stat Counter



Showing posts with label kavita adoor. Show all posts
Showing posts with label kavita adoor. Show all posts

Thursday, March 30, 2017

ಸಾಹಿತ್ಯಲಹರಿ ವಾಟ್ಸಪ್ ಬಳಗ { AUDIO } -ಕವಿ ಗೋಷ್ಠಿ ಭಾಗ - 2

http://chirb.it/KAnGGd-Pls clik here to lisen poems recited by members of Sahityalahari Whatsap Kannada Group at Dwanyaloka , Govinda Pai Centre , Udupi



Image may contain: 3 people, people sitting and indoor


ಸಾಹಿತ್ಯ ಲಹರಿ ವಾಟ್ಸ್ಯಾಪ್ ಬಳಗದ ಉಡುಪಿ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮದ ಕವಿಗೋಷ್ಟಿಯಲ್ಲಿ (ಈ ಎರಡನೇ ಭಾಗದಲ್ಲಿ) ಕವನ ಓದಿದವರ ಹೆಸರುಗಳು ಮತ್ತು ಅವರ ಕವನದ ಶೀರ್ಷಿಕೆ: 
೧- ರಾಮಪ್ರಸಾದ ಕಾಂಚೋಡು - ಕೃಷ್ಣಾ, ಸಖಭಾವ ತುಂಬಿರುವ ಪಾತ್ರಧಾರಿ 
೨- ವಿಭಾ ಕೆ.ಪಿ. ಉಳಿತ್ತಾಯ - ಚುಟುಕಗಳು 
೩- ಹರಿಪ್ರಸಾದ್ ದೈಲ - 
೪- ಗಿರಿಜಾ ಹೆಗ್ಡೆ ಗಾಂವ್ಕರ್ - ಪಿತೂರಿ 
೫- ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ - ಕೆ.ವಿ.ತಿರುಮಲೇಶರ ಕವನಗಳು 
೬- ವಾಸಂತಿ ಅಂಬಲಪಾಡಿ - ಮಗಳು 
೭- ಅಂಶುಮಾಲಿ - ಎರಡು ಕವನಗಳು 

Friday, July 8, 2016

ಡಿ. ವಿ. ಜಿ - ಗುಡಿಯ ಪೂಜೆಯೋ ಕಥೆಯೋ ಸೊಗಸೋ ?

ಡಿ.ವಿ.ಜಿ ಬೆಳಗು:-
ಗುಡಿಯ ಪೂಜೆಯೊ
ಕಥೆಯೊ,ಸೊಗಸು ನೋಟವೋ
ಹಾಡೋ,ಬಡವರಿಂಗುಪಕೃತಿಯೋ, ಆವುದೋ ಮನದ
ಬಡಿದಾಟವನು ನಿಲಿಸಿ
ನೆಮ್ಮದಿಯನೀವೊಡದೆ
ಬಿಡುಗಡೆಯೊ ಜೀವಕ್ಕೆ
ಮಂಕುತಿಮ್ಮ
*ನಲ್ಬೆಳಗು *ಕವಿತಾ ಅಡೂರು *
(ದೇಗುಲದಲ್ಲಿ ಮಾಡುವ ಪೂಜೆ-ಪುನಸ್ಕಾರಗಳು,ಹರಿಕಥೆ,ಭಜನೆ,ಪ್ರವಚನ,ಸತ್ಸಂಗ ಗಳಲ್ಲಿ ಪಾಲ್ಗೊಳ್ಳುವುದು ಅಥವಾ ಒಂದು ಸೊಗಸಾದ ನೋಟವನ್ನು ನೋಡುವುದು ಅಥವಾ ಸುಶ್ರಾವ್ಯವಾದ ಸಂಗೀತವನ್ನು ಆಲಿಸುವುದು ಅಥವಾ ಬಡಜನರಿಗೆ,ದೀನರಿಗೆ ಉಪಕಾರವನ್ನು ಮಾಡುವುದೋ..ಹೀಗೆ ಯಾವುದಾದರೂ ಒಂದು ಉದ್ದೇಶ ದಲ್ಲಿ, ಕೆಲಸದಲ್ಲಿ ನಿನ್ನನ್ನು ನೀನು ತೊಡಗಿಸಿಕೊ. ಬದುಕಿಗೆ ಒಂದು ಉದ್ದೇಶ ಇರಲೇ ಬೇಕು. ಇದು ಮನಸ್ಸಿನ ಬಡಿದಾಟವನ್ನು, ಬೇಸರವನ್ನು ಕಳೆದು ನೆಮ್ಮದಿಯನ್ನು ನೀಡುತ್ತದೆ. ಅದುವೇ ಜೀವಕ್ಕೆ ನಿರಾಳವಾದ,ನಿಶ್ಚಿಂತೆಯ ಬಿಡುಗಡೆಯಾಗಿರುತ್ತದೆ.ಹಾಗಾಗಿ ನಮ್ಮ ನಮ್ಮ ಬದುಕಿನ ಉದ್ದೇಶಗಳನ್ನು ಕಂಡುಕೊಳ್ಳೊಣ. ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳೊಣ.


{ಕವಿತಾ ಅಡೂರು ಅವರ Face Book  ನಿಂದ }

Thursday, June 30, 2016

ಡಿ. ವಿ. ಜಿ --" ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಿಲ್ಲ "

ಡಿ.ವಿ.ಜಿ ಬೆಳಗು:-
ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ
ಬೆರಕೆಯೆಲ್ಲಮರ್ಧ ನಾರೀಶನಂತೆ
ನರತೆಯಣು ನಾರಿಯಲಿ
ನಾರೀತ್ವ ನರನೊಳಣು
ತಿರುಚಿತಿರುವುದು ಮನವ
ಮಂಕುತಿಮ್ಮ

(ಭೂಮಿಯೊಳಗೆ ಪರಿಪೂರ್ಣ ಗಂಡು ಮತ್ತು ಪರಿಪೂರ್ಣ ಹೆಣ್ಣು ಎಂಬವರಿಲ್ಲ. ಇಬ್ಬರೂ ಬೆರಕೆಯಾಗಿರುವ ಸ್ವಭಾವವನ್ನು ಹೊಂದಿರುವರು. ಎಲ್ಲರೂ ಅರ್ಧನಾರೀಶ್ವರರಂತೆ. ಪುರುಷ ಸ್ವಭಾವ ಸ್ತ್ರೀಯರಲ್ಲೂ, ಸ್ತ್ರೀ ಸ್ವಭಾವ ಪುರುಷನಲ್ಲೂ ಸಹಜವಾಗಿ ಇದ್ದೇ ಇರುತ್ತದೆ. ಹೀಗಿರುವುದರಿಂದಲೇ ಅದು ಮನಸ್ಸನ್ನು ಮಥಿಸುತ್ತಾ, ತಿರುಚುತ್ತಾ ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಅಪ್ಪನೊಳಗೊಬ್ಬಾಕೆ ಅಮ್ಮನಿರುವುದು. ತಾಯಿಯ ವಾತ್ಸಲ್ಯವನ್ನಾತ ಧಾರೆಯೆರೆಯುವುದು. ಅಮ್ಮನೊಳಗೊಬ್ಬ ಅಪ್ಪನಿರುವುದು. ಬದುಕನ್ನು ಧೈರ್ಯದಿಂದ ಆಕೆ ಎದುರಿಸಿ ಮಕ್ಕಳನ್ನು ಕಾಪಾಡುವುದು. ಪರಿಸ್ಥಿತಿ ಗೆ ಅನುಗುಣವಾಗಿ ನಮ್ಮೊಳಗಿರುವ ಈ ಗುಣ ಜಾಗೃತವಾಗುತ್ತದೆ. ಪ್ರಕಟಗೊಳ್ಳುತ್ತದೆ.


{ ಕವಿತಾ ಅಡೂರು ಅವರ Facebook ನಿಂದ }