ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಡಿ. ವಿ. ಜಿ.. Show all posts
Showing posts with label ಡಿ. ವಿ. ಜಿ.. Show all posts
Monday, September 24, 2018
Thursday, January 25, 2018
Tuesday, August 16, 2016
Sunday, July 17, 2016
ಡಿ. ವಿ. ಜಿ - ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ ?
ತಂದೆ ಮಕ್ಕಳಿಗೆ
ಹದಗೆಟ್ಟುದನು ಕಾಣೆಯಾ?
ಹೊಂದಿರುವರವರ್
ಅಹಂತೆಯು ಮೊಳೆಯುವನಕ
ತಂದೆಯಾರ್ ಮಕ್ಕಳಾರ್
ನಾನೆಂಬುದೆದ್ದುನಿಲೆ?
ಬಂಧ ಮುರಿವುದು ಬಳಿಕ
-ಮಂಕುತಿಮ್ಮ
*ನಲ್ಬೆಳಗು*-ಕವಿತಾ ಅಡೂರು:
(ತಂದೆ ಮಕ್ಕಳ ನಡುವಿನ ಸಂಬಂಧ ಹಾಳಾಗಿರುವುದನ್ನು, ಅವರುಗಳು ಬದ್ಧ ದ್ವೇಷಿಗಳಾಗಿರುವುದನ್ನು ನಾವು ನಮ್ಮ ಪರಿಸರದಲ್ಲಿ ಕಾಣುತ್ತೇವೆ. ನಾನು ಯಾರಿಗಿಂತಲೂ ಕಡಿಮೆ ಇಲ್ಲ, ಎಲ್ಲವು ನಾನು ಹೇಳಿದ ಹಾಗೆ ನಡೆಯ ಬೇಕು, ನಾನೇ ಬುದ್ಧಿವಂತ, ಎಲ್ಲವೂ ನನ್ನಿಂದ, ನಾನು ಯಾರ ಮಾತಿಗೂ ತಲೆಬಾಗುವುದಿಲ್ಲ ಹೀಗೆ *ನಾನು-ನಾನು* ಎಂಬ ಅಹಂಕಾರದ ಭಾವ ; ಸಂಬಂಧಗಳ ನಡುವೆ ಮೊಳೆತಾಗ ಪ್ರೀತಿ-ಮಮತೆ ಸಾಯುತ್ತದೆ. ತಂದೆ ಯಾರೋ,ಮಗ ಯಾರೋ, ಎಂಬಂತೆ ವ್ಯವಹರಿಸುತ್ತಾರೆ. ಆಜನ್ಮ ಶತ್ರುಗಳಂತೆ ಕಾದಾಡುತ್ತಾರೆ. ಎಲ್ಲಾ ಸಂಬಂಧಗಳ ನಡುವಿನ ಬಿರುಕಿಗೆ ಇದೇ ಅಹಂಭಾವ ಕಾರಣವಾಗುತ್ತದೆ. ಹಾಗಾಗಿ ಬಿರುನುಡಿಗಳ ಆಡುವ ಮೊದಲು, ಕಾದಾಟಕ್ಕಿಳಿವ ಮೊದಲು ಒಂದು ಕ್ಷಣ ಯೋಚಿಸೋಣ. ನಮ್ಮ ಬದುಕಿಗೆ ಆ ವ್ಯಕ್ತಿ ಮುಖ್ಯವೋ ಅಥವಾ ನಮ್ಮ ತನದ ಸ್ಥಾಪನೆ ಮುಖ್ಯವೋ?
{ ಕವಿತಾ ಅಡೂರು ಅವರ Face Book ನಿಂದ }
Monday, July 4, 2016
ಡಿ.ವಿ. ಜಿ - " ನಾಳೆಯೊಂದಿಹುದು ನಿನ್ನೆಯೊಲೆ ----"
ನಾಳೆಯೊಂದಿಹುದು
ನಿನ್ನೆಯವೋಲೆ ಬಾಳಿನಲಿ
ಬೀಳಾಯ್ತು ನಿನ್ನೆಯಂದಳುವುದೇಕೆ?
ಮೇಲು ಮಾಡಲ್ಕಂದು
ಸಮಯವದಕಾಣೆಯೇಂ
ಪಾಳೊಂದು ಮಿಲ್ಲವೆಲೊ-
ಮರುಳಮುನಿಯ
*ನಲ್ಬೆಳಗು -ಕವಿತಾ ಅಡೂರು *
(ಆಗಿಹೋದ ನಿನ್ನೆಯಂತೆ ಜೀವನದಲ್ಲಿ ನಾಳೆ ಎನ್ನುವುದೂ ಒಂದಿದೆ ಎನ್ನುವುದನ್ನು ಮರೆಯಬೇಡ. ನಿನ್ನೆಯ ದಿನ ಏನೂ ಕೆಲಸವಾಗದೆ, ಅಂದುಕೊಂಡ ಗೆಲುವು ಸಿಗದೆ ಎಲ್ಲವೂ ಹಾಳಾಯ್ತೆಂದು ಕೊರಗುತ್ತಿ ಯಾಕೆ? ನಾಳೆಗಳು ನಿನ್ನೊಡನೆ ಇದೆ. ಬೀಳಾಗಿರುವುದನ್ನು ಪುನಃ ಮೇಲಕೆತ್ತಲು ಅದು
ತಕ್ಕ ಸಮಯಕ್ಕೆ ಕಾಯುತ್ತಿರುತ್ತದೆ ಎನ್ನುವುದನ್ನು ನೀನು ಕಾಣುತ್ತಿಲ್ಲವೆ? ಪ್ರಪಂಚದಲ್ಲಿ ಹಾಳು(ಪಾಳ್) ಎನ್ನುವುದು ಯಾವುದೂ ಇಲ್ಲ.
ಆಗುವುದೆಲ್ಲ ಒಳ್ಳೆಯದಕ್ಕೆ. ಇವತ್ತು ಕಹಿ ಅನಿಸಿದ್ದು ನಾಳೆಗೆ ಸಿಹಿಯಾಗಿ ಕಾಣುತ್ತದೆ. ಹಾಗಾದದ್ದೇ ಸರಿ ಅನ್ನಿಸುತ್ತದೆ. ಸಮಚಿತ್ತವನ್ನು ಬಿಡದೆ ಎಲ್ಲವನ್ನು ಎದುರಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು.

Thursday, June 30, 2016
ಡಿ. ವಿ. ಜಿ --" ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಿಲ್ಲ "
ಡಿ.ವಿ.ಜಿ ಬೆಳಗು:-
ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ
ಬೆರಕೆಯೆಲ್ಲಮರ್ಧ ನಾರೀಶನಂತೆ
ನರತೆಯಣು ನಾರಿಯಲಿ
ನಾರೀತ್ವ ನರನೊಳಣು
ತಿರುಚಿತಿರುವುದು ಮನವ
ಮಂಕುತಿಮ್ಮ
(ಭೂಮಿಯೊಳಗೆ ಪರಿಪೂರ್ಣ ಗಂಡು ಮತ್ತು ಪರಿಪೂರ್ಣ ಹೆಣ್ಣು ಎಂಬವರಿಲ್ಲ. ಇಬ್ಬರೂ ಬೆರಕೆಯಾಗಿರುವ ಸ್ವಭಾವವನ್ನು ಹೊಂದಿರುವರು. ಎಲ್ಲರೂ ಅರ್ಧನಾರೀಶ್ವರರಂತೆ. ಪುರುಷ ಸ್ವಭಾವ ಸ್ತ್ರೀಯರಲ್ಲೂ, ಸ್ತ್ರೀ ಸ್ವಭಾವ ಪುರುಷನಲ್ಲೂ ಸಹಜವಾಗಿ ಇದ್ದೇ ಇರುತ್ತದೆ. ಹೀಗಿರುವುದರಿಂದಲೇ ಅದು ಮನಸ್ಸನ್ನು ಮಥಿಸುತ್ತಾ, ತಿರುಚುತ್ತಾ ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಅಪ್ಪನೊಳಗೊಬ್ಬಾಕೆ ಅಮ್ಮನಿರುವುದು. ತಾಯಿಯ ವಾತ್ಸಲ್ಯವನ್ನಾತ ಧಾರೆಯೆರೆಯುವುದು. ಅಮ್ಮನೊಳಗೊಬ್ಬ ಅಪ್ಪನಿರುವುದು. ಬದುಕನ್ನು ಧೈರ್ಯದಿಂದ ಆಕೆ ಎದುರಿಸಿ ಮಕ್ಕಳನ್ನು ಕಾಪಾಡುವುದು. ಪರಿಸ್ಥಿತಿ ಗೆ ಅನುಗುಣವಾಗಿ ನಮ್ಮೊಳಗಿರುವ ಈ ಗುಣ ಜಾಗೃತವಾಗುತ್ತದೆ. ಪ್ರಕಟಗೊಳ್ಳುತ್ತದೆ.
{ ಕವಿತಾ ಅಡೂರು ಅವರ Facebook ನಿಂದ }

Wednesday, May 7, 2014
Wednesday, January 1, 2014
1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳು - ಬಿ.ಆರ್. ಸತ್ಯನಾರಾಯಣ
ನಂದೊಂದ್ಮಾತು: 1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳು: ಇಲ್ಲಿಗೆ 81 ವರ್ಷಗಳ ಹಿಂದೆ, ಅಂದರೆ, 1932 ಡಿಸೆಂಬರ್ 28ರಿಂದ 31ರವರೆಗೆ ನಾಲ್ಕು ದಿನಗಳ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆದಿತ್ತು. ಸಮ್ಮೇಳನಾಧ್ಯಕ್ಷತೆ
ಯನ್ನು ಶ್ರ...
Subscribe to:
Posts (Atom)