stat Counter



Wednesday, June 3, 2020

ಮುರಳಿಧರ ಉಪಾಧ್ಯ ಹಿರಿಯಡಕ - ಎಮ್. ಮುಕುಂದನ್ ಅವರ " ಮಾಹೆ ನದಿಯ ದಡದಲ್ಲಿ "{ಕನ್ನಡಕ್ಕೆ- ಕೆ. ಕೆ. ನಾಯರ್ }

ಮಾಹೆ,  ಕೇರಳಾದ ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳ ಮಧ್ಯೆ ಒಂಬತ್ತು ಚದರ ಕಿಲೋ ಮೀಟರ್    ವಿಸ್ತೀರ್ಣವಿರುವ  ಚಿಕ್ಕ  ಸ್ಥಳ. ಮಾಹೆ ನದೀ ತೀರದ ಈ ಪ್ರದೇಶ ೧೭೪೧ ರಿಂದ೧೯೫೪ರ ವರೆಗೆ ಎರ್ಡು ಶತಮಾನಗಳ ಕಾಲ ಫ್ರೆಂಚರ ವಸಾಹತುವಾಗಿತ್ತು.
ಎಂ. ಮುಕುಂದನ್ ಅವರ ’ಮಾಹೆ  ನದಿಯ ದಡದಲ್ಲಿ’ ಕಾದಂಬರಿ ಮಾಹೆಯ ಮೂರು ತಲೆಮಾರುಗಳಾ ಜೀವನವನ್ನು ಚಿತ್ರಿಸುತ್ತದೆ. ಕುರುಂಬಿಯಮ್ಮನಿಗೆ ಲೆಸ್ಮಿ ಸಾಹೇಬರಥ ಬಿಳಿ ಅಧಿಕಾರಿಗಳೆಂದರೆ ತುಂಬ ಗೌರವ. ಅವಳ ಮಗ ದಾಮು ರೈಟರ್ ಬಿಳಿಯರ ಕಚೇರಿಯಲ್ಲಿ ಗುಮಾಸ್ತನಾಗಿ ಶಿಸ್ತಿನ ಜೀವನ ನಡೆಸುತ್ತಾನೆ. ದಾಮು ರೈಟರ್ ನ ಮಗ ದಾಸನ್ ಮಾಹೆಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಾನೆ.

ಸ್ವಾತಂತ್ರ್ಯ ಹೋರಾಟಗಾರ ದಾಸನ್ ನ ಬದುಕಿನ ದುರಂತವನ್ನು ಕಾದಂಬರಿಕಾರರು ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ಅಜ್ಜಿ ಕುರುಂಬಿಯಮ್ಮ ಹೇಳುತ್ತಿದ್ದ ಭೂತಗಳ, ಪರಂಗಿಗಳ, ವರ್ಣಸಂಕರಗೊಂಡ ಮಾಹೆಯ ಜನಗಳ ಕತೆಗಳನ್ನು ಕೇಳುತ್ತ ದಾಸನ್ ಬೆಳೆಯುತ್ತಾನೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ  ದಾಸನ್ ಉನ್ನತ ವಿದ್ಯಾಭ್ಯಾಸಕ್ಕೆ ಫ್ರಾನ್ಸ್ ಗೆ ಹೋಗಲು ನಿರಾಕರಿಸುತ್ತಾನೆ, ಮಾಹೆಯಲ್ಲಿ ಸರಕಾರಿ ನೌಕರಿಗೂ ಸೇರುವುದಿಲ್ಲ. ಮಾರ್ಕ್ಸ್ ವಾದಿಯಾಗಿದ್ದ ಕುಂಜ ನಂತನ್ ಮೇಸ್ಟ್ರ ಪ್ರಭಾವದಿಂದ ಸ್ವಾತಂತ್ರ್ಯ ಚಳವಳಿಗೆ ಸೇರುತ್ತಾನೆ. ಇದರಿಂದಾಗಿ ಅವನ್ ತಂದೆ ದಾಮು ರೈಟರ್ ನ ಬಂಧನವಾಗುತ್ತದೆ. ತನ್ನ ತಂಗಿ  ಗಿರಿಜೆ ಗೂಂಡಾ ಅಚ್ಚುವನ್ನು ಮದುವೆಯಾಗುವುದನ್ನು ತಪ್ಪಿಸಲು ಮನೆಗೆ ಬಂದ  ದಾಮನ್ ಪೋಲೀಸರ ಕೈಗೆ ಸಿಕ್ಕಿ ಬಿದ್ದು ಜೈಲು ಸೇರುತ್ತಾನೆ. ಮಾಹೆ ಸ್ವಾತಂತ್ರ್ಯ ಗಳಿಸಿದ ಮೇಲೆ ದಾಸನ್ ನನ್ನು  ಅವನ್ ತಂದೆ ಸ್ವಾಗತಿಸದೆ, ತಿರಸ್ಕರಿಸುತ್ತಾನೆ. ತನ್ನ ಗೆಳತಿ ಚಂದ್ರಿಕೆಯನ್ನು ಮದುವೆಯಾಗುವ ದಾಸನ್ ನ ಕನಸು ನನಸಾಗುವುದಿಲ್ಲ. ಚಂದ್ರಿಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ದಾಸನ್ ಮಾಹೆಯ ನದಿಯ ದಡದಲ್ಲಿ ಚಿರವಿರಹಿಯಾಗಿ ಸಾಯುತ್ತಾನೆ.
"ಇವರಿಗೆ (’ದಾಸನ್-ಚಂದ್ರಿಕೆ’) ಬರುವ ವಿಘ್ನಗಳನ್ನು ಗಮನಿಸಿದರೆ ಕೆಲವರ ಹಣೆಬರಹದಲ್ಲಿ ದು:ಖ ಹಾಗೂ ವಿನಾಶವೇ ಇರುತ್ತದೇನೋ ಎಂಬ ಯಕ್ಷ ಪ್ರಶ್ನೆ ನಮ್ಮನ್ನು ಕಾಡುತ್ತದೆ" ಎಂದು ಜಾರ್ಜ್ ಮುನ್ನುಡಿಯಲ್ಲಿ ಬರೆದಿದ್ದಾರೆ. ದಾಸನ್-ಚಂದ್ರಿಕೆಯರ ದುರಂತಕ್ಕೆ ಹಣೆಬರಹ ಕಾರಣವಲ್ಲ, ಮಾಹೆಯ ಎರಡು ತೆಲೆಮಾರುಗಳ ಜೀವನ ದೃಷ್ಟಿಗಳ ನಡುವೆ ಉಂಟಾಗಿರುವ ಕಂದಕ ಈ ದುರಂತಕ್ಕೆ ಕಾರಣವಾಗಿದೆ. ವಸಾಹತುಶಾಹಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ ದಾಮು ರೈಟರ್ ಸ್ವಾತಂತ್ರ್ಯ ಹೋರಾಟಗಾರನಾದ ಮಗನನ್ನು ಗೌರವಿಸುವುದಿಲ್ಲ, ದ್ವೇಷಿಸುತ್ತಾನೆ. ಆರ್ಥುಕವಾಘಿ ದು:ಸ್ಥಿತಿಯಲ್ಲಿರುವ ದಾಸನ್ ಗೆ ತನ್ನ ಮಗಳು ಚಂದ್ರಿಕೆಯನ್ನು ಕೊಡಲು ಭರತನ್ ಸಿದ್ಧನಿಲ್ಲ. ಗೂಂಡಾ ಅಚ್ಚುವಿನ ಹೃದಯ  ಪರಿವರ್ತನೆ ಸಾಧ್ಯವಾಗುವುದಿಲ್ಲ, ವಸಾಹತುಶಾಹಿಯ  ಕ್ರೌರ್ಯಕ್ಕಿಂತ ಬಿಳಿಯರ ಊಳಿಗ ಮಾಡಿದ ಮಾಹೆ ಮಹನೀಯರ ಕ್ರೌರ್ಯ ಭಯಾನಕವಾಗಿದೆ.
ಫ್ರೆಂಚರು ಮಾಹೆಗೆ ಆಧುನಿಕ್ಸ್ ಶಿಕ್ಷಣವನ್ನು, ಮದ್ಯಪಾನದ ದುಶ್ಚಟವನ್ನು ತಂದರು. ಫಾನ್ಸಿನಿಂದ ಬಂದ ಕಾರನ್ನು ನೋಡಿ ಮಾಹೆಯ ಜನ ಬೆರಗಾಗುವುದರ  ಚಿತ್ರಣ ಈ ಕಾದಂಬರಿಯ ಆರಂಭದಲ್ಲಿದೆ. ಸ್ವಾತಂತ್ರ್ಯ ಚಳವಳಿಗಾರರನ್ನು ಸದೆ ಬಡಿಯಲು ಫ್ರೆಂಚ್ ಸೈನ್ಯ ಬಂದಾಗ ಊರ ಜನೆರೆಲ್ಲ ಮಾಹೆ ನದಿ ದಾಟಿ ಓಡಿ ಹೋಗುತ್ತಾರೆ. ಜನರಿಲ್ಲದ ನಿರ್ಜನ ಬೀದಿಗಳಲ್ಲಿ ಫ್ರೆಂಚ್ ಸೈನ್ಯ  ಧ್ವಜ ಕವಾಯತು ನಡೆಸುವ ದೃಶ್ಯ ತಮಾಷೆಯಾಗಿದೆ. ಬಿಳಿಯರನ್ನು  ಆರಾಧಿಸುತ್ತ ಮಾಹೆ ಎಷ್ಟು ಭ್ರಷ್ಟವಾಗುತ್ತದೆಂದರೆ ವೇಶ್ಯೆ ಕುಂಜಿ ಮಾಣಿಕ ಕುಬೇರ ಚೆಟ್ತಿಯಾರ್ ನನ್ನು ತಿರಸ್ಕರಿಸುತ್ತಾಳೆ. ವಸಾಹತುಶಾಹಿ ಆಳ್ವಿಕೆಯಲ್ಲಿ ಹೇಸರಕತ್ತೆಗಳಂತೆ ವರ್ಣಸಂಕರಿಗಳಾದ ಮಾಹೆಯ ಹಿರಿಯ ತಲೆಮಾರು ಸ್ವಾತಂತ್ರ್ಯ ಹೋರಾಟ ಗಾರರಾದ ದಾಸನ್ ರಂಥವರನ್ನು  ಕೃತಘ್ನ ತೆಯಿಂದ ಕಾಣುತ್ತದೆ. ’ಅವಿಲಾಯಿಯ ಸೂರ್ಯೋದಯ್’, ’ದಿಲ್ಲಿ’ ’ಈ ಜಗತ್ತಿನಲ್ಲಿ ಓರ್ವ ಮನುಷ್ಯ’, ’ಹರಿದ್ವಾರದಲ್ಲಿ ಘಂಟೆ ಮೊಳಗುವಾಗ’, ’ಹಗಲು ಮತು ಇರುಳು’, ’ದೇವರ ತುಂಟತನಗಳು’ ಎಂಬ ಕಾದಂಬರಿಗಳನ್ನು ಬರೆದಿರುವ ಎಂ. ಮುಕುಂದನ್ (ಜ-೧೯೪೩) ಸಮಕಾಲೀನ ಮಲಯಾಳಂ ಸಾಹಿತ್ಯದ ಪ್ರಧಾನ ಕಾದಂಬರಿಕಾರರಲ್ಲೊಬ್ಬರು. ಮಲಯಾಳಂ-ಕನ್ನಡ ಭಾಷಾಂತರದಲ್ಲಿ ಸಿದ್ಧಹಸ್ತರಾದ ಕೆ.ಕೆ. ನಾಯರ್, ಮುಕುಂದನ್ ರ(ಮಾಹೆ ನದಿ ತೀರದಲ್ಲಿ)ಕಾದಂಬರಿಯನ್ನು ಸೊಗಸಾಗಿ ಭಾಷಾಂತರಿಸಿದ್ದಾರೆ.
ಮುರಳೀಧರ ಉಪಾಧ್ಯ ಹಿರಿಯಡಕ

ಮಾಹೆ ನದಿಯ  ದಡದಲ್ಲಿ
(ಕಾದಂಬರಿ)
ಲೇ:ಎಂ. ಮುಕುಂದನ್
ಅನುವಾದ:ಕೆ.ಕೆ.ನಾಯರ್
ಪ್ರ: ನ್ಯಾಷನಲ್ ಬುಕ್ ಟ್ರಸ್ಟ್,
ಇಂಡಿಯಾ,
ಎ-೫, ಗ್ರೀನ್ ಪಾರ್ಕ
ಹೊಸದಿಲ್ಲಿ-೧೧೦೦೧೬.
ಮೊದಲ ಮುದ್ರಣ:೨೦೦೨
ಬೆಲೆ ರೂ.೯೫.


No comments:

Post a Comment