stat Counter



Wednesday, March 20, 2019

ಪಾರ್ವತಿ ಐತಾಳ್ -- ಸಾಯಿಸುತೆ ಅವರ ಕಾದಂಬರಿಗಳು

Image may contain: 2 people, including Parvathi Aithal, people smiling, people sitting






ಮೊನ್ನೆ ೯.೩.೨೦೧೯ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಂದು ಸಾಯಿಸುತೆಯವರಿಗೆ ಗೌರವ ಪ್ರಶಸ್ತಿಯಿತ್ತು. ಮಹಿಳೆಯರು ಬರವಣಿಗೆ ಆರಂಭಿಸಿದ ಕಾಲದಲ್ಲಿ ಬರೆದವರು ಸಾಯಿಸುತೆಯವರು.ಅತ್ಯಂತ ಸರಳವೂ ಸ್ಪಷ್ಟವೂ ನೇರವೂ ಆದ ಅವರ ಶೈಲಿ.ನಾನು ನನ್ನ ಸಾಹಿತ್ಯದ ಓದನ್ನು ಆರಂಭಿಸಿದ್ದೇ ಸಾಯಿಸುತೆಯವರ ಕಾದಂಬರಿಗಳ ಮೂಲಕ. ಪ್ರೀತಿ, ಪ್ರೇಮ, ಮದುವೆ,ದಾಂಪತ್ಯ, ಕೌಟುಂಬಿಕ ಬದುಕು ಪರಿಸರ, ಶಾಲೆ, ಕಾಲೇಜು-ಇಷ್ಟನ್ನೇ ಅವರು ತಮ್ಮ ಕಾದಂಬರಿಗಳಲ್ಲಿ ಸ್ಥೂಲ ವಿವರಗಳೊಂದಿಗೆ ಕೊಡುತ್ತಾರೆ. ಶೈಲಿಯಲ್ಲಿ ಯಾವ ಸಂಕೀರ್ಣತೆಯಿಲ್ಲ. ಸುಖವಾಗಿ ಓದಿಸಿಕೊಂಡು ಹೋಗುವ ಕಾದಂಬರಿಗಳು. ದೈನಂದಿನ ಬದುಕಿನ ಜಂಜಾಟಗಳಲ್ಲಿ ನಲುಗುವ ಹೆಂಗಳೆಯರ ಮನಸ್ಸನ್ನು ಕ್ಷಣಿಕವಾಗಿಯಾದರೂ ಮುದಗೊಳಿಸುವ ಕಥೆಗಳು.
ವೈಚಾರಿಕ ನೆಲೆಗಟ್ಟಿನಲ್ಲಿ ಅವರು ಬರೆದಿಲ್ಲ, ಅವರು ಜನಪ್ರಿಯ ಕಾದಂಬರಿಕಾರ್ತಿ ಎಂದೆಲ್ಲ ಸಾಹಿತ್ಯ ಲೋಕ ಏನೇ ಹೇಳಲಿ ಅವರು ಇದುವರೆಗೆ ೧೪೦ ಕಾದಂಬರಿಗಳನ್ನು ಬರೆದಿದ್ದಾರೆಂದರೆ ನನಗೆ ಹೃದಯ ತುಂಬಿ ಮಾತೇ ಬರುತ್ತಿಲ್ಲ. ಅವರಿಗೆ ಹೃದಯ ತುಂಬಿದ ನಮನಗಳು.ಅವರ ಜತೆಗೆ ಫೋಟೋ ತೆಗೆಸಿಕೊಳ್ಳಬೇಕು ಅಂದಾಗ ಯಾವ ಬಿಗುಮಾನವೂ ಇಲ್ಲದೆ ಸಂತೋಷದಿಂದ ನಗುನಗುತ್ತ ಒಪ್ಪಿಕೊಂಡರು.

No comments:

Post a Comment