stat Counter



Monday, July 25, 2016

ಡಿ. ವಿ. ಜಿ. - ನೆಲವರ್ಧ ಜಲವರ್ಧ ಸೇರಲೀ ಭೂಗೋಳ

ಡಿ.ವಿ.ಜಿ ಬೆಳಗು*
ನೆಲವರ್ಧ ಜಲವರ್ಧ
ಸೇರಲೀ ಭೂಗೋಳ
ತಲೆಯರ್ಧವೆದೆಯರ್ಧ
ಮನುಜ ಸಂಸಾರ
ನಲಿವರ್ಧವಳಲರ್ಧ
ಮನುಜ ಜೀವಿತಸಾರ
ಕಲಿತಿದನು ಬಾಳೆಲವೋ
-ಮರುಳ ಮುನಿಯ

(ನಮಗೆ ಆಸರೆಯಾಗಿರುವ ಈ ಭೂಮಿಯು ಅರ್ಧ ನೆಲ ಮತ್ತು ಅರ್ಧ ನೀರಿನಿಂದಲೂ ಕೂಡಿಕೊಂಡಿದೆ. ಮನುಷ್ಯನ ಸಂಸಾರವು ಅರ್ಧ ಬುದ್ಧಿಶಕ್ತಿಯಿಂದ ಮುನ್ನಡೆದರೆ ಮತ್ತಿನ್ನರ್ಧ ಭಾವಶಕ್ತಿ(ಹೃದಯ) ಯನ್ನು ಅವಲಂಬಿಸಿರುತ್ತದೆ. ಇದೇ ರೀತಿ ಮನುಷ್ಯನ ಬದುಕಿನ ಸಾರವು ಅರ್ಧ ನಲಿವನ್ನೂ ,ಅರ್ಧ ದುಃಖವನ್ನೂ ಹೊಂದಿರುತ್ತದೆ. ಈ ವಿಭಿನ್ನತೆಯನ್ನು ಅರಿತು ಕೊಂಡು ಬಾಳ್ವೆಯನ್ನು ಮಾಡು. ಬದುಕಿನ ಹಾದಿಯಲ್ಲಿ ನಮಗಿದಿರಾಗಿ
ಏನಿದೆಯೋ , ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸುತ್ತಾ ಸಮಚಿತ್ತದಲ್ಲಿ ಬಾಳೋಣ. ಹೊಂದಾಣಿಕೆ ಮತ್ತು ಸಹನೆಯ ಗುಣಗಳಿಂದ ಬದುಕು ಸಹ್ಯವಾಗುತ್ತದೆ, ಸುಮಧುರವಾಗುತ್ತದೆ. ಕೊರಗುವುದನುಳಿದು, ಪ್ರತಿಯೊಂದನ್ನೂ ಪ್ರಶ್ನಿಸಿ ನಾವೇ ಪ್ರಶ್ನೆಯಾಗುವುದನ್ನು ಬಿಟ್ಟು, ಎಲ್ಲರೊಳೊಂದಾಗಿ ನಲಿಯೋಣ.

 { ಕವಿತಾ ಆಡೂರು ಅವರ  Face Book  ನಿಂದ }

No comments:

Post a Comment