stat Counter



Friday, March 29, 2019

ಅರವಿಂದ ಚೊಕ್ಕಾಡಿ - ನೆಹರೂ ಮತ್ತು ಇಸ್ರೋ

ಪಂಡಿತ್ ಜವಾಹರಲಾಲ್ ನೆಹರೂ ಇವತ್ತು ವರ್ತಮಾನ ಅಲ್ಲ."ಅತೀತ".ಮಹಾಭಾರತದ ಪ್ರಕಾರ ಅತೀತರ ಬಗ್ಗೆ ಅಸತ್ಯವನ್ನು ಹೇಳುವುದು ಅಧಾರ್ಮಿಕ.ಫೇಸ್ ಬುಕ್ಕಿನ ತುಂಬೆಲ್ಲ ISRO ಸ್ಥಾಪನೆಯಾದದ್ದು 1969ರಲ್ಲಿ,ನೆಹರೂ ಮೃತರಾದದ್ದು 1964ರಲ್ಲಿ;ನೆಹರೂ ಹೇಗೆ ಇಸ್ರೋ ಸ್ಥಾಪಿಸಿದ್ದು?ಎಂಬ ಬರೆಹಗಳು ಓಡಾಡುತ್ತಿರುವುದರಿಂದ ಇದನ್ನು ಹೇಳಲೇಬೇಕಾಗಿದೆ.
ISRO ದ ಮೂಲ ಹೆಸರು Indian National Committee For Space Resaearch ಎಂದು.ಇದು ಸ್ಥಾಪನೆಯಾದದ್ದು 1962ರಲ್ಲಿ.ಅದಕ್ಕೆ ಇಸ್ರೊ ಎಂದು ಮರು ನಾಮಕರಣ ಮಾಡಿದ್ದು 1969ರಲ್ಲಿ.ನಿಸ್ಸಂದೇಹವಾಗಿಯೂ ಇಸ್ರೋದ ಸ್ಥಾಪನೆ ಪಂಡಿತ್ ನೆಹರೂ ಅವರಿಂದಲೇ ಆಯಿತು.
ಇದರರ್ಥ ನೆಹರೂ ಅವರೇ ಮಾಡಿದರೆಂದಲ್ಲ.ಅದರ ಹಿಂದೆ ಅಪಾರ ಶ್ರಮ ವಹಿಸಿದವರು ಡಾ.ವಿಕ್ರಮ್ ಸಾರಾಭಾಯಿ ಮತ್ತು ಸಾರಾಭಾಯಿಯವರೊಂದಿಗೆ ಜೊತೆಯಾದವರು ಡಾ.ಹೋಮಿ ಜಹಾಂಗೀರ್ ಭಾಭಾ.1948ರಲ್ಲಿ ಭಾರತ ಸರಕಾರ atomic energy commission ಪ್ರಾರಂಭಿಸಿದಾಗ ನೆಹರೂ ಪರ್ಸನಲ್ ಆಗಿ ಹೋಮಿ ಭಾಭಾ ಅವರೊಂದಿಗೆ ಮಾತನಾಡಿ ಭಾಭಾ ಅವರೊಂದಿಗೆ ನೆಹರೂ ಅವರಿಗಿದ್ದ ವೈಯಕ್ತಿಕ ಸ್ನೇಹವನ್ನೂ ಬಳಸಿಕೊಂಡು ಇದರ ಸಂಪೂರ್ಣ ಜವಾಬ್ದಾರಿ ನೀವು ತೆಗೆದುಕೊಳ್ಳಬೇಕೆಂದು ಕೇಳಿಕೊಂಡು ಭಾಭಾ ಅವರನ್ನು ಸೆಕ್ರೆಟರಿ ಮಾಡುತ್ತಾರೆ.ಭಾರತದ ಭೌತವಿಜ್ಞಾನದ ಭವಿಷ್ಯವನ್ನು ನಿಮ್ಮ ಕೈಯ್ಯಲ್ಲಿಟ್ಟಿದ್ದೇನೆ ಎಂದೂ ಹೇಳಿದ್ದರಂತೆ.1920ರಲ್ಲಿ ಎಸ್.ಕೆ.ಮಿತ್ರ ಅವರು ಅಯಾನೋಸ್ಪಿಯರ್ ಗೆ ನಡೆಸಿದ ಸಂಶೋಧನೆಯ ಜಾಡಿನಲ್ಲಿ ಬೆಳೆದ ವಿಕ್ರಮ್ ಸಾರಾಭಾಯಿ 1947ರಲ್ಲಿ ಅಹಮದಾಬಾದ್ ನಲ್ಲಿ physical research lab ಮಾಡುತ್ತಾರೆ.ತನ್ನ ಆಲೋಚನೆಗಳಿಗೆ ಇನ್ನೂ ದೊಡ್ಡ ವ್ಯಾಪ್ತಿ ಬೇಕೆನಿಸಿದಾಗ ಭಾರತ ಸರಕಾರದ ಗಮನ ಸೆಳೆಯುತ್ತಾರೆ.ನೆಹರೂ ಅವರೊಂದಿಗೆ ಬಹಳ ಮಾತುಕತೆಗಳಾಗುತ್ತವೆ.ಹಲವರು "ಇದೆಲ್ಲ ಆಗುವಂತಾದ್ದಲ್ಲ" ಎಂದು ನಿರುತ್ತೇಜನಗೊಳಿಸಿದರೂ ನೆಹರೂ ಅವರು ಡಾ.ಸಾರಾಭಾಯಿ ಅವರೊಂದಿಗೆ ದೃಢವಾಗಿ ನಿಲ್ಲುತ್ತಾರೆ.ಅದರ ಫಲವೇ ISRO.ಸಾರಾಭಾಯಿಯವರ ಪ್ರಯತ್ನದಷ್ಟೆ ನೆಹರೂ ಅವರಿಗೂ ಅದರಲ್ಲಿ ಪಾಲಿದೆ.ನಾನೊಂದು ಒಳ್ಳೆ ಶಿಕ್ಷಣ ನೀತಿಯನ್ನು ಹೇಳಬಹುದು;ಅದನ್ನು ಮಾಡಲು ಆಡಳಿತ ಒಪ್ಪಿದಾಗ ಮಾತ್ರ ಅಲ್ವ ಅದಕ್ಕೆ ಮಹತ್ವ ಇರುವುದು.ಹಾಗೆಯೇ ಯಾರೇ ಸಾಧನೆ ಮಾಡಿದರೂ ಅದಕ್ಕೆ ಸಪೋರ್ಟ್ ಮಾಡಿದ ಆಡಳಿಕ್ಕೂ ಆ ಗೌರವ ಸಲ್ಲಬೇಕಾಗುತ್ತದೆ.ನೆಹರೂ ಮೃತರಾದ ನಂತರವೂ ಡಾ.ಸಾರಾಭಾಯಿ SITE ಪ್ರಾಜೆಕ್ಟ್ ಗಾಗಿ NASA ದೊಂದಿಗೆ ಬಹಳ ವ್ಯವಹರಿಸುತ್ತಾರೆ.ಆ ಪ್ರಾಜೆಕ್ಟ್ 1975ರಲ್ಲಿ;ಸಾರಾಭಾಯಿಯವರು ಮೃತರಾದ ನಂತರ ಜಾರಿಗೆ ಬಂದಿತು.ನಮ್ಮ ಪೊಳ್ಳು ಪ್ರತಿಷ್ಠೆಗಾಗಿ ಒಂದು ತಲೆಮಾರಿನ ಹಿರಿಯರ ಕಾಳಜಿಗಳನ್ನೆ ಕ್ಷುಲ್ಲಕವೆಂದು ವ್ಯಾಖ್ಯಾನಿಸುವುದು ನಮ್ಮ ಮುಂದಿನ ತಲೆಮಾರು ನಮ್ಮನ್ನು most irresponsible generation ಎಂದುಕೊಳ್ಳಲು ಮತ್ತು ಮುಂದಿನ ತಲೆಮಾರು ಇನ್ನಷ್ಟು ಅಧಃಪತನಕ್ಕೆ ಹೋಗಲು ಕಾರಣವಾಗುತ್ತದೆ.
ಬಹಳ ಮಂದಿ ನೆಹರೂ ಅವರನ್ನು ಬೇಜವಾಬ್ದಾರಿಯ ಸುಖಪುರುಷನೆಂಬಂತೆ ಚಿತ್ರಿಸುತ್ತಾರೆ.but he was not like that.ಚಿಂದಿಯಾದ ದೇಶದ ಮೊದಲ ಪ್ರಧಾನಿಯಾಗಿ ಅನೇಕ ಸವಾಲುಗಳನ್ನು ಎದುರಿಸಿದವರು ಅವರು.ಅದರ ನಿರ್ವಹಣೆಯಲ್ಲಿ ತಪ್ಪುಗಳಾಗಿವೆ.ಅದರರ್ಥ ಅವರು ಕಾಳಜಿಯೆ ಇರದವರೆಂದಲ್ಲ.ತಪ್ಪಾಗಿದ್ದರೆ ಅದನ್ನು ಹೇಳಬೇಕು.ಆ ತಪ್ಪನ್ನು ನಾವು ಹೇಗೆ ಸರಿ ಮಾಡಬೇಕು ಎಂದು ಯೋಚಿಸಬೇಕು.ತನ್ನ ಮೊದಲ ಪ್ರಧಾನ ಮಂತ್ರಿಯನ್ನೆ ಕ್ಷುಲ್ಲಕವಾಗಿಸಿ ಅವಹೇಳನ‌ ಮಾಡುವುದು ಯಾವ ದೇಶದಲ್ಲಿ‌ ನಡೆದರೂ ಅದು ದೇಶಭಕ್ತಿಯಾಗಲಾರದು.ನೆಹರೂ ಅವರದೇ ವಾಕ್ಯದಲ್ಲಿರುವ ಬರಹಗಳನ್ನು ನೋಡಿ.ಅವರ vision ಅರ್ಥವಾಗುತ್ತದೆ.ನಿಜವಾಗಿಯೂ ಅವರು ಪಂಡಿತರೇ ಆಗಿದ್ದರು.ನೆಹರೂ ಅವರದು high level English;ಕಷ್ಟವಾಗುತ್ತದೆ ಎನಿಸಿದರೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕಗಳಲ್ಲಿ ಬೆನ್ನುಡಿಯಾಗಿ ನೆಹರೂ ಅವರ ಬರಹವಿದೆ.ಕನ್ನಡ ಅನುವಾದದಲ್ಲೆ ಇದೆ.ಭಾರತದ ಭಾಷಾ ಸನ್ನಿವೇಶ ಮತ್ತು ಸಾಂಸ್ಕೃತಿಕ ಸನ್ನಿವೇಶದ ಅವರ ಜ್ಞಾನ ಅರ್ಥವಾಗುತ್ತದೆ.ನೆಹರೂ ಕೂಡ ಸಾಕಷ್ಟು ಅಪಾಯಗಳನ್ನು ಎದುರಿಸಿದವರು.ನಾಲ್ಕು ಬಾರಿ ನೆಹರೂ ಹತ್ಯೆಯ ಪ್ರಯತ್ನಗಳಾಗಿವೆ.1947ರಲ್ಲೆ ಅವರು ವಾಯವ್ಯ ಗಡಿ ರೇಖೆಯ ವೀಕ್ಷಣೆಗೆ ಹೋದಾಗ ಹತ್ಯೆಯ ಮೊದಲ ಪ್ರಯತ್ನವಾಗುತ್ತದೆ.ಉಳಿದ ಮೂರು ಪ್ರಯತ್ನಗಳೂ ಮಹಾರಾಷ್ಟ್ರದಲ್ಲಿ ನಡೆಯುತ್ತದೆ.
ಅತೀತರ ತಪ್ಪುಗಳನ್ನು ಟೀಕಿಸಬೇಕು.ಆದರೆ ಅದನ್ನೊಂದು ದ್ವೇಷವಾಗಿ ಬೆಳೆಸಿಕೊಳ್ಳುವುದು ಮಾನಸಿಕ ಆರೋಗ್ಯಕ್ಕೆ ಮಾರಕ.ಅದು ಸಾವರ್ಕರ್ ಮೇಲಿನ ದ್ವೇಷವೇ ಆದರೂ ಅಷ್ಟೆ.ನೆಹರೂ ಮೇಲಿನ ದ್ವೇಷವಾದರೂ ಅಷ್ಟೆ.
Comment
  • 1
  • 5
  • 1

No comments:

Post a Comment