stat Counter



Saturday, September 22, 2018

ಬೊಳುವಾರು ಅವರ ಹೊಸ ಕಾದಂಬರಿ - " ಉಮ್ಮಾ "

 ಬೊಳುವಾರು ಅವರ " ಉಮ್ಮಾ " ಇಸ್ಲಾಮಿಕ್ ಪುರಾಣ ಲೋಕದ  ಗೌರವಾನ್ವಿತ ಮಹಿಳೆಯರನ್ನು ಕುರಿತ ಅಪೂರ್ವ ಕಾದಂಬರಿ. ಗ್ರೀಕ್ ಪುರಾಣ ಕತೆಗಳನ್ನು ಕುರಿತ   ಕಾದಂಬರಿ / ಕಾವ್ಯಗಳ ಪ್ರವೇಶ , ಆ ಪುರಾಣ ಲೋಕದ ಪರಿಚಯವಿಲ್ಲದವರಿಗೆ  ಕಷ್ಟವಾಗುವಂತೆ ಈ ಕಾದಂಬರಿಯನ್ನು  ಆರಂಭದಲ್ಲಿ ತಾಳ್ಮೆಯಿಂದ ಓದಬೇಕಾಗುತ್ತದೆ . ಮುಂದೆ  ಪ್ರವಾದಿಪತ್ನಿಯರ  ಸ್ವಗತಗಳು ಓದಿಸಿಕೊಂಡು ಹೋಗುತ್ತವೆ.  ಆಯಿಷಾ ಅವರ ಪಾತ್ರ ಸಂಕೇರ್ಣವಾಗಿದೆ , ಮನ ಮಿಡಿಯುತ್ತದೆ . ಪ್ರವಾದಿಯವರ ಮೊದಲ ಪತ್ನಿ ಖತೀಜಾ ಮತ್ತು ಅವರಿಗೆ ಉಡುಗೊರೆಯಾಗಿ ಬಂದ ಮಾರಿಯಾ ಅಲಕ್ಷಿತರಾಗಿದ್ದಾರೆ.
 ಇದೋದು ಪ್ರವಾದಿ ಭಾಗವತ . ಭಾಗವತದ   ರಾಧಾ  ಕೃಷ್ಣ ರ ಕುರಿತು ನೂರಾರು ಸಾಹಿತ್ಯ ಕೃತಿಗಳು ಬಂದಿವೆ. . ಆದರೆ    ಕೃಷ್ಣನ ಪತ್ನಿಯರನ್ನು ಕುರಿತ ಇಂಥ  ಕಾದಂಬರಿ ಬಂದಿಲ್ಲ .
  ಈ ಕಾದಂಬರಿಯ ಕಥನ ತಂತ್ರದಲ್ಲಿ ಒಂದು ವೈಚಾರಿಕ ಎಳೆ ಇದೆ. ಪುರಾಣ ಲೋಕವನ್ನು ವಾಸ್ವವ ಮಾರ್ಗದಲ್ಲಿ ಚಿತ್ರಿಸುವ ಈ ಕಾದಂಬರಿಯಲ್ಲಿ " ಪರ್ವ " ದಂತೆ ಪುರಾಣಭಂಜನೆಯೂ ಇದೆ.. ವಿಶ್ವಾಸಿಗಳ ಪುರಾಣವನ್ನು , " ಸಿಡಿಮದ್ದಿನಂಥ " ವಸ್ತುವನ್ನು ,ಅವಿಶ್ವಾಸಿಗಳಿಗೂ ಖುಷಿಕೊಡುವಂತೆ ಬರೆಯುವ ಅಸಿಧಾರಾ ವ್ರತದಲ್ಲಿ ಬೊಳುವಾರು ಯಶಸ್ವಿ ಆಗಿದ್ದಾರೆ. ನೇಮಿಚಂದ್ರರ " ಯಾದ್ ವಶೇಮ್ " ಸಂಶೋಧನೆ ಆಧಾರಿತ ಯಶಸ್ವಿ ಚಾರಿತ್ರಿಕ ಕಾದಂಬರಿ ..ಬೊಳುವಾರರ " ಉಮ್ಮಾ " ರಿಸ್ಕ್ ತೆಗೆದುಕೊಳ್ಳುವ ಲೇಖಕನ  " Bold and Beatifull "  ಕಾದಂಬರಿ.
  ’ ಉಮ್ಮಾ " ಇಂಗ್ಲೀಷ್ ಗಿಂತ ಮೊದಲು ಅರೇಬಿಕ್ ,  ಪರ್ಷಿಯನ್ ಭಾಷೆಗಳಿಗೆ ಅನುವಾದ ಆಗಬೇಕು , ಜಗದಗಲ ಹರಡಬೇಕು.
     ಈ ಕಾದಂಬರಿ ್ ಓದಿ ಮುಗಿಸಿದಾಗ You Tube ನಲ್ಲಿ ಕಂಡ ಮದೀನಾದ    ಪ್ರಾಚೀನ ಖಬರಸ್ಥಾನದ ಪಾರಿವಾಳಗಳು ನೆನಪಾದುವು
          - ಮುರಳೀಧರ ಉಪಾಧ್ಯ ಹಿರಿಯಡಕ
   

No comments:

Post a Comment