stat Counter



Showing posts with label d. v. g. ಡಿ. ವಿ. ಜಿ. Show all posts
Showing posts with label d. v. g. ಡಿ. ವಿ. ಜಿ. Show all posts

Sunday, July 31, 2016

ಡಿ. ವಿ. ಜಿ - ನರಜಾತಿಯೊಳಗೆಂತು ಬಂದುದೀ ವೈಷಮ್ಯ ?

ಒಂದೆ ಗಗನವ ಕಾಣುತೊಂದೆ
ನೆಲವನು ತುಳಿಯುತ
ಒಂದೆ ಧಾನ್ಯವನುಣ್ಣುತ
ಒಂದೆ ನೀರ್ಗುಡಿದು
ಒಂದೆ ಗಾಳಿಯನುಸಿರ್ವ
ನರಜಾತಿಯೊಳಗೆಂತು
ಬಂದುದೀ ವೈಷಮ್ಯ?
-ಮಂಕುತಿಮ್ಮ

(ಜಗದೊಳಗಿರುವ ಮನುಜರೆಲ್ಲರೂ ಕಾಣುವ ಆಗಸ ಒಂದೇ, ಇನ್ನೊಂದು ಆಗಸವಿಲ್ಲ.
ತುಳಿಯುವ ನೆಲವೂ ಒಂದೇ, ಇನ್ನೊಂದು ಭೂಮಿಯಿಲ್ಲ,
ತಿನ್ನುವ ಆಹಾರ ಧಾನ್ಯಗಳೂ ಒಂದೇ ರೀತಿಯದ್ದು, ಹಾಗೆಯೇ ಕುಡಿವ ನೀರು, ಉಸಿರಾಡುವ ಗಾಳಿಯೂ ಒಂದೇ.
ಹೀಗಿದ್ದೂ ಮನುಷ್ಯರೊಳಗೆ ದ್ವೇಷ,ಅಸೂಯೆ,ಸಿಟ್ಟು ಇಂತಹ ಭಿನ್ನತೆ ಬಂದುದಾದರು ಹೇಗೆ? ನಮ್ಮೆಲ್ಲರ ಜೀವನಕ್ರಮ, ದೃಷ್ಟಿಕೋನ, ಆಚಾರ-ವಿಚಾರಗಳಲ್ಲಿ ವಿಭಿನ್ನತೆ ಇದೆ. ಆದರೆ ಅದುವೇ ನಮ್ಮ ವೈಷಮ್ಯ ಕ್ಕೆ ಕಾರಣವಾಗ ಬಾರದು. ಪರಸ್ಪರ ಗೌರವಿಸುತ್ತಾ, ಇತರರ ಅಭಿಪ್ರಾಯಗಳನ್ನು ಆಲಿಸಿ; ಅದನ್ನು ಪುರಸ್ಕರಿಸುತ್ತಾ ಪ್ರಜ್ಞಾವಂತರಾಗಿ ಬದುಕಿದರೆ, ಸಹಬಾಳ್ವೆ ನಡೆಸಿದರೆ ನಾವೆಲ್ಲರೂ ಶಾಂತಿಯ ಹರಿಕಾರರಾಗುತ್ತೇವೆ. ಜೀವನ ಅರ್ಥಪೂರ್ಣವಾಗುತ್ತದೆ.
{  ಕವಿತಾ ಅಡೂರು ಅವರ  Facebook ನಿಂದ }

Wednesday, January 1, 2014

1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳು - ಬಿ.ಆರ್. ಸತ್ಯನಾರಾಯಣ

ನಂದೊಂದ್ಮಾತು: 1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳು: ಇಲ್ಲಿಗೆ 81 ವರ್ಷಗಳ ಹಿಂದೆ, ಅಂದರೆ, 1932 ಡಿಸೆಂಬರ್ 28ರಿಂದ 31ರವರೆಗೆ ನಾಲ್ಕು ದಿನಗಳ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆದಿತ್ತು. ಸಮ್ಮೇಳನಾಧ್ಯಕ್ಷತೆಯನ್ನು ಶ್ರ...