಯ್ ಅವರ ಮೇಲೆ ತಾಯಿ ತಾರಿಣೀದೇವಿ, ತಂದೆ ರಮಾಕಾಂತ ರಾಯ್ ಅವರ್ ವ್ಯಕ್ತಿತ್ವಗಳ ಪ್ರಭಾವಗಳನ್ನು ಗುರುತಿಸುತ್ತಾರೆ. ನಂದಿಯವರು ವಿಶ್ಲೇಷಿಸಿರುವಂತೆ, " ತನ್ನ್ ತಾಯಿಯು ಹೀಗೆ ಪ್ರತೀ ಕಾರಕ್ಕೂ ವ್ಯಕ್ತಿ ಹನನಕ್ಕೂ ಹವಣಿಸಿದ್ದಾಳೆನ್ನುವ ಭಾವನೆಯೇ ರಾಯ್ ನಲ್ಲಿ ಆಳವಾದ ಸಿಟ್ಟು ನೋವುಗಳಿಗೂ ಮತ್ತು ತತ್ಫಲವಾಘಿ ಹುಟ್ಟಿದ ಪಾಪಪ್ರಜ್ಞೆಯ ತುಡಿತಕ್ಕೂ ಕಾರಣವಾಯಿತು.... ಅವನು ಆಕೆಯ ಆಸ್ತಿಕ ಧಾರ್ಮಿಕತೆಯನ್ನು ಖಂಡಿಸಿದ; ಆಕೆಯ ಕೌಟುಂಬಿಕ-ಆರ್ಥಿಕ ಅಧಿಕಾರಗಳನ್ನು ಕಿತ್ತುಕೊಂಡ; ಆಕೆಯ ವಿರುದ್ಧ ಕೋರ್ಟು ದಾವೆಗಳಲ್ಲಿ ಗೆದ್ದ. ಕಡೆಗೆ ಆಕೆಯ ಮಾತೃತ್ವವನ್ನು ಕೂಡಾ ನಿರಾಕರಿಸಿ ಬಿಟ್ಟ. ಅರ್ಥಾತ್ ಅವನು ಸಂಪೂರ್ಣವಾಗಿ ಆಕೆಯನ್ನು ಪರಾಭವಗೊಳಿಸಿ. ಹೆಮ್ಮೆಯ ಹೆಗ್ಗಡಿತಿ ತಾರಿಣೀದೇವಿಯು ತನ್ನ ಕಡೆಯ ದಿನಗಳಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರದ ದೇವಾಲಯವೊಂದರಲ್ಲಿ ಕಸಗುಡಿಸುತ್ತ ಕಾಲ ನೂಕಬೇಕಾಯಿತು." ರಾಮ ಮೋಹನ ರಾಯ್ ನ ಈ ಸಂಪೂರ್ಣ ಗೆಲುವು ಅಪಾಯಕಾರಿಯಾಗಿತ್ತು. ತನ್ನ್ ಮನಸ್ಸಿನಲ್ಲಿ ಉಳಿದ ಪಾಪ ಪ್ರಜ್ಜೆಯನ್ನು ಸರಿಪಡಿಸಿಕೊಳ್ಳಲು ಅವನು ದೊಡ್ಡ ಪ್ರಯತ್ನಗಳನ್ನು ಮಾಡಿದ. ರಾಮ ಮೋಹನ ರಾಯ್ ಕಟ್ಟಿದ ಸುಧಾರಣೆಯು ಒಂದು ಸಾರ್ವಜನಿಕ ಪಶ್ಚಾತ್ತಾಪದ ಬೃಹರ್ ಕಟ್ಟಡವಾಗಿ ತ್ತು ಎಂದು ಆಶೀಶ್ ನಂದಿ ವಿಶ್ಲೇಷಿಸುತ್ತಾರೆ.
’ ಗಾಂಧೀ ಹತ್ಯೆಯ ರಾಜಕೀಯ’ ಲೇಖನದಲ್ಲಿ ಆಶೀಶ್ ನಂದಿಯವರು ಗಾಂಧೀಜಿಯ ರಾಜಕೀಯ ತಂತ್ರಗಳ ಮಹತ್ವವನು ವಿವರಿಸಿ,ಗೋಡ್ಸೆಯ ಬಾಲ್ಯ-ಯೌವನಗಳ ಅನುಭವಗಳನ್ನು ಬೆದಕುತಾರೆ.’ ಕಾಂಗ್ರೆಸ್ ಏನಾದರೂ ದೇಶ ವಿಭಜನೆಯನ್ನು ಒಪ್ಪಿಕೊಳ್ಳಲು ಇಚ್ಚಿಸಿದರೆ, ಅದು ನನ್ನ ಮೃತ ಶಾರೀರದ ಮೇಲೆ ಮಾತ್ರವೇ ಆಗತಕ್ಕದ್ದು’ ಎಂದು ಗಾಂಧೀಜಿ ಹೇಳಿದ್ದರು. ’ ನಮ್ಮ ಮಾತೃ ಭೂಮಿಯನ್ನು ತುಂಡರಿಸುವಲ್ಲಿ ಈತನು ಪ್ರಮುಖ ಪಾತ್ರ ವಹಿಸಿದವನು ಎನ್ನುವ ಕಾರಣಕ್ಕಾಗಿ ’ ತಾನು ಗಾಂಧಿಯನ್ನು ಕೊಂದೆ ಎಂದು ಗೋಡ್ಸೆ ತಿಳಿಸಿದ್ದ. ಗಾಂಧೀಜಿಯ ರಾಜಕಾರಣವು ಆತ್ಮಶಕ್ತಿ, ಅಂತರ್ವಾಣಿ, ಉಪವಾಸ, ಪ್ರಾರ್ಥನೆ, ಮನ:ಶೌಚ ಇತ್ಯಾದಿ ಪುರಾತನ ಕಾಲದ ಮೂಡನಂಬಿಕೆಗಳಿಂದ ಪೋಷಿತ ಗೊಂಡದ್ದೆಂಬುದು ಗೋಡ್ಸೆಯ ವಾದ ವಾಘಿತ್ತು. ನಂದಿಯವರ ಈ ಲೇಖನ ಒಬ್ಬ ಪ್ರತಿಭಾವಂತ ಸಿನಿಮಾ ನಿರ್ದೇಶಕನ ಟಿಪ್ಪಣೆಗಳಂತಿದೆ; ತಲಸ್ಪರ್ಶಿಯಾದ ಮನೋವೈಜ್ಜಾನಿಕ ಒಳನೋಟಗಳಿಂದ ಕೂಡಿದೆ.’ಪ್ರಸ್ತುತ ಭಾರತ ಮತ್ತು ಗ್ರಾಮೀಣ ತತ್ವ ಪರಿಕಲ್ಪನೆ’ ಹಾಗೂ ’ಪ್ರಸ್ತುತ ಭಾರತ ಮತ್ತು ದೇಶೀಯ ಜ್ಜಾನ ಪರಂಪರೆಗಳು’ ಲೇಖನಗಳಲ್ಲಿ ನಮ್ಮ ಗ್ರಾಮತತ್ವ ಪ್ರತಿಭೆ-ಪರಿಕಲ್ಪನೆಗಳನ್ನು ನಾವು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಅಶೀಶ್ ನಂದಿ ಎಚ್ಚರಿಸುತ್ತಾರೆ-"ಜನ ಸಮುದಾಯಗಳು ಶತಶತಮಾನಗಳಿಂದ ಬದುಕುತ್ತ ಬಂದ ಜ್ಞಾನ ಪರಂಪರೆಗಳನ್ನು, ಸೃಜಿಸಿಕೊಳ್ಳುತ್ತ ಬಂದ ಜೀವನಕ್ರಮಗಳನ್ನು ಉಪೇಕ್ಷಿಸಿದಲ್ಲಿ, ಅವಮಾನಿಸಿದಲ್ಲಿ, ಏಕಾಯೇಕಿಯಾಗಿ, ಬದಲಾಯಿಸಲು ಹವಣಿಸಿದಲ್ಲಿ ಇಂದಲ್ಲ ಇನ್ನೊಂದು ದಿನ ಅದಕ್ಕಾಗಿ ಘೋರ ಬೆಲೆಯನ್ನು ನಾವು ತೆರಬೇಕಾಗುತ್ತದೆ".
’ ವಿಜ್ಞಾನ, ಅಧಿಕಾರ ಮತ್ತು ಸಂಸ್ಕೃತಿ’ ಲೇಖನದಲ್ಲಿ ಆಶೀಶ್ ನಂದಿ, ವಿಜ್ಜಾನ ಪರಂಪರೆಯನ್ನು ಇತಿಶ್ರೀ ಮಾಡಿ ಸಂಸ್ಕೃತಿ ವಿಶೇಷಗಳ ಪತನಕ್ಕೆ ಕಾರಣವಾಗಿರುವುದರತ್ತ ಗಮನಸೆಳೆಯುತ್ತಾರೆ. ರಾಜಕಾರಣೆಗಳು ಜನಾಭಿಪ್ರಾಯಕ್ಕೆ ಹೆದರಿದಂತೆ ವಿಜ್ಞಾನಿಗಳು ಹೆದರುವುದಿಲ್ಲ. ವಿಜ್ಞಾನ ಸೃಷ್ಟಿಸಿದ ಸಮಸ್ಯೆಗಳಿಗೆ ವಿಜ್ಞಾನ ದಲ್ಲಿಯೆ ಉತ್ತರವಿದೆ ಎಂದು ವಿಜ್ಞಾನಿಗಳು ಸುಳ್ಳು ಹೇಳುತ್ತಾರೆ. ಆಧುನಿಕ ವಿಜ್ಞಾನ ಸರ್ವಾಧಿಕಾರದ ಸ್ವರೂಪ ಲಕ್ಷಣಗಳನ್ನು ಪಡೆದುಕೊಳ್ಳುತ್ತಿದೆ ಎಂದು ಆಶೀಶ್ ನಂದಿ ವಾದಿಸುತ್ತಾರೆ.
ಅಕ್ಷರ ಚಿಂತನಮಾಲೆಯ ಸಂಪಾದಕ್ ಡಾ| ಟಿ.ಆರ್. ನಾಗರಾಜ್ ತನ್ನ ಹಿನ್ನುಡಿಯಲ್ಲಿ, ವಾಚ್ಯದ ಹಿಂದಿರುವ ವ್ಯಂಗ್ಯದ ಸಿದ್ಧಾಂತಿಯಾದ ಆಶೀಶ್ ನಂದಿ ಯವರ ದೃಷ್ಟಾಂತ ಪ್ರತಿಭೆಯ ಮಹತ್ವಮಿತಿಗಳನ್ನು ಗುರುತಿಸಿದ್ದಾರೆ.
ಡಾ| ಆಶೀಶ್ ನಂದಿ, ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಹೇಳುವ ಯೋಜನಾ ತಜ್ಞರಲ್ಲ. ಅವರು ರಾಜಕೀಯ ಮನೋವಿಜ್ಞಾನಿಯಾಗಿ ವ್ಯಕ್ತಿ ಮತ್ತು ಸಂದರ್ಭಗಳ ಹಿನ್ನೆಲೆಯನ್ನು ವಿಶ್ಲೇಷಿಸುತ್ತಾರೆ; ಜಿಜ್ಞಾಸುವಾಗಿ ಗಂಭೀರ ಪ್ರಶ್ನೆಗಳನ್ನು ಕೇಳುತ್ತಾರೆ. ವಿಜ್ಞಾನ ಬೃಹತ್-ತಂತ್ರಜ್ಞಾನಗಳನ್ನು ನಂಬಿ ಆವೇಗದಲ್ಲಿರುವ ಜನಜಂಗುಳಿಗೆ ಯಾವುದು ಮರೀಚಿಕೆ, ಯಾವುದು ಅಚ್ಛೋದಸರಸ್ಸು ಎಂದು ತಿಳಿಯುವುದಿಲ್ಲ. ಬೃಹತ್ ತಂತ್ರಜ್ಞಾನದ ದೋಷರಾಶಿ ಗೊತ್ತಿಲ್ಲದ ಜನ ಆಸೆಯಿಂದ ಅದರ್ ಚರಣ ಸೇವೆ ಮಾಡುತ್ತಿದ್ದಾರೆ. ಆವೇಗದವರ ನಡುವಿನಲ್ಲಿ ಅಂತರ್ಮುಖಿಯಾಗಿರುವ ಆಶೀಶ್ ನಂದಿ ಹುಲ್ಲೆ ಮೊಗದ ಹುಲಿಗಳನ್ನು ಗುರುತಿಸಿ ಎಚ್ಚರಿಸುತ್ತಾರೆ.
ಮುರಳೀಧರ ಉಪಾಧ್ಯ ಹಿರಿಯಡಕ
ಆಶೀಶ್ ನಂದಿ ವಿಚಾರ
(ಡಾ| ಆಶೀಶ್ ನಂದಿ ಅವರ ಆಯ್ದ ಬರಹಗಳು)
ಪ್ರ:ಅಕ್ಷರ ಪ್ರಕಾಶನ.
ಹೆಗ್ಗೋಡು-೫೭೭೪೧೭
ಮೊದಲ ಮುದ್ರಣ:೧೯೯೫ ಬೆಲೆ:ರೂ.೫೦.

Saturday, August 1, 2020
ಅರವಿಂದ ಚೊಕ್ಕಾಡಿ - ಪುರುಷೋತ್ತಮ ಬಿಳಿಮಲೆ ಅವರ " ಕಾಗೆ ಮುಟ್ಟಿದ ನೀರು "
ಡಾ. ಪುರುಷೋತ್ತಮ ಬಿಳಿಮಲೆಯವರ ಅನುಭವ ವೃತ್ತಾಂತ ' ಕಾಗೆ ಮುಟ್ಟಿದ ನೀರು' ಇವತ್ತು ಮಾರುಕಟ್ಟೆಗೆ ಬಂದಿದೆ. ಓದಬೇಕಾದ ಪುಸ್ತಕ. ಋತುಮಾನ ಸ್ಟೋರ್ ನ ಲಿಂಕ್ ಕೊಟ್ಟಿದ್ದೇನೆ. ಆಸಕ್ತರು ಸಂಪರ್ಕಿಸಬಹುದು.
ಕಾಗೆ ಮುಟ್ಟಿದ ನೀರು ಒಂದು ರೂಪಕವಾಗಿ ಹಲವು ರೀತಿಯಲ್ಲಿ ಕೃತಿಯನ್ನು ವ್ಯಾಪಿಸಿಕೊಳ್ಳುತ್ತದೆ. ಕಾಗೆ ಮೈಲಿಗೆ ಎಂದು ಲೆಕ್ಕ. ಆದರೆ ಪಿತೃಗಳಿಗೆ ಪಿಂಡವನ್ನು ತಲುಪಿಸುವುದು ಕಾಗೆ ಎಂದು ನಂಬಿಕೆ. ಒಗ್ಗಟ್ಟಿಗೆ ಕಾಗೆಯೇ ಪ್ರತಿನಿಧಿ. ಒಂದಗುಳು ಕಂಡರೆ ಕಾಗೆ ತನ್ನ ಬಳಗವನ್ನು ಕರೆಯುತ್ತದೆ ಎಂದು ಶರಣರು ಹೇಳಿದ್ದಾರೆ. ಒಂದು ಭಾಷೆಗೆ ಕಾಗೆ ಸೀಮಿತವಲ್ಲ." ಕಾಕ್ಕಾಯ್ ಕುಲಮಾಯ್ ಅವಧರಿತ್ತಾಲುಂ ವಟ್ರುಮಯಾವದ್ ವಳರ್ನ್ದಿರುಕ್ಕುಂ" ಎಂದು ತಮಿಳಿನಲ್ಲೂ ಬರುತ್ತದೆ. ಮಕ್ಕಳಿಗೆ ಪ್ರಿಯವಾದ ಹಕ್ಕಿ ಕಾಗೆ. 'ಪ' 'ಮ' ಹೇಗೆಯೋ ಹಾಗೆಯೇ,' ಕಾ..ಕಾ' ವೂ ಮೂಲಧ್ವನಿಯಲ್ಲೆ ಸೇರಿ ಕಾಗೆಯೊಂದಿಗೆ ನಯನ ಸಂಪರ್ಕವನ್ನು ಹೊಂದುತ್ತದೆ. ಹೀಗೆ ಕಾಗೆಯ ಹಲವು ಗುಣ ಸ್ವಭಾವಗಳು ಕೃತಿಯ ವಿವರಗಳನ್ನು ರೂಪಕಾತ್ಮಕವಾಗಿ ಬೆಳೆಯಿಸುತ್ತದೆ.
ಈ ಕೃತಿಯು ಸುಮಾರು ಅರುವತ್ತು ವರ್ಷಗಳ ಹಿಂದಿನ ಅನುಭವಗಳಿಂದ ವಿವರಗಳನ್ನು ತೆಗೆದುಕೊಳ್ಳುತ್ತದೆ ಎಂಬ ನೆಲೆಯಲ್ಲಿಯೇ ಕೃತಿಯನ್ನು ಪರಿಗಣಿಸಬೇಕು. ನನ್ನ ಬಾಲ್ಯದ ಬದುಕೇ ಈಗ ಇಲ್ಲ. ಹಾಗಿರುವಾಗ ಬಿಳಿಮಲೆಯವರ ಬಾಲ್ಯದ ಬದುಕಿನ ಸ್ಥಿತಿ ಈಗಿಲ್ಲ ಎಂಬುದನ್ನು ಪರಿಗಣಿಸಿ ಓದಿಕೊಳ್ಳದಿದ್ದರೆ, ಕೆಲವು ಎಡಪಂಥೀಯರು 'ರಾಮಾಯಣ' ದಲ್ಲಿ ಭಾರತದ ಸಂವಿಧಾನವನ್ನು ಹುಡುಕಲು ಹೊರಟು ರಾಮಾಯಣದ ಓದಿನ ಅನುಭವವನ್ನೆ ಪಡೆಯಲಾಗದೆ ಅಸಹನೆಯನ್ನು ಬೆಳೆಯಿಸಿಕೊಳ್ಳುತ್ತಾರಲ್ಲ ಆ ರೀತಿಯ ಪರಿಸ್ಥಿತಿ ಎದುರಾಗುತ್ತದೆ. 65 ವರ್ಷಗಳ ಹಿಂದಿನ ಪಂಜದಲ್ಲಿ ಬದುಕು ಆರಂಭವಾಗುತ್ತದೆ. ಅಲ್ಲಿನ ಸಾಮುದಾಯಿಕ ಬದುಕು, ಕ್ಷೌರಿಕ, ಬ್ಯಾರಿ, ಜ್ಯೋತಿಷಿ, ಯಕ್ಷಗಾನ, ಕರಿಮಲೆ, ಬಿರುಮಳೆ, ಏಡಿ-ಇದೆಲ್ಲ ಸಮೃದ್ಧ ಅನುಭವಗಳ ಒಂದು ಕಾಲಮಾನದ ಗ್ರಾಮ ಬದುಕಿನ ಚಿತ್ರಣವನ್ನು ನೀಡುತ್ತವೆ. ಬಹುಶಃ ಮುಂದಿನ ದಿನಗಳಿಗೆ ಇವು ಐತಿಹಾಸಿಕ ದಾಖಲೆಗಳೇ ಆಗಬಹುದೇನೊ.
ಎರಡನೆಯದು ಬಿಳಿಮಲೆಯವರ ವಿದ್ವತ್ ಅನುಭವಗಳು. ಜನಪದದ ಕುರಿತ ಅವರ ವ್ಯಾಪಕ ಅಧ್ಯಯನ, ಮೆಕೆಂಜಿಯ ಕೈಫಿಯತ್ ಗಳು ಮುಂತಾದ ಸಂಶೋಧನೆ, ಪಂಜದ ಕಾಡಿನ ಮೂಲೆಯಲ್ಲಿ ಜನಿಸಿ ಟೋಕಿಯೊ, ಇಸ್ರೇಸ್ ಹೀಗೆ ಅಂತಾರಾಷ್ಟ್ರೀಯ ವಿದ್ವತ್ ಸಭೆಯ ಪಾಲುದಾರನಾಗಿ ಬೆಳೆದ ಒಂದು ವೈಚಾರಿಕ ಬದುಕು ಕೃತಿಯ ಮತ್ತೊಂದು ಮಗ್ಗುಲು.
ಮೂರನೆಯದು ಜನರೊಂದಿಗಿನ ಒಡನಾಟ. ಇಲ್ಲಿ ಕಾಣಿಸಲ್ಪಡುವ ಶಿವರಾಮ ಕಾರಂತರು ಸಾಹಿತ್ಯ ಮಾತ್ರ ಅಲ್ಲ; ವ್ಯಕ್ತಿತ್ವವೂ ಹೌದು. ಇಲ್ಲಿ ಬರುವ ಸುನಿಲ್ ಕುಮಾರ್, ತಾಳ್ತಜೆ ವಸಂತ ಕುಮಾರ್, ಕುರುಂಜಿ ವೆಂಕಟ್ರಮಣ ಗೌಡ, ಐತಾಳರು, ಕಂಬಾರರು, ಮಣಿಮಾಲಿನಿ, ದೆಹಲಿ ಕನ್ನಡ ಸಂಘದ ಸಮಸ್ಯೆಗೆ ಸ್ಪಂದಿಸಿದ ಅಂದಿನ ಕೇಂದ್ರ ಸಚಿವ ಅನಂತ ಕುಮಾರ್ -ಹೀಗೆ ಇಂತಹ ಅನೇಕ ವ್ಯಕ್ತಿಗಳು ವರ್ತಮಾನದ ಬದುಕಿನಲ್ಲಿ ಇರುವವರು/ಇದ್ದವರು. ಈ ಒಡನಾಟಗಳು ಬಿಳಿಮಲೆಯವರ ವ್ಯಕ್ತಿತ್ವದ ಒಟ್ಟೂ ಸ್ವರೂಪವನ್ನು ಕಾಣಿಸುತ್ತವೆ.
ಇನ್ನೊಂದು ಆಯಾಮ ಬಿಳಿಮಲೆಯವರ ಸಂಘರ್ಷಗಳು. ಐತಾಳರ ' ಬ್ರಾಹ್ಮಣ ಬಂಡಾಯ' ಕೃತಿಯ ವಿರುದ್ಧದ ಬಿಳಿಮಲೆಯವರ ಹೋರಾಟ ಬರುತ್ತದೆ. ಐತಾಳರು ಬಂಧನಕ್ಕೊಳಗಾದಾಗ ಬಿಳಿಮಲೆಯವರೇ ನ್ಯಾಯಾಲಯದಲ್ಲಿ," ಇದು ಕಾನೂನಿನಿಂದ ತೀರ್ಮಾನ ಆಗಬೇಕಾದ ವಿಷಯವಲ್ಲ" ಎಂದು ಸಾಕ್ಷಿ ಹೇಳುವುದು ಮತ್ತು ಮೊಕದ್ದಮೆ ಬಿದ್ದು ಹೋಗುವುದು ಒಂದು ಕಾಲಮಾನಕ್ಕೆ ಎಡಪಂಥೀಯ ವೈಚಾರಿಕತೆಗೆ ಇದ್ದ ಶಕ್ತಿಯು, "ಹೇಗಾದರೂ ಹಣಿಯಬೇಕು" ಎನ್ನುವ ವರ್ತಮಾನದ ವೈಚಾರಿಕತೆಯನ್ನು ಅಣಕಿಸುತ್ತಾ ವೈಚಾರಿಕತೆ ಹೇಗಿದ್ದಾಗ ಅದಕ್ಕೆ ಮಾನ್ಯತೆ ಬರುತ್ತದೆ ಎಂಬುದಕ್ಕೆ ನಿದರ್ಶನವಾಗುತ್ತದೆ.
ಒಂದು ತುಂಬು ಬದುಕಿನ ಅಂತಃಶಕ್ತಿಯನ್ನು ಅಲ್ಲಿ ಬರುವ ಬುದ್ಧಿವಂತಿಕೆ, ದಡ್ಡತನ, ದಡ್ಡತನದೊಳಗಣ ಪ್ರೀತಿ, ಜೋಕು, ವಿಡಂಬನೆ ಮುಂತಾದವುಗಳಿಂದ ಕೃತಿಯು ಹೇಳುತ್ತಾ ಹೋಗುತ್ತದೆ. "ವಿವೇಕಾನಂದ ಕಾಲೇಜಿನಲ್ಲಿದ್ದಾಗ ನನಗೆ ಪ್ರೀತಿಸಲು ಯಾರೂ ಸಿಗಲಿಲ್ಲ" ಎನ್ನುವಲ್ಲಿನ ತುಂಟತನದ ಗಮ್ಮತ್ತು ಶೋಭನಾ ಅವರನ್ನು ಪ್ರೀತಿಸಿದ ವಿವರ ಬಂದಾಗ "ಯಬ್ಬ, ಕಡೆಗೂ ಇವರಿಗೊಂದು ವ್ಯವಸ್ಥೆ ಆಯಿತಲ್ಲ" ಎಂಬ ಸಮಾಧಾನವನ್ನು ಓದುಗರಿಗೆ ಕೊಡುತ್ತದೆ. ಬಿಳಿಮಲೆ ಆ ಕಾಲಕ್ಕೇ ಬ್ರಾಹಮಣ ಯುವತಿಯನ್ನು ಪ್ರೀತಿಸಿ ಮದುವೆಯಾದವರು. ಮತ್ತು ಅದಕ್ಕಾಗಿಯೇ ಯುವತಿಯ ಮನೆಯ ಬಳಿ ಯಕ್ಷಗಾನ ಮಾಡುವುದು, ಯಕ್ಷಗಾನಕ್ಕೆ ಎಲ್ಲರೂ ಬಂದರೂ ಬೇಕಾದವರು ಬಾರದಿರುವುದು, ಮತ್ತೆ ಮದುವೆ ಇದೆಲ್ಲ ಚಂದದ ವಿಷಯಗಳು. ಮದುವೆ ಮಾಡಿಸಲು ಅಲ್ಲೊಬ್ಬರು ಕಮ್ಯುನಿಸ್ಟ್ ಭಟ್ರು ಬರುತ್ತಾರೆ. ಕಮ್ಯುನಿಸ್ಟಾದರೂ ಭಟ್ರು. ಭಟ್ರಾದರೂ ಕಮ್ಯುನಿಸ್ಟರು. ಈ ಎರಡೂ ಹೇಳಿಕೆಗಳು ಒಂದಾಗುವಲ್ಲಿ ಸೃಷ್ಟಿಯಾಗುವ ಸೌಂದರ್ಯ ಅದ್ಭುತ!. ಮದುವೆಯ ನಂತರ ಯುವತಿಯ ಅಜ್ಜಿ ಬಂದು ದಂಪತಿಯನ್ನು ಮನೆಗೆ ಕರೆದೊಯ್ದು ಸಮಸ್ಯೆ ಪರಿಹರಿಸುವುದು, ಬಿಳಿಮಲೆಯವರ ತಂದೆ "ಸಣ್ಣ ಸೊಸೆ ಡೆಲ್ಲಿಯಿಂದ ಬಂದಿದ್ದಾಳೆ" ಎಂದು ಬರೆದಿಡುವುದು ಇದೆಲ್ಲ ತಲೆಮಾರುಗಳ ಜೀವನ ಧರ್ಮವನ್ನು ಅರ್ಥ ಮಾಡಿಸುತ್ತವೆ. ಇವತ್ತು ಬಿಳಿಮಲೆಯವರ ಕೆಲಸ ಮಾಡುವ ಕಿಡ್ನಿ ಅವರ ಪತ್ನಿಯದು. ಪ್ರೇಮ ವಿವಾಹ ವಿಫಲವಾಗುತ್ತದೆ ಎಂಬ ನಂಬಿಕೆಗೆ ಅವರು ಒಂದು ಚಾಲೆಂಜ್.
ಇದರ ಬಗ್ಗೆ ಪ್ರತ್ಯೇಕವಾಗಿ ಬರೆಯುತ್ತೇನೆ. ಇಲ್ಲಿಗೆ ಇಷ್ಟು ಸಾಕು. ಕೃತಿಯ ಉದ್ದಕ್ಕೂ ಖುಷಿ ಕೊಡುವ ಭಾಷಾ ಲಾಲಿತ್ಯ ಕೊನೆಯಲ್ಲಿ ಮನುಷ್ಯ ಜೀವನವನ್ನು ಮರು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಬಿಳಿಮಲೆಯವರು ಕೃತಿಯನ್ನು ಕೊನೆಗೊಳಿಸುವುದು ಹೀಗೆ:
".......
ಕಣ್ಣು ಸರಿಯಿಲ್ಲ, ಎಡದ ಕಣ್ಣು ಕಾಣೋದಿಲ್ಲ.
ಎರಡು ಸ್ಟಂಟ್ ಹಾಕಲಾಗಿದೆ
ನಲವತ್ತು ವರ್ಷಗಳಿಂದ ಡಯಾಬೆಟಿಕ್
ಅಂಗಾಲು ಬಿಸಿಯಾಗ್ತದೆ. ನ್ಯೂರೋಪತಿ
ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಗಿದೆ"
ಅವನು ತಲೆಯೆತ್ತಿ ನನ್ನ ಕಡೆ ನೋಡಿದ. ಭರ್ತಿ ಮಾಡಿಕೊಳ್ಳಲು ಅವನಲ್ಲಿ ಕಾಲಂಗಳೇ ಉಳಿದಿರಲಿಲ್ಲ. ನಾನು ನಿಧಾನವಾಗಿ ಹೇಳಿದೆ: ನೀನು ಬರೆದುಕೊಳ್ಳಬೇಕಾದ ಮುಖ್ಯ ಟಿಪ್ಪಣಿ ಎಂದರೆ, ಇಷ್ಟೆಲ್ಲ ಕಾಯಿಲೆಗಳ ನಡುವೆ ಇಷ್ಟು ವರ್ಷದ ವರೆಗೆ ಹೇಗೆ ಬದುಕಿದ ಅಂತ. ಅವನು ಮುಗುಳ್ನಕ್ಕ. ದೇಹವನ್ನು ಕೊಂಡೊಯ್ಯುವ ವಾಹನ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಹಾಗಂತ ನಾನೇನೂ ಅದಕ್ಕೆ ಕಾದು ಕುಳಿತಿಲ್ಲ. ಮಾಡಬೇಕಾದ ಕೆಲಸಗಳು ಹಲವಿವೆ. ಬರೆಯಬೇಕಾದ ಪುಸ್ತಕಗಳೂ ಕೆಲವಿವೆ.
"
141You, Purushottama Bilimale, Sumithra Lc and 138 others
29 Comments
6 Shares
Like
Comment
Share
Subscribe to:
Posts (Atom)