stat CounterThursday, August 13, 2020

ಮುರಳೀಧರ ಉಪಾಧ್ಯ ಹಿರಿಯಡಕ - ಗೌಡ ಜನಾಂಗದ ಇತಿಹಾಸ

ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿಕ ಎಂಬ್ ಮೌಲಿಕ ಗ್ರಂಥ ಪ್ರಕಟವಾಗಿದೆ.
ವ್ಯಕ್ತಿಯ ಸ್ಥಾನಸೂಚಕವಾಗಿದ್ದ ಗೌಡ ಶಬ್ದ ಮುಂದೆ ಜಾತಿಸೂಚಕವಾಗಿದೆ. ಸುಳ್ಯದ ಸುತ್ತಮುತ್ತಲಿನ ಗೌಡರು ಹಾಸನ್ ಜಿಲ್ಲೆಯ ಐಗೂರು ಪ್ರದೇಶದಿಂದ ಹದಿನೈದು-ಹದಿನಾರನೆಯ ಶತಮಾನದಲ್ಲಿ ವಲಸೆ ಬಂದವರು ಎಂದು ಸಂಶೋಧಕರು ಊಹಿಸುತ್ತಾರೆ.
’ಅಭಿನಂದನ-ಅಭಿವಂದನ’ಎಂಬ ಈ ಗ್ರಂಥದ ಮೊದಲ್ ಭಾಗದಲ್ಲಿ ’ಆದಿಚುಂಚನ ಗಿರಿಯ್ ಸಾಂಸ್ಕೃತಿಕ ಅವಲೋಕನ  ಡಾ| ಕೆ. .ರಾಜೇಶ್ವರಿ  ಗೌಡ),    ಗೌಡ  ಜನಾಂಗದ ಮೇರು ವ್ಯಕ್ತಿ, ಶ್ರೀ ಕುರುಂಜಿ ವೆಂಕಟ್ರಮಣ ಗೌಡಪ್ರೋ| ಡಿ. ಜವರೇ ಗೌಡ) ಮತ್ತು ’ವಿದ್ಯಾ ನಗರ  ಕುರುಂಜಿಬಾಗ್’ (ಪೂವಪ್ಪ ಕಣಿಯೂರು, ಕೆ.ವಿ.ದಾಮೋದರ ಗೌಡ)ಎಂಬ ಮೂರು ಲೇಖಾನ್ ಗಳಿವೆ.
’ಗೌಡ ಜನಾಂಗದ ಹಿನ್ನೆಲೆ, ಇತಿಹಾಸ, ಅನನ್ಯತೆ’ ಎಂಬ ಎರಡನೆಯ ಭಾಗದಲ್ಲಿ ಏಳು ಲೇಖನಗಳಿವೆ.’ಅಮರ ಸುಳ್ಯದ ದಂಗೆಯಿಂದಾಗಿ ಗೌಡರು ಬ್ರಿಟಿಷರ ಅವಕೃಪೆಗೆ ತುತ್ತಾದುದನ್ನು ಎನ್.ಎಸ್. ದೇವಿಪ್ರಸಾದ್ ಸಂಪಾಜೆ ಅವರು ಚಾರಿತ್ರಿಕ ದಾಖಲೆಗಳೊಂದಿಗೆ ವಿವರಿಸಿದ್ದಾರೆ. ಡಾ| ಪುರುಷೋತ್ತಮ ಬಿಳಿಮಲೆ ಅವರು’ ಸುಳ್ಯ ಪರಿಸರದ ಗೌಡರು’ ಎಂಬಲೇಖನದಲ್ಲಿ ಗೌಡರ ಕುಟುಂಬ ಪದ್ಧತಿ, ಒಳಾಡಳಿತ, ಜೀವನಾವರ್ತನದ ಆಚರಣೆಗಳು ವಾರ್ಷಿಕಾವರ್ತನದ ಆಚರಣೆಗಳು ಹಾಗೂ ಗೌಡರ ಅನನ್ಯ ಧಾರ್ಮಿಕ, ಪ್ರದರ್ಶನ  ಕಲೆ ’ಸಿದ್ಧವೇಷವನ್ನು ಅವಲೋಕಿಸಿದ್ದಾರೆ ’ಈ ವಿಭಾಗದಲ್ಲಿರುವ ’ನಾಮಧಾರಿ ಒಕ್ಕಲಿಗರು’ (ಡಾ| ಅಂಬಳಿಕೆ ಹಿರಿಯಣ್ಣ), ’ಮಲೆನಾಡು ಶೈವ ಒಕ್ಕಲಿಗರು ಅಥವಾ ವಿಭೂತಿ ಗೌಡರು’ (ಡಾ| ವೈ.ಸಿ. ಭಾನುಮತಿ)’ಗಂಗಡಿಕಾರ ಒಕ್ಕಲಿಗರು’ (ಡಾ| ನಲ್ಲೂರು ಪ್ರಸಾದ್), ’ಕನ್ನಡ ನಾಡಿನ ಒಕ್ಕಲಿಗರು’ (ಪೋ|ಹ.ಕ ರಾಜೇ ಗೌಡ)’ಶಾಸನೋಕ್ತ ಒಕ್ಕಲಿಗ ವೀರರು (ಪೋ|ಡಿ.ಕೆ. ರಾಜೇಂದ್ರ) ಲೇಖನಗಳಲ್ಲಿ  ಸಂಶೋಧನಾತ್ಮಕ ಒಳನೋಟಗಳಿವೆ. ಗೌಡ ಜನಾಂಗ-ಕೃಷಿ, ಸಾಹಿತ್ಯ, ಸಂಸ್ಕೃತಿ ಎಂಬ ಮೂರನೆಯ ಭಾಗದಲ್ಲಿ ಆರು ಲೇಖನಗಳಿವೆ. ಗೌಡರ ಕೃಷಿಲೋಕದ ಕುರಿತು ಎ.ಕೆ. ಹಿಮಕರ, ಗೌಡರ ಐನ್ ಮನೆಗಳ ಕುರಿತು ಪೂವಪ್ಪ ಕಣಿಯೂರು, ಗೌಡ ಜನಾಂಗದ ಕುಣಿತಗಳ ಬಗ್ಗೆ ಯದುಪತಿ ಗೌಡ, ಗೌಡರ ಜನಪದ ಕ್ಸ್ತೆಗಳ್ ಬಗ್ಗೆ ಡಾ| ವಿಶ್ವನಾಥ ಬ್ದಿಕಾನ, ’ಕನ್ನಡದ ಕಟ್ಟಾಳು, ಕೊಳಂಬೆ ಪುಟ್ಟಣ್ಣ ಗೌಡರ ಕುರಿತು ಪ್ರೊ| ಎಂ. ಶಿವಣ್ಣ ನೆಲಮನೆ-ಲೇಖನಗಳನ್ನು ಬರೆದಿದ್ದಾರೆ. ಸಂಜೀವ ಕುದ್ರಾಜೆಯವರು’ ದಕ್ಷಿಣ ಕನ್ನಡದ ಗೌಡ ಜನಾಂಗದ ಸಾಹಿತಿಗಳು’ ಎಂಬ ಲೇಖನದಲ್ಲಿ ಕೊಳಂಬೆ, ಟಿ.ಜಿ.ಮೂಡೂರು, ಡಾ| ಕುಶಾಲಪ್ಪ ಗೌಡ, ಡಾ| ಸುಕುಮಾರ  ಗೌಡ, ಕುತ್ಯಾಳ ನಾಗಪ್ಪ ಗೌಡ(ಕಿರಣ್), ಡಾ| ಚಿದಾನಂದ ಕೊಳಂಬೆ, ಡಾ| ಚಿನ್ನಪ್ಪ ಗೌಡ, ಡಾ| ಬಿಳಿ ಮಲೆ, ಜಿತುನಿಡ್ಲೆ, ಕೆ.ಆರ್. ವಿದ್ಯಾಧರ, ಶ್ರೀಮತಿ ಜಯಮ್ಮ ಚಟ್ಟಿಮಾಡ ಮತ್ತಿತರ ಸಾಹಿತಿ-ವಿದ್ವಾಂಸರನ್ನು ಪರಿಚಯಿಸಿದ್ದಾರೆ.
ಡಾ| ಚಿನ್ನಪ್ಪ ಗೌಡರು ಪ್ರಸ್ತಾವನೆಯಲ್ಲಿ ಬರೆದಿರುವಂತೆ ಜನಾಂಗವೊಂದನ್ನು ಕುರಿತು ಗ್ರಂಥವನ್ನು ಸಂಪಾದಿಸುವುದು ಕಷ್ಟದ ಮತ್ತು ಸೂಕ್ಷ್ಮದ ಕೆಲಸ. ಈ ಜವಾಬ್ದಾರಿಯನ್ನು ಡಾ|ಗೌಡರು ಚೆನ್ನಾಗಿ ನಿರ್ವಹಿಸಿದ್ದಾರೆ. ಇದು ಗೌಡ ಜನಾಂಗದ ಯುವ ಪೀಳಿಗೆಯವರು ಮಾತ್ರವಲ್ಲದೆ, ಜಾನಪದ ವಿದ್ವಾಂಸರು, ಸಾಮಾಜಿಕ ಇತಿಹಾಸದಲ್ಲಿ ಆಸಕ್ತರಾದವರು ಗಂಭೀರವಾಗಿ ಓದಬೇಕಾದ ಗ್ರಂಥ.
ಮುರಳೀಧರ ಉಪಾಧ್ಯ ಹಿರಿಯಡಕ
ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ
ಸಂಪಾದಕರು:ಡಾ|ಕೆ.ಚಿನ್ನಪ್ಪ ಗೌಡ
ಪ್ರ: ಬೆಳ್ಳಿಹಬ್ಬ ಆಚರಣಾ ಸಮಿತಿ, ಒಕ್ಕಲಿಗರ
ಯಾನೆ ಗೌಡರ ಸೇವಾ ಸಂಘ, ಮಂಗಳೂರು
ಮೊದಲ ಮುದ್ರಣ:೨೦೦೩ ಬೆಲೆ:ರೂ.೨೦೦.

No comments:

Post a Comment