stat Counter



Sunday, August 23, 2020

ಮುರಳೀಧರ ಉಪಾಧ್ಯ ಹಿರಿಯಡಕ - ಡಾ| ಎಸ್. ವಿ. ಪರಮೇಶ್ವರ ಭಟ್ಟ, "ಮಹಾಪರಂಪರೆಯ’ ಯ ಸೇತು ಬಂಧ


ಸಾರಸ್ವತ ಲೋಕದ ಅನನ್ಯ ತಾರೆಯೊಂದು ಕಣ್ಮರೆಯಾಯಿತು. ಸಜ್ಜನ, ಸಶಕ್ತ ಸೃಜನಶೀಲ, ಹಳತು-ಹೊಸತರ ಮಧ್ಯೆಯ ಅದ್ಭೌತ ಕೊಂದಿ, ಪಂಡಿತ, ಬರೆಹಗಾರ ಡಾ| ಎಸ್. ವಿ.ಪಿ. ಇನ್ನಿಲ್ಲ. ಆದರೆ ಅವರು ಕನ್ನಡದ ಸಾಹಿತ್ಯ ಲೋಕಕ್ಕೆ ನೀಡಿದ ಅನರ್ಘ್ಯ ಕೊಡುಗೆಗಳು ಅವರನ್ನು ಚಿರಂತನವಾಗಿಸಿವೆ. ’ತರಂಗ’ ಈ ಬರೆಹದ ಮೂಲಕ ಶ್ರದ್ಧಾಪೂರ್ವಕ ಭಾವಾಂಜಲಿ ಸಲ್ಲಿಸುತ್ತಿದೆ.


ಡಾ| ಎಸ್. ವಿ. ಪರಮೇಶ್ವರ ಭಟ್ಟರು (೧೯೧೪-೨೦೦೦ಫ್ ತನ್ನ ಅಳು ನುಂಗಿ ನಗುವ ಮನೋಧರ್ಮ, ಅತ್ಯುನ್ನತಿಯ ಅಧ್ಯಾಪನ-ಭಾಷಣ ಕಲೆ, ಶಿಷ್ಯ ವಾತ್ಸಲ್ಯ, ಹಳೆಯ ಛಂದೋರೂಪಗಳ ಸಾತತ್ಯ ಹಾಗೂ ಅಭಿಜಾತ ಪರಂಪರೆಯ ಸಂಸ್ಕೃತ ಕೃತಿಗಳ ಭಾಷಾಂತರಗಳಿಂದ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ.
೧೯೧೪ರ ಫೆಬ್ರವರಿ ಎಂಟರಂದು ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಸದಾಶಿವರಾಯ-ಲಕ್ಷ್ಮಮ್ಮ ದಂಪತಿಯ ಮಗನಾಗಿ ಜನಿಸಿದ ಎಸ್. ವಿ. ಪರಮೇಶ್ವರ ಭಟ್ಟರು, ಕಮಕೋಡು ನರಸಿಂಹ ಶಾಸ್ತ್ರೀ, ವಿ.ಸೀ., ಬಿ.ಎಂ.ಶ್ರೀ., ಟಿ.ಎಸ್. ವೆಂಕಣ್ಣಯ್ಯ , ತೀ.ನಂ.ಶ್ರೀ., ಡಿ.ಎಲ್. ನರಸಿಂಹಾಚಾರ್ಯ-ಇವರೆಲ್ಲರ ಶಿಷ್ಯನಾಗಿ ಕನ್ನಡ ಕಲಿತು. ಕನ್ನಡ ಎಂ.ಎ. ಅಧ್ಯಯನ ಮಾಡಿದರು. ೧೯೩೯ರಿಂದ ಕನ್ನಡ ಪ್ರಾಧ್ಯಾಪಕರಾದರು. ೧೯೬೯-೧೯೭೪ರ ಅವಧಿಯಲ್ಲಿ ಅವರು ಮಂಗಳುರಿನ ಸ್ನಾತಕೋತ್ತರ ಕೇಂದ್ರದ  ನಿದೇರ್ಶಕರಾಗಿದ್ದರು. ಅವರ ಸಮಗ್ರ ಕೃತಿಗಳ ಗ್ರಾತ್ರ., ವಿಷಯ ವೈವಿಧ್ಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ’ರಾಘಿಣೆ’, ’ಗಗನ ಚುಕ್ಕಿ’, ’ಅಂಚೆಯ ಪೆಟ್ಟಿಗೆ’, ’ಇಂದ್ರಗೋಪ’, ’ಸಂಜೆಮಲ್ಲಿಗೆ’-ಇವು ಅವರ್ ಕವನ ಸಂಕಲನಗಳು. ಅವರು ಭಾವ ಗೀತೆಗಳಿಗಿಂತ ಹೆಚ್ಚಾಗಿ ಮುಕ್ತಕಗಳ ಕವಿ. ’ಇಂದ್ರಚಾಪ’, ’ಸುರಗ ಸುರಹೊನ್ನೆ’, ’ಚಂದ್ರವೀಥಿ;, ’ಚಿತ್ರಪಥ’ ’ತುಂಬೆ ಹೂವು’,, ’ಮಳೆಬಿಲ್ಲು’-ಇವು ಅವರ ಮುಕ್ತಕ ಸಂಕಲನಗಳು. ಕಾಳಿದಾಸ, ಭಾಸ, ಹರ್ಷ, ಭವಭೂತಿ-ಇವರ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿರುವ ಪರಮೇಶ್ವರ ಭಟ್ಟರು ಕನ್ನಡದ ಪ್ರಧಾನ ಭಾಷಾಂತರಕಾರರಲ್ಲೊಬ್ಬರು. ಅಶ್ವಘೋಷನ ’ಬುದ್ಧಚರಿತೆ’, ’ಅಮರು ಶತಕ’, ಭತೃಹರಿಯ ’ ಶತಕತಯ . ಜಯದೇವನ ’ಗೀತಗೋವಿಂದ;, ಹಾಲರಾಜನ ಗಾಥಾ ಸಪ್ತಶತಿ’, ಲಕ್ಷ್ಮೀನೃಸಿಂಹ ಕವಿಯ ’ಕವಿಕೌಮುದಿ’-ಇವು ಅವರ  ಭಾಷಾಂತರ ಕೃತಿಗಳು. ’ಕಾಳಿದಾಸ ಮಹಾಸಂಪುಟ’ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿದೆ.

ಕವಿ ಪರಮೇಶ್ವರ ಭಟ್ಟಾರು ತನ್ನ್ ಯೌವನದ ದಿನಗಳಲ್ಲಿ ಕೆಲವು ಒಳ್ಳೆಯ ಭಾವಗೀತೆಗಳನ್ನು ಬರೆದರು. ’ಹೂವೊಂದರ ಕಥೆ’, ’ತಿಳೆಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು’ ಎಂದು ಆರಂಭವಾಗುವ ’ಒಂದು ರಾತ್ರಿ’, ತಿಳಿನಗೆ ಮೂಡಿಸುವ ಅತಿಥಿಗೆ ಇವು ಅವರ್ ಕೆಲವು ಪ್ರಸಿದ್ಧ ಭಾವಗೀತೆಗಳು.
ಭಾವಗೀತೆಗಳಿಂದ ಮುಕ್ತಕಗಳತ್ತ ಹೊರಳಿದ ಪರಮೇಶ್ವರ ಭಟ್ಟರ ’ಇಂದ್ರಚಾಪ’ ೧೯೬೫ರಲ್ಲಿ ಪ್ರಕಟವಾಯಿತು ’ ಇಂದ್ರಚಾಪದಲ್ಲಿ ೧೨೬೦ ಸಾಂಗತ್ಯ ರೂಪದ ಮುಕ್ತಕಗಳಿವೆ. ಪತ್ನಿಯ ದೀರ್ಘ ಕಾಲದ ಅನಾರೋಗ್ಯದಿಂದ ಪರಮೇಶ್ವರ ಭಟ್ಟರಾ ಸಾಂಸಾರಿಕ ಜೀವನ ಸಂಕಟ-ಸಮಸ್ಯೆಗಳಿಂದ ತುಂಬಿ ಹೋಯಿತು. ತನ್ನ ಗೋಳಿನ ಕತೆಯನ್ನು ಕವಿ’ ಇಂದ್ರ ಚಾಪದಲ್ಲಿ ಬಣ್ಣಿಸಿದ್ದಾರೆ- "ಸಂಸಾರದೊರಳಿಗೆ ವಿಧಿ ರುಬ್ಬು ಗುಂಡಾಗಿ ಚಟ್ನಿ ಮಾಡಿದನೆನ್ನ ತಿರುವಿ "ಒಲೆಯ ಮಂದಿರುವಾಗ ಪಂಪನ ಪದ್ಯವನ್ನ್ಯ್ ಅಕ್ಕಿ ತೊಳೆಯುವಾಗ ಕಾಳಿದಾಸನ ಕಾವ್ಯವನ್ನು ನೆನಪಿಸಿಕೊಳ್ಳುವ, ಸಂಸಾರ ತಾಪತ್ರಯಗಳಿಂದ ಕಂಗಾಲಾದ ಕವಿಯನ್ನು ’ಇಂದ್ರ ಚಾಪದಲ್ಲಿ ನಾವು ಕಾಣುತ್ತೇವೆ. ಗೃಹಸ್ಥ ಜೀವನ್ದ ಪ್ರೀತಿ ವಾತ್ಸಲ್ಯ್, ಲಾಲನೆ-ಪಾಲನೆ, ಸಂಯಮ -ಸಂಕಟಗಳು ’ಇಂದ್ರಚಾಪದಲ್ಲಿ ಮಿಂಚುತ್ತವೆ.
ಏಳುನೂರು ತ್ರಿಪದಿಗಳು ಸಂಕಲನವಾಗಿರುವ ’ಸುರಗಿ-ಸುರಹೊನ್ನೆ’ ೧೯೬೭ರಲ್ಲಿ ಪ್ರಕಟ್ವಾಯಿತು. ಇದರಲ್ಲಿ ಒಬ್ಬ್ಫ಼್ ಗೃಹಸ್ಥ ತನ್ನ  ಹೆಂಡತಿಯೊಂದಿಗೆ ಜೀವನದ ಕಟು-ಮಧುರ ಅನುಭವಗಳನ್ನು ಹಂಚಿಕೊಳ್ಳುತ್ತಾನೆ. ಕವಿ ಬರೆದಿರುವಾಮ್ಟೇ, "     ಹೂವಿನಂಥ ನಮ್ಮ ಮನಸ್ಸು ಬಾಡುತ್ತ ಬಂದರೆ ನಮ್ಮ ಆಯು ಮುಗಿಯುತ್ತ ಬಂದಂತೆಯೇ ಎಂಬ ತತ್ತ್ವ ಇಲ್ಲಿದೆ. ಬಾಡಿದರೂ ಬಣ್ಣವಳಿಸಿ ಹೋಗದ ಸುರಗಿಯಾಗಬೇಕು ನಮ್ಮ ಮನಸ್ಸು ಎಂಬುದು ಈ ನಾಯಕನ ನಿಲುವು. ಆದರೆ ’ಸುರಗಿ-ಸುರಹೊನ್ನೆಯ ಸರಸಿ ಮುದ್ದಣನ್ ಮನೋರಮೆಯಂತೆ ಸಂಭಾಷಣಾ ಚತುಗೆಯಲ್ಲ್, ಇವಳು ಮೌನಿ, ಇವಳ್  ಮೌನ, ಪುರುಷಪ್ರಧಾನ ವ್ಯವಸ್ಥೆಯ ವಿಷಯ ದಾಂಪತ್ಯವನ್ನು ಸೂಚಿಸುವಂತಿದೆ. ಪರಮೇಶ್ವರ ಭಟ್ಟರು ತಾನು ಪಿತ್ರಾರ್ಜಿತವಾಗಿ ಪಡೆದ ಅನುಭವ ಮತ್ತು ತನ್ನ ಸ್ವಯಾರ್ಜಿತ ಅನುಭವಗಳನ್ನು "ಸುರಗಿ-ಸುರಹೊನ್ನೆಯ ಮಾಲೆಯಲ್ಲಿ ಪೋಣೆಸಿದ್ದಾರೆ.-
ಹೊಸಗನ್ನಡದಲ್ಲಿ ’ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬಂಥ ಸೊಗಸಾದ ವಚನಗಳಾನ್ನು ಬರೆದಿರುವ ಕೆಲವೇ ಕವಿಗಳಲ್ಲಿ ಎಸ್. ವಿ.ಪಿ. ಅವರು ಪ್ರಮುಖರು. ’ಉಪ್ಪು ಕಾಡಲು, ’ಪಾಮರ, ಉಂಬರ’ ಅವರ ವಚನ್ ಸಂಕಲನಗಳು ’ಉಪ್ಪು ಕಡಲಿನ’ನ    ಹಲವು ವಚನಗಳಲ್ಲಿ ಕವಿ ಕಡಲಿನೊಂದಿಗೆ ತನ್ನ ಮನೋವ್ಯಥೆಯನ್ನು ತೋಡಿಕೊಳ್ಳುತ್ತಾರೆ. ಕಡಲಿನಲ್ಲಿ ಕಂತುತ್ತಿರುವ ಸೂರ್ಯನ ವಿವಿಧ ರೂಪಗಳನ್ನು ಚೇತೋಹಾರಿಯಾಗಿ ಬಣ್ಣಿಸುತ್ತಾರೆ. ಆತ್ಮಶೋಧನೆ, ವಿಚಾರವಿಮರ್ಶೆ, ವಿಡಂಬನೆ ಮತ್ತು ಎಲ್ಲಕ್ಕಿಂತ  ಮುಖ್ಯವಾಗಿ ಸಮಕಾಲೀನ ರೂಪಕಗಳಿಂದ ಈ ವಚನಗಳು ಗಮನ ಸೆಳೆಯುತ್ತವೆ. ಎಸ್.ವಿ.ಪಿ. ಅವರ ರೂಪಕ ನಿರ್ಮಾಣ ಪ್ರತಿಭೆಗೆ ದೃಷ್ಟಾಂತವಾಗಿ  ’ ಬ್ರೇಕಿಲ್ಲದ ಬೆಲ್ಲಿಲ್ಲದ ಸೈಕಲ್ , ಸ್ಕೂಟರು ನಡೆಸುವ ಗಂಡನ ಮುಖ್ -ಈ ವಚನಗಳನ್ನು ನೋಡ ಬಹುದು ."ಉಪ್ಪು ಕಡಲಿನ ವಚನಗಳಲ್ಲಿ ಆಧ್ಯಾತ್ಮಿಕ ಅನುಭವದ ಗೀಳಾಗಲಿ, ಭಕ್ತಿಯ ಅತಿರೇಕವಾಗಲಿ ಇಲ್ಲ. ಇಲ್ಲಿರುವುದು ’ಉಪ್ಪು ಕಡಲಿ’ನ ವಾಸ್ತವದ ಅನುಭವ ಲೋಕ.
ಡಾ| ಎಸ್. ವಿ. ಪರಮೇಶ್ವರರ ಕಾವ್ಯದ ಒಂದು ಪ್ರಧಾನ ಲಕ್ಷಣ ಹಾಸ್ಯ. ಅವರು ಹಾಸ್ಯರಸವನ್ನು ಕುರಿತು. "ಶೃಂಗಾರವೊಂದೇ ರಸವೆನ್ನುವವರಿದ್ದಾರೆ. ಕರುಣಾವೊಂದೇ ರಸವೆನ್ನು  ವವರಿದ್ದಾರೆ. ಶಾಂತವೊಂದನ್ನೇ ರಸವೆನ್ನುವವ ರಿದ್ದಾರೆ. ಹೀಗಿರುವಲ್ಲಿ ನನ್ನಂಥವರು ಒಬ್ಬಿಬ್ಬರಾದರೂ ಹಾಸ್ಯವೊಂದೇ ರಸವೆಂದರೆ ಯಾರು  ತಪ್ಪು ತೆಳಿಯಲಾಗದು" ಎನ್ನುತ್ತಿದ್ದರು. "ನೀವೊಂದು ಸೀರೆಯ ಎನಗಾಗಿ ತಂದಂದೆ ನಾ ಕಂಡೇ ಕನಸನು ನಿನ್ನೆ..." ಇಂಥ ತತ್ಕಾಲದಲ್ಲಿ ಪರಮಾನಂದವನ್ನು ನೀಡುವ, ’ಎಸ್.ವಿ.ಪಿ.  ಛಾಪು" ಇರುವ ನೂರಾರು ಹಾಸ್ಯ ಮುಕ್ತಕಗಳನ್ನು ಅವರು ಬರೆದಿದ್ದಾರೆ. ’ಇಂದ್ರಚಾಪ’, ’ ಚಿತ್ರಪಥೆಗಳಾಲ್ಲಿ  ಭಟ್ಟರ ಹಾಸ್ಯ ಮುಕ್ತಕಗಳು ಸಿಗುತ್ತವೆ. ತನ್ನ ಖಾಸಗಿ ಬದುಕಿನ ರಂಪ, ರಗಳೆ. ಒಂಟಿತನಗಳನ್ನು ಮರೆಯಲು ಭಟ್ಟಾರು ಹಾಸ್ಯ ಕ್ನ್ಯೆಯನ್ನು ಗೆಳತಿಯನ್ನಾಗಿ ಮಾಡಿಕೊಂಡರು. ’ಅತಿಥಿಗೆ ಕವನದಲ್ಲಿ ನಗರದ ಕೆಳಮಧ್ಯಮ ವರ್ಗಡ ಗೃಹಸ್ಥನೊಬ್ಬನ ಪಾಡು-ಹಾಡಾಗಿದೆ- "ಹೀಗೆ ಹೇಳಾದ ಬರುವಿರೆಂದೆಮಗೆ ಗೊತ್ತೆ. ಎರಡು ದಿನ ತಡ ಮಾಡಿ ಬರಬಾರದಿತ್ತೆ?" ಎಸ್. ವಿ.ಪಿ. ಅವರ ’ಕಣ್ಣು ಮುಚ್ಚಾಎ’ ಎಂಬ ಸ್ವರಚಿತ ಒಗಟುಗಳ ಸಂಕಲನದಲ್ಲಿರುವ ಒಂದು ಒಗಟು ಹೀಗಿದೆ-’ಮಾರಿ ಗುಡೀಲಿ ಮಾರುತಿರಾಯ’. ಇದಕ್ಕೆ ಅವರ ಉತ್ತರ ’ಸಂಸಾರದ ಕಷ್ಟದಲ್ಲಿ ಸಿಕ್ಕಿದ ಕವಿ’ ಎಂದು.

 ದೇಶೀ ಪ್ರಜ್ಞೆ

ಕನ್ನಡದ ನವ್ಯ ಸಾಹಿತಿಗಳು ಪಾಶ್ಚಾತ್ಯ ಸಾಹಿತ್ಯದಿಂದ ಪ್ರಭಾವಿತರಾಗುತ್ತಿದ್ದಾಗ ಪರಮೇಶ್ವರ ಭಟ್ಟರು ನಮ್ಮ ನಾಡಿನ ಪೂರ್ವಸೂರಿಗಳ್ ಆಪೂರ್ವ ಕೃತಿಗಳನ್ನು  ಅಧ್ಯಯನ ಮಾಡಿದರು. ಮಹಾಪರಂಪರೆಯ ಅಭಿಜಾತ ಕೃತಿಗಳನ್ನು -ಕಾಳಿದಾಸ, ಭಾಸ, ಭವಭೂತಿ, ಅಶ್ವಘೋಷರ ಕೃತಿಗಳಾನ್ನು ಭಾಷಾಂತರಿಸಿದರು. ಇವು ನವವಸಾಹತುಶಾಹಿ ಸಿದ್ಧಾಂತಗಳಿಂದ ’ಪಶ್ಛಿಮ ಬುದ್ಧಿ’ಗಳಾಗುವುದರ ವಿರುದ್ಧ ಎಸ್. ವಿ.ಪಿ. ಅವರ ಮೌನ ಕಾರ್ಯಾಚರಣೆಯಾಗಿದ್ದುವು... "ಹಾಗಾಗಿ ಮೂಲಕ್ಕೂ ಹೊಸ ಕಾಲದ ಜನಕ್ಕೂ ಕಡಿಯಲಿರುವ ಸಂಪರ್ಕ ಕಡಿದು ಹೋಗದಿರಲಿ" ಎನ್ನುವ ಅವರ ಹಾರೈಕೆಯಲ್ಲಿ ಸಾಂಸ್ಕೃತಿಕ ಸಾತತ್ಯವನ್ನು ಕುರಿತ ಜವಾಬ್ದಾರಿ, ಎಚ್ಚರಗಳಿವೆ. ತನ್ನ ಭಾಷಾಂತರದ ಉದ್ದೇಶ ಮಾರ್ಗಡ ಕುರಿತು ಅವರು, "ಒಟ್ಟಿನಲ್ಲಿ ಇಲ್ಲಿ ಮೂಲದಲ್ಲಿ ಇದ್ದುದನ್ನು ಬಿಡದೆ, ಇಲ್ಲದುದನ್ನು ಸೇರಿಸದೆ, ಸಂಸ್ಕೃತದ ಭಾವ ತನ್ನ ಮೂಲ ಅಭಿವ್ಯಕ್ತಿಯ ಸೊಗಸನ್ನು ಇಟ್ಟುಕೊಂಡೇ ಕನ್ನಡದಲ್ಲಿ ಒಡಮೂಡುವಂತೆ ಮಾಡುವುದು ನನ್ನ ಉದ್ದೇಶ" ಎಂದಿದ್ದಾರೆ. ’ಮೇಘದೂತ’ದ ಬೇಂದ್ರೆಯವರಂತೆ , ಬಾಣಭಟ್ಟನ ’ಕಾದಂಬರಿ’ಯ ಬನ್ನಂಜೆ ಗೋವಿಂದಾಚಾರ್ಯರಂತೆ ಮೂಲ ಕಾವ್ಯದ ಪುನರ್ ಸೃಷ್ಟಿ ಪರಮೇಶ್ವರ ಭಟ್ಟರ ಉದ್ದೇಶವಲ್ಲ. ಒಂದಕ್ಕೊಂದು ಹೆಣೆದುಕೊಳ್ಳುವ ಸಂಸ್ಕೃತದ ನಾಗಬಂಧದ ಶೈಲಿಯನ್ನು ಉಳಿಸಿಕೊಳ್ಳಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಗರ್ಭ ಗುಡಿಯ ಮೂರ್ತಿಯ ಪ್ರಭಾವಳಿ ಉತ್ಸವ ಮೂರ್ತಿಯಲ್ಲೂ ಇರುತ್ತದೆ.

ಅಪರೂಪದ ರಚನೆಗಳುಿ
ತ್ರಿಪದಿ, ಸಾಂಗತ್ಯ, ಏಳ-ಕನ್ನಡದ ಇಂಥ ದೇಶೀ ಛಂದೋಪ್ರಕಾರಗಳಲ್ಲಿ ನಮ್ಮ ಕಾಲದ ಅನುಭವ ವಿಶೇಷಗಳನ್ನು ಬರೆಯುತ್ತ, ಕನ್ನಡ ಭಾಷೆಯ ಜತೆ ಕವಿ ಪರಮೇಶ್ವರ ಭಟ್ಟಾರು ನಡೆಸಿದ ಸೃಜನಾತ್ಮಕ ಹೋರಾಟ್ ಮಹತ್ತ್ವದ್ದು.ಪ್ರವಾಹದ ವಿರುದ್ಧ ಈಜುವ ಈ ಸಾಹಸದಿಂದಾಗಿ ಸಾಹಿತ್ಯ ಪರಂಪರೆಯಲ್ಲಿ ಹಳತು-ಹೊಸತರ ಮುಖಾಮುಖಿ ಸಾಧ್ಯವಾಗಿದೆ.ಜನಪದ ಸಾಹಿತ್ಯದಲ್ಲಿ ಮಾತ್ರ ಲಭ್ಯವಿರುವ ಎರಡು ವಾದಗಳ ಏಳೆ ಎಂಬ ಪ್ರಾಚೀನ ದೇಶೀ ವಂದೋರೂಪದಲ್ಲಿ ’ತುಂಬೆಹೂವು’ ಎಂಬ ಅಪೂರ್ವ ಕೃತಿಯೊಂದನ್ನು ಅವರು ರಚಿಸಿದ್ದಾರೆ. ಈ ಛಂದೋಪ್ರಯೋಗಗಳಿಂದಾಘಿ ಅವರ ಕಾವ್ಯದಲ್ಲಿ ಏಕಾತಾನದ ದೋಷವಿಲ್ಲ. ಸಂಸ್ಕೃತ ಕೃತಿಗಳ ಭಾಷಾಂತರಗಳಲ್ಲಿಯೂ ಅವರು ಹಲವು ವಿನೂತನ ಛಂದೋ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ.
’ ಕವಿಗೆ ಜಾಹೀರಾಟು ಬೇಕು’ ಎಂದ ಕವಿ ಪರಮೇಶ್ವರ  ಭಟ್ಟರ ಕೃತಿಗಳು . ಗಂಭೀರ ಚರ್ಚೆಗೆ ಒಳಗಾಗದಿರುವುದು ಒಂದು ವಿಪರ್ಯಾಸ. ತನ್ನ ಕಾಲದ ಸಹೃದಯರ ಉಪೇಕ್ಷೆಯನ್ನು ಅಲಕ್ಷಿಸಿ, ಆತ್ಮವಿಶ್ವಾಸದಿಂದ ನಾಟಕಗಳನ್ನು ಬರೆದ ಸಂಸ್ಕೃತ ನಾಟಕಕಾರ ಭವಭೂತಿಯಂತೆ ಪರಮೇಶ್ವರ ಭಟ್ಟರೂ ನಿರ್ಲಿಪ್ತರಾಗಿ ಅಸಾಧಾರಣ ಕೃತಿಗಳನ್ನು ನೀಡಿದರು. ಪಂಪ, ರನ್ನ, ನಾಗವರ್ಮ, ಕುಮಾರವ್ಯಾಸರಂಥ ಕನ್ನಡ ಕವಿಗಳು ಸಂಸ್ಕೃತ ಕೃತಿಗಳನ್ನು ರೂಪಾಂತರಿಸಿದವರು. ನೇರ ಭಾಷಾಂತರ ಮಹತ್ತ್ವ-ಮಿತಿಗಳ ಕುರಿತು ಕನ್ನಡದಲ್ಲಿ ಸಾಕಷ್ಟು ಚರ್ಚೆ ಆಗಿಲ್ಲ. ಇಂಗ್ಲಿಷ್ ಮತ್ತು ಯೂರೋಪಿನ ಸಾಹಿತ್ಯದ ಪ್ರಭಾವ ದಟ್ಟವಾಗಿದ್ದ ನವ್ಯದ ಅಬ್ಬರದ ದಿನಗಳಲ್ಲಿ ಪರಮೇಶ್ವರ ಭಟ್ಟರು ಸಂಸ್ಕೃತದ ಕಾವ್ಯ-ನಾಟಕಗಳನ್ನು ಭಾಷಾಂತರಿಸಿದರು. ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕನ್ನಡ-ಸಂಸ್ಕೃತಗಳನ್ನು ತೌಲನಿಕವಾಗಿ   ಜತೆಯಾಗಿ   ಅಧ್ಯಯನ ಮಾಡುವ ವ್ಯವಸ್ಥೆ ಇಲ್ಲ. ಹಾಸ್ಯ ಪ್ರಧಾನವಾದ ಮುಕ್ತಕಗಳು ವ್ಯಾಖ್ಯಾನ ನಿರಪೇಕ್ಷವಾದುವುಗಳು. ಇಂಥ ಕಾರಣಗಳಿಂದಾಗಿ ಪರಮೇಶ್ವರರ ಕೃತಿಗಳ ಸರಿಯಾದ ವಿಮರ್ಶೆ  ಆಗಿಲ್ಲ. ಡಾ| ಎಸ್.ವಿ. ಪರಮೇಶ್ವರ ಭಟ್ಟರು ನಮ್ಮ ನಾಡಿನ ಮಹಾ ಪರಂಪರೆ ಮತ್ತು ಇಂದಿನ ತಲೆಮಾರಿನ ನಡುವಿನ ಸೇತುಬಂಧವಾಗಿದ್ದರು.



ಮುರಳೀಧರ ಉಪಾಧ್ಯ, ಹಿರಿಯಡಕ


No comments:

Post a Comment