ವೆಂಕಟಪ್ಪ ಆರ್ಟ್ ಗ್ಯಾಲರಿ: ಹೀಗೆ ರಂಪ ಬೇಡ: ಇದು ಎಲ್ಲರೂ ಕೂತು ಮಾತನಾಡಿ ಬಗೆಹರಿಸಬಹುದಾದ ಸಂಗತಿ. ಆದರೆ ಮೊದಲ ಜವಾಬ್ದಾರಿ ಸರ್ಕಾರದ್ದು. ಏಕೆಂದರೆ, ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಒಳಗೊಂಡಂತೆ ರಾಜ್ಯದ 46 ಪ್ರತಿಷ್ಠಿತ ಪ್ರವಾಸಿ ತಾಣಗಳನ್ನು ಬಂಡವಾಳ ಹೂಡಲು ಮುಂದೆ ಬರುವ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿ, ಅವುಗಳ ಸುಧಾರಣೆ ಹಾಗೂ ನಿರ್ವಹಣೆಗಾಗಿ 5 ರಿಂದ 10 ವರ್ಷಗಳ ಕಾಲಾವಧಿಗೆ ಆ ಸಂಸ್ಥೆಗಳ ಉಸ್ತುವಾರಿಗೆ ಬಿಡಬಹುದು ಎಂಬ ನೀತಿಯನ್ನು 2014ರಲ್ಲಿ ರೂಪಿಸಿ 2015ರಲ್ಲಿ ಅವುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ನಮ್ಮ ಸರ್ಕಾರವೇ.
No comments:
Post a Comment