stat Counter



Saturday, July 18, 2020

ಮುರಳೀಧರ ಉಪಾಧ್ಯ -ಡಾ/ ಸ್ರೀಧರ ಎಚ್. ಜಿ. ಅವರ " ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ದ ಕಲೆ "

ಡಾ|ಶ್ರೀಧರ ಎಚ್. ಜಿ. ಅವರು ಡಾ| ಟಿ.ವಿ ವೆಂಕಟಾಚಲ  ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಬರೆದ ಸಂಪ್ರಬಂಧ-’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧ ಕಲೆ’ (ಕ್ರಿ.ಶ ೪೫೦-೧೩೫೦) ಪ್ರಾಚೀನ ಭಾರತದ ಯುದ್ಧಕಲೆಯ ಕುರಿತು "The art of war in ancient India' (ಜಿ.ಬಿದಾಸೆ), "War in Ancient India' (ವಿ.ಆರ್. ರಾಮಚಂದ್ರ ದೀಕ್ಷಿತರ್), "Ancient Indian Warfare'(ಸರ್ವದಮನ ಸಿಂಗ್),"The Military system in Ancient India(ಬಿ.ಕೆ. ಮಜುಂದಾರ್) ಮತ್ತಿತರ ಪುಸ್ತಕಗಳು ಪ್ರಕಟವಾಗಿವೆ. ಡಾ| ಎಂ. ಚಿದಾನಂದ ಮೂರ್ತಿ ಅವ್ರ ’ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ (೧೯೬೬) ಗ್ರಂಥದ ’ಯುದ್ಧಕಲೆ’ ಎಂಬ ಅಧ್ಯಾಯ ಎಚ್. ಜಿ. ಶ್ರೀಧರ ಅವರ ಅಧ್ಯಯನಕ್ಕೆ ಪ್ರೇರಣೆ ನೀಡಿದೆ.ಈ ಸಂಪ್ರಬಂಧದ ’ಪ್ರಾಚೀನ ಭಾರತದಲ್ಲಿ ಯುದ್ಧಕಲೆ’ ಎಂಬ ಅಧ್ಯಾಯದಲ್ಲಿ ಪ್ರಾಚೀನ ರಾಜನೀತಿ ಶಾಸ್ತ್ರ್ರದ ಆರು ಗುಣಗಳು, ನಾಲ್ಕು ಉಪಾಯಗಳು , ಗೂಢಚರ್ಯೆ, ಕೋಟೆ ಕೊತ್ತಲಗಳು ಮತ್ತು ರಕ್ಷಣಾ ಕವಚಗಳನ್ನು ಪರಿಚಯಿಸಲಾಗಿದೆ. ಮುಂದಿನ ಅಧ್ಯಾಯ ಪ್ರಾಚೀನ ಕರ್ನಾಟಕದ ಅರಸು ಮನೆತನಗಳು ಮತ್ತು ಸಾಹಿತ್ಯದಲ್ಲಿ ಚಾರಿತ್ರಿಕ ಅಂಶಗಳು, ಯುದ್ಧದ ನೆಲೆಗಳು ಕೋಟೆಯ ರಚನೆ, ಕೋಟೆಕಾಳಗ ಹಾಗೂ ಪ್ರಾಚೀನ ಕರ್ನಾಟಕದ ಕೆಲವು ಪ್ರಮುಖ ಯುದ್ಧಗಳನ್ನು ಸಮೃದ್ಧ ಮಾಹಿತಿಯೊಂದಿಗೆ ನಿರೂಪಿಸುತ್ತದೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ನಿರೂಪಿತವಾಗಿರುವ ಮಂತ್ರ, ಸಮ್ಧಿ ವಿಗ್ರಹಿ, ಯಾನ, ನಾಯಕಾಭ್ಯುದಯ, ಯುದ್ಧ ಶಿಕ್ಷಣ, ಚಿಕಿತ್ಸೆ ಇವುಗಳ ಚರ್ಚೆ ನಾಲ್ಕನೆಯ ಅಧ್ಯಾಯದಲ್ಲಿದೆ.
"ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ನಿರೂಪಿತವಾಘಿರುವ ಯುದ್ಧ ಚಿತ್ರಗಳು’ ಹಾಗೂ ಕನ್ನಡ ನಾಡಿನ ಸಾಮಾಜಿಕ ಸಾಂಸ್ಕೃತಿಕ ಜೀವನದಲ್ಲಿ ಸೈನಿಕರ ಸ್ಥಾನಮಾನಗಳು-ಈ ಸಂಪ್ರಬಂಧದ ಮಹತ್ವದ ಅಧ್ಯಾಯಗಳು.’ಪಡೆವಳರು’ ’ಅರವಳಿ ಘೋಷಣೆ’ ಯುಧ್ಧವಾದ್ಯಗಳು, ’ವೀರ ಪಾಣ’ ’ತುಮುಲಯುದ್ಧ; ಗರುಡ’, ವೇಳೆವಡಿಚ’, ’ಚೋಳವಾಳಿ’, ’ದಂಡುಳಿಗ’, ’ಬಾಳ್ಗಚ್ಚು’ -ಇಂಥ ಹಲವಾರು ಪಾರಿಭಾಷಿಕ ಪದಗಳ ಅರ್ಥವನ್ನು ಡಾ| ಶ್ರೀಧರ್ ತಲಸ್ಪರ್ಶೀಯಾಗಿ ವಿವರಿಸಿದ್ದಾರೆ.
’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ವರ್ಣೆತವಾಘಿರುವ ಯುದ್ಧೋಪಯೋಗಿ ಆಯುಧಗಳು’ ಎಂಬ ಅಧ್ಯಾಯದಲ್ಲಿ ದೊಣೆ, ಸಿಂಜಿನಿ, ಕೊಂತ, ಕಕ್ಕಡೆ ತೋಮರ, ಪರಿಘ, ಮುಸಲ ಮತ್ತಿತರ ಆಯುಧಗಳ, ವಸ್ತ್ರ ವಿಭೂಷಣಗಳ ವಿವರಣೆ ಇದೆ. ’ಕರ್ನಾಟಕ ಸಂಸ್ಕೃತಿಯ ಪುನಾರಚನೆಗೆ ಪ್ರಾಚೀನ ಕನ್ನಡ ಸಾಹಿತ್ಯದ ಯುದ್ಧ ಚಿತ್ರಗಳ ಕೊಡುಗೆ ಎಂಬುದು ಈ ಸಂಪ್ರಬಂಧದ ಕೊನೆಯ ಅಧ್ಯಾಯ. ಕನ್ನಡದಲ್ಲಿ ಜಾನಪದ ಹಾಗೂ ಹೊಸಗನ್ನಡ ಲೇಖಕರನ್ನು ಕುರಿತ ಸಂಪ್ರಬಂಧಗಳು ಹೆಚ್ಚಾಗಿ ಕಾಣಿಸುತ್ತಿವೆ. ಹೊಸ ತಲೆಮಾರಿನವರಲ್ಲಿ ಹಳೆಗನ್ನಡ ಸಾಹಿತ್ಯವನ್ನು ಕುರಿತ ಸಂಶೋಧನೆ ಕ್ಷೀಣೆ ಸುತ್ತಿದೆ. ಇಂಥ ಸಂದರ್ಭದಲ್ಲಿ ಡಾ|ಶ್ರೀಧರ ಅವರ ವಿಷಯದ ಆಯ್ಕೆ, ವಿಶ್ಲೇಷಣೆ ಹಾಗೂ  ಸಂಯೋಜನೆ ಅಭಿನಂದನಾರ್ಹವಾಗಿವೆ.

No comments:

Post a Comment