stat CounterSunday, July 26, 2020

ಮುರಳೀಧರ ಉಪಾಧ್ಯ ಹಿರಿಯಡಕ - ಮಹಿಳಾ ಅಧ್ಯಯನ ಮೌಲಿಕ ಕೃತಿಗಳು.

ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್ ೧೯೯೭ರಲ್ಲಿ ಪ್ರಕಟಿಸಿದ ಜೆರಾಲ್ಡಿನ್ ಫೋರ್ಬ್ ಅವರ ’ವಿಮೆನ್ ಇನ್ ಮಾಡರ್ನ್ ಇಂಡಿಯಾ’ ಗ್ರಂಥವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ವಿಭಾಗದ ಡಾ| ಎಚ್.ಎಸ್. ಶ್ರೀಮತಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಈ ಗ್ರಂಥದ ರಚನೆಯ ಪೂರ್ವಸಿದ್ಧತೆಗಾಗಿ ಭಾರತ ವಿವಿಧ ಪ್ರೆದೇಶಗಳಲ್ಲಿ ಕ್ಷೇತ್ರಕಾರ್ಯ ನಡೆಸಿದ ಜೆರಾಲ್ಡಿನ್ ಫೋರ್ಬ್ಸ್ ಸಾವಿರಾರು ಲಿಖಿತ ದಾಖಲೆಗಳನ್ನು ಅಲಿಖಿತ ನೆನಪುಗಳನ್ನು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ಭಾರತೀಯ ಮಹಿಳೆ ಅಷ್ಟೊಂದು ಮೂಕಳಾಗಿ ಬಾಳು ಬಂದಿದ್ದಾಳೆಂಬುದು ನಿಜವಲ್ಲ. ಅವಳು ದನಿಯೇ ಇಲ್ಲದವಳು ಎಂದು ತೀರ್ಮಾನಕ್ಕೆ ಬಂದು ಬಿಡುವುದು ತಪ್ಪು.ಹತ್ತೊಂಬತ್ತನೆಯ ಶತಮಾನದ ಈಶ್ವರಚಂದ್ರ ವಿದ್ಯಾಸಾಗರ, ಕುಂದಕೂರಿ ವೀರೇಶಲಿಂಗಂ ಪಂತುಲು ಮತ್ತಿತರ ಸುಧಾರಣಾವಾದಿ ಪುರುಷರ ಪ್ರಯತ್ನಗಳು,  ಸುಧಾರಣೆಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಶಿಕ್ಷಣಕ್ಕೆ ದೊರೆತ ಮೊದಲ ಆದ್ಯತೆ ಮಹಿಳಾ ವಿಮೋಚನೆಯ ಹಾದಿಯನ್ನು ಸುಗಮಗೊಳಿಸಿದ್ದು, ಸಾರ್ವಜನಿಕ ರಂಗಕ್ಕೆ ಬಂದ ಮಹಿಳೆಯರಿಗೆ ಗಾಂಧೀಜಿಯವರು ಕಾರ್ಯಯೋಜನೆಯ ನೀಲನಕ್ಷೆ ನೀಡಿದ್ದು, ಪುರುಷರು ರಾಜಕೀಯದಲ್ಲಿ ಹೆಚ್ಚು ಕ್ರಿಯಾಶೀಲರಾದಾಗ ಸಮಾಜ ಸುಧಾರಣೆಯ ಕೆಲಸವನ್ನು ಮಹಿಳೆಯರು ಕೈಗೆತ್ತಿಕೊಂಡದ್ದು, ವಸಾಹತುಶಾಹಿ ಆರ್ಥಿಕ ನೀತಿಯಿಂದಾಗಿ ಮಹಿಳೆಯರ ಮೇಲೆ ಆದ ಆರ್ಥಿಕ ಪರಿಣಾಮಗಳು, ಸ್ವಾತಂತ್ರ್ಯ ಪೂರ್ವದ ಮಹಿಳಾ ಸಂಘಟನೆಗಳಿಂದ ಮಧ್ಯಮ ವರ್ಗದ ಮಹಿಳೆಯರು ಲಾಭ ಪಡೆದದ್ದು. ತೆಲಂಗಾಣದ ಮಹಿಳೆಯರ  ಸಂಕಷ್ಟಗಳಿಗಾಗಲೀ ದೇಶ ವಿಭಜನೆಯಾದ ಸಂದರ್ಭದಲ್ಲಿ ನಿರಾಶ್ರೀತರಾದವರ ಪಾಲಿಗಾಗಲೀ, ಯಾವ ಪರಿಹಾರವನ್ನೂ ಸೂಚಿಸುವುದು ಸಾಮಾಜಿಕ ಸ್ತ್ರೀವಾದಕ್ಕೆ ಸಾಧ್ಯವಾಗದಿದ್ದುದು.
ಇವು ಜೆರಾಲ್ಡಿನ್ ಫೋರ್ಬ್ ಗುರುತಿಸಿರುವ ಕೆಲವು ಮುಖ್ಯಾಂಶಗಳು.

"ಆದರೆ ಮಹಿಳೆಯರ ಹಕ್ಕುಗಳಿಗಾಗಿ ನಡೆದಿರುವ ಹೋರಾಟದಲ್ಲಿ ಇಲ್ಲಿನ ಮಹಿಳೆಯರು ಮುನ್ನಡೆದಿದ್ದಾರೆ ಎಂಬುದು ಅತ್ಯಂತ ಗಮನಾರ್ಹವಾದ ಫೋರ್ಬ್ "ಏನೇ ಆದರೂ ಮಹಿಳೆಯರಿಗೆ ದೊರೆತ ಶಿಕ್ಷಣ ಹಾಹೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ಭಾರತದ ಸಾಮಾಜಿಕ ಹಾಗೂ ರಾಜಕೀಯ ನಕ್ಷೆಯನ್ನೇ ಬದಲಿಸಿವೆ. ಕಾಯಿದೆಯ ವಸ್ತುಗಳೆನಿಸಿಯಷ್ಟು ಪರಿಗಣಿತವಾಗುತ್ತಿದ್ದ ಮಹಿಳೆಯರು ಈಗ ಕಾಯಿದೆಯ ನಿರ್ಮಾಪಕಿಯರೂ ಆಗುವ ಹಂತ ತಲುಪಿದ್ದಾರೆ. ಈ ಹಿಂದಿನಂತೆ ಕುಟುಂಬವು ಬದುಕಿನ ನಿರ್ಧಾರಕ್ ನಿಯಂತ್ರಕವಾಗಿ ಉಳಿದಿಲ್ಲ ಎಂಬ ಸಂಗತಿ ಮಹಿಳೆಯರ ಪಾಲಿಗಾದರೂ ನಿಜವೆನಿಸಿದೆ. ಸಾಮಾನ್ಯವಾದೊಂದು ಜಾಗೃತಿಯು ಆರಂಭವಾಗಿದೆ ಎಂಬುದಂತೂ ಒಪ್ಪಲೇ ಬೇಕಾದ ವಿಷಯ. ಹಾಗಾಗಿ ಶಾಶ್ವತ  ದಮನ ಇನ್ನು ಸಾಧ್ಯವಿಲ್ಲದ ಮಾತು.

ಉಡುಪಿಯಲ್ಲಿ೧೯೭೬ರಲ್ಲಿ ತಾನು ಸಂದರ್ಶಿಸಿದ ಸ್ವಾತಂತ್ರ್ಯ ಹೋರಾಟ ಗಾರ್ತಿ ಶ್ರೀಮತಿ ಅಂಬಾಬಾಯಿ ಅವರನ್ನು ಕುರಿತು ಜೆರಾಲ್ಡಿನ್ ಫೋರ್ಬ್ಸ್ ಹೀಗೆ ಬರೆದಿದ್ದಾರೆ-"ಕರ್ನಾಟಕದ ಅಂಬಾಬಾಯಿಗೆ ಹನ್ನೇರಡು ವರ್ಷಕ್ಕೆ ಮದುವೆಯಾಘಿತ್ತು. ಹದಿನಾರಕ್ಕೆ ವಿಧವೆಯಾದ ಅಂಬಾಬಾಯಿ ವಿದೇಶೀ ವಸ್ತ್ರದಂಗಡಿ ಹಾಘೂ ಸಾರಾಯಿ ಅಂಗಡಿಗಳಾ ಮುಂದೆ ಕೂರುತ್ತಿದ್ದ ಧರಣೆ ಸತ್ಯಾಗ್ರಹಗಳಲ್ಲಿ ಸೇರಿ ಕೊಂಡರು. ಬಂಧನಕ್ಕೊಳಗಾಗಿ ನಾಲ್ಕು ತಿಂಗಳ ಶಿಕ್ಷೆ-ಜೈಲುವಾಸ.ಬಿಡುಗಡೆಗೊಮ್ಡು ಬಂದದ್ದೇ ಮತ್ತೆ ಬಂಧನ. ಹೀಗೆ ಜೈಲುವಾಸಗಳ ಮಧ್ಯಾಂತರದಲ್ಲಿ ಆಕೆ ಸತತವಾಗಿ ಭಾಷಣಗಳನ್ನು ಮಾಡಿದಳು. ತಕಲಿಯಲ್ಲಿ ನೂಲುವುದನ್ನು ಕಲಿಸಿದಳು. ಬೆಳಗಿನ ಪ್ರಭಾತ ಫೇರಿಗಳನ್ನು ಆಯೋಜಿಸಿದಳು. ಇವು ತನ್ನ್ ಬದುಕಿನ ಅತ್ಯಂತ ಆನಂದದ ಕ್ಷಣಗಳೆಂದು ಚರ್ಚಿಸಲಾಗಿದೆ. ವರದಕ್ಷಿಣೆ, ಅತ್ಯಾಚ್ಯಾರ, ಕೌಟುಂಬಿಕ ಹಿಂಸೆ, ವ್ಧು ದಹನ್ ಇವು ಸ್ವಾಯತ್ತ ಮಹಿಳಾ ಚಳವಳಿಗಳ ಮುಖ್ಯ ವಿಷಯಗಳಾಗಿವೆ. ದಲಿತ ಮತ್ತು ಪರಿಶಿಷ್ಟ ಚಳವಳಿ, ಬಂಗಾಲದಭಾಗ ಚಳವಳಿ, ದ್ರಾವಿಡ ಆತ್ಮಗೌರವ ಚಳವಳಿ, ವಾರ್ಲಿ ಚಳವಳಿ, ತೆಲಂಗಾಣ ಹೋರಾಟ-ಇವುಗಳ ಇತಿಹಾಸ ’ ಮಹಿಳಾ ಚಳವಳಿಗಳು ಮತ್ತು ಇತರ ಸಾಮಾಜಿಕ ಸಾಂಸ್ಕೃತಿಕ ಚಳವಳಿಗಳು ಮತ್ತು ಇತರ ಸಾಮಾಜಿಕ ಸಾಂಸ್ಕೃತಿಕ ಚಳವಳಿಗಳು’ ಎಂಬ ಕೊನೆಯ ಅಧ್ಯಾಯದಲ್ಲಿದೆ.

" ಒಟ್ತಾರೆಯಾಗಿ ಸ್ತ್ರೀವಾದ ಎಂದರೆ ಮೂಲಭೂತವಾಘಿ ಸಮಾಜದಲ್ಲಿನ ಸ್ತ್ರೀಶೋಷಣೆ ಹಾಗೂ ದಮನವನ್ನು ಕುರಿತ ಪ್ರಜ್ಞಾಪೂರ್ವಕ ಎಚ್ಚರ.... ಸ್ತ್ರೀಯನ್ನು ಕುರಿತ   ಗ್ರಹಿಕೆ, ವಿವರಣೆ, ವಿಶ್ಲೇಷಣೆ, ಪುನರ್ ಮೌಲ್ಯೀಕರಣ ಪ್ರಯತ್ನಕ್ಕೆ ಸೂಕ್ತವಾದ ತಾತ್ವಿಕತೆಯನ್ನು ಕಟ್ಟಿ ಕೊಡುವ ಪ್ರಕ್ರಿಯೆಯೇ ಸ್ತ್ರೀವಾದ" ಎಂದು ’ಮಹಿಳಾ ಅಧ್ಯಯನ’ದ ವಿದ್ಯಾರ್ಥಿಗಳು ಮಾತ್ರವಲ್ಲದೆ ಸ್ತ್ರೀವಾದದಲ್ಲಿ ಆಸಕ್ತಿ ಇರುವವರೆಲ್ಲ್ ಅಧ್ಯಯನ ಮಾಡಾಬೇಕಾದ ಗ್ರಂಥ.
ಕನ್ನಡದಲಿ ಮಹಿಳಾ ಅಧ್ಯಯನವನ್ನು ಕುರಿತ ಎರಡು ಮೌಲಿಕ ಗ್ರಂಥಗಳನ್ನು ಪ್ರಕಟಿಸಿರುವ ಕನ್ನಡ ವಿಶ್ವವಿದ್ಯಾಲಯ್ದ ಮಹಿಳಾ ಅಧ್ಯಯನ್ ವಿಭಾಗದವರು ಹಾಗೂ ಪ್ರಸಾರಾಂಗದವರು ಅಭಿನಂದನಾರ್ಹರು.
ಮುರಳೀಧರ ಉಪಾಧ್ಯ, ಹಿರಿಯಡಕ.
ಆಧುನಿಕ ಭಾರತದಲ್ಲಿ ಮಹಿಳೆ                                                              
ಇಂಗ್ಲಿಷ್ ಮೂಲ:ಜೆರಾಲ್ಡಿನ್  ಫೋರ್ಬ್ಸ್
ಕನ್ನಡಕ್ಕೆ:ಎಚ್.ಎಸ್. ಶ್ರೀಮತಿ
ಮುದ್ರಣ:೨೦೦೧ ಬೆಲೆ:ರೂ೧೨೦.

ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು
ಮತ್ತು ಮಹಿಳಾ ಚಳವಳಿಗಳು
ಲೇ:ಡಾ|ಪ್ರೀತಿ ಶುಭಚಂದ್ರ
ಮುದ್ರಣಾ:೨೦೦೨ ಬೆಲೆ ರೂ.೧೨೫.

No comments:

Post a Comment