stat CounterSunday, July 12, 2020

ಮುರಳೀಧರ ಉಪಾಧ್ಯ ಹಿರಿಯಡಕ - ಪೀಟರ್ ಬ್ರೂಕ್ ಮಹಾಭಾರತ [ ರಂಗ ಕೃತಿ }

"ಇಲ್ಲಿರುವುದು ಎಲ್ಲಕಡೆಯೂ ಇದೆ. ಇಲ್ಲಿ ಇಲ್ಲದಿರುವುದು ಬೇರೆ ಎಲ್ಲಿಯೂ ಇಲ್ಲ" ಎನ್ನುತ್ತದೆ. ಮಹಾಭಾರತ. ಇದು ಮಹಾಭಾರತದ ಅಗ್ಗಳಿಕೆ. ಮಹಾಭಾರತ-ಪುರಾಣ, ಚರಿತ್ರೆ , ಆಖ್ಯಾನ, ಉಪಾಖ್ಯಾನ, ದೃಷ್ಟಾಂತ, ಧರ್ಮಶಾಸ್ತ್ರ, ಅರ್ಥಶಾಸ್ತ್ರಗಳನ್ನೊಳಗೊಂಡ ಇತಿಹಾಸ ಕಾವ್ಯ. ನಾಟಕೀಯ ಸನ್ನಿವೇಶ ಮತ್ತು ಸಂಭಾಷಣೆಗಳಿಂದ ಕೂಡಿದ ಮಹಾಭಾರತವನ್ನು ಹಾಡುತ್ತಿದ್ದ ಸೂತರು-ಚಾರಣರು-ಭಾರತೀಯ ರಂಗಭೂಮಿಯ ಆದ್ಯರು.ಈ  ಉಪಜೀವ್ಯ ಕಾವ್ಯ ಭಾರತದ ಹಲವಾರು ಭಾಷೆಗಳ ಮಹಾಕಾವ್ಯಗಳಿಗೆ, ಭಾಸ, ಕಾಳಿದಾಸರಂಥ ಶ್ರೇಷ್ಠ ನಾಟಕಕಾರರ ನಾಟಕಗಳಿಗೆ ವಸ್ತುವನ್ನು ಒದಗಿಸಿದೆ. ಕುಮಾರವ್ಯಾಸರು, ಅಭಿನವವ್ಯಾಸರು ಭಾರತದ ಎಲ್ಲ ಭಾಷೆಗಳಲ್ಲೂ ಇದ್ದಾರೆ.
ಮಹಾಭಾರತ ರಂಗಕೃತಿ
ಪ್ಯಾರಿಸ್ ನಲ್ಲಿರುವ ಅಂತಾರಾಷ್ಟೀಯ ರಂಗಭೂಮಿ ಸಂಶೋಧನ ಸಂಸ್ಥೆಯ ನಿರ್ದೇಶಕ ಪೀಟರ್ ಬ್ರೂಕ್ (ಜನನ-೧೯೨೫) ನಿರ್ದೇಶಿಸಿದ ಒಂಬತ್ತು ಗಂಟೆಗಳ ಅವಧಿಯ ಮಹಾಭಾರತದ ರಂಗಕೃತಿಯನ್ನು ಫೆಂಚ್ ಭಾಷೆಯಲ್ಲಿ ಬರೆದವರು ಜೀನ್-ಕ್ಲಾಡ್ ಕ್ಯಾರಿಯೇರ್. ಅವರು ಪ್ಯಾರಿಸ್ ನಲ್ಲಿರುವ ’ನ್ಯೂ ಫೆಂಚ್ ಸ್ಕೂಲ್ ಫಾರ್ ಸಿನಿಮಾ ಆಯ್ಯಂಡ್ ಟೆಲಿವಿಷನ್’ನ ಅಧ್ಯಕ್ಷರಾಗಿದ್ದಾರೆ. ಪ್ರೆಂಚ್ ಕೃತಿಯನ್ನು ಪೀಟರ್ ಬ್ರೂಕ್ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಜೀನ್-ಕ್ಲಾಡ್ ಕ್ಯಾರಿಯೇರ್ ಮತ್ತು ಪೀಟರ್ ಬ್ರೂಕ್ ರಿಗೆ ’ತತೋ ಜಯಮುದಿರಯೇತ್’ ಎಂದು ಒಂದು ಲಕ್ಷ ಶ್ಲೋಕಗಳ ’ ಮಹಾಭಾರತದ’ ಕಥೆ ಹೇಳಿದವರು ಪ್ಯಾರಿಸ್ ನಲ್ಲಿರುವ ಸಂಸ್ಕೃತ ವಿದ್ವಾಂಸ ಫಿಲಿಪ್ಪೆ ಲಾವಸ್ಟೈನ್. ಈ ಲೇಖನ ಪೀಟರ್  ಬ್ರೂಕ್ ರ ನಾಟಕ ಪ್ರಯೋಗದ ವಿಮರ್ಶೆ ಅಲ್ಲ; ಜೀನ್-ಕ್ಲಾಡ್ ಕ್ಯಾರಿಯೇರ್ ಬರೆದಿರುವ ರಂಗಕೃತಿಯ ಒಂದು ಅವಲೋಕನ "ಮಹಾಭಾರತವನ್ನು ನಿಮ್ಮ ಅಂಗೈಯಲ್ಲಿ ಹಿಡಿದಿದುವುದು ಅಸಾಧ್ಯ". "ಮೂಲ ಪಠ್ಯದಲ್ಲಿ ನಮ್ಮ ಕಲ್ಪನೆಗಳನ್ನು ತುರುಕುವುದಿಲ್ಲ, ನಮ್ಮ ತೀರ್ಮಾನಗಳನ್ನು ಹೇರುವುದಿಲ್ಲ, ಸಾಧ್ಯವಾದಷ್ಟೂ ಇಪ್ಪತ್ತನೆಯ ಶತಮಾನದ ನಮ್ಮ ವಿವೇಚನೆಯನ್ನು ಬಳಸುವುದಿಲ್ಲ" ಎನ್ನುತ್ತಾರೆ ಕ್ಯಾರಿಯೇರ್.
ಕ್ಯಾರಿಯೇರ್ ಅವರ ೨೩೮ ಪುಟಗಳ ’ಮಹಾಭಾರತ’ ನಾಟಕದಲ್ಲಿ ದ್ಯೂತ ಕ್ರೀಡೆ, ಅರಣ್ಯವಾಸ ಮತ್ತು ಯುದ್ಧ ಎಂಬ ಮೂರು ಭಾಗಗಳಿವೆ. ಒಟ್ಟು ಇಪ್ಪತ್ತಾರು ದೃಶ್ಯಗಳಿವೆ. ಪುರಾಣಭಂಜನೆಯಲ್ಲಿ. ನಿಗೂಡಗಳನ್ನು ಭೇದಿಸುವುದರಲ್ಲಿ ನಾಟಕಕಾರರಿಗೆ ಆಸಕ್ತಿ ಇಲ್ಲ. ಅಪನಂಬಿಕೆಯನ್ನು  ಅಮಾನತ್ತಿನಲ್ಲಿಟ್ಟು ಸವಿಯಬೇಕಾದ ಪಾಶುಪತಾಸ್ತ್ರ, ಊರ್ವಶಿಶಾಪ, ಭೀಮ-ಹನುಮರ ಭೇಟಿ, ಯಕ್ಷ ಪ್ರಶ್ನೆ, ಜಯದ್ರಥ ವಧೆಯ ಸಂದರ್ಭದಲ್ಲಿ ಕೃಷ್ಣನ ಇಂದ್ರಜಾಲದ ಸೂರ್ಯಾಸ್ತ, ಸ್ವರ್ಗಾರೋಹಣ, ಕುಂತಿ ಮಂತ್ರಾಭಿಮಾನಿ ದೇವತಗಳಿಂದ ಮಕ್ಕಳನ್ನು ಪಡೆಯುವುದು-ಇಂಥ ಪುರಾಣಾಂಶಾಗಳನ್ನು, ನಿಗೂಢಗಳನ್ನು ಉಳಿಸಿಕೊಳ್ಳಲಾಗಿದೆ. ಸಂಶೋಧಕರು ಪ್ರಕ್ಷಿಪ್ತ ಭಾಗ ವೆಂದು ಅಭಿಪ್ರಾಯ ಪಡುವ ಅಕ್ಷಯ ವಸ್ತ್ರದ ಪ್ರಸಂಗವೂ ಈ ನಾಟಕದಲ್ಲಿದೆ. ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆದಾಗ ಒಂದರ ಹಿಂದೆ ಇನ್ನೊಂದು, ಮತ್ತೊಂದು ಸೀರೆಗಳು ಬಂದುವೆಂದು ಮಹಾಭಾರತ  ವರ್ಣಿಸುತ್ತದೆ. ಆದರೆ ಜನಪ್ರಿಯ ಜನಪದ ಪರಂಪರೆಯಲ್ಲಿರುವಂತೆ ಒಂದೇ ಬಟ್ಟೆ ಅಸೀಮವಾಯಿ ತೆಂದು ನಾಟಕಕಾರ ಬರೆಯುತ್ತಾರೆ. "ಕೃಷ್ಣ ಚತುರನಿದ್ದ, ದೂರದರ್ಶಿಯಾಗಿದ್ದ, ಆದರೆ ತ್ರಿಕಾಲ ಜ್ಞಾನಿ, ಸರ್ವಶಕ್ತ ಆಗಿರಲಿಲ್ಲ" ಎನ್ನುತ್ತಾರೆ’ ಯುಗಾಂತ’ದ ಲೇಖಕಿ ಇರಾವತಿ ಕರ್ವೆ. ಆದರೆ ಕ್ಯಾರಿಯೇರ್ ಹೇಳುತ್ತಾರೆ-"ಮನುಷ್ಯನೋ? ದೇವರೋ? ನಿರ್ಧರಿಸುವುದು ನಮ್ಮಿಂದಾಗದು. ಚರ್ಚಾಸ್ಪದವಾದ ಐತಿಹಾಸಿಕ, ಆಧ್ಯಾತ್ಮಿಕ ಸತ್ಯಗಳಲ್ಲಿ ನಮ್ಮಗೆ ಆಸಕ್ಕ್ತಿ ಇಲ್ಲ. ನಿಸ್ಸಂಶಯವಾದ ನಾಟಕೀಯ ಸತ್ಯ ನಮ್ಮ ಗುರಿ". ಕೃಷ್ಣನ ಪಾತ್ರದ ಅಂತ:ಸತ್ವ ಈ ಕೃತಿಯಲ್ಲಿ ಮೂಡಿ ಬಂದಿಲ್ಲ.

ನಾಟಕ-ನಿರೂಪಣೆ
ಕಥನ ಸಂಪ್ರದಾಯದ ಮಹಾಕಾವ್ಯದ ಸೂತ-ಚಾರಣರ ಬದಲಿಗೆ ಈ ನಾಟಕದಲ್ಲಿ ವ್ಯಾಸನೇ ಸೂತ್ರಧಾರನಾಗಿದ್ದಾನೆ. ಅವನ ಜತೆಯಲ್ಲಿ ಆಗಾಗ ಮುಖ್ಯ  ಪ್ರಖ್ಯೆಗಳನ್ನು ಕೇಳುವ ಗಣೇಶ ಮತ್ತು ಒಬ್ಬ  ಪುಟ್ಟ ಹುಡುಗ ಇದ್ದಾರೆ. ಈ ಪುಟ್ಟ ಬಾಲಕ ಮಹಾಯುದ್ಧವೊಂದರ ಅನಂತರ ಉಳಿಯುವ ಹತಭಾಗ್ಯ ತಲೆಮಾರಿನ ಪ್ರತಿನಿಧಿ. ದ್ಯೂತಕ್ರೀಡೆ ದೃಶ್ಯದ ಅಂತ್ಯದಲ್ಲಿ ವ್ಯಾಸ-ಗಣೇಶ-ಹುಡುಗ ಜೂಜಾಡುತ್ತಾರೆ. ಇಂಥಲ್ಲಿ ನಾಟಕಕಾರ  ಮೌನದಲ್ಲಿ ಮಾತನಾಡುತ್ತಾನೆ. ವ್ಯಾಸ ಪಾತ್ರಧಾರಿ ಶಂತನುವಾಗಿ ಅಭಿನಯಿಸುವುದು, ಅರ್ಜುನ ಹನುಮಂತನಾಗಿ ಅಭಿನಯಿಸುವುದು-ಇಂಥ ಕಥನ ಸಂಪ್ರದಾಯದ ಅಂಶಗಳು ಈ ಕೃತಿಯಲ್ಲಿವೆ. ನಾಟಕೀಯ ತಂತ್ರದ ದೃಷ್ಟಿಯಿಂದ ಕ್ಯಾರಿಯೇರ್ ಮಾಡಿರುವ ಹಲವು ಸಣ್ಣ ಪುಟ್ಟ ಬದಲಾವಣೆಗಳು ಸೊಗಸಾಗಿವೆ. ’ ಸ್ತ್ರೀ ಪರ್ವದಲ್ಲಿ ಕುಪಿತ ಧೃತರಾಷ್ಟನ ಅಪ್ಪುಗೆಯಲ್ಲಿ ಭೀಮ ಸಾಯದಂತೆ ಕೃಷ್ಣ ಕಬ್ಬಿಣದ ವಿಗ್ರಹವನ್ನು ಮುಂದೆ ತಳ್ಳುವ ಸಂದರ್ಭ. ಈ ನಾಟಕದಲ್ಲಿ ಕೃಷ್ಣ ವಿಗ್ರಹದ ಬದಲಿಗೆ ಕುರುಕ್ಷೇತ್ರದಲ್ಲಿದ್ದ ಒಂದು ಹೆಣವನ್ನು ಧೃಷ್ಣರಾಷ್ಟ್ರ ಅಪ್ಪಿಕೊಳ್ಳುವಂತೆ ಮಾಡುತ್ತಾನೆ.
’ ಮಹಾಭಾರತ’ ನಾಟಕದಲ್ಲಿ ವಿದುರನ ಗೈರುಹಾಜರಿ ಎದ್ದು ಕಾಣುತ್ತದೆ. ವಿದುರನ ಪಾತ್ರ ಮಹತ್ವದ್ದಲ್ಲ ಎನ್ನುವ ನಾಟಕಕಾರರ

No comments:

Post a Comment