stat Counter



Tuesday, June 4, 2019

ಪುರುಷೋತ್ತಮ ಬಿಳಿಮಲೆ -ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡದಲ್ಲಿ ಬರುವುದು ಅಗತ್ಯ

ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡದಲ್ಲಿ ಬರುವುದು ಅಗತ್ಯ
ಈಗ ಕರಡು ರೂಪದಲ್ಲಿ ಸಿಗುತ್ತಿರುವ 477 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿಯು ಅನೇಕ ಉತ್ತಮಾಂಶಗಳನ್ನು ಒಳಗೊಂಡಿದೆ. ಸಹಜವಾಗಿ ಕೆಲವು ಸಂದೇಹಗಳೂ , ಚರ್ಚಾಸ್ಪದ ಅಂಶಗಳೂ ಇವೆ.ಅದರ ಸಿದ್ಧತೆಯಲ್ಲಿ ಅನೇಕ ಮಹನೀಯರು ದುಡಿದಿದ್ದಾರೆ. ಈಗ ಅದನ್ನು ಸಾರ್ವಜನಿಕರ ಸಲಹೆಗಳಿಗಾಗಿ ಬಿಡುಗಡೆಮಾಡಲಾಗಿದೆ. ಸಂಸ್ಕೃತ, ಪ್ರಾಚೀನ ಭಾರತದ ಜ್ಞಾನ ಸಂಹಿತೆಯ ಜೊತೆಗೆ ಅದು ಜಾನಪದ, ಬುಡಕಟ್ಟು ಸಂಸ್ಕೃತಿಯ ಬಗ್ಗೆಯೂ ಮಾತಾಡುತ್ತದೆ.
ಕಳೆದ ಸುಮಾರು 50 ವರ್ಷಗಳಿಂದ ಪ್ರಚಲಿತದಲ್ಲಿದ್ದ 10+2+ 3 ಮಾದರಿಯನ್ನು ಒಡೆದು ಅದೀಗ 5+3+3+4 ಮಾದರಿಯನ್ನು ಮುಂದಿಟ್ಟಿದೆ.
5- ಮೂರರಿಂದ ಎಂಟು ವರುಷ, ಗ್ರೇಡ್ 1 ಮತ್ತು ಎರಡು,
+3 ( ಎಂಟರಿಂದ ಹನ್ನೊಂದು, ಗ್ರೇಡ್ 3,4,5)
+3 ( ಹನ್ನೊಂದರಿಂದ ಹದಿನಾಲ್ಕು, ಗ್ರೇಡ್ 6,7,8 )
+4 ( 14ರಿಂದ 18 ವರ್ಷ, 9,10,11, 12) .
ಅಂಗನವಾಡಿಗಳನ್ನು ಪ್ರತ್ಯೇಕವಾಗಿಡದೆ, ಪ್ರಿ ಸ್ಕೂಲಿನೊಂದಿಗೆ ಸೇರಿಸುವುದು.
ಖಾಸಗಿಯವರು ತಮಗೆ ಬೇಕಾದ ಶಾಲಾ ಶುಲ್ಕವನ್ನು ತಾವೇ ನಿಗದಿಪಡಿಸುವುದು, ಆದರೆ ಇದು ಮನಸೋ ಇಚ್ಛೆ ಆಗಿರಬಾರದು.
ಯುಜಿಸಿಯು NHERA National Higher Education Regulatory Authority ಆಗಲಿದೆ.
National Research Foundation ನ ಸ್ಥಾಪನೆ
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಅದು ಭಾರತ ಕೇಂದ್ರಿತ ಶಿಕ್ಷಣದ ಪರವಾಗಿ ವಾದ ಮಂಡಿಸುತ್ತಿದೆ.
ಏನೇ ಇರಲಿ, ಈ ಶಿಕ್ಷಣ ನೀತಿಯು ಇದೀಗ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ದೊರಕುತ್ತಿದೆ. ಸಂವಿಧಾನದ ಮಾನ್ಯತೆ ಪಡೆ್ದ 22 ಭಾಷೆಗಳಲ್ಲಿಯೂ ಅದು ಮೊದಲು ದೊರಕಬೇಕು. ಅದು ದೊರಕಿದ ಮೇಲೆ ಅದನ್ನು ಓದಿ ಪ್ರತಿಕ್ರಿಯಿಸಲು ಒಂದು ತಿಂಗಳ ಅವಧಿ ನೀಡಬೇಕು.
ಶಿಕ್ಷಣ ನೀತಿಯ ಕನ್ನಡ ಅನುವಾದವನ್ನು ಯಾರು ಮಾಡಬೇಕು? ಕೇಂದ್ರ ಸರಕಾರ? ಕರ್ನಾಟಕ ಸರಕಾರ? ಸಾಹಿತ್ಯ ಪರಿಷತ್ತು? ಕನ್ನಡ ಅಭಿವೃದ್ಧಿ ಪ್ರಾಧಿಕಾರ?
ವಿಷಯ ಪೂರ್ತಿ ತಿಳಿಯದೆ ಒಪ್ಪಿಕೊಳ್ಳುವುದೂ, ತಿರಸ್ಕರಿಸುವುದೂ ಎರಡೂ ಅಪರಾಧವೇ ಸರಿ.
ಕನಿಷ್ಠ ಶಿಕ್ಷಣ ನೀತಿಯ ಮುಖ್ಯಾಂಶಗಳಾದರೂ ಕನ್ನಡಕ್ಕೆ ಬರಲಿ

No comments:

Post a Comment