stat Counter



Friday, July 17, 2020

ಮುರಳೀಧರ ಉಪಾಧ್ಯ ಹಿರಿಯಡಕ - ಗೌರೀಶ ಕಾಯ್ಕಿಣಿ ಅವರ ಚಿಂತನಶೀಲ ಗದ್ಯ

ಗೌರೀಶ ಕಾಯ್ಕಣಿ (ಜನನ-೧೯೧೨) ಅವರ ಕೃತಿಗಳ ಹರಹು ಹಾಗೂ ವೈವಿಧ್ಯಗಳನ್ನು ಕಂಡು ವಿಸ್ಮಯವಾಗುತ್ತದೆ. ವಿಷ್ಣು ನಾಯ್ಕರು ಸಂಪಾದಿಸುತ್ತಿರುವ ಗೌರೀಶ ಕಾಯ್ಕಿಣೆಯವರ ಸಮಗ್ರ ಕೃತಿಗಳ ಏಳು ಸಂಪುಟಗಳು ಈಗಾಗಲೇ ಪ್ರಕಟವಾಘಿವೆ. ಕಾಯ್ಕಿಣೆಯವರ ’ವಿಚಾರವಾದ’, ’ನಾಸ್ತಿಕನು ಮತ್ತು ದೇವರ್’, ’ಪಶ್ಚಿಮದ ಪ್ರತಿಭೆ’, ಕಾವ್ಯ ಸಾಹಿತ್ಯ ವಿಮರ್ಶೆ, ನಾಟಕಗಳು, ರೂಪಕಗಳು-ಈ ಸಂಪೂಟದಲ್ಲಿ ಸೇರಿವೆ.
ಇದೀಗ ಪ್ರಕಟವಾಗಿರುವ ಗೌರೀಶ ಕಾಯ್ಕಿಣೆ ಸಮಗ್ರ ಸಾಹಿತ್ಯದ ಎಂಟನೆಯ ಸಂಪುಟದಲ್ಲಿ ಕಾಯ್ಕಿಣೇಯವರ ಸಮಗ್ರ ಸಾಹಿತ್ಯದ ಎಪ್ಪತ್ತೈದು ಪತ್ರಿಕಾ ಲೇಖನಗಳಿವೆ. ದಿನಕರ ದೇಸಾಯಿಯವರ ’ಜನಸೇವಕ’ ಸಾಪ್ತಾಹಿಕದಲ್ಲಿ  ಗೌರೀಶ ಕಾಯ್ಕಿಣೆಯವರ ಒಂದು ಸಾವಿರಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಕರ್ನಾಟಕದ ಇತರ ಪತ್ರಿಕೆಗಳಿಗಾಗಿ ಅವರು ಸಾವಿರಾರು  ಲೇಖನಗಳನ್ನು ಬರೆದಿದ್ದಾರೆ. "ಹೀಗಾಗಿ ಅವರ ಪತ್ರಿಕಾ ಲೇಖನಗಳ ಸಮಗ್ರ ಸಂಪುಟಗಳ ವಿಚಾರವನ್ನು ಬಿಟ್ಟುಕೊಟ್ಟು ಮಾದರಿಗಾಗಿ ಆಯ್ದುಕೊಂಡ ಲೇಖಾನಗಳನ್ನು ಎರಡು ಸಂಪುಟಗಳಲ್ಲಿ (೮ ಮತ್ತು ೯ನೆಯ ಸಂಪುಟಗಳಲ್ಲಿ)ಆಳವಡಿಸಿ ಓದು ಗರಿಗೆ ಒದಗಿಸುವ ಮಟ್ಟಿಗೆ ನನಗೆ ನಾನೇ ಒಂದು ಮಿತಿಯನ್ನು ಹಾಕಿಕೊಂಡಿದ್ದೇನೆ" ಎಂದು ಸಂಪಾದಕರು ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ತರ ಭಾರತದಅ ರಾಜಕೀಯದ ಅನೇಕ ಸಂಗತಿಗಳನ್ನು ಕಾಯ್ಕಿಣೇಯವರು ತನ್ನ ಲೇಖನಗಳಲ್ಲಿ ಚರ್ಚಿಸಿದ್ದಾರೆ. ’ಗಾಂಧೀ ಸ್ಮರಣೆ ಪ್ರಾಮಾಣಿಕವೇ?’, ’ ಪಕ್ಷ ರಾಜಕಾರಣದ ವ್ಯಾಕರಣ’, ’ಪಕ್ಷಾಂತರದ ಪಕ್ಷವಾತಕ್ಕೆ ಯಾವ ಮದ್ದು?’, ’ಸಮಾಜವಾದಿಗಳ ಧೋರಣೆಯಲ್ಲಿ ನಿಖರತೆ ಏಕೆ ಇಲ್ಲ?’, ’ಹಿಂದೂ ವಿಶ್ವ ಮತ್ತು ವಿಶ್ವಹಿಂದೂ ಪರಿಷತ್ತು’,- ಇಂಥ ಹಲವು ಲೇಖನಗಳು ಈ  ಸಂಪುಟದಲ್ಲಿವೆ. ಇತಿಹಾಸದ ವೈಭವೀಕರಣದಲ್ಲಿ ಕಾಯ್ಕಿಣೆಯವರಿಗೆ ಆಸಕ್ತಿ ಇಲ್ಲ. ಜವಹರಲಾಲ ನೆಹರೂ ಅವರ ಈಶ್ವರ ನಿರಾಸಕ್ತಿ ಲೌಕಿಕವಾದಲ್ಲಿ ಅವರಿಗೆ ನಂಬಿಕೆ ಓದು ಇದೆ. ೧೯೯೬ ರಲ್ಲಿ ಪ್ರಕಟವಾದ ’ಶ್ರೀರಾಮ ಜನ್ಮಭೂಮಿ ಹೆಸರಿನಲ್ಲಿ ಮುಂದೆ ವಾದ ಭೂಮಿಗಳನ್ನು ಪರಿಶೀಲಿಸಿ,ವಾಗಿಯೂ ನಮ್ಮ ಭಾವನಾ ಶ್ರದ್ಧಾಭಕ್ತಿಗಳ  ಸಂತೋಷಕ್ಕೆ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಎಲ್ಲಿಯೂ ಪ್ರಶಸ್ತ ಸ್ಥಳಾದಲ್ಲಿ ಶ್ರೀರಾಮನ  ಭವ್ಯ ಮಂದಿರವನ್ನು ಕಟ್ಟಬಹುದು" ಎಂದಿದ್ದಾರೆ. "ದಲಿತ ವರ್ಗದ ವಿಮೋಚಬೆ’, ’ಅಸ್ಪಶ್ಯತೆ ಮತ್ತು ಆದರ  ನಿವಾರಣೆ’, ’ಜಾತೀಯ ಸತ್ಯ ಮಾನವೀಯ ನ್ಯಾಯ’, ’ಮತಾಂತರ ಮತ್ತು ಹಿಂದುತ್ವ’- ಈ ಲೇಖನಗಳಲ್ಲಿ ಕಾಯ್ಕಣೆಯವರ ಪುರೋಗಾಮಿ ಸಾಮಾಜಿಕ ನಿಲುವುಗಳನ್ನು ಕಾಣುತ್ತೇವೆ.೧೯೭೭ರಲ್ಲಿ ಬರೆದ ’ಹಿಂದುಳಿದ ಸಮಾಜದಲ್ಲಿ ಬುದ್ಧಿಜೀವೆಗಳ ಪಾತ್ರ’ ಎಂಬ ಲೇಖನದಲ್ಲಿ ಕಾಯ್ಕಿಣೆಯವರು ಕೊಂಕಣೆ ಮೀನುಗಾರ ಸಮಾಜದ (ಖಾರ್ವಿ) ಸಮಸ್ಯೆಗಳನ್ನು ಚರ್ಚಿಸಿದ್ದಾರೆ.

ಕನ್ನಡ, ಸಂಸ್ಕೃತ, ಇಂಗ್ಲಿಷ್ ಮರಾಠಿ, ಕೊಂಕಣೆಗಳನ್ನು ಬಲ್ಲ ಕಾಯ್ಕಣೆಯವರು ಹಿರಿಯ ಬಹುಭಾಷಾ ವಿದ್ವಾಂಸರಲ್ಲೊಬ್ಬರು. ಮರಾಠಿಗೆ ಸೇರಿದ ಕನ್ನಡದ ಶಬ್ಧಗಳು’, ’ಕೊಂಕಣೆಯ ಮೇಲೆ ಕನ್ನಡದ ಪ್ರಭಾವ’, ’ಕೊಂಕಣೆ ಕೆಲವು ಪ್ರಮೇಯಗಳು’, ಸಂಸ್ಕೃತದ ಸಂಕಟ-ಇಂಥ ಲೇಖನಗಳು ಗಮನಸೆಳೆಯುತ್ತದೆ. ಪದ ಪರಂಪರೆಯ ಅಧ್ಯಯನಕ್ಕೆ ಕಾಯ್ಕಿಣೆಯವರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಕಾಯ್ಕಿಣೆಯವರು ನೀಡಿರುವ ಕೆಲವು ಮೌಲಿಕ ಸಲಹೆಗಳು ಹೀಗಿವೆ."ಅನಂತರ ಸಂಸ್ಕೃತವನ್ನು ಬಹಳಷ್ಟು ಸುಗಮ, ಸುಬೋಧಗೊಳಿಸಬೇಕು. ಉದಾಹರಣೆಗೆ  ಅದರಲ್ಲಿಯ ಆತ್ಮನೆ, ಪರಸ್ಮೈ ಪದಗಳ ತಲೆಗೆಡಿಸುವ ತೊಡಕು ತೊಡೆದು ಹಾಕಬೇಕು. ಈ ಭೇದದ ಮರ್ಮ ಮೃತವಾಘಿ ಶತಮಾನಗಳೇ ಸಂದಿವೆ. ಅವುಗಳಿಗೆ ಯೋಗ್ಯ ಅಂತ್ಯೇಷ್ಟಿ ಆಗಬೇಕು. ಜತೆಗೆ ದ್ವಿವಚನವೂ ಹೋಗಬೇಕು. ಹಾಗೆಯೇ ಸಂಸ್ಕೃತ ಶಬ್ದಗಳ ಲಿಂಗಭೇದ, ವ್ಯಂಜನಾಂತಗಳ ಶಬ್ಧಗಳ ವಿಭಕ್ತಿ ಕ್ರಮ ಇತ್ಯಾದಿ ಧೃತಿಗೆಡಿಸುವ ಕಸರತ್ತು. ಹೀಗೆ  ಸಂಸ್ಕೃತ ವ್ಯಾಕರಣ ಬಹಳಷ್ಟು ಸರಳವಾಗಬೇಕು."

ಗೌರೀಶ ಕಾಯ್ಕಿಣೆಯವರ ತೌಲನಿಕ ಅಧ್ಯಯನಾಸಕ್ತಿ ಸಂಶೋಧನ ಪ್ರವೃತ್ತಿಗಳಿಗೆ ಉದಾಹರಣೆಯಾಗಿ ’ ಕುಮಾರವ್ಯಾಸ ಮತ್ತು ಭಗವದ್ಗೀತೆ;, ’ಪ್ರಾಚೀನ ಭಾರತದಲ್ಲಿ ವಿಮಾನ ವಿದ್ಯೆ ಇತ್ತೆ?, ’ಭಗವದ್ಗೀತೆ-ಕೆಂಪು, ನೀಲಿ, ಕಪ್ಪು’, ’ದ್ರೌಪದಿ ವಸ್ತ್ರಾಪ ಹರಣ-ನಿಜವಾಗಿ ನಡೆದದ್ದೇನು?’, ’ಭಾರತೀಕ ಸಂಸ್ಕೃತಿ ಆಧ್ಯಾತ್ಮಿಕವೇ?-ಈ ಲೇಖನಗಳನ್ನು ಗಮನಿಸಬೇಕು. ಸಂಗೀತ, ರಂಗಭೂಮಿ ಹಾಗೂ ಯಕ್ಷಗಾನಕ್ಕೆ ಸಂಬಂಧಪಟ್ಟ ಕೆಲವು ಲೇಖನಗಳು ಈಅ ಸಂಪುಟದಲ್ಲಿವೆ.
ಡಾ| ಗೌರೀಶ ಕಾಯ್ಕಿಣೇಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಏಕವ್ಯಕ್ತಿ ವಿಶ್ವವಿದ್ಯಾನಿಲದಂತೆ ಕೆಲಸ ಮಾಡಿದ್ದಾರೆ. ಅವರ ಗದ್ಯ ಚಿಂತನೆಗೆ ಸಾಣೆ ಹಿಡಿವ ಗದ್ಯ; ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಜನರ ಅಭಿರುಚಿ ತಿದ್ದುವ ಗದ್ಯ; ಪ್ರಜಾಪ್ರಭುತ್ವವನ್ನು ಪೋಷಿಸುವ, ಪಕ್ವಗೊಳಿಸುವ ಗದ್ಯ. ಈ ಸಂಪುಟ ಲೇಖನಗಳ  ವಿಷಯಾಸಾರವಾದ ವರ್ಗೀಕರಣ, ಕಾಲಾನುಕ್ರಮ ಸಂಕಲನ, ವಿಷಯಸೂಚಿಗಳಿಲ್ಲದೆ ಪ್ರಕಟವಾಗಿದೆ. ಕನ್ನಡಿಗರು ರಾಘುವೇಂದ್ರ ಪ್ರಕಾಶನ ವಿಷ್ಣುನಾಯ್ಕರ ಸಾಹಸಕ್ಕೆ ಬೆಂಬಲ ನೀಡಬೇಕು. ಗೌರೀಶ ಕಾಯ್ಕಿಣೆಯವರ ಸಮಗ್ರ ಪುಸ್ತಕಗಳು ಹಾಗೂ ಲೇಖನಗಳ ಕೃತಿಸೂಚಿಯೊಂದು ಪ್ರಕಟವಾಗಬೇಕು.
ಮುರಳೀಧರ ಉಪಾಧ್ಯ, ಹಿರಿಯಡಕ
ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ
ಸಂಪುಟ-೮ (ಪತ್ರಿಕಾ ಲೇಖನಗಳು)
ಸಂ:ವಿಷ್ಣು ನಾಯ್ಕ
ಪ್ರ:ಶ್ರೀರಾಘವೇಂದ್ರ ಪ್ರಕಾಶನ,
ಅಂಕೋಲಾ-೫೮೧೩೧೪.
ಮೊದಲ ಮುದ್ರಣ:೧೯೯೯
ಬೆಲೆ ರೂ.೧೮೦(ಪುಟಗಳು:೩೮೪)

No comments:

Post a Comment