stat Counter



Friday, June 26, 2020

ಮುರಳೀಧರ ಉಪಾಧ್ಯ ಹಿರಿಯಡಕ - ಜನಪದ ಮಹಾಕಾವ್ಯ " ಜುಂಜಪ್ಪ "

 ’ ಜುಂಜಪ್ಪ’ ಕಾಡುಗೊಲ್ಲರ ಜನಪದ ಮಹಾ ಕಾವ್ಯ.’ ಕಾಡುಗೊಲ್ಲರು ಕರ್ನಾಟಕದ ತುಮಕೂರು, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಜುಂಜಪ್ಪನ ಜಾತ್ರೆ ಗುಬ್ಬಿ ತಾಲೂಕಿನ್ ಹಾಗಲ್ವಾಡಿಯಲ್ಲಿ ಮತ್ತು ಸಿರಾ ತಾಲೂಕಿನ್ ಕಳುವಾರ್ ಹಳ್ಳಿಯಲ್ಲಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ  ನಡೆಯುತ್ತದೆ. ಜುಂಜಪ್ಪ ಕಾವ್ಯವನ್ನು ಕುರಿತು ಕರ್ನಾಟಕದ ಜಾನಪದ ವಿದ್ವಾಂಸರು ಈಗಾಗಲೇ ಸಾಕಷ್ಟು ಅಧ್ಯಯನ್ ನಡೆಸಿದ್ದಾರೆ. ಡಾ| ತೀ.ನಂ. ಶಂಕರನಾರಾಯಣ ಅವರು ೧೯೯೧-೯೩ ರ ಅವಧಿಯಲ್ಲಿ, ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ನೆರವಿನಿಂದ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಜುಂಜಪ್ಪ ಕಾವ್ಯದ ಐವತ್ತು ಪಾಠಗಳನ್ನು ಸಂಗ್ರಹಿಸಿದ್ದಾರೆ.

ಸಮಗ್ರ ಜುಂಜಪ್ಪ ಕಾವ್ಯ್ ಇದೀಗ ಮೊದಲ್ ಬಾರಿ ಪ್ರಕಟವಾಗುತ್ತಿದೆ. ಸಂಪಾದಕ್ ಚಲುವರಾಜು ಅವರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ್ ಮಾಡ್ಗಾನ್  ಹಟ್ಟಿಯ, ಅಲಿಳಿತ ಪರಂಪರೆಯ್ ಗಾಯಕ್ ಶ್ರೀ ದಾಸಪ್ಪನವರಿಂದ ಈ ಕಾವ್ಯವನ್ನು ಸಂಗ್ರಹಿಸಿದ್ದಾರೆ. ಈ ಗ್ರಂಥದ ಅನುಬಂಧದಲ್ಲಿರುವ ಶ್ರೀ ದಾಸಪ್ಪನವರ ವಿಸ್ಕ್ರತ ಸಂದರ್ಶನದಲ್ಲಿ ಮಹತ್ವದ ಸಾಂಸ್ಕ್ರತಿಕ್ ವಿವರಗಳಿವೆ. ಜುಂಜಪ್ಪ ಕಾವ್ಯವನ್ನು ಹಾಡುವ ಕಲಾವಿದರು ’ಗಣೆ’ ಯವರು. ಗಣೆ ಎಂದರೆ ಸುಮಾರು ನಾಲ್ಕು ಅಡಿ ಉದ್ದದ ಕೊಳಲಿನ್ ಮಾದರಿಯ್ ವಾದ್ಯ. ಈ ಕಾವ್ಯದ ಪ್ರಸಂಗಗಳಿವೆ ’ ಸಂದುಗಳೆಂದು ಹೆಸರಿದೆ. ಜುಂಜಪ್ಪ ಕಾವ್ಯದಲ್ಲಿ ಹದಿ ಮೂರು ಸಂದುಗಳಿವೆ. ಸಂಪಾದಕರು ಬರೆದಿರುವಂತೆ "ಸುಮಾರು ಏಳು ತಲೆಮಾರುಗಳಷ್ಟು ಹಳೆಯದಾದ ಗೊಲ್ಲರ ಸಮಗ್ರ ಸಂಸ್ಕೃತಿ ಅಂಶಗಳನ್ನು ಅರಗಿಸಿಕೊಂಡಿರುವ ಈ ಮಹಾಕಾವ್ಯ ನೋವು-ನಲಿವುಗಳೆರಡನ್ನೂ ಬಿಂಬಿಸುವ ಕಾಡಿನ ಮಕ್ಕಳ ಹಾಡಿನ ಜೀವದನಿ.

ಕೆಂಗುರಿ ಮಲ್ಲೇಗೌಡ-ಚಿನ್ನಮ್ಮ ದಂಪತಿಗಳ ಮಗನಾಗಿ ಜನಿಸಿದ ಜುಂಜಪ್ಪ ವೀರಭದ್ರನ ಅವತಾರ ಎಂದು ಕಾಡು ಗೊಲ್ಲರು ನಂಬುತ್ತಾರೆ. ಜುಂಜಪ್ಪ ತನ್ನ ತಾಯಿಯ ಬೆನ್ನಿನಿಂದ ಹುಟ್ಟುತ್ತಾನೆ, ಪವಾಡ್ ಪುರುಷನಾಗುತ್ತಾನೆ. ತನ್ನ ದನ- ಎತ್ತುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಶ್ರೀಮಂತನಾದ ಜುಂಜಪ್ಪನನ್ನು ಕಂಡು ಅವನ ಸೋದರ ಮಾವಂದಿರು ಹೊಟ್ಟೆ ಕಿಚ್ಚು ಪಡುತ್ತಾರೆ. ಹುಲಿಕುಂಟೆಗೆ, ಕೆರೆಯ ನೀರಿಗೆ ಮಾಟ್ ಮಾಡಿಸುವಾಗ  ಸೋದರ ಮಾವಂದಿರು ಜೀವಂತವಾಗಿ ಹೂಳಿದ್ದ ಬಡಕಲು ಕರುವನ್ನು ಜುಂಜಪ್ಪ ಸಾಕುತ್ತಾನೆ., ’ಬಡ ಮೈಲ’ ಎಂದು ಹೆಸರಿಡುತ್ತಾನೆ. ಅದು ದೊಡ್ಡ ಹೋರಿಯಾಗಿ, ಜುಂಜಪ್ಪನ ದನಗಳ  ರಕ್ಷಕನಾಗಿ  ಬೆಳೆಯುತ್ತದೆ. ಸೋದರ ಮಾವಂದಿರ ಪರವಾಗಿ ಜುಂಜಪ್ಪನನ್ನು ಕಾಡಲು ಬಂದ ಚೇಳೂರು ರಂಗಣ್ಣ ಪಗಡೆಯಾಟದಲ್ಲಿ  ಸೋಲುತ್ತಾನೆ. ಹದಿನಾರು ವರ್ಷಗಳ ಕಾಲ್ ಪರಾಕ್ರಮ-ಪವಾಡಗಳಿಂದ ಮೆರೆದ ಜುಂಜಪ್ಪನನ್ನು ಸೋದರ ಮಾವಂದಿರು ವಿಷ ಹಾಕಿಸಿ ಸಾಯಿಸುತ್ತಾರೆ.

ಕಾಡುಗೊಲ್ಲರ ಕುಲಗಳಿಗೆ "ಬೆಡಗು’ ಎಂಬ್ ಹೆಸರಿದೆ. ಜುಂಜಪ್ಪನ ಕಾವ್ಯದಲ್ಲಿ ಪುರಾಣ ರಹಸ್ಯದ ಬೆಡಗೂ ಇದೆ; ಕಾವ್ಯ ಕೌಶಲದ ಬೆಡಗೂ ಇದೆ. ಮಹಾ ಪರಂಪರೆಯ ಭಾಗವತದಲ್ಲಿ ಕೃಷ್ಣ-ಕಂಸ ನನ್ನು ಕೊಲ್ಲುತ್ತಾನೆ. ಕಿರುಪರಂಪರೆಯ ಜುಂಜಪ್ಪ ಕಾವ್ಯದಲ್ಲಿ ಸೋದರ ಮಾವಂದಿರು ಜುಂಜಪ್ಪನನ್ನು  ಕೊಲ್ಲಿಸುತ್ತಾರೆ. ಜುಂಜಪ್ಪ ಕಾವ್ಯ ಕಾಡು ಗೊಲ್ಲರ ಬೆಡಗುಗಳ ಒಳಜಗಳದ ಕತೆ. ಮಹತ್ವಾಕಾಂಕ್ಷೆಯಿದ್ದ ಗೊಲ್ಲರ ಹುಡುಗನೊಬ್ಬನ ದುರಂತದ ಕತೆ.
ಬುಡಕಟ್ಟು ಕಾವ್ಯಮಾಲೆಯಲ್ಲಿ ಮಲೆ ಮಾದೇಶ್ವರ್‍, ಮಂಟೇಸ್ವಾಮಿ, ಕುಮಾರರಾಮ್ ಹಾಗೂ ಜುಂಜಪ್ಪನ ಕಾವ್ಯಗಳನ್ನು ಪ್ರಕಟಿಸಿರುವ ಹಂಪಿಯಾ ಕನ್ನಡ ವಿಶ್ವವಿದ್ಯಾನಿಲಯ ಸ್ತುತ್ಯರ್ಹವಾದ ಕೆಲಸ ಮಾಡಿದೆ.


ಜುಂಜಪ್ಪ
ಸಂಪಾದಕ:ಚಲುವರಾಜು
ಪ್ರ: ಕನ್ನಡ್ ವಿಶ್ವವಿದ್ಯಾಲಯ, ಹಂಪಿ,
ವಿದ್ಯಾರಣ್ಯ-೫೭೬೧೦೨
ಮುರಳೀಧರ ಉಪಾಧ್ಯ, ಹಿರಿಯಡಕ.

No comments:

Post a Comment