stat Counter



Saturday, July 4, 2020

ಮುರಳೀಧರ ಉಪಾಧ್ಯ ಹಿರಿಯಡಕ - ಉಪ್ಪುಂದ ಚಂದ್ರಶೇಖರ ಹೊಳ್ಲರ " ’ಸುಮೇರುವಿನ ಸನ್ನಿಧಿಯಲ್ಲಿ- " {ಮುನ್ನುಡಿ}

ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ
ಕಣ್ಣೆದುರಿಗೆ ಪ್ರತ್ಯಕ್ಷ
ವಾದದ್ದನ್ನ
ನೋಡುವುದಕ್ಕೆ ಎರಡು ಕಣ್ಣು ಸಾಲದು ಸ್ವಾಮೀ
ಅದೃಷ್ಟ ಬೇಕು.
ಎ.ಕೆ.ರಾಮಾನುಜನ್
ಕೈಲಾಸ-ಮಾನಸ ಸರೋವರ ಯಾತ್ರೆ ಲಕ್ಷಗಟ್ಟಲೆ ಭಾರತೀಯರ ಕನಸಿನ ಯಾತ್ರೆ ಆದರೆ ರಾಜಕೀಯ, ಆರ್ಥಿಕ ಹಾಗೂ ಆರೋಗ್ಯದ ಕಾರಣಗಳಿಂದ ಈ ಕನಸು ನನಸಾಗುವುದು ಸುಲಭವಲ್ಲ. ನೇಪಾಳ, ಚೀನಾ ಸರಕಾರಗಳ ಅನುಮತಿ ಪಡೆಯದೆ ಟಿಬೆಟ್ಟಿನಲ್ಲಿರುವ ಮಾನಸ ಸರೋವರಕ್ಕೆ ಹೋಗುವಂತಿಲ್ಲ. ಕನಿಷ್ಟ ಒಂದು ಲಕ್ಷ ರೂಪಾಯಿ ಖರ್ಚು ಮಾಡಬೇಕು. ಕಾಠ್ಮಂಡುವಿನಿಂದ ಹದಿನೆಂಟು ದಿನಗಳ, ಸುಮಾರು ಒಂದು ಸಾವಿರ ಎರೆಡುನೂರು ಕಿ.ಮೀ. ಈ ಯಾತ್ರೆಗೆ ಹೊರಡಲು ಎದೆ ಗಟ್ಟಿ ಇದ್ದವರಿಗೆ ಮಾತ್ರ ಅನುಮತಿ ಸಿಗುತ್ತದೆ.

ಶ್ರೀ ಉಪ್ಪುಂದ ಚಂಡ್ರಶೇಖಾರ ಹೊಳ್ಳ-ಶ್ರೀಮತಿ ವರಮಹಾಲಕ್ಷ್ಮೀ ಹೊಳ ದಂಪತಿಗಳು ಕೈಲಾಸ-ಮಾನಸ ಸರೋವರ ಯಾತ್ರೆ ಮುಗಿಸಿ ಬಂದ ಅದೃಷ್ಟಶಾಲಿಗಳು. ಈ ಯಾತ್ರೆ ನೇಪಾಳಾ, ಚೀನಾ ಸರಕಾರಗಳ  ಪ್ರವಾಸೋದ್ಯಮ ಇಲಾಖೆಗಳ ಆಶ್ರಯದಲ್ಲಿ ಮಾಡಬೇಕಾದ ಯಾತ್ರೆ, ಇದು ವಿಹಾರ ಯಾತ್ರೆಯಲ್ಲ. ಹೆಜ್ಜೆ ಹೆಜ್ಜೆಗೂ ಜೀವಭಯ ಹುಟ್ಟಿಸುವ, ಉಸಿರೇಗಟ್ಟಿಸುವ ಧಾರ್ಮಿಕ  ಶ್ರದ್ದೆಯ ಯಾತ್ರೆ. "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವಂತೆ" ಮಾಡುವ ಯಾತ್ರೆ. "ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ" ಎಂಬ ಅಲೌಕಿಕ ಅನುಭವ ನೀಡುವ ಯಾತ್ರೆ. ಈ ಯಾತ್ರೆಯ  ಸಿಹಿಕಹಿ ಅನುಭವಗಳನ್ನು , ಟಿಬೆಟ್ ನ  ಬಡಪಾಯಿಗಳ ಬದುಕಿನ ವಿವಿಧ ಮುಖಗಳನ್ನು ಶ್ರ್‍ಈ ಚಂದ್ರಶೇಖರ ಹೊಳ್ಳರು ಈ ಪುಟ್ಟ ಪ್ರ್ವಾಸ ಕಥನದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಬೇಂದ್ರೆ ’ಸಖೀಗೀತ’ದಲ್ಲಿ ತನ್ನ ದಾಂಪತ್ಯದ ಅನುಭವವನ್ನು  ’ಕಟುಮಧುರ’ ಎಂದಿದ್ದಾರೆ. ಶ್ರೀ ಹೊಳ್ಳರ ಮಾನಸ-ಕೈಲಾಸ ಯಾತ್ರೆಯೂ ಒಂದು ಕಟುಮಧುರ  ಅನುಭವ. ಈ ಪ್ರವಾಸಕಥನದಲ್ಲಿ ಶ್ರೀಮತಿ ವರಮಹಾಲಕ್ಷ್ಮೀ ಹೊಳ್ಳರು ಮುದ್ದಣನ ಮನೋರಮೆಯಂತೆ ಮಾತನಾಡದೆ, ಕಾಳಿದಾಸನ ’ಮೇಘಸಂದೇಶ’ದ ಯಕ್ಷಿಯಂತೆ ಯಾಕೆ ಮೌನಿಯಾಗಿದ್ದಾರೆ?

ಹಿರಿಯ ಮಿತ್ರ ಶ್ರೀ  ಚಂದ್ರಶೇಖರ ಹೊಳ್ಳರ ’ಸುಮೇರುವಿನ ಸಾನ್ನಿಧ್ಯ’ದಲ್ಲಿ ಎಂಬ ತೀರ್ಥಪ್ರಬಂಧ, ’ಮಹಾಭಾರತ’ದ  ಮಹಾಪ್ರಸ್ಥಾನಿಕ ಪರ್ವವನ್ನು ಮತ್ತೊಮ್ಮೆ ಓದಲು ನನಗೆ ಪ್ರೇರಣೆ ನೀಡಿತು. (ಯಕ್ಷಪ್ರಶ್ನೆಗಳಿಗೆ ಉತ್ತರ ನೀಡಿದ ಧರ್ಮರಾಯನಿಗೆ ತನ್ನ ಪತ್ನಿ, ಸೋದರರು ’ಹಿಮಾಲಯದ ಸಾನ್ನಿಧ್ಯ’ ದಲ್ಲಿ ಯಾಕೆ ಉರುಳಿದರೆಂದು ಅರ್ಥವಾಗಲಿಲ್ಲ.) ಕೈಲಾಸ-ಮಾನಸಸರೋವರ ಯಾತ್ರೆಯ ಕನಸುಗಳನ್ನು ನನ್ನಲ್ಲಿ ಮೂಡಿಸಿತು. ಹೊಳ್ಳರ ಈ ಕೃತಿ ಸಾರ್ಥಕ ಎನ್ನಲು ಇದಕ್ಕಿಂತ ಹೆಚ್ಚಿನ ರುಜುವಾತು ಬೇಕಿಲ್ಲ.
ಪಂಚರಂಗಿನ ಗಿಳಿ ಹೇಳುತ್ತಿದೆ ’ಅಸ್ತು ಅಸ್ತು’
ಹತ್ತು.........ಒಂದೊಂದೇ ಮೆಟ್ಟಲು ಹತ್ತು
ಬಣ್ಣ ಹಚ್ಚು-ಹಾಗೋ ಹೀಗೋ ಮೆತ್ತು.
’ಎಲ್ಲಾ ಬಣ್ಣ-ಮಸಿ ನುಂಗೋಲ್ಲ’
’ಪಳಗಿದ ಕೈ-ಮೇಲಿದೆಯಲ್ಲ.’
ಜೀವವೃಕ್ಷಕ್ಕೆ ನಮಸ್ಕಾರ

No comments:

Post a Comment